ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುವಾದಿತ ಅಬಾಬಿಗಳು (೬ನೇ ಕಂತು)

ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)
ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ

೧೩)
ಮೊನ್ನೆ ರಥ ಇಂದು ವಿಗ್ರಹ
ದಿನಕ್ಕೊಂದು ಹೊಸ ಯೋಜನೆ
ದೇಶದಲ್ಲಿ ರಾಜಕೀಯ ಆಧ್ಯಾತ್ಮಿಕ
ಹಕೀಮು
ಪ್ರಮಾಣಗಳಿಂದ ಪ್ರಸಿದ್ಧರಾಗುವ ಯೋಚನೆ.

೧೪)
ದೇವಾಲಯವೋ? ವಿದ್ಯಾಲಯವೋ?
ಎಲ್ಲಾದರೂ ಆಣೆಗಳನ್ನು ಮಾಡುವರು
ಅಸಲು ಆಣೆ ಅಂದರೇನು ಗೊತ್ತಾ?
ಹಕೀಮು
ದೈವವೆಂದರೆ ಇವರಿಗೆ ಆಟದ ವಸ್ತುವೇನು?

೧೫)
ಎಲ್ಲರಿಗೂ ತಿಳಿದ ರಹಸ್ಯವೇ
ಪಕ್ಷಗಳ ದೌರ್ಭಾಗ್ಯದ ವಾಗ್ದಾನಗಳು
ಇಂದಿನ ರೌಡಿಗಳು ನಾಳೆಯ ನಾಯಕರೆ?
ಹಕೀಮು
ದೇಶವೇ ಕಬ್ಜಾ ಆಗುತ್ತಿದೆಯೇನೋ!


About The Author

1 thought on “ಅನುವಾದಿತ ಅಬಾಬಿಗಳು (೬ನೇ ಕಂತು)”

Leave a Reply

You cannot copy content of this page

Scroll to Top