ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹರಿದ ಷರಟಿನ ಬೆಳಕು

ಬಿ.ಶ್ರೀನಿವಾಸ

96 Abstract Bodies ideas | art inspiration, art painting, abstract

ಗಡಿಬಿಡಿಯಲಿ ಮರೆತೇ ಬಿಡುತ್ತೇವೆ
ಏಸೊಂದು ಜನರನು

ಹೆಗಲ ಮೇಲೆ ಹೊತ್ತು
ಜಗವ ತೋರಿದವರನು,
ಎತ್ತಿ ಆಡಿಸಿದ ಕೈಗಳನು,
ಸಲೀಸಾಗಿ ಸ್ಮೃತಿಗೆ ಸರಿಸಿ
ನಡೆದೇಬಿಡುತ್ತೇವೆ ಸುಮ್ಮನೆ

      

ಸಾಲಿಗೆ ಹೋಗುವಾಗ
ಬೆಳಕು ತರುವೆನೆಂದು ಹೋದ ಹುಡುಗ
ಅದೇ ಮುಖದ ಗೆರೆಗಳು!

ಲೆಕ್ಕ ಹಾಕುತಿದೆ ಮನ
ಲೋಕದ ಸಾಲಿ ಬಿಟ್ಟು
ಸಾಗಿ ಬಂದ ದೂರ

ಮಗನ ಕಾಗುಣಿತ ತಿದ್ದುವಾಗ ಮೇಷ್ಟ್ರು ನೆನಪಾಗಿದ್ದು ಹೀಗೆ,

ಸಾಕ್ಷಿ ನುಡಿಯಲು ಕಾಯುತ್ತಾ ಕುಳಿತ ಮುದುಕಿ
ಕೋರ್ಟಿನಂಗಳದ ಕಸಗುಡಿಸುವಾಗ…
ಥಟ್ಟನೆ ನೆನಪಾಗುತ್ತಾಳೆ ಅವ್ವ.

ನೋಡಿಯೂ ನೋಡದಂತೆ ಎಲ್ಲಿಯೋ ಮೂಲೆಯಲಿ ಹರಿದ ಷರಟಿನ ಬೆಳಕಿನಲಿ
ಥಟ್ಟನೆ ನೆನಪಾಗಿಬಿಟ್ಟ ಅಪ್ಪ!


About The Author

Leave a Reply

You cannot copy content of this page

Scroll to Top