ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೇಮಪರವಶ

ಡಾ. ನಿರ್ಮಲ ಬಟ್ಟಲ

ಓ.. ಪ್ರೇಮವೆ ನೀ ಭಾವವಾದಾಗ
ವಿಸ್ಮಯವಿ ಜಗವು
ಶರಣಾದೆನು ನಾ ಪ್ರೇಮಕೆ….!

ಎದೆಯ ಮಿಡಿತದ
ಪ್ರತಿಬಡಿತಯೊಳಿದೆ
ಪ್ರೇಮತರಂಗದ…..!

ಕಡಲ ಒಡಲಾಳದಲಡಗಿ
ಒಲವಲೆಯಾಗಿ ತೀರವನಪ್ಪುತಿವೆ
ಪ್ರೇಮದಲೆ…..!

ಅರುಣೋದಯದ ಹೊಂಗಿರಣ ನುಣುಪಿನಪ್ಪುಗೆಯಲಿದೆ
ಪ್ರೇಮರಶ್ಮಿ….!

ಹೂವಿನೆದೆಯೊಳಡಗಿದೆ
ಮಕರಂದ ಮಾಧುರ್ಯದ
ಪ್ರೇಮಜೇನು….!

ಕಾಮನ ಬಿಲ್ಲಿನ ಬಣ್ಣಗಳ
ಸಂಭ್ರಮದಿ ನಲಿಯುತಿದೆ
ಪ್ರೇಮದ ರಂಗು….!

ಬೆಳಗುತಿದೆ ಹೃದಯಹಣತೆ
ಪ್ರೇಮತೈಲದಿ ಬೆರಗುಮೂಡಿಸಿದೆ
ಪ್ರೇಮದಬೆಳಕು…..!

ಶಬರಿರಾಧೆಯರಂತೆ
ಅಕ್ಕಮೀರಾಳಂತೆ
ಪ್ರೇಮವೆ…ಪರವಷಳಾನು ನಿನ್ನ ಅನುರಾಗದಲಿ….!


About The Author

Leave a Reply

You cannot copy content of this page

Scroll to Top