ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮತ್ತೆ ಮಳೆ….!

ಡಾ. ನಿರ್ಮಲ ಬಟ್ಟಲ

Raining Storm In Sea.Vintage Nature Background With Dark Clouds Stock  Photo, Picture And Royalty Free Image. Image 13595138.

ಬಿರುಬಿಸಿಲಿನ ಬಿಗಿಮೌನ
ಪಕ್ಕಕ್ಕೆ ಸರಿಸಿ
ದುಗುಡ ತುಂಬಿದ ಮೊಡವೊಂದು ಹನಿಯೊಡೆಯಿತು….!

ತಂಪು ಗಾಳಿ ತೀಡಿ ತಂದ
ಮಣ್ಣಕಂಪ ಪರಿಮಳಕೆ
ಮುದಿಡಿದ ಜೀವಿಗಳು
ಪುಳಕಗೊಂಡವು…….!

ವಿರಹದುರಿಯಲಿ ಬೆಂದ ಅವನಿಗೆ ಅಪ್ಪಿದ ಒಲವ ಮಳೆತಂಪನೆರೆಯಿತು
ಬಾಗಿ ಬಳಸಿ ನೆನೆದು ತಣಿದೂ
ಪ್ರೀತಿ ಉಕ್ಕಿ ಹರಿಯಿತು…..!

ಮತ್ತೊಂದು ನಿರಾಳ ಮೌನ
ಇಬ್ಬರೆದೆಯನು ಸವರಿತು
ಮಾತಿಲ್ಲದ ನೂರು ಭಾವಗಳು
ಮೊಳಕೆಯೊಡೆದುಉಸಿರಾಡುತ್ತಿವು


About The Author

2 thoughts on “ಮತ್ತೆ ಮಳೆ….!”

Leave a Reply

You cannot copy content of this page

Scroll to Top