ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿನ್ನ ಹೆಸರು

ಅಕ್ಷತಾ ಜಗದೀಶ್

woman holding hot cup of coffee, with heart shape

ಮುಂಜಾನೆಯ ಇಬ್ಬನಿ ಹನಿಗಳು
ಬರೆದಿದೆ ಚಿಗುರೆಲೆಯ‌ ಮೇಲೆ
ನಿನ್ನ ‌ಹೆಸರು…

ನಾ ಏನ‌ ಹೇಳಲಿ
ಚಿಲಿಪಿಲಿ ಹಕ್ಕಿಗಳ ನಾದದಲಿ
ಕೇಳುತಿದೆ ನಿನ್ನ ಹೆಸರು..

ನನ್ನೆದೆಯ ಪುಟಗಳಲಿ
ನೆನಪಿನ ಆಳದಲಿ
ಮೂಡಿದೆ ನಿನ್ನ ಹೆಸರು…

Love hearts hanging on rope on a blue wooden background

ರವಿ‌ ಇಣುಕಿ ನೋಡಿರಲು
ಬೆಳಕಿನ ರೇಖೆಯ ಮೇಲೆ
ಕಾಣುತಿದೆ ನಿನ್ನ ಹೆಸರು…

ಬಾಳ ಸಂಗಾತಿ ಆದೆ
ಸಪ್ತಪದಿಗೆ ಜೊತೆಯಾದೆ
ನನ್ನಂತರಾಳದಲಿ ನಿನ್ನ ಹೆಸರು..

ನೀನಿರದೆ ನಾನಿಲ್ಲ
ನೀನಿರದೆ ಬಾಳಿಲ್ಲ
ಬಾಳ ಪುಟದಲಿದೆ ನಿನ್ನ ಹೆಸರು..

ಭಾವನೆಗಳಿಗೆ ದೀವಟಿಕೆಯಾದೆ
ಜೀವಕ್ಕೆ ಜ್ಯೋತಿ ಆದೆ
ಬೆಳಕಿನ‌ ಕಿರಣದಲಿ ನಿನ್ನ ಹೆಸರು..

ನೀ ನನ್ನ ಜೊತೆಯಾದೆ
ಕನಸುಗಳಿಗೆ ಸ್ಪೂರ್ತಿಯಾದೆ
ನನ್ನ ಹೆಸರಿನ ಮುಂದೆ
ಎಂದಿಗೂ ನಿನ್ನ ಹೆಸರು…


About The Author

Leave a Reply

You cannot copy content of this page

Scroll to Top