ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಅನುವಾದಿತ ಅಬಾಬಿಗಳು

ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)

ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ

Wooden Gabel isolated on white background

೪)
ಅನ್ನ, ಅರಿವೆ, ಆಶ್ರಯ
ಇದ್ದರೆ ಸಾಕೆನ್ನುವ ಸಾಮಾನ್ಯರು
ನಮ್ಮ ಮೇಲೇಕೆ ವಿಷದ ಕೋರೆಗಳನ್ನು ತೋರುವಿರಿ
ಹಕೀಮಾ
ಇದಕ್ಕೆ ನಮ್ಮಲ್ಲಿರುವ ದಿವ್ಯಜ್ಞಾನವೇ ಕಾರಣವಾ!

೫)
ಪಶುಗಳಿಗೆ ಪರಮಾನ್ನಗಳು
ಮನುಷ್ಯ ಹಸಿವಿನಿಂದ ಸಾಯುತ್ತಿದ್ದರೂ
ಹುಟ್ಟಿನಲ್ಲಿ ಏನಾದರೂ ಮಹತ್ವವಿದೆಯೆ?
ಹಕೀಮಾ
ಜೀವಿಗಳಲ್ಲಿ ಮನುಷ್ಯ ಜನ್ಮವೇ ಉನ್ನತವಲ್ಲವೆ!

೬)
ಕಾನೂನನ್ನು ಗೌರವಿಸುವುದೆಂದರೆ
ಇದ್ದವರಿಗೊಂದು ನ್ಯಾಯ
ಇರದವರಿಗೆ ಇನ್ನೊಂದು ನ್ಯಾಯವೆ?
ಹಕೀಮಾ
ತಕ್ಕಡಿ ತಡಬಡಿಸುತ್ತಿದೆ ನೋಡು.


About The Author

1 thought on “ಅನುವಾದಿತ ಅಬಾಬಿಗಳು”

Leave a Reply

You cannot copy content of this page

Scroll to Top