ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಜೀವನ ಜಲಧಿ

ವೃತ್ಯಾನುಪ್ರಾಸ ಕವನ

ಶುಭಲಕ್ಷ್ಮಿ ಆರ್ ನಾಯಕ

Paintingof Buddha. Buddha paintings from the age at the temple wall stock images

ಜೀವನವು ಜಂಜಡದ ಜಟಿಲ ಜಲಧಿ
ಸಹನೆ ಸದಾಚಾರದಿ ಸಾಗು ಸಮಚಿತ್ತದಿ
ಹೂವಂಥ ಹೊಂಗನಸ ಹೊತ್ತು ಹೃದಯದಿ
ಮನಕೆ ಮಾಧುರ್ಯವೀವ ಮಾತೃ ಮಮತೆಯಲಿ//

ಸುಖದುಃಖಗಳ ಸುಮನದಿ ಸ್ವೀಕರಿಸಿ ಸಾಗಲಿ
ಬದುಕಿನ ಬವಣೆಗಳ ಬೇಗುದಿಯ ಬದಿಗಿಡುತ
ನಮ್ರತೆಯಲಿ ನಗುನಗುತ ನಲುಮೆಯ ನೀಡುತ
ಸನ್ನಡತೆಯಲಿ ಸಮಾಜಕ್ಕೆ ಸಂದೇಶ ಸಾರುತ//

ಅತ್ಯಾಚಾರ ಅನಾಚಾರ ಅಂಧಕಾರವ ಅಳಿಸುವ
ಹೆಣ್ಣುಗಳ ಹಿಂಸಿಸುವ ಹಮ್ಮೀರರ ಹತ್ತಿಕ್ಕುವ
ಕಪಟ ಕಾಮಗಳಿಗೆ ಕಡಿವಾಣವ ಕಟ್ಟುವ
ಮೋಸದ ಮಾಯೆಗೆ ಮದ್ದರೆದು ಮಣಿಸುವ//

ನೋವು ನಲಿವುಗಳಿಗೆ ನಗುತ ನಮಿಸುವ
ಬದುಕು ಬರಡಾದರೂ ಭರವಸೆಯಲಿ ಬದುಕುವ
ಆತ್ಮವಿಶ್ವಾಸ ಆಶಾಭಾವದಲಿ ಆಡುತ ಆನಂದಿಸುವ
ತಾಮಸವ ತೊಲಗಿಸಿ ತನ್ನರಿವಲಿ ತೇಲುವ//

****************************

About The Author

Leave a Reply

You cannot copy content of this page

Scroll to Top