ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ರೇಷ್ಮಾ ಕಂದಕೂರ

ಮಾತು ಮೌನಗಳ ನಡುವಿನ ಸಮರಕೆ ಕೊನೆಯಿಲ್ಲ
ಸಹನೆಯ ಹೆಸರಿಗೆ ಕಿಂಚಿತ್ತೂ ಬೆಲೆಯಿಲ್ಲ

ರೋಗಗ್ರಸ್ತ ಮನಸಿಗೆ ಉಪಶಮನದ ಅವಶ್ಯಕತೆ ಇದೆ
ಚಿಗುರೊಡೆದೆ ಬಾಂಧವ್ಯಕೆ ಸಹಕಾದರ ಬಳುವಳಿಯಿಲ್ಲ

ಜಗದ ಜಂಜಡಕೆ ನಿತ್ಯ ರಂಗುರಂಗಿನ ಆಟ
ಉದ್ವೇಗ ವಿಷಾದದ ನಡುವಿನ ಪ್ರಸ್ತಾವನೆಗೆ ಕೊನೆಯಿಲ್ಲ

ಬಡಿವಾರದಿ ಊಹಾಪೋಹಗಳು ತುಂಬಿ ತುಳುಕಿವೆ
ಹಮ್ಮಿನ ಕೋಟೆಯಲಿ ಮೆರೆದವರಿಗೆ ಉಳಿಗಾಲವಿಲ್ಲ

ಅಂಗಲಾಚಿ ಬೇಡುತಿದೆ ಭಿನ್ನತೆಗೆ ವಿರಮಿಸೆಂದು ರೇಷಿಮೆ ಮನ
ಒಳಗಣ್ಣು ತೆರೆಯದೆ ನಿರ್ಣಯಿಸಿದರೆ ಕೊಡಲಿ ಏಟಿಗೆ ಕೊನೆಯಿ

*****************************

About The Author

1 thought on “ಗಝಲ್”

Leave a Reply

You cannot copy content of this page

Scroll to Top