ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಬಾಗೇಪಲ್ಲಿ

ಕಾವ್ಯ ಸಂಗಾತಿ ಬಾಗೇಪಲ್ಲಿ ಗಜಲ್ (ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಜೀವನದಿ ಒಮ್ಮೆ ಪ್ರೇಮವೆಂಬ ಸುಳಿಗೊಮ್ಮೆ ಬೀಳಿರಿವಿರಹದ ಬಗ್ಗೆ ಹೇಗೆಂದು ನಂತರ ನೀವಯೇ ಹೇಳಿರಿ ಮನೋರಮೆಯ ಒಮ್ಮೆ ಏಕಾಂತದಿ ಭೇಟಿಮಾಡಿಅಗಲಿಗೆಯ ಸಮಯದಿ ನೋವಾದರೆ ತಾಳ್ಮೆ ತಾಳಿರಿ ಒಳ್ಳೆಯ ಗಂಡ ಚಂದದ ಪತ್ನಿ ಎಲ್ಲವೂ ಮಾತಷ್ಟೇದಕ್ಕಿದ ಹೆಣ್ಣ ಚಂದ ಹೆಂಡತಿಯಾಗಿಸಿ ಬಾಳ ಬಾಳಿರಿ ಹೊಂದಿಕೆಯ ಬಾಳಲಿ ನಿಜ ಸುಖವಿದೆ ತಿಳಿದಿರಲಿಸುಪ್ರೇಮ ಲೋಕವನು ಮಹಾರಾಜನಂತೆ ಅಳಿರಿ ಬತ್ತದ ಗದ್ದೆಯಲಿ ನಡೆದಂತೆ ಜೀವನ ಜಾರಬಹುದುಕೆಸರಲಿ ಬಿದ್ದರೂ ಸ್ವ ಸಂಬಾಳಿಸಿಕೊಂಡು ಏಳಿರಿ ಕೃಷ್ಣಾ! ಗೀತೆಯ ವಾಕ್ಯದಂತೆ ಜಾಗೃತ ಜಾಗೃತರಾಗಿರಿಭುವಿಯ ಸುಖದಲಿ ಸ್ವರ್ಗ ಸುಖವ ಕೂಡಿ ಕಳೀರಿ. ಬಾಗೇಪಲ್ಲಿ

ಗಜಲ್(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಬಾಗೇಪಲ್ಲಿ Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ ” ನನಗೊಂದು ವರ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ ” ನನಗೊಂದು ವರ” ಮಾತುಗಳಿಲ್ಲದ ಮೌನದಲ್ಲೂ,ಮನದ ಭಾವತಿಳಿಯುವೆ ನೀನು.ಕಷ್ಟದ ಹಾದಿಯ ಪಯಣದಲ್ಲೂ, ಜೊತೆಯಲಿನಡೆವೆ ನೀನು. ನಗುವಿನ ಅಲೆಯಲ್ಲಿ ಜೊತೆಯಾಗಿ ತೇಲಿ,ಕಣ್ಣೀರಿನ ಹನಿಗೂ ಹೆಗಲಾದೆ ನೀನು.ಲೋಕವೇ ಎದುರಾಗಿ ನಿಂತರೂ ಕೂಡ,ನನ್ನ ಹೆಜ್ಜೆಗೆ ಶಕ್ತಿ ತುಂಬುವೆ ನೀನು. ಕಾಲದ ಚಕ್ರವುಉರುಳಿದರೂ ,ನಮ್ಮೀ ಪ್ರೀತಿಯಬಂಧವು ಅಜರಾಮರ.ನಿನ್ನೊಲವ ಸನಿಹವೇ ನನಗೊಂದು ವರ.ಶ್ರಮ ಪೂಜೆಬಸವನಿಗೆ ಹೂಹಾರ ಉಷಾರಾಣಿ ಗುರುಪ್ರಸಾದ್

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ ” ನನಗೊಂದು ವರ” Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಬೆಸೆದ ಮನಸು ಕನಸುಗಳ ಮೇಲೊಂದು ದೂರು ನೀಡಬೇಕಿದೆಬಸಿದ ಹನಿಯು ನಯನಗಳ ಮೇಲೊಂದು ದೂರು ನೀಡಬೇಕಿದೆ ತೊರೆದು ಭಾವ ಉರಿದ ಎದೆಯು ತಾಳಲಾರದು ಬೇಗುದಿಮುರಿದು ಮೌನವು  ಮಾತುಗಳ ಮೇಲೊಂದು ದೂರು ನೀಡಬೇಕಿದೆ ಎರೆದ ಪ್ರೀತಿ ಇರಿದ ರೀತಿ ತನುಮನಕೆ ತಾಗಿನಿಂತು ನರಳಿದೆಬೆಂದ ಎದೆಯು ತುಡಿತಗಳ ಮೇಲೊಂದು ದೂರು ನೀಡಬೇಕಿದೆ ಮುರಿದ ವೀಣೆ ಹರಿದ ತಂತಿ ಹಾಡಲಾಗದ ಅಪಸ್ವರಬೆರೆತ ಸ್ವರವು ಬೆರಳುಗಳ ಮೇಲೊಂದು ದೂರು ನೀಡಬೇಕಿದೆ ಬರೆದ ಕವಿಯು ಬ್ರಹ್ಮನಲ್ಲ ಗೀಚುತಿರುವನು  ತನ್ನ ಲಯದಲಿಉರಿದ ಜ್ಯೋತಿಯು ತೆರೆಗಳ ಮೇಲೊಂದು ದೂರು ನೀಡಬೇಕಿದೆ

ಜ್ಯೋತಿ ಮಾಳಿ ಅವರ ಗಜಲ್ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಅಪರೂಪದ ಕನಸು” ಅಪರೂಪದ ಕನಸು ಕಂಡೆಇಪ್ಪತ್ತೈದರ ಮುಂಜಾವಲಿ;ಮಣ್ಣೆಣ್ಣೆ ದೀಪದ ಮಬ್ಬಿನಲಿಆಲವೂ ಅತ್ತಿಯೂ ಚಿಗುರಿದ್ದವು,ಒಂದೇ ಮಣ್ಣಿನ ಮಡಿಲಲಿ. ಆಲದ ಕೆಳಗೆ ಭೀಮ ನಿಂತ,ಬಾವಿಯ ಬಳಿ ಕೇರಿಯ ಮಗು;ಬೊಗಸೆ ತುಂಬ ನೀರು ಕೊಟ್ಟಾಗಮಗುವಿನ ಮುಖ ಅರಳಿತುನೀರೊಳಗೆ ಆಕಾಶವೂ ಅರಳಿತು. ಅತ್ತಿಯ ಕೆಳಗೆ ದುರ್ಯೋಧನ,ಮಡಿಲಲ್ಲಿ ಹಳೆಯ ಓಲೆ;ಕೋಲ ತುದಿಯಿಂದ ನೆಲವ ಗೀರಿಗೆರೆಯ ಮೇಲೆ ಗೆರೆ ಎಳೆದಮಣ್ಣಿನ ಎದೆಯಲಿ ಗಾಯವಾಯಿತು. ಆಲ ಮೆಲ್ಲಗೆ ಬೇರು ಚಾಚಿತುಕೇರಿಯಿಂದ ಬಾವಿಗೆ,ಬಾವಿಯಿಂದ ಶಾಲೆಯ ಹೊಸ್ತಿಲಿಗೆ;ಭೀಮ ಗದೆಯನ್ನು ನೆಲಕ್ಕಿಟ್ಟುಮಗುವಿನ ಕೈಗೆ ಸ್ಲೇಟು ಕೊಟ್ಟ. ಅತ್ತಿಯ ಕೊಂಬೆ ಹಣ್ಣಾಯಿತು,ಹಣ್ಣಿನೊಳಗೆ ಸಾವಿರ ಬೀಜ;ದುರ್ಯೋಧನ ಬೇಲಿ ಕಟ್ಟಿದರೂಹಕ್ಕಿಗಳು ಕೊಂಬೆಯಿಂದ ಹಾರಿದವುಬೀಜಕ್ಕೆ ಬೇಲಿಯ ಭಾಷೆ ತಿಳಿಯಲಿಲ್ಲ. ಒಂದು ಸಂಜೆ ಬೆಂಕಿ ಎದ್ದಿತು,ಹಳೆಯ ಓಲೆ ಉರಿದು ಬೂದಿಯಾಯಿತು;ಬೂದಿ ಗಾಳಿಯ ಜೊತೆಗೆ ಹಾರಿದಾಗಆಲದ ಬರಿದ ಕೊಂಬೆಯ ತುದಿಯಲ್ಲಿಹೊಸ ಚಿಗುರೊಂದು ನಗುತ್ತಿತ್ತು. ಮಳೆ ಸುರಿಯಿತು, ಮಣ್ಣು ಘಮಿಸಿತು;ಆಲದ ನೆರಳಿಗೆ ಕೇರಿ ಬಂತು,ಕೇರಿಯ ಬೆನ್ನಿಗೆ ಊರೂ ಬಂತು;ಒಂದೇ ಚಾಪೆಯ ಮೇಲೆ ಕೂತುಅಕ್ಷರದ ದೀಪ ಹಚ್ಚಿದರು. ಅತ್ತಿಯ ಕೆಳಗೆ ದುರ್ಯೋಧನರಾತ್ರಿಯಿಡೀ ನಿದ್ದೆಗೆಟ್ಟ“ಎಲ್ಲರೂ ನೆಟ್ಟಗೆ ನಿಂತರೆನನ್ನ ಸಿಂಹಾಸನದ ಎತ್ತರಇನ್ನು ಯಾರಿಗೆ ಕಾಣುವುದು?” ಬೆಳಕು ಹರಿಯಿತುಭೀಮನ ಗದೆ ಮಣ್ಣಲ್ಲೇ ಉಳಿಯಿತು;ಎಲ್ಲರ ಹೆಸರಿಗೂ ಒಂದೇ ಮಸಿ ಹೊತ್ತಹೊಸ ಪುಸ್ತಕ ತೆರೆದುಕೊಂಡಿತುಅತ್ತಿಯ ನೆರಳು ಕಿರಿದಾಗುತ್ತಿತ್ತು. ಎಚ್ಚರವಾದಾಗಕಿಟಕಿಯಾಚೆ ಎರಡೂ ಮರಗಳಿದ್ದವು;ಆಲದಡಿ ಮಕ್ಕಳು ಒಟ್ಟಾಗಿ ನಗುತ್ತಿದ್ದರು,ಅತ್ತಿಯ ಬುಡದಲ್ಲಿ ಮಳೆ ಸುರಿಯುತ್ತಿತ್ತುನಿನ್ನೆ ಎಳೆದ ಗೆರೆಇಂದು ಮಣ್ಣಾಗುತ್ತಿತ್ತು. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು” Read Post »

ಕಾವ್ಯಯಾನ

ಶಿವರಾಜ ಅರಳಿ ಅವರ ಕವಿತೆ “ಸೆರಗು”

ಕಾವ್ಯ ಸಂಗಾತಿ ಶಿವರಾಜ ಅರಳಿ ಸೆರಗು ೧ಕಪ್ಪುಗಟ್ಟಿದ ಮೋಡದ ಎದೆಬಹುವಾಗಿ ಬಿಗಿದಿದೆ;ಕಳೆಯ ಕಳೆದು.ಸಹಜ ಸ್ಥಿತಿಗೆ ಮರಳದಸವಿತೃವಿನ ಗಂಟಲಲಿಉಸಿರು ಸಿಕ್ಕು ರೋಧಿಸುತಿದೆಹೆಜ್ಜೆ ಮೂಡದ ಕಾಡಲ್ಲಿಆಕ್ರಂದನ;ಆತ೯ನಾದಬೆಂದು ಬಾಡಿದ ಆತ್ಮನಿವಾ೯ತಕ್ಕೆ ನೇಣು ಬಿಗಿದುಕೊಂಡಿದೆಅಂತೆ-ಕಂತೆಗಳ ಕಟ್ಟಲ್ಲ ಇದುನುರಿತು ಪಾಕವಾದ ಎಸಳನ್ನು ಕೇಳಿಬಾಗಿ ದಾಟಿದ ಕಥೆಯನೂಲು ಬಿಡಿಸುತ್ತದೆ ಎಳೆಯಾಗಿ ೨ಆತ್ಮಕ್ಕೂ ಗೊತ್ತಿದೆ;ಅಂಚಿನ ಅಲೌಕಿಕತೆನಾಲಿಗೆಯ ತುಂಡು ದೇಹಕೆ ಕಣ್ಣಿಲ್ಲತುದಿಯಲಿ ಸಿಕ್ಕುಮಾಯವಾಗುವ ನೆರಳಿಗೆಬೆಳಕಿನ ಮೊರೆತ ಎಂದೂ ಕೇಳಿಸದುಬಹುಶಃ ಹುದುಗಿರಬಹುದುಅನುಭೂತಿ, ಅನುಭಾವದ ಕನ್ನಡಿ.ಅನುಗಾಲದ ತುಂತುರು ಹನಿಗಳಲಿಮೊಳೆತ ಚಿಗುರುಗಳುಮಾಯೆಯ ಸರಳಿನ ಉಸಿರುಗಳು.ನಿತ್ಯ ನೆಗೆವ ಜೀವತಂತುವಿನತೆವಲನು ಕಟ್ಟಿ ಹಾಕಲು ಸಾಧ್ಯವೇ.?ಆಳದ ಕೂಪದಲಿ  ಸಿಲುಕಿವಿಹಗನಂತೆ ಕಾಣುವುದು ವಿರಳ..!! ಶಿವರಾಜ ಅರಳಿ

ಶಿವರಾಜ ಅರಳಿ ಅವರ ಕವಿತೆ “ಸೆರಗು” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಪ್ರಪಂಚ ಪ್ರಾಮಾಣಿಕರನ್ನೇ ಪರೀಕ್ಷಿಸುತ್ತದೆಯಂತೆ ನಿಜವೇಆ ದೇವರು ಒಳ್ಳೆಯವರನ್ನೇ ಒರೆಗೆ ಹಚ್ಚುತ್ತಾನಂತೆ ನಿಜವೇ ಕೆಡುಕಿನ ಕೋಣಕ್ಕೆ ಮೂಗುದಾನವೇ ಇಲ್ಲವೇನೊ ಅನಸ್ತದವಿಧಿ ದುಡಿವವರನ್ನೇ ದಾರಿದ್ರ್ಯಕ್ಕೆ ದೂಡುತ್ತದೆಯಂತೆ ನಿಜವೇ ಅರ್ಧಕ್ಕಿಂತ ಹೆಚ್ಚು ಜನರಿಲ್ಲಿ ಅಡ್ಡದಾರಿಯನ್ನೇ ಹಿಡಿದಿದ್ದಾರೆಸರಿ ದಾರೀಲಿ ನಡೆವವರೇ ದಿಕ್ಕುತಪ್ಪಿ ಬಂದವರಂತೆ ನಿಜವೇ ಆಗುಹೋಗುಗಳೆಲ್ಲವೂ ಸೋಗು ಧರಿಸಿಯೇ ಜರುಗುತ್ತಲಿವೆಮುಖವ ತೋರಿಸಿದವರ ಮೇಲೆ ಮೊಕದ್ದಮೆಯಂತೆ ನಿಜವೇ ಮನುಷ್ಯತ್ವ ಹುಡುಕುವುದರಲ್ಲೇ ಮಹಾಂತ ಕಾಲಕಳೆದನಂತೆವ್ಯರ್ಥ ಹುಡುಕಾಟ ಅರ್ಥ ಕಳೆದುಕೊಂಡಿದೆಯಂತೆ ನಿಜವೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ” ಸತ್ಯ ಸಮತೆಶಾಂತಿ ಪ್ರೀತಿಬಸವ ಸಾರಿದರಾಷ್ಟ್ರ ಪ್ರೀತಿ ರಾಜ ಬೀದಿಶರಣ ನಿಧಿರಾಜತೇಜಬಸವ ಬೀಜ ದುಡಿದು ತಂದುಹಂಚಿ ತಿಂದರುನನ್ನ ಶರಣರುದಿಟ್ಟ ಯೋಧರು ನ್ಯಾಯ ನಿಷ್ಟುರಲೋಕ ರಕ್ಷಕಜನ ತಾಂತ್ರಿಕಮಹಾ ಮಾಂತ್ರಿಕ ಬಸವ ಭಕ್ತಿದೇಶ ಶಕ್ತಿಲಿಂಗ ಜಂಗಮಬಸವ ನೀತಿಯು ಬಸವ ಭಾನುಭಕ್ತ ನಾನುಭರತ ನೆಲದಲಿಆನು ತಾನು ಡಾ. ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಬಸವ ಭಕ್ತಿ” Read Post »

ಕಾವ್ಯಯಾನ

ರೋಹಿಣಿ ಜೆ ಅವರ ಕವಿತೆ “ಫ್ರಿಜ್ – ಫ್ಲವರ್”

ಕಾವ್ಯ ಸಂಗಾತಿ ರೋಹಿಣಿ ಜೆ “ಫ್ರಿಜ್ – ಫ್ಲವರ್” ಚೆಲುವಿತ್ತು ಎಲೆಯನಲವಿತ್ತುಮೊಗ್ಗಾದುದಕ್ಕೆ ಹಿರಿಹಿರಿಹಿಗ್ಗಿತ್ತುಗಿಡದಲ್ಲೇ ಅರಳುವ ಕನಸೊಂದ ಕಟ್ಟಿತ್ತು!ಯಾವುದೋ ಕಾಣದ ಕೈ ಬಂತುಹಾಗೆಯೇ ಚಿವುಟಿ ಗೋಣ ಮುರಿದಿತ್ತು!ಆಸೆಯ ಹೊಸಕಿ ಪರವಶವಾಗಿ ಹೊರಟಿತ್ತು!? ದಾರಿಯುದ್ದಕ್ಕೂ ಸಂಭ್ರಮಎಲ್ಲೋ ಎತ್ತರಕ್ಕೇರುವೆನೆಂದು!ಸ್ವಲ್ಪವೇ ಸ್ವಲ್ಪ ಮೈಯರಳಿಸತೊಡಗಿತ್ತುಬಂದು ಬಿದ್ದದ್ದು ಮಾರುಕಟ್ಟೆಗೆತನ್ನಂತಿರುವ ಸುತ್ತಲವರ ಕಂಡುಚೂರು ಚೂರೇ ಚೂರು ಧೈರ್ಯ ದೊರೆಯಿತು ನೂರು, ಇನ್ನೂರು, ಐನೂರು,“ಅಬ್ಬಬ್ಬಾ ಎಷ್ಟು ಏರಿದೆ ಬೆಲೆ”ಮಂದಿಯೊಳಗೆ ನಡೆದಿತ್ತು ಗೊಣಗು ಗುಸುಗುಸುಏನಾಗ್ತಿದೆ ತನ್ನ ಮಾರಾಟವೇ?ನೀರು ಚಿಮುಕಿಸಿದ್ದು ಅಕ್ಕರೆಗಲ್ಲ!ನೆರಳೊಳಗೂ ಸುಡುವಕಾವಿಗೆ ಅಳುತ್ತಿತ್ತು ಮುಸುಮುಸು! ಯಾರೋ ಮಹನೀಯರ ಫೋಟೋಗೆಸಂಭಾಷಣೆ ಕೇಳಿಬಂದಿತ್ತು ಮೊಬೈಲಲ್ಲಿಹೀಗಾದರೂ ಪಾವನ ಜನುಮ ಪರಿಮಳ ಬೀರಿತುಸಂದಣಿಯಲಿ ನಜ್ಜುಗುಜ್ಜು ಬಜ್ಜಿಯಾಗಿಬಂದರೆ ಇಲ್ಲೂ ದೊರೆಯಲಿಲ್ಲ ಪ್ರೀತಿಯ ಸ್ಪರ್ಶಎಂದೂ ಕಾಣದ ನಂ(ಮಂ)ಜಿನ ಕೋಣೆಯ ಸೇರಿತು ಮಾರನೆಯ ದಿನ ಬಂದರು ಮನುಷ್ಯರುಹೊರತೆಗೆದು ಖುಷಿಯಲ್ಲಿ ನೋಡಲುಹೃದಯಕ್ಕೆ ಆಘಾತ ಕಾದಿತ್ತು ಹೂ ಹಣ್ಣಾಗಿತ್ತು!ನೋಟಿನ ರಾಣಿ ಪರ್ಸನು ತೆರೆದುಇತ್ತಳು ಹೊಸತೊಂದು ತಾ ಎನುತಕಣ್ಮುಂದೆ ಕನಸಕೊಂದವರ ಶಪಿಸಿ ಅದು ತಾ ಮಣ್ಣಾಗಿತ್ತು! ರೋಹಿಣಿ ಜೆ

ರೋಹಿಣಿ ಜೆ ಅವರ ಕವಿತೆ “ಫ್ರಿಜ್ – ಫ್ಲವರ್” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ “ಇಂದೇಕೋ ಮನಸ್ಸು ಭಾರವಾಗಿದೆ.”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ ಇಂದೇಕೋ ಮನಸ್ಸು ಭಾರವಾಗಿದೆ. ಇಂದೇಕೋ ಮನಸ್ಸು ಭಾರವಾಗಿದೆ…  ಮೋಡ ಕವಿದ ಆಗಸದ ಹಾಗೆ.  ಕಾರಣ ಕೇಳಿದರೆ ಉತ್ತರವಿಲ್ಲ,  ಆದ್ರೂ ಎದೆಯೊಳಗೆ ಎದ್ದಿಹಬಿರುಗಾಳಿಯ ಸಾವಿರ ಸುಳಿಯೊಳಗೆ ಸಿಲುಕಿದೆ… ನಗುತ್ತಾ ಎಲ್ಲರೊಂದಿಗೂ ಮಾತಾಡ್ತೀನಿ,  ಆದ್ರೆ ಒಳಗೆ ಎಲ್ಲೋ ಒಂದು ಮೂಲೆಯಲ್ಲಿ  ಸಣ್ಣ ಮಗುವಿನ ಹಾಗೆ ಗೋಳಾಡ್ತಿದೆ ಮನಸ್ಸು.  ಯಾರಿಗೂ ಹೇಳಿಕೊಳ್ಳದ ಸಂಕಟ ನೋವುಗಳು  ಗುಂಡಿಗೆ ಗೂಡಲ್ಲಿ ಕಲ್ಲಿನಂತೆ ಕೂತಿವೆ. ಸಮಯ ನಿಂತಂತಿದೆ,  ಗಡಿಯಾರದ ಮುಳ್ಳುಗಳುಕೂಡ ನಿಧಾನಗತಿಯಲ್ಲಿ ಚಲಿಸುತ್ತಿವೆಪ್ರಪಂಚ ಜೋರಾಗಿ ಓಡ್ತಿದೆ,  ನಾನು ಮಾತ್ರ ನನ್ನ ಯೋಚನೆಗಳಲ್ಲೇ ಸಿಕ್ಕಿಹಾಕಿಕೊಂಡಿದ್ದೀನೇನೋ.. ಕಣ್ಣಲ್ಲಿ ನೀರಿದ್ದರೆ ಹರಿಯಲಿ.  ಮಳೆ ಬಿದ್ದ ಬಳಿಕ ಭೂಮಿಯಮಣ್ಣು ಪರಿಮಳ ಬೀರುತ್ತೋ,  ಅತ್ತಮೇಲೆ ಮನಸ್ಸೂ ಹಾಗೆಹಗುರಾಗುತ್ತದೆಂಬ ಭರವಸೆ. ಈ ಕತ್ತಲು ಶಾಶ್ವತವಲ್ಲ.  ದೀಪ ಆರಿಸಿದ ಕೂಡಲೇ ಬೆಳಕು ಬರುತ್ತೆ.  ನೋವು ಇರುವ ಜಾಗದಲ್ಲೇಗುಣವಾಗೋ ಶಕ್ತಿನೂ ಇರುತ್ತೆ.ಆದರೂ ಇಂದೇಕೋ ಈ ಮನಸ್ಸುಭಾರವಾಗಿದೆ…. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ “ಇಂದೇಕೋ ಮನಸ್ಸು ಭಾರವಾಗಿದೆ.” Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್ ಅವರ ಕವಿತೆ “ನಾವೀಗ ಅನಂತ”

ಕಾವ್ಯ ಸಂಗಾತಿ ಡಾ.ಭಾರತಿ ಅಶೋಕ್ “ನಾವೀಗ ಅನಂತ” ಇನ್ನೂಏನೆಂದರೆ ಏನನ್ನೂ ಧಕ್ಕಿಸಿಕೊಂಡಿರಲಿಲ್ಲಆಗಲೇ ತೊರೆದು ನಡದೆಈಗಷ್ಟೇ ಸಿಕ್ಕ ಹಾಗಿತ್ತು, ಇಲ್ಲ , ಸಿಗುತ್ತಿದ್ದೆ . ಆಗಲೇ ದಾರಿ ಬದಲಿಸಿದೆ ಮುಂದಿನನಿಲ್ದಾಣದಲ್ಲಿ  ಮತ್ತೆ ಸಿಗುತ್ತೇವೆಯೊ  ಅದುಬೇಡದ ಸಂಗತಿ ಇಲ್ಲಿಈಗಲೇ ಸಿಕ್ಕವರು ಒಬ್ಬರಿಗೊಬ್ಬರು ಏನೂದೊರಕಿಸಿಕೊಳ್ಳದೇ ಹೋದಮೇಲೆಮುಂದೆ ಕೊಡುಕೊಳ್ಳುತ್ತೇವೆ ಎನ್ನುವಹಂಬಲ ಭರವಸೆ ನನಗಿಲ್ಲನಿರಿಕ್ಷೆಯೋ ..ಒಮ್ಮೆ ನಿರೀಕ್ಷೆ ಸತ್ತರೆ ಸಿಗುವ ಸಿಗದಿರುವುದರಗೊಡವೆಯೇ ಇರದು ನೀವೆನ್ನಬಹುದುಇಲ್ಲಿ ಕೊಡುಕೊಳ್ಳುವುದಾದರು ಏನಿತ್ತು?ಏನೆಲ್ಲವೂ…. ಬದುಕು ಬವಣೆ,ಕೊನೆಗು ಉಸಿರನ್ನೂ….. ಅವನುಕೊಟ್ಟಿದ್ದರೆ ಬವಣೆಯನ್ನೂ ಉಸಿರಾಗಿಸಿಕೊಳ್ಳುವ ಛಾತಿ ಇತ್ತು. ಅವನದನ್ನೂ ಕೊಡದೇ ತೆರಳಿದ ನೀವನ್ನುವಿರುಅವನು ಎನೂ ಕೊಡದೇ ಹೋದುದೇಬವಣೆಯಲ್ಲವೇ ಎಂದು!ಅದು ಹಾಗಲ್ಲ ಎನೋ ಕೊಡದೇ ಇರುವುದೇ ಅಮೃತ ಪ್ರೀತಿಅದೆ ಎಲ್ಲ, ಎಲ್ಲವೂ… ಅದನ್ನೇ ಬದುಕುತ್ತಿರುವೆ ನಾನೀಗಅವನು ಏನನ್ನಾದರೂ ಕೊಟ್ಟಿದ್ದರೆ ಸೀಮಿತವಾಗುತ್ತಿದ್ದ ಈಗ ಏನನ್ನೂ ಕೊಡದ ಅವನು ಪಡೆಯದ ನಾನು ಇಬ್ಬರೂ ಅನಂತ ಡಾ.ಭಾರತಿ ಅಶೋಕ್.

ಡಾ.ಭಾರತಿ ಅಶೋಕ್ ಅವರ ಕವಿತೆ “ನಾವೀಗ ಅನಂತ” Read Post »

You cannot copy content of this page

Scroll to Top