ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿರಹಿ ದಂಡೆ

ಪುಸ್ತಕ ಪರಿಚಯ ವಿರಹಿ ದಂಡೆ ವಿಪ್ರಯೋಗದಲ್ಲಿ ಅರಳಿದ ಶೃಂಗಾರ ಕವಿತೆಗಳು ವಿರಹಿ ದಂಡೆಕವನ ಸಂಕಲನಲೇಖಕ : ನಾಗರಾಜ ಹರಪನಹಳ್ಳಿಪ್ರಕಾಶನ: ನೌಟಂಕಿ. ರಾಜಾಜಿ ನಗರ, ಬೆಂಗಳೂರು.ಬೆಲೆ : ೮೦/- ನಾಗರಾಜ್ ಹರಪನಹಳ್ಳಿ ಎಂಬ ಮಹೋದಕ ಪ್ರತಿಭೆ ಪ್ರೀತಿ, ಪ್ರೇಮ, ಪ್ರಣಯದ ಪರಾಕಾಷ್ಠೆಯನ್ನು ತಲುಪಿ ಸದಾ ಯಯಾತಿಯ ಧಿರಸನ್ನು ತೊಟ್ಟು ಎದೆ ತೆರೆದು ನಿಂತ ಅಪ್ಪೆ ಹುಳಿ, ಒಗರನ್ನು ಮೈಗೂಡಿಸಿಕೊಂಡಿರುವ ಬಯಲು ಸೀಮೆಯಿಂದ ದಂಡೆಗೆ ಬಂದ ಪ್ರೀತಿಯ ಕಡುಮೋಹಿ. ಈ ಕವಿ ಹುಟ್ಟಿದ್ದೇ ಗಾಢ ಆಲಿಂಗನದ ಆರ್ದ್ರ ಉಸಿರಿನ, ಅದುರುವ ತುಟಿಗಳ, ಮುತ್ತಿನ ಮತ್ತಿನ ಬಯಕೆಯಲ್ಲಿ ಸದಾ ತೇಲಾಡುವುದಕ್ಕಾಗಿಯೇ ಅನಿಸುತ್ತದೆ. ಅವರ `ವಿರಹಿ ದಂಡೆ’ಯ ಕವಿತೆಗಳನ್ನು ಓದಿದಾಗ ಖಂಡಿತಾ ಅನಿಸುತ್ತದೆ. ನನಗೆ ಅವರ ಮೊದಲ ಸಂಕಲನಕ್ಕೆ ಮುನ್ನುಡಿ ಬರೆಯಲು ಅವಕಾಶ ಕಲ್ಪಿಸಿದ್ದರು. ಈ `ವಿರಹಿ ದಂಡೆ’ ಅವರ ಎರಡನೇ ಸಂಕಲನ ವಾಗಿದೆ. ಪತ್ರಕರ್ತರಾಗಿ, ಉಪನ್ಯಾಸಕರಾಗಿ, ಬಂಡಾಯ ಸಾಹಿತ್ಯ ಸಂಘಟನೆ, ಸಾಹಿತ್ಯ ಪರಿಷತ್ತು ಎಲ್ಲವನ್ನು ಎದೆಗೆ ಹಚ್ಚಿಕೊಂಡು ಸದಾ ಕ್ರಿಯಾಶೀಲವಾಗಿ ಓಡಾಡಿಕೊಳ್ಳುತ್ತಲೇ ಕಥೆ, ಕವಿತೆ, ವಿಮರ್ಶೆ ಅಂತೆಲ್ಲಾ ಬರೆಯುತ್ತಲೇ ಕುವೆಂಪು, ಬೇಂದ್ರೆ, ಲಂಕೇಶ್, ನರೋಡ, ಬೋದಿಲೇರ್, ಅಲ್ಲಮ, ಬಸವಣ್ಣ, ದೇವನೂರು, ನೀಲು ಎಲ್ಲವನ್ನೂ ಓದುತ್ತಲೇ ದೇವರು ದಿಂಡರು ಬಗೆಗಿನ ಮೌಡ್ಯವನ್ನು ಪ್ರಶ್ನಿಸುತ್ತ ವೈಚಾರಿಕ ನೆಲೆಯ ಮನಸ್ಸನ್ನು ಬರಹಗಳ ಮೂಲಕ ಪ್ರಕಟಿಸುತ್ತ, ತಣ್ಣಗೆ ಪ್ರತಿಭಟಿಸುತ್ತ ತನ್ನದೇ ಆದ ಹಾದಿಯನ್ನು ತುಳಿದವರು. ಮಳೆ ಸುರಿಯುತ್ತಲೇ ಇದೆ ದಾಹ ಮಾತ್ರ ಹಿಂಗಿಲ್ಲ (ಎಷ್ಟು ನೀರು ಕುಡಿದರೂ) ಎನ್ನುವ ಕವಿ ಪ್ರೀತಿಯ ನಿರಂತರತೆ, ಚಲನಶೀಲತೆ, ಚಿರಂತನತೆಯನ್ನು ಪ್ರಕಟಿಸುತ್ತಾರೆ. ಈ ಮೇಲೆ `ಮಹೋದಕ ಎಂದದ್ದು ಈ   ಹಿನ್ನಲೆಯಲ್ಲಿಯೇ.’ ಪ್ರೀತಿ, ಕೆಮ್ಮು ಮುಚ್ಚಿಡಲಾಗೊಲ್ಲ’ ಎಂಬ ಮಾತಿನಂತೆ, ಎದೆ ತೆರೆದಂತೆ ಅವರು ಪ್ರೀತಿಯ ಮಜಲುಗಳನ್ನು ತೆರೆದಿಡುತ್ತಾರೆ. ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ತರ ಎಲ್ಲಾ ಕಾಲಕ್ಕೂ ಇವರು ಪ್ರೀತಿಯ ಬಗ್ಗೆಯೇ ಬರೆಯ ಬಹುದೆಂಬುದು ಅವರ ಕವಿತೆಗಳನ್ನು ಓದಿದಾಗ ಅನಿಸುತ್ತದೆ. ಭಾಷೆಯನ್ನು ದುಡಿಸಿಕೊಳ್ಳುತ್ತಲೇ ಪ್ರಬುದ್ಧತೆಯನ್ನು ಮೆರೆಯುವ ಹರಪನಹಳ್ಳಿಯವರು ತಮ್ಮ ಕವಿತೆಗಳಲ್ಲಿ ಹೊಸತನ ಪ್ರಕಟಿಸುತ್ತಾರೆ. ‘ ದಂಡೆಯ ಕೈಯಲ್ಲಿ ಚಂದ್ರನಿಟ್ಟು ಬರೋಣ’ ಎನ್ನುವ ಕವಿ ಸಂಜೆಯ ಮುದಗೊಂಡ ಗಾಳಿಯ ಸ್ಪರ್ಶಕ್ಕೆ ನಲುಗುವ ಹಳದಿ ಹೂಗಳ ಫಲುಕಿಗೆ ಬೆರಗಾಗುತ್ತಾರೆ. “ಕಣ್ಣು ಕಣ್ಣು ಬೆರೆತವು ಪ್ರೀತಿ ನಿರಾಕರಿಸಲಾಗಲಿಲ್ಲ’’ “ಬೀದಿಗಳಲ್ಲಿ ಎಷ್ಟೇ ತಿರುಗಿದರೂ ನಿನ್ನ ಜೊತೆ ನಡೆದಾಗ ಸಿಕ್ಕ ಸಂಭ್ರಮ ಸಿಗಲಿಲ್ಲ’’ “ಜಗತ್ತು ಹರಾಮಿ ಹಗಲು ದುಡಿಯುತ್ತದೆ ರಾತ್ರಿ ಕಾಮಿಸುತ್ತದೆ’’ “ಚಂದ್ರ ನಕ್ಕ ಆಕಾಶವೂ ಬಾಹುಗಳ ತೆರೆದು ಆಲಂಗಿಸಿತು’’ ಇಲ್ಲೆಲ್ಲ ಕವಿ ತನ್ನನ್ನು `ಪೋಲಿ’ ಎಂದು ಕರೆದುಕೊಂಡರೂ ಅದು ಪೋಲಿತನವಲ್ಲ. ಅಂತರಂಗದ ಭಾವ ಸಹಜತೆಯಾಗಿದೆ.ಅವರ ಕವಿತೆಗಳಲ್ಲಿ ಬರುವ ಚಂದ್ರ, ಆಕಾಶ, ದಂಡೆ, ಬಯಲುಗಳೆಲ್ಲವನ್ನೂ ಮನುಷ್ಯ ಸದೃಶ ಚಿತ್ರವಾಗಿ ಕವಿತೆಗಳಲ್ಲಿ ನಿಲ್ಲಿಸುತ್ತಾರೆ. ಪ್ರಕೃತಿಯ ಭಾಗಗಳನ್ನು ಮನುಷ್ಯ ಲೋಕಕ್ಕೆ ತರುವುದು ಹೊಸತನದ ರೂಪಕಗಳಾಗಿವೆ. ಇಂಗ್ಲೀಷಿನ flying kiss ಎನ್ನುವ ಮಾತನ್ನು ಕವಿತೆಯ ಸಾಲಾಗಿಸುವ ಕವಿ “ದೂರದಿಂದ ಕಳಿಸಿದ ಮುತ್ತು ಬಾಯಾರಿಕೆ ಹೆಚ್ಚಿಸಿದವು’’                   (ಪ್ರೇಮದ ಹನಿಗಳು) ನೀರ ಹನಿ ಬಿದ್ದಾಗ ಮುಟ್ಟಿದರೆ ಮುನಿ ( ನಾಚಿಕೆ ಮುಳ್ಳಿನ ) ಎಲೆ ನಾಚುವಂತೆ `ಹಠಾತ್ ಬಿದ್ದ ಮಳೆಗೆ ದಂಡೆ ನಾಚುತ್ತದೆ’ ಎನ್ನುತ್ತಾರೆ. ಪ್ರೊ.ವಿ.ಕೆ.ಗೋಕಾಕ್ ತಮ್ಮ ಕವಿತೆಯೊಂದರಲ್ಲಿ “ಇಲ್ಲಿ ಬಾಳಿಗೆ ಸಂತಸವೇ ಗುರಿ ಇಲ್ಲಿ ಭೋಗವೇ ಯೋಗವು’’ ಎಂದಂತೆ ಈ ಕವಿಯೂ ಕೂಡ “ಸೆರಗ ನೆರಳಲ್ಲಿ ಬಚ್ಚಿಟ್ಟು ಕೊಳ್ಳಬೇಕೊಮ್ಮೆ’’ ಎನ್ನುವ ಕವಿತೆಯಲ್ಲಿ “ಸೆರಗ ನೆರಳಲ್ಲಿ ಪ್ರೀತಿ ಪಲ್ಲವಿಯ ಹಾಡಬೇಕೊಮ್ಮೆ ನಶ್ವರತೆಗೂ ಮುನ್ನ ಬದುಕ ಮೋಹಿಸಬೇಕೊಮ್ಮೆ’’ ಎನ್ನುತ್ತ ಅದಮ್ಯ ಪ್ರೀತಿಯ ಜೊತೆ ಬದುಕನ್ನು ಸುಂದರಗೊಳಿಸುತ್ತಾರೆ. “ಈಗ ಬಿರು ಬೇಸಿಗೆ ನೀ ಹೋದ ಮೇಲೆ’’ ( ಹನಿಗಳು) ಯಾರೇ ಕೈ ಹಿಡಿದುಕೊಂಡು ನಡೆಯಲಿ ದಂಡೆ ಪುಳಕಗೊಳ್ಳುತ್ತದೆ ಪ್ರೇಮ ಎಂದರೆ ಅದಕೆ ರೋಮಾಂಚನ’’ (ಹನಿಗಳು) ಇಲ್ಲಿ ದಂಡೆಯನ್ನು ತನ್ನ ಪ್ರೀತಿಯ ಭಾಗವಾಗಿಸುತ್ತಾರೆ ಮತ್ತು ದಂಡೆಯ ಆಹ್ಲಾದಕರ ಸಂಜೆ ಕವಿತೆಯಾಗಿಸುವುದಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಸಂಕಲನದ ಬಹುತೇಕ ಕವಿತೆಗಳು `ಹನಿ’ಗಳನ್ನು ಒಳಗೊಂಡಿವೆ.ಹನಿಗಳನ್ನು  `ಇಬ್ಬನಿ’ ಎನ್ನುವ ಕವಿ ಹನಿಗಳನ್ನೂ ಕವಿತೆಯಾಗಿಸಿದ್ದಾರೆ. ಸಂಕಲನದ ಬಹುತೇಕ ಕವಿತೆಗಳು ವಿಪ್ರಲಂಭ ಶ್ರಂಗಾರದ ವಿಪ್ರ ಯೋಗದಲ್ಲಿ ಮಿಂದು ಭೋಗದ ಕಲ್ಪನೆಯನ್ನು, ಭಾವ ಸಮಾಧಿಯನ್ನು ಅರಸುವ ಆ ಮೂಲಕ ಪ್ರೀತಿಯ, ಪ್ರಣಯದ ಭಾವಗಳನ್ನು ವ್ಯಕ್ತಪಡಿಸುವ ಕ್ರಮ ವಿಶಿಷ್ಠವಾದುದಾಗಿದೆ. ಈ ಕೆಳಗಿನ ಕವಿತೆಯನ್ನು ನೋಡಿ.. “ಕಣಿವೆ ನಿತಂಬಗಳು ಮತ್ತೇರಿವೆ ಬಾ ಸ್ವರ್ಗವೇ ಒಮ್ಮೆ ಬಂದುಬಿಡು ಮತ್ತೆ ಕನಸಿನರಮನೆಯ ಮತ್ತೆ ಕಟ್ಟೋಣ (ಕೆನ್ನೆಗಳು ಏಕಾಂತ ಅನುಭವಿಸುತ್ತಿವೆ) ಕಣಿವೆಗಳ ಶೃಂಗಾರ ಮಾಡೋಣ’’ “ಭೂಮಿಯ ಬಿರುಕಿಗೆ ಬೆರಳಿಟ್ಟ ಕ್ಷಣ ಗಾಢ ಉನ್ಮಾದ,ಕಡಲು,ನದಿ ಉಲ್ಲಾಸಗೊಂಡ ಘಳಿಗೆ’’ ಎನ್ನುವ ಕವಿತೆ ಶ್ರಂಗಾರದ ಪರಾಕಾಷ್ಠೆಯನ್ನು ಮುಟ್ಟುತ್ತದೆ. ಲಂಕೇಶ್ `ನೀಲು’ ಪದ್ಯಗಳನ್ನು ನೆನಪಿಸುತ್ತವೆ. ಅವುಗಳ ಪ್ರಭಾವ ಕೂಡ ಇಲ್ಲದಿಲ್ಲ! “ ಒಂದು ಹಣತೆ ಹಚ್ಚಿದೆ ಕತ್ತಲು ಬೆದರಿತು’’ “ಎಷ್ಟೊಂದು ದೀಪ ಹಚ್ಚಿಟ್ಟೆ ಪ್ರೀತಿ ಅರಳಿತು’’ “ಹಣತೆ ಹಚ್ಚಿದೆ ಹೊಸಿಲು ನಕ್ಕಿತು’’ ಈ ಸಾಲುಗಳು ಒಂದು ಕ್ಷಣ `ವಾಹ್’ ಎನಿಸಿ ನಿಲ್ಲಿಸಿಬಿಡುತ್ತವೆ. “ಬುದ್ಧನಾಗಲಾರೆ’’ ಎಂಬ ಕವಿತೆಯೂ ಸಹ ಸದಾ ಶ್ರಂಗಾರ ಭಾವದಲ್ಲಿ ಉಳಿಯುವೆ ಎನ್ನುವಂತೆ ಸಾರುತ್ತಾರೆ. “ಬೋದಿಲೇರ್ ಮತ್ತೆ ಮತ್ತೆ ನೆನಪಾದ’’ ಎನ್ನುವ ಕವಿತೆ ಗಮನ ಸೆಳೆಯುವುದಷ್ಟೇ ಅಲ್ಲಿ ಬೋದಿಲೇರ್‌ನ ಪ್ರಭಾವ ಕೂಡ ಇರುವುದು ಸ್ಪಷ್ಟ. “ಸದಾ ಏನನ್ನಾದರೂ ಕುಡಿದಿರು ಎಂದ ಕಡು ವ್ಯಾಮೋಹಿ ಮನುಷ್ಯ ಕವಿ ಇದೀಗ ನನ್ನ ದೇಶದಲ್ಲಿ ಹುಟ್ಟಬೇಕಿತ್ತು’’ ಎನ್ನುವ ಕವಿ ಹೆಣ್ಣನ್ನು ಇನ್ನಿಲ್ಲದಂತೆ ಭೋಗಿಸುವ,ಆರಾಧಿಸುವ ಮನಸ್ಸನ್ನು ಸ್ವಚ್ಛಂದ ಗಾಳಿಯಲಿ ಹರಿಬಿಡುವ ಬೋದಿಲೇರ್ ಈ ಕವಿಯ ಆರಾಧ್ಯ ದೈವವಾಗಿದ್ದಾನೆ. “ಮಧ್ಯರಾತ್ರಿ ಮಳೆ ಮಿಂದ ಭೂಮಿ ನಿದ್ದೆ ಹೋಗಿದೆ‘’ ಎಂಬ ದೀರ್ಘ ತಲೆಬರಹದ ಈ ಕವಿತೆ ಮದೋನ್ಮತ್ತ ಕಾಮವನ್ನು ಪ್ರತಿನಿಧಿಸುತ್ತದೆ. ನವ್ಯದ ಆರಂಭದಲ್ಲಿ ರಾರಾಜಿಸಿದ ಲೈಂಗಿಕ ಪ್ರಜ್ಞೆ ಭೂಮಿ, ಮಳೆಯಲ್ಲಿ ಏಕೀಭವಿಸಿ ಬದುಕಿನ ಸೂತ್ರದಲ್ಲಿ ಪ್ರತ್ಯೇಕಗೊಳಿಸಲಾರದಷ್ಟು ಹದವಾಗಿ ಬೆರೆತಿದೆ. ಶೃಂಗಾರದ ಮಡುವಲ್ಲಿ ಭೂಮಿ ಮೂರು ಬಾರಿ ಮಿಂದು ಇರಳಿಡೀ ಅನುಭವಿಸಿದ ಸುಖದ ಪರಾಕಾಷ್ಠೆಯ ಪರಮಾವಧಿಯಾಗಿದೆ. ಈ ಕವಿತೆ, ಕವಿ ಬರೀ ಪ್ರೀತಿಯ ಕಡುಮೋಹಿ ಅಷ್ಟೇ ಅಲ್ಲ, ಪ್ರಣಯದ ಕಡುಮೋಹಿಯೂ ಹೌದು ಎಂಬುದನ್ನು ನಿರೂಪಿಸುತ್ತದೆ. ಉಳಿದಂತೆ, ಭೂಮಿತಾಯಿ ತಲೆ ಬಾಚಿಕೊಳ್ಳುವ ಸಮಯ, ಉಳಿದದ್ದು ದಂಡೆ ವಿರಹ, ದಂಡೆಯ ಜೊತೆ ಮಾತುಬಿಟ್ಟೆ, ಶರಧಿ ಸಾಕ್ಷಿ, ದಂಡೆಯಲ್ಲಿನ ಹಕ್ಕಿ ನಾಚಿತು, ಎದೆಗೆ ಬಿದ್ದ ಅಕ್ಷರವ ಹೊತ್ತು, ಮುಂತಾದ ಕವಿತೆಗಳು ಅವುಗಳ ಭಾಷಾ ಪ್ರಯೋಗದಿಂದ ಗಮನ ಸೆಳೆಯುತ್ತವೆ. ಬದುಕನ್ನು ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡುವ’ ನೀರಲಿ ಹೊಳೆ ಹೊಳೆವ ನಿರಿಗೆ ನೆರಳ ಹಿಡಿದಂತೆ’ ಎನ್ನುವ ಕವಿತೆಯಲ್ಲಿ ಕಾಣುತ್ತೇವೆ. `ಬದುಕನ್ನು ಹೇಗೆಂದರೆ ಹಾಗೆ ವಿವರಿಸಲಾಗದು’ ಎನ್ನುವ ಕವಿ, ದಕ್ಕುವ ದಕ್ಕದೇ ಇರುವ ಸಂದರ್ಭಗಳ ನಡುವೆ ಕವಿತೆಯನ್ನು ಹುಡುಕುತ್ತಾರೆ. “ನಡೆದಷ್ಟೇ ದಾರಿ ತೆರೆದುಕೊಂಡಿತು ನಿಂತಲ್ಲೇ ನಿಂತು ಕಲ್ಪಿಸಿ ಭಾವಿಸಿ ಬಯಸುವುದಲ್ಲ ಬದುಕು’’ “ಪಿತೂರಿಯಲ್ಲಿ ದಿನವಿಡೀ ಕಳೆವ ಹುಲು ಮಾನವರ ಕಂಡು ಕಡಲು ಬಯಲು ನಗುತ್ತಿತ್ತು’’ “ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತಾಡಿದಂತಾಯಿತು’’ “ಮಗು ಮಲಗಿತ್ತು ಅದರ ಮುಖ ಮುದ್ರೆಯಲ್ಲಿ ಬುದ್ಧ ಕಂಡ’’ “ಮುಗಿಲ ದುಃಖ ಭೂಮಿಯ ಬಾಯಾರಿಕೆ ಮುಗಿಯುವಂತದ್ದಲ್ಲ’’ “ಭೂಮಿ ಮಳೆ ಮಧ್ಯೆ ಗಾಳಿ ಸುಳಿಯಿತು ಗಿಡಮರ ಹಕ್ಕಿಗಳು ಆಡಿಕೊಂಡವು’’ “ಶಬ್ದಗಳು ಕರಗುತ್ತಿವೆ ತಣ್ಣಗೆ ಸುರಿವ ಮಳೆಯಲ್ಲಿ’’ “ಮಳೆ ನೆಲದೊಂದಿಗೆ ಪಿಸುಮಾತನಾಡುತ್ತ ಶೃಂಗಾರದ ಮತ್ತಿನಲ್ಲಿರುವಾಗ ಭೂಮಿಯು ನಗ್ನ ನಾನೂ ನಗ್ನ’’ “ಮಾತಿಗೆ ಮಾತು ಬೆಸುಗೆಯಾದವು ಹೃದಯ ಹೂವಾಯಿತು’’ “ಒಮ್ಮೆ ಗುಡುಗಿದಳು ಭೂಮಿ ನಡುಗಿತು ಕ್ಷಮೆ ಕೋರಿದೆ ಕರುಣೆಯ ಸಾಗರವಾದಳು’’ ಈ ಎಲ್ಲಾ ಸಾಲುಗಳನ್ನು ಗಮನಿಸಿದರೆ ಕವಿ ಭಾಷೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾವ ಸಾಲು ವಾಚ್ಯವಾಗದ ಹಾಗೆ ಭಾಷೆಯ ಬಳಕೆಯಾಗಿದೆ. ಸಣ್ಣ ಸಣ್ಣ ಚಿತ್ರಗಳಿಂದ ಮನಸ್ಸನ್ನಾವರಿಸುವ `ಸುಳಿವ ಶಬ್ದವ ಹಿಡಿದು’ ಕವಿತೆ ಕೊನೆಗೆ ಪ್ರೀತಿಯ ಅಗಾಧತೆಯನ್ನು ಸೂಚಿಸುತ್ತದೆ. ಸಂಕಲನದ ಕೊನೆಯ ಕವಿತೆ  “ಈಗೀಗ..’’ ಭಾಷೆಯ ಚಂದ ಸಾರುತ್ತದೆ. “ತಣ್ಣಗೆ ಬೀಸುವ ಗಾಳಿಯಲಿ ನಿಟ್ಟುಸಿರದ್ದೇ ಕಾರುಬಾರು’’ “ಬಟಾ ಬಯಲು ಬಿದ್ದಿರುವ ಆಕಾಶದಲಿ ಕಂಗಾಲಾದ ಕನಸುಗಳು’’ “ಗಹಗಹಿಸಿ ನಗುವ ಬೆಂಕಿಯಲಿ ನಿನ್ನದೇ ಅನುರಾಗದ ನೆನಪುಗಳು’’ ಈ ಸಾಲುಗಳು ಕೊಡುವ ಸಣ್ಣ ಸಣ್ಣ ಚಿತ್ರಗಳು ಅರ್ತಗರ್ಭಿತವಾಗಿವೆ. ಒಟ್ಟಾರೆ “ವಿರಹಿ ದಂಡೆ’’ಯ ಕವಿತೆಗಳು ಕವಿಯ ಸಾಮರ್ಥ್ಯವನ್ನು ಸಾಬೀತುಪಡಿಸುತ್ತವೆ.ಕಥೆಗಾರರಾಗಿ ಗುರುತಿಸಿಕೊಂಡ ಹರಪನಹಳ್ಳಿಯವರು ಕೊನೆಗೆ ಕಾವ್ಯದ ಕಡೆಗೆ ಹೊರಳಿ ಬದುಕಿನ ಚಿರಂತನ ಪ್ರೀತಿಯನ್ನು ಮೊಗೆ ಮೊಗೆದು ಕೊಡುತ್ತ, ಎಲ್ಲಿಯೂ ವಾಚ್ಯವಾಗದ ಹಾಗೆ ಬರೆಯುತ್ತ ;  ಪ್ರೀತಿಯ ಬಗೆಗಿನ ಕಡು ಮೋಹವನ್ನು ಪ್ರಕಟಿಸುತ್ತಾರೆ. ಹರಪನಹಳ್ಳಿಯಿಂದ ಉದ್ಯೋಗ ಅರಸಿ ಕಡಲ ದಂಡೆಗೆ ಬಂದು ಉತ್ತರ ಕನ್ನಡದವರೇ ಆಗಿದ್ದಾರೆ. ಮುನ್ನುಡಿ ಬರೆದಿರುವ ಹಿರಿಯ ಕವಿ ಬಿ.ಎ.ಸನದಿ,ಮೋಹನ್ ಹಬ್ಬು, ಎಂ.ಆರ್. ಕಮಲ ಕವಿಯ ಕಾವ್ಯ ಪ್ರಜ್ಞೆಯನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಈ ಕವಿಯಿಂದ ಇನ್ನಷ್ಟು ಸಂಕಲನಗಳು ಬರಲಿ. ಪ್ರೀತಿಯ ಮೇರೆ ದಾಟಿ ಬದುಕನ್ನು ಗಂಭೀರವಾಗಿ ಚಿಂತಿಸುವ, ಸಮಕಾಲೀನ ಸನ್ನಿವೇಶಗಳಿಗೆ ಸ್ಪಂದಿಸುವ ಕವಿತೆಗಳನ್ನು ಬರೆಯಲೆಂದು ಎದೆಯ ಹಾರೈಕೆ. *********************************************************  – ಫಾಲ್ಗುಣ ಗೌಡ ಅಚವೆ.

ವಿರಹಿ ದಂಡೆ Read Post »

ಕಾವ್ಯಯಾನ

ಬದುಕುವೆ ರಾಜಹಕ್ಕಿಯಾಗಿ

ಕವಿತೆ ಬದುಕುವೆ ರಾಜಹಕ್ಕಿಯಾಗಿ ರಾಘವೇಂದ್ರ ದೇಶಪಾಂಡೆ ಈಡೇರುವವು ಆಸೆಗಳು ಸಾವಿರಾರುಈ ಭವದಲಿ…ಗಟ್ಟಿತನದ ಅಪೇಕ್ಷೆಯ ಆಶಯದಲಿನನ್ನೀ ಭಾವಪರವಶದಲಿ… ಹೊರಹೊಮ್ಮಿದವು ನಿರೀಕ್ಷೆಗಳುಕಮ್ಮಿಯೆನಿಸಿತಾದರೂ…ಪ್ರೀತಿಯ ಹುಟ್ಟು ಮತ್ತು ಸಾವಿನಲಿಕಾಣಸಿಗದಿಲ್ಲಿ ವ್ಯತ್ಯಾಸ… ಜೀವಿಸುತಿರುವೆ ಅಸದೃಶವಾಗಿಕತ್ತಲ ಗರ್ಭದಲಿ…ಕಟ್ಟಿಕೊಂಡ ಹಾಳೆಯ ಕೋಟೆ ಮಧ್ಯೆತೂರಿಬರುವ ಪ್ರೇಮಗಾಳಿಯಲಿ… ಇದೆ ಎನಗೆ ತಾಳ್ಮೆ ಕಾಯುವಲಿಅದೇ ತೃಪ್ತಭಾವದಲಿ…ಬದುಕುವೆ ಖಂಡಿತ ಆಸೆಗೂಡಿನಲಿಸ್ವಚ್ಛಂದದ ರಾಜಹಕ್ಕಿಯಾಗಿ… **************************************

ಬದುಕುವೆ ರಾಜಹಕ್ಕಿಯಾಗಿ Read Post »

ಕಾವ್ಯಯಾನ

ಸೋಜಿಗವಲ್ಲ ಈ ಜಗವು

ಕವಿತೆ ಸೋಜಿಗವಲ್ಲ ಈ ಜಗವು ರೇಷ್ಮಾ ಕಂದಕೂರ. ಸೋಜಿಗವಲ್ಲ ಈ ಜಗವುಪೇಚಿಗೆ ಸಿಲುಕದಿರಿ ನಿರ್ಲಕ್ಷ್ಯ ತನದಿಉನ್ನತ ವಿಚಾರ ಧಾರೆ ಅನುಕರಿಸಿ ಭಾಜನಾರಾಗುವೆವು ಸುಕೃತಿಗಳ ಔತಣಕೆಶೂದ್ರತನವು ಏಕೆ ತೃಣಮಾತ್ರಕೆಭದ್ರವಾಗಿರಿಸಿ ಕಾಮನೆಗಳ ಕೀಲಿಕೈ ತದ್ರೂಪ ಮೋಹಕೆ ಬಲಿಯಾಗದೇಬದ್ಧತೆಯಲಿರಲಿ ಜೀವಯಾನದ ನೌಕೆಅರಳಲು ಬಿಡಿ ಸುಕೋಮಲ ಮನ ಪುಷ್ಪವ ವ್ಯವಹಾರದಲಿ ವ್ಯವಧಾನದ ನಂಟಿರಲಿಬಿದ್ದವನು ಮರುಘಳಿಗೆ ಏಳಲೇಬೇಕುಕದ್ದ ಮನೋಭಾವ ನರಳುವುದು ಶುದ್ಧ ಸರಳತನಕೆ ಬೆಲೆ ಕೊಡಿಅರಿಯಿರಿ ವಿರಳವಾದುದು ಮಾನವ ಜನ್ಮಕಲಹ ಕೋಲಾಹಲದಲಿ ಬೇಡ ಕಾಲಹರಣದ ಕುರೂಪತೆ ನಡೆಬಡಿವಾರದ ಕೂಗು ಬೇಕೆಹಗೆತನದ ಮತ್ತಿನ ಸುತ್ತ ಚರ್ಮದ ಹೊದಿಕೆಯ ಮಾಂಸಕೆಕರ್ಮದ ಫಲಿತಾಂಶವೇ ದೃಢಬುರುಡೆಯ ಮಾತೆಗೇಕೆ ಮಣೆ ಗೇಣುದ್ದ ಜಾಗವೇ ಕೊನೆಮಾರುದ್ಧ ಭಾಷಣ ಮಾಡುತಕಿಡಿ ಕಾರುವ ಬಡಿದಾಡುವ ಕಥನ ಬಿಡಿ ಕ್ಷಣಕಾಲದ ಸುಖಕೆ ಗಮನಅಂತರಾಳದ ಮಾತೊಮ್ಮೆ ಕೇಳುತಸುಪ್ತಸ್ಥಿತಿಯ ಭಿತ್ತಿಯಲಿ ಬೇಡ ಕೂರ್ಮಾವತಾರ ಅನುಬಂಧಧ ಅಲೆಯಲಿ ತೇಲುವ ಬಾನಗೆ ಮಲ್ಲಿಗೆಯ ಅನುಭಾವದಿಸಂಬಂಧಕೆ ಬೆಲೆ ನೀಡಿಬರೆಯಿರಿ ಸತ್ಯಾಸತ್ಯದ ಗೋಡೆ ಬರಹ. ***********************************

ಸೋಜಿಗವಲ್ಲ ಈ ಜಗವು Read Post »

ಕಾವ್ಯಯಾನ, ಗಝಲ್

ಗಝಲ್

ಮಕ್ಕಳಿಗಾಗಿ ಗಝಲ್ ಲಕ್ಷ್ಮೀದೇವಿ ಪತ್ತಾರ ಜೇಡ ತುಂಬಿದ ನಿಮ್ಮ ಮನದ ಮನೆಯ ಜಾಡಿಸಿ ಶುಭ್ರವಾಗಿಸುವ ಜಾಡು ನಾನಾಗುವೆ ಮಕ್ಕಳೆಪದೇಪದೇ ದೂಳು ತುಂಬಿದ ಜೀವನ ನಿಮ್ಮದಾಗಿಸಿ ಕೊಳ್ಳಬೇಡಿ ಮಕ್ಕಳೆ ನಿಮ್ಮ ಮಬ್ಬಾದ ಬಾಳ ಬಾನಿನಲ್ಲಿ ಬಣ್ಣ ಬಣ್ಣದ ತಾರೆಗಳನ್ನು ಇರಿಸಿ ಬೆಳಗಿಸುವೆ ಮತ್ತೆ ಮತ್ತೆ ಕಾರ್ಮೋಡಗಳ ಮುಂದಿರಿಸಿ ಕತ್ತಲಲ್ಲಿ ಮೂಳಗಬೇಡಿ ಮಕ್ಕಳೇ ನಿಂತ ನೀರಾಗಿ ಕೊಳೆಯುತ್ತಿರುವ ನಿಮ್ಮ ಬಾಳ ಹೊಳೆಗೆ ಮಳೆ ನಾನಾಗಿ ಚೈತನ್ಯ ಚಿಲುಮೆಯಾಗಿ ಹರಿವಂತೆ ಮಾಡುವೆಮತ್ತೆ ಜಡತೆಯ ಬಂಡೆ ಅಡ್ಡವಿರಿಸಿ ನಿಸ್ತೇಜರಾಗಿ ಕೂಡಬೇಡ ಮಕ್ಕಳೆ ಹಸಿರಾಡದ ಮರುಭೂಮಿಯಂತಾದ ನಿಮ್ಮ ಬದುಕಿಗೆ ಉದಕ ನಾನಾಗಿ ಹಚ್ಚಹಸಿರು ಸಸ್ಯರಾಶಿ ಚಿಗುರಿಸುವೆಚಿಂತೆಯ ಕಸ ಬೆಳೆಸಿಕೊಂಡು ಮತ್ತೆ ಬರಡು ಭೂಮಿಯಾಗಬೇಡಿಇದು ಲಕುಮಿ ಶಿಕ್ಷಕಿಯ ಕಳಕಳಿ ಬೇಡಿಕೆ ಮಕ್ಕಳೆ ***************************

ಗಝಲ್ Read Post »

ಕಾವ್ಯಯಾನ

ಕನ್ನಡದ ದಿವ್ಯೋತ್ಸವ

ಕವಿತೆ ಕನ್ನಡದ ದಿವ್ಯೋತ್ಸವ ವೀಣಾ. ಎನ್. ರಾವ್ ಕನ್ನಡದಾ ಮನಗಳೆ ಎದ್ದು ನಿಲ್ಲಿಹರಿಸೋಣ ಅಮೃತದ ಸುಧೆಯನ್ನಿಲ್ಲಿಸಿರಿಗನ್ನಡದ ಶರಧಿಯೊಳಗಿನ ಮಾಧುರ್ಯಸವಿದು ನೋಡಲು ಬೇಕು ಔದಾರ್ಯ ! ಬೆನ್ನೀರ್ ಮುನ್ನೀರ್ ಪನ್ನೀರ ಸಿಂಚನಕೆಧ್ಯಾನಸ್ಥ ತುಷಾರ ಗಿರಿಯ ಸಿಂಚನಕೆಕನ್ನಡದಾ ಮಣ್ಣಲಿ ಚಿಗುರೊಡೆದಾ ಹಸಿರೇಶತಮಾನದ ಸಂಸ್ಕೃತಿಗೆ ನೀನಿದ್ದರೆ ಊಸಿರೇ ! ಮೈಲಿ ಮೈಲಿಗೂ ಕನ್ನಡದಾ ಶೈಲಿಯುಮೂಡಿದೆ, ಕೂಡಿದೆ ಪೃಥ್ವಿಯ ಕೈಯಲ್ಲಿಯುಮುಕುಟ ಮಣಿಯು ಎಂದೂ ನರ್ತಿಸುತ್ತಿರುವುದಲ್ಲಿಹೊನ್ನುಡಿಯ ಪಾಂಚಜನ್ಯ ಮೊಳಗುತಿಹುದಲ್ಲಿ ! ಮರೆಮಾಡದಿರು ಪರಕೀಯರೆದುರು ನಿನ್ನ ಕನ್ನಡಸರಳ ವಿರಳವಾಗಲು ಬಿಡದಿರು ನಿನ್ನ ಕನ್ನಡಕಾವ್ಯದ ಕಲೆಗಳಿಗೆ ರಸಸೃಷ್ಟಿ ಈ ಕನ್ನಡಭಾರತಾಂಬೆಯ ಹೆಗ್ಗಳಿಕೆಗೆ ಹೊಸ ಉಕ್ತಿ ಈ ಕನ್ನಡ ! ಕನ್ನಡವೆಂಬ ದಿವ್ಯೋತ್ಸವಆಗಲಿ ನಿತ್ಯೋತ್ಸವಕನ್ನಡವೆಂಬ ದಿವ್ಯೋತ್ಸವ ಆಗಲಿ ನಿತ್ಯೋತ್ಸವ !! ***************************

ಕನ್ನಡದ ದಿವ್ಯೋತ್ಸವ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ವತ್ಸಲಾ ಶ್ರೀಶ ಹೃದಯ ಶ್ರೀಮಂತನಲ್ಲ ಪ್ರೀತಿಯ ಮರಳಿಸದ ಸಾಲಗಾರನಾಗಿದ್ದೆ ನೀನುಕಾರಣಗಳ ಓರಣದಿ ಜೋಡಿಸುತ್ತಲೇ ದಾರಿ ಬದಲಿಸಿದ್ದೆ ನೀನು ತಾರೆಗಳನೇ ತಂದಿರಿಸಿದೆಯೆಂಬ ಭ್ರಮೆಯ ಬಾನಲಿ ವಿಹರಿಸುತಲಿದ್ದೆಕಲ್ಲು ಮುಳ್ಳಿನ ಬಯಲಲಿ ನಿಂತ ಸತ್ಯವನು ಕೊನೆಗೂ ತೋರಿಸಿದ್ದೆ ನೀನು ಕಲ್ಪನೆಯ ಕಣ್ಣಲ್ಲಿನ ಸುಂದರ ಚಿತ್ರಗಳು ಬದುಕ ರಂಗೋಲಿಯಾಗಲಿಲ್ಲರಂಗು ರಂಗಿನ ಕನಸುಗಳಿಗೆ ಕಪ್ಪುರಂಗನು ಎರಚಿ ಕೆಡಿಸಿದ್ದೆ ನೀನು ಪ್ರೇಮದ ಪರಿಚಯವಿರದ ಹೃದಯ ಮಧುರ ಭಾವಕ್ಕೆ ಸಿಲುಕಿ ಮಗುವಂತಾಗಿತ್ತಂದುಮುಗ್ಧ ಮನಕೆ ಪ್ರೀತಿಯನು ಬಣ್ಣದಾಟಿಕೆ ಮಾಡಿ ಮರುಳುಗೊಳಿಸಿದ್ದೆ ನೀನು ಮೋಸವ ಅಸಹಾಯಕತೆಯೆಂಬ ನೆಪದಿ ಶೃಂಗರಿಸಿ ತಪಸ್ಯಾ ಳ ತೊರೆದಿದ್ದೆಅಮರ ಪ್ರೇಮಕತೆಗಳೂ ಮುಲಾಮಿನೊಳಗಿನ ಹಸಿ ಗಾಯಗಳೆಂಬ ಸತ್ಯ ತಿಳಿಸಿದ್ದೆ ನೀನು *****************************

ಗಝಲ್ Read Post »

ಕಾವ್ಯಯಾನ

ತಕ್ಕಡಿ ಸರಿದೂಗಿಸಿ

ಕವಿತೆ ತಕ್ಕಡಿ ಸರಿದೂಗಿಸಿ ನೂತನ ದೋಶೆಟ್ಟಿ ಬೀದಿಯಲ್ಲಿ ಅವಳ ಹೆಣ್ತನಕಳೆದು ಹೋದಾಗಹುಡುಕಲು ಹಗಲು ರಾತ್ರಿಯೆನ್ನದೆಬೀದಿಗಿಳಿದರು ಎಲ್ಲ ತಕ್ಕಡಿ ಹಿಡಿದು ನಾನೂ ಹೊರಟೆನನ್ನ ಕಾಲ ಧೂಳು ನೀನುಎಂದ ಅವನ ಮಾತನ್ನು ತೂಗಿಕೊಂಡು ಬೈಗುಳ, ಹೊಡೆತ, ಗಾಯ-ಬರೆಗಳನ್ನುತಂದು ಪೇರಿಸಿದರು ದಾರಿಗುಂಟತಕ್ಕಡಿ ಜಗ್ಗುತ್ತ ನೆಲಕ್ಕೆ ಹೊಸೆಯುತಿತ್ತುಅಲ್ಲಿ ತಕ್ಕಡಿ, ನಾನು ಇಬ್ಬರೆ ನಿನ್ನ ಕೂಗಿಗೆಯಾರೂ ಬೀದಿಗಿಳಿಯಲಿಲ್ಲವಲ್ಲ !ಮನೆಯ ಗೋಡೆ – ಕಿಟಕಿಗಳಿಗೆಮೈದುಂಬಿತು ಆವೇಶ ಮುಚ್ಚಿದ ಕದಗಳುಏರ್ ಕಂಡೀಷನ್ ರೂಮುಗಳುಸೌಂಡ್ ಪ್ರೂಫ್ ಕಛೇರಿಗಳುಶಬ್ದವನ್ನು ದಾಟಗೊಡಲಿಲ್ಲಅರಿಯದ ಮೌಢ್ಯತೆ ಏನೆಲ್ಲ ಅವಕ್ಕೆ ಕೈಯ ತಕ್ಕಡಿ ನೆಲ ಹೊಸೆಯುತ್ತಲೇ ಇತ್ತು ಬಿದಿಗಿಳಿದವರಿಗೆ ಏನೋ ಕಾನೂನು ಬಂತಂತೆ ?ಕಾಂಪೌಂಡುಗಳು ಮಾತಾಡಿಕೊಂಡವುಮನೆಯಲ್ಲಿ ಕಾನೂನು ಕಣ್ಣೀರಿಡುತ್ತಿದೆಹಲ್ಲಿಗಳು ಲೊಚಗುಟ್ಟಿದವು ತಕ್ಕಡಿಯ ಸರಿದೂಗಿಸೆಂದುಆಕೆಗೆ ಹೇಳುತ್ತಾಕಣ್ಣ ಪಟ್ಟಿಗೆ ಕೈ ಹಾಕಿದೆಅಲ್ಲಿ ಪಾಪೆಗಳೇ ಇರಲಿಲ್ಲ !ಕಪ್ಪು ಬಟ್ಟೆಯನ್ನು ತಕ್ಕಡಿಯಲ್ಲಿಟ್ಟುಬೀಳ್ಕೊಟ್ಟಳು ಅವಳು ಊರ ಹೆಬ್ಬಾಗಿಲಲ್ಲಿ ಹೊಸೆಯುತ್ತಿರುವತಕ್ಕಡಿ ಇನ್ನೂ ತೂಗುತ್ತಿದೆ. *******************************

ತಕ್ಕಡಿ ಸರಿದೂಗಿಸಿ Read Post »

ಕಾವ್ಯಯಾನ

ಪೂರ್ವಿಕರ ಸಾಧನೆ

ಕವಿತೆ ಪೂರ್ವಿಕರ ಸಾಧನೆ ಮಾಲಾ ಕಮಲಾಪುರ್ ಮಾನ ಮುಚ್ಚಲೆಂದು ಗೇಣು ಬಟ್ಟೆಜ್ಞಾನಕ್ಕೇನೂ ಕಮ್ಮಿ ಇಲ್ಲ ಎನ್ನುವ ಸಾಧನೆಮುಷ್ಠಿ ಅನ್ನದಲ್ಲಿಯೂ ನಾಲ್ಕು ಜನರಿಗೆಕೈ ತುತ್ತು ಹಾಕುವ ಪೂರ್ವಿಕರಿಗೊಂದು ನನ್ನ ಸಲಾಂ ಕೇಳುವ ಹತ್ತಾರು ಕಿವಿಗಳಿಗೆ ಪುರಾಣ ಪುಣ್ಣ್ಯ ಕಥೆಗಳನು ನಾಲ್ಕು ಚಪ್ಪರದಲಿ ಕಂದೀಲು ಬೆಳಕಿನಲಿ ಜ್ಞಾನಾಮೃತ ಉಣಿಬಡಿಸಿದ ಪೂರ್ವಿಕರಿಗೊಂದು ನನ್ನ ಸಲಾಂ ಚೌಕಾಬಾರ ಗೋಟ ಗೋಣಿ ಗೋಲಿ ಆಟದಲಿ ಮಕ್ಕಳಿಗೆ ಅಂಕೆ ಸಂಖ್ಯೆ ಗಳ ಪರಿಚಯಸಿ ಮೋಜು ಮಾಡುತ ಮನ ತುಂಬಿ ಹಾರೈಸುವ ಪೂರ್ವಿಕರಿಗೊಂದು ನನ್ನ ಸಲಾಂ ಭಯ ಭೀತಿ ಅಳಿಸಲೋಮ್ಮೆ ಮಕ್ಕಳಿಗೆ ದೃಷ್ಟಿ ತೆಗೆದು ಹಾರೈಸುವ ಅಜ್ಜಿಯರಿಗೊಂದು ನನ್ನ ಸಲಾಂ ರೋಗಗಳು ಭಾದೆ ತಾಗದಿರಲೆಂದು ವೈರಾಣುಗಳನು ಹೊರ ಹಾಕಲು ಮನೆ ಮನೆಯಲಿ ಊದು ಹಾಕಿ ಅಕ್ಷರಸ್ಥರಾಗದೆ ವೈದ್ದ್ಯಕೀಯ ಅರಿವು ಹೊಂದಿದ ಪೂರ್ವಿಕರಿಗೊಂದು ನನ್ನ ಸಲಾಂ ನಮ್ಮ ಜಲ ನಮ್ಮ ನೆಲ ನಾವೆಲ್ಲ ಒಂದು ಹೇಳುತಾ ನಿಸ್ವಾರ್ಥ ಬದುಕಿನಲಿ ಬಂಗಾರದ ಬದುಕು ಕಂಡ ಪೂರ್ವಿಕರಿಗೊಂದು ನನ್ನ ಸಲಾಂ. ************************************************

ಪೂರ್ವಿಕರ ಸಾಧನೆ Read Post »

ಕಾವ್ಯಯಾನ

ನಮ್ಮ ಮನೆ

ಕವಿತೆ ನಮ್ಮ ಮನೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಅರಮನೆಯಂತಿಲ್ಲ ಈ ನನ್ನ ಮನೆಮಧ್ಯಮವರ್ಗದಅತೀ ಸಾಮಾನ್ಯ ಅನುಕೂಲದಸಣ್ಣದೊಂದು ಸೂರು ಅಷ್ಟೆ!ಹಜಾರವಿದೆಅದೂ ಮಧ್ಯಮಒಂದೆರಡು ರೂಮುತಲೆಯಿಂದ ಕಾಲ ಉದ್ದುದ್ದಧಾರಾಳ ನೀಡುವಷ್ಟು!ಊಟಕ್ಕೆ ನೆಲಮತ್ತು ಅಡುಗೆಗೊಂದು ದೊಡ್ಡ ಬಿಲ! ಬನ್ನೀ ಸ್ವಾಮಿಯಾರು ಬೇಕಾದರೂ ಬನ್ನಿಎಷ್ಟು ಜನರಾದರೂ ಬನ್ನಿಒಳಗೆ ಹಿಡಿಸುವಷ್ಟು…ಅಥಿತಿಗಳಾಗಿಅಥವಾ ಹಿತೈಷಿಗಳಾಗಿಸ್ನೇಹದಿಂದ…ಬಂದು ಇದ್ದು ಹೋಗಿನಿಮಗಿಷ್ಟವಾದಷ್ಟು ದಿನನೆಮ್ಮದಿಯಿಂದ… ದಿನದಿನವೂ ಸುತ್ತಿ ಬನ್ನಿನಮ್ಮೂರ ಸುತ್ತಮುತ್ತಅನತಿ ದೂರದಲ್ಲೇ ಇವೆಅನೇಕ ಪ್ರವಾಸಿ ಸ್ಥಳಕಣ್ಣು ತುಂಬಿಸಿಕೊಂಡು ಬನ್ನಿ ಎಲ್ಲಊರೊಳಗೆ ಬೀಡು ಬಿಟ್ಟಿರುವ ಅನೇಕಾನೇಕ ಥರದ ಮೇಳ…ಕಾಯ್ದಿರುವೆವು ದಿನವೂ ನಿಮಗಾಗಿನಮ್ಮದೇ ಮನೆಯ ನಮ್ಮ ಸಮ ಊಟಕ್ಕೆಮತ್ತು ಹಂಚಿಕೊಳ್ಳರಿನಮ್ಮದೇ ಹಜಾರ ಕೊಠಡಿನಿಮ್ಮ ನಿಶ್ಚಿಂತೆಯ ಶಯನಕ್ಕೆ… ಹೊರಡುವ ದಿನಹೊರಡಿ ತೃಪ್ತಿ ನೆಮ್ಮದಿಯಲಿನಮಗೂ ನಿಮಗೂ ಇರಲಿವಿಶ್ವಾಸ ಮೊದಲಿನಂತೆ ಈಗಲೂಇನ್ನೂ ಖುಷಿ ಈಗದು ಮತ್ತೂ ಹೆಚ್ಚಿದ್ದರೂ…ಹಾಗೂ ಬಿಟ್ಟು ಹೋಗಿ ಎಲ್ಲಒಳಾಂಗಣ ಇದ್ದ ಹಾಗೇ ಮೊದಲುಅಲ್ಲಲ್ಲಿ ಗೋಡೆ ಕಟ್ಟುವ ಬದಲು…ಮತ್ತು…ಉಳಿಸಿ ಹೋಗದಿರಿನಮ್ಮೊಳಗೆ ಕರಾಮತ್ತಿನ ಕಿಷ್ಕಿಂಧ… ******************************

ನಮ್ಮ ಮನೆ Read Post »

ಕಾವ್ಯಯಾನ

ವಿಪ್ಲವ

ಕವಿತೆ ವಿಪ್ಲವ ಚಂದ್ರಪ್ರಭ ಬಿ. ಇಂದೇಕೊ ಅವ್ವ ನೆನಪಾಗುತ್ತಿದ್ದಾಳೆ…ಅಪ್ಪನ ಬನಿಯನ್ನುತಮ್ಮನ ಚಡ್ಡಿತನ್ನ ಲಂಗವನ್ನುಢಾಳಾಗಿ ಬಿಸಿಲಿಗೆಎಲ್ಲೆಂದರಲ್ಲಿ ಒಣಗಲು ಹಾಕುತ್ತಿದ್ದ ಅವ್ವನನ್ನ ಕಂಚುಕವನ್ನು ಒಣ ಹಾಕಲುಹುಡುಕುತ್ತಿದ್ದಳುಮರೆಯಾದ ಒಂದು ಜಾಗವನು… ಈಗ ತಾನೆ ಮನೆಗೆ ಮರಳಿದವಲುಂಗಿಯುಟ್ಟುಬನಿಯನ್ನೆಂಬ ಮಾಯಕವನುಹಗ್ಗಕ್ಕೆ ಇಳಿಬಿಟ್ಟು ಗಾಳಿಗೆ ಮೈಯೊಡ್ಡಿಹಾಯಾಗಿ ನಿಂತುಕೊಂಡುದ ಕಂಡುಮತ್ಸರಗೊಳ್ಳುತ್ತೇನೆ ಒಳಗೊಳಗೇ… ತೆರೆದುಕೊಳ್ಳುತ್ತ ಸಂಜೆಯ ಕೆಲಸಗಳಿಗೆಗಡಿಬಿಡಿಯಲಿರುವ ನನ್ನ ನೋಡಿಗದರುತ್ತಾರೆ ಅತ್ತೆ :ಅದೆಂತದು ಚೂಡೀ ದಾರ..?ಉಡಬಾರದೆ ಒಪ್ಪವಾಗಿ ಸೀರೆ…ನೆಂಟರಿಷ್ಟರು ಬಂದು ಹೋಗುವ ಮನೆ! ಈ ಚೂಡೀದಾರ ಎನುವ ಮಾಯೆಕೆಲಸ ಕಾರ್ಯದಲಿ ನನಗೆಷ್ಟು ಹಿತಎನ್ನುವುದನುಅರಿಯಲಾರರೇಕೆನೆಂಟರು…ಇಷ್ಟರು…ಅತ್ತೆ…? ತನ್ನವ್ವನ ಗದರುವಿಕೆಇನಿಯಳ ಗೊಣಗಾಟ ಯಾವುದೂಕೇಳಿಸುವುದೇ ಇಲ್ಲಪತ್ರಿಕೆಯಲಿ ಮುಖ ಹುದುಗಿಸಿರುವನನ್ನವನಿಗೆ! **********************************

ವಿಪ್ಲವ Read Post »

You cannot copy content of this page

Scroll to Top