ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರ ಕವಿತೆ ” ಹೊಸತೇನಿದೆ?”
ಕಾವ್ಯ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ” ಹೊಸತೇನಿದೆ?” ಹೊಸತೇನಿದೆಏನಿದೆ ಹೊಸತು ಈಮುಂಜಾವಿನಲ್ಲಿಅದೇ ಹಳೆಯಬಗೆಹರಿಯದ ನೂರುಕಂಟಕ ಆತಂಕಗಳುರಾತ್ರಿ ಕಚ್ಚಿದ ಕಹಿ ಸುದ್ದಿನಿನ್ನೆಯನೇ ಮತ್ತೆ ಮತ್ತೆಬಿಚ್ಚಿಡುವ ಆ ನಾಳೆಯಲ್ಲಿ…?ಹೊಸತೇನಿದೆ ಹೊಸತೇನಿದೆಮುಂದುವರೆದ ಈ ನಿನ್ನೆಯಲ್ಲಿ?ಯುದ್ಧ ಸಾವು ನೋವುಬಡತನ ಹಸಿವಿಗೆತತ್ತರಿಸಿದವರ ನಡುವೆಕುಡಿದು ತೂರಾಡುವವರ ಸಂಭ್ರಮ ಹೊಸತೇನಿದೆ ?ಬುದ್ಧ ಬಸವರ ಬೇಸಾಯವೇಮರೆತು ನಿತ್ಯ ಕೊಲೆ ಸುಲಿಗೆಯಲಿಸತ್ಯ ಹುಡುಕುವ ನಾಟಕಮತದಾನ ಮಾಡಲು ಜನರುಹೊರಗೆ ಟಿವಿ ಪತ್ರಿಕೆನೆಲದ ಭವಿಷ್ಯ ಬರೆಯುತ್ತಿವೆ ಹೊಸತೇನಿದೆ?ಶಾಂತಿ ಸಮತೆ ಸಮಾಧಿಯಾಗಿದಮನಗಳು ಹಿಂಸೆಯೇ ಧರ್ಮವಾಗಿರುವಾಗಕರುಳ ಪ್ರೀತಿಯ ಕೊಯ್ದುಎಳೆ ಹಸುಗಳ ಮಾರಣ ಹೋಮಇನ್ನೂ ನಿಂತಿಲ್ಲ ಹೊಸತೇನಿದೆ ?ಅದೇ ಜಾತಿ ಮತ ಧರ್ಮಗಳದ್ವೇಷ ಬೀಜ ಬಿತ್ತನೆನಿರುದ್ಯೋಗಿಗಳು ರೀಲ್ಮಾಡುತ್ತಿದ್ದಾರೆಭಜಿ ಮಾರುತ್ತಿದ್ದಾರೆ ಸೂರ್ಯನ ದಿನಚರಿಯೇಇರುಳ ಉಸ್ತುವಾರಿಯಲ್ಲಿರುವಾಗ..ಮುಂಜಾನೆಯ ಮುಂಗೋಳಿಗಳುಹೊರಡಿಸುತ್ತವೆ ಫರ್ಮಾನುಅವರ ಹೇಳಿಕೆಯಂತೆ ಬದುಕ ಬೇಕು ಹೊಸತೇನಿದೆ?ಮುಂದುವರೆದ ಆ ನಿನ್ನೆಯಲ್ಲಿ…?ವಿಶ್ವ ನಾಯಕನಾಗುವ ಬಯಕೆಸತ್ತ ಹೆಣಗಳ ಗೋರಿಯ ಮೇಲೆಸಾಮ್ರಾಟನ ಸಮೃದ್ಧಿ ಅಟ್ಟಹಾಸ ಹೊಸತೇನಿದೆ?ಕರಾಳ ಮುಖ ಸವರಿಕದ್ದು ಮುಚ್ಚಿಡುವಕನ್ನಡಿಗಳು ಇರುವತನಕನಂಜಿನ ಕೀವು ನೆತ್ತಿಗೇರಿಕಣ್ಣು ಮಂಜಾಗಿರುವ ತನಕ..ವಿಶ್ವಾಸ ಮೂಡಿಸದಸಾಹಿತ್ಯವಿರುವ ತನಕಸುತ್ತುತ್ತಲೇ ಇರುವಗಂಡು ಜೋಗುತಿಯರ ಮೆರವಣಿಗೆಚಕ್ರವ್ಯೂಹ ಬೇಧಿಸದ ತನಕ..ಏನಿದೆ ಹೊಸತು? ಹೊಸತೇನಿದೆ?ನಾಳೆಯಾಗದ ಈ ನಿನ್ನೆಯಲ್ಲಿ ?ಮಂದಿರ ಮಸೀದಿ ಚರ್ಚಬಸದಿ ವಿಹಾರಗಳು ಬೆಪ್ಪನೆ ಮಲಗಿವೆಕಾವಿ ಬುರ್ಖಾಗಳ ಕಾದಾಟಹಲಾಲ್ ಬಾಡೂಟಹತ್ತಿ ಉರಿಯುತ್ತಿದೆ ದೇಶ ಹೊಸತೇನಿದೆ ?ಮತ್ತೆ ಹೊರಗೆ ಸಜ್ಜಾಗಿವೆಮೊಹಲ್ಲಾಗಳ ಮುಂದೆಭುಸುಗುಟ್ಟುತ್ತಿರುವಬುಲ್ದೊಜರ್ ಭೀತಿಯಮತ್ತೊಂದು ಕ್ರೂರ ದಿನದಲ್ಲಿ .. ಹೊಸತೇನಿದೆ?ಕೇರಿಯಲೆಂದೂ ಕಾಲಿಡದಗ್ರಹಣ ಸೂರ್ಯನ ನಡಿಗೆಯಲ್ಲಿ..ಭಾನುವಾರಗಳೇ ಇರದತಾಯಂದಿರರ ಕ್ಯಾಲೆಂಡಿರಿನಲ್ಲಿ … ಹೊಸತೇನಿದೆ?ಮುಂದುವರೆದನಿನ್ನೆಯ ಆ ಹಳೆಯ ಕಥೆಯಲ್ಲಿ ?ಮನೆ ಚಾವಡಿಯಲ್ಲಿ ಮಾತುಒಳಗೆ ಒಲೆಗೆ ತೂತುನಡುಮನೆಯಲ್ಲಿಮನು ಸಂತಾನಸೈತಾನನ ಹಿರಿತನದಲಿಮಂತ್ರ ಪೂಜೆ ಘೋಷಣೆ ಹೊಸತೇನಿದೆ ?ಈ ಬೆಳಗಲ್ಲಿ ಮತ್ತೆಅದೇ ಹಳೆಯ ಪುಸ್ತಕದಹೊಸ ಭರವಸೆ ಹಳಸಲುಕನಸು ಕುಣಿಯುತಿವೆಮತ್ತೊಂದು ಅಧ್ಯಾಯದಲಿ.ಮಂಕಾಗಿವೆ ವಚನ ಹೊಸತೇನಿದೆ ಇಂದು ಮತ್ತೆ?ಇರುಳ ಮರುಳಿಲ್ಲದ ಹೊಸಬೆಳಕು ಬೇಕೀಗ ನಮ್ಮ ನಡುವೆಕರಾಳ ಕತ್ತಲ ಜೊತೆಒಳಒಪ್ಪಂದವಲ್ಲದರ್ಪಿಗೆ ಬೆದರಿ ಮುದುರಿಕುಳಿತುಕೊಳ್ಳುವುದಲ್ಲ. ಹೊಸತೇನಿದೆ?ಹತ್ತಿಕ್ಕುವ ತುಳಿಯುವದಮನಗಳ ಯುಗಯುಗಾಂತವಾಗಬೇಕೀಗವೇಷ ಮರೆಸಿದ ವರ್ಷಾಂತವಲ್ಲರಾತ್ರಿ ಕಂಠ ಪೂರ್ತಿ ಕುಡಿದುತೂರಾಡುವದಲ್ಲ ಹೊಸ ಸೂರ್ಯನ ಸಂಕ್ರಮಣಕ್ಕೆಸಿದ್ಧಾವಾಗ ಬೇಕುಸಮತೆ ಮಮತೆಗಳ ಹಣತೆಹಚ್ಚ ಬೇಕುತ್ಯಾಗ ಬಲಿದಾನಗಳ ತೈಲ ಸುರಿದುಬೆಳಗ ಬೇಕು ಭಾರತ ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರ ಕವಿತೆ ” ಹೊಸತೇನಿದೆ?” Read Post »









