ಪ್ರಕಾಶ್.ಆರ್ ಅವರ ಕವಿತೆ “ಸಾರ್ಥಕ ಬದುಕು”
ಕಾವ್ಯ ಸಂಗಾತಿ ಪ್ರಕಾಶ್ ಆರ್ ಸಾರ್ಥಕ ಬದುಕು ವಿದ್ಯೆಯ ನೆರಳು ಕಾಣದ ಹೆಣ್ಣು ಜೀವವೊಂದುಕರುಳ ಕುಡಿಯ ವಿದ್ಯೆಯಆಶ್ರಯ ಕೊಡಲೆಂದುಕರುಳನೇ ಬತ್ತಿಯಾಗಿಸಿ ಬೆಳಕನೀಡಿದಜೀವಕೆ ನೆರಳಾದರೆ ಬದುಕು ಸಾರ್ಥಕವಲ್ಲವೇ? ಹೆಗಲನೇ ನೊಗವಾಗಿಸಿಬೆನ್ನು ಮೂಳೆಯ ಬಲವಾಗಿಸಿಎತ್ತಾಡಿಸಿ ತುತ್ತನೊದಗಿಸಿದ ತಂದೆಗೆಊರುಗೋಲಾಗಿ ನಿಂತರೆಬದುಕು ಸಾರ್ಥಕವಲ್ಲವೇ? ಕಣ್ಣನು ಮಣ್ಣಿಗಿಡುವ ಮುನ್ನಕಣ್ಣಿಲ್ಲದೆ ಕತ್ತಲಲಿರುವ ಜೀವಕೆಕಣ್ಣಾಗಿ ಬೆಳಕಾದರೆ ಬದುಕು ಸಾರ್ಥಕವಲ್ಲವೇ ಅಂಗವಿಕಲನಾದರೇನುಅಂಗಗಳ ಹಂಗಿನ ಗುಂಗಿಲ್ಲದೆಸಕಲಾಂಗವಿರುವ ಮನವು ವಿಕಲವಾದ ಜನರ ನಡುವೆಛಲದಿಂದ ಬಾಳಿದರೆಬದುಕು ಸಾರ್ಥಕವಲ್ಲವೇ ಪ್ರಕಾಶ್.ಆರ್ ತುಮಕೂರು ಡಿಸ್ಟ್ರಿಕ್ಟ್ ದಿವ್ಯಂಗ್ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕರು
ಪ್ರಕಾಶ್.ಆರ್ ಅವರ ಕವಿತೆ “ಸಾರ್ಥಕ ಬದುಕು” Read Post »









