Category: ಕಾವ್ಯಯಾನ
-

ಮನ್ಸೂರ್ ಮುಲ್ಕಿ ಅವರ ಕವಿತೆ ” ಕಂಗಳ ಹೊಳಪು”
ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಕಂಗಳ ಹೊಳಪು” ಹೂವಿನ ಪರಿಮಳ ಬಣ್ಣದಲ್ಲಿರದೆಸುಗಂಧವನೇ ಸೂಸುತಿದೆಸಹನೆಯ ತೊರೆದು ನಡೆಯಲು ಜಗದಲ್ಲಿಪ್ರೀತಿಯೇ ಸೋಲುತಿದೆ. ಕಾಡಿನ ದಾರಿಯು ನಾಡನು ಸೇರಲು ಪ್ರಕೃತಿಯೇ ನಗುತಲಿದೆತಿರುಗುವ ಮನುಜನ ಕಂಡು ಭೂಮಿಯೂ ತಿರುಗುತ ನೋಡುತಿದೆ. ಕಂಗಳ ಹೊಳಪಿಗೆ ಮುತ್ತನು ಹುಡುಕಲುಮನಸ್ಸು ಕಡಲಾಳಕ್ಕೆ ಇಳಿಯುತಿದೆಬೆಳದಿಂಗಳ ಚುಕ್ಕಿಯು ಮೆಲ್ಲನೆ ಭೂಮಿಗೆ ಜಾರುತಿದೆ. ಸ್ವರಗಳು ಪ್ರಾಸವ ಸೇರಿ ಛಂದಸ್ಸಿನಲ್ಲಿ ಅಡಗುತಿವೆಭಾವಗಳೆಲ್ಲವೂ ಲಯದಲ್ಲಿ ಸೇರಿ ಸಾಹಿತ್ಯವನ್ನು ನೀಡುತಿವೆ. ಮನ್ಸೂರ್ ಮುಲ್ಕಿ
-

ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಅವರ ಗಜಲ್
ಕಾವ್ಯ ಸಂಗಾತಿ ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ ಗಜಲ್ *ಸಪ್ತ* ಸಾಗರ ದಾಟಿ ಪರ್ಯವಸಾನಗೊಂಡ *ಹಾದಿಯಿದು* ಪ್ರೇಮ*ಗುಪ್ತ* ಬಯಕೆಯ ಮೀಟಿ ಆಲಾಪಗೊಂಡ *ಶೃತಿಯಿದು* ಪ್ರೇಮ ಹೃದಯದಂಗಳದಲ್ಲಿ ಮಲ್ಲಿಗೆ ಬಳ್ಳಿ ನೆಟ್ಟವನು ನೀನಲ್ಲವೆ ಒಡೆಯ*ಸುಪ್ತ* ಮನವ ಮತ್ತೆ ಮತ್ತೆ ತೀಡಿ *ಲಯಗೊಂಡ* ಭಾವವಿದು ಪ್ರೇಮ ತನ್ನ ತಾ ಅರಿವಿನ ಮೊರೆಗೆ ಕಿವಿ ತೆರೆದು ಕೇಳಿದವರಾರು?*ಕ್ಲುಪ್ತ* ಕಲ್ಪನೆ ಕಟಿ ಕಟಿದು ಕೆನೆಗೊಂಡ *ಚತ್ರವಿದು* ಪ್ರೇಮ ಸುಟ್ಟು ಬೂದಿಯಾಗುವ ಹಂಬಲಕೆ ಕೊನೆ ಮೊದಲಿಲ್ಲ ಗೆಳತಿ*ತಪ್ತ* ಸ್ವರವ ಕುಡಿ ಕುಡಿದು ಹದಗೊಂಡ *ಗುನುಗಿದು* ಪ್ರೇಮ…
-

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ “ಒಲವಮುಖಗಳು”
ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ “ಒಲವಮುಖಗಳು” 1ಹೊಳಿ ಮಗ್ಗುಲ ಕಲ್ಲುಚಿಗುರದು, ಒಣಗದುನೀನಿದ್ದೂ ನನ್ನಂತೆ..!2ರೆಕ್ಕೆ ನಂಬಿ ಹೊಂಟ ಹಕ್ಕಿ…ಒಲವುನಿನ್ನನ್ನೇ…ನಂಬಿದೆಮರದ ಕೊಂಬೆ ಬೇಕೀಗ…3ಸಿಮೆಂಟು ರೋಡೇ ಎರಡುತಿಂಗಳಿಗೆ ಸೀಳಿದೆ…ಒಲವಿಗೀಗವ್ಯಾಲಿಡಿಟಿ ಕಡಿಮೆ ಅಂತಿದ್ರಪ..4ಹಣದ ಹಿಂದೆ ಗಿರಕಿ ಹೊಡೆವಜಗತ್ತಿಗೆ ಒಲವಿನಭಾಷೆ ಹೊಸದು; ಕಾಗುಣಿತದ ಅರಿವಿಲ್ಲ5ಅವ್ವ ಮುನಿಸಿಕೊಂಡಾಗೆಲ್ಲಾಅಪ್ಪ ತುತ್ತು ಜಾಸ್ತಿ ಉಣ್ತಿದ್ದ;ಒಲವಿಗೆ ಹೊಸ ವ್ಯಾಖ್ಯಾನ ಅಂತ ಅವ್ವನ ಸಮಜಾಯಿಷಿ!6ಮಸಣ ದೂರ ಕಣೋ ಇಲ್ಲಿಂದಲೇ ಹೂಒಗೆವೆ ದಾರಿಯಲ್ಲಿಜೊತೆಗಿದ್ದೇನೆ ಅಂದುಕೋ ಒಲವ ಹುಡುಗಾ..7ಬೆರಳು ಸೋಕದೆಯೂ ಒಲವ ಉಣಬಡಿಸಿದರಾಜಕುಮಾರನೆದುರುಮೇಲೆ ಬಿದ್ದು ಹೊರಳಾಡಿದ ಈಗಿನ ಪ್ರೀತಿ ಸಪ್ಪೆ ಸಂತೆಬೆನ್ನೂರು ಫೈಜ್ನಟ್ರಾಜ್
-

ಎಮ್ಮಾರ್ಕೆ ಅವರ ಹೊಸ ಗಜಲ್
ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ತಾ ಪಾಲಿಸದೇ ಇತರರಿಗೆ ಉಪದೇಶ ನೀಡುವುದು ವ್ಯರ್ಥಇತರರಿಗೆ ಹೋಲಿಸಿಕೊಂಡು ಬಾಳ್ವೆ ಮಾಡುವುದು ವ್ಯರ್ಥ ಆಕಾಶದಲ್ಲಿ ಹಕ್ಕಿ ನೀರಲ್ಲಿ ಮೀನು ಬದಲಾಗಬಾರದು ಸ್ಥಾನಅವರು ಇವರಂತೆ ನಾನಾಗುವೆನೆಂದು ಆಡುವುದು ವ್ಯರ್ಥ ಯಾರ ಮೆಚ್ಚುಗೆಗೋ ಇಚ್ಛೆಗೋ ಬಲಿಯಾಗದಿರಲಿ ಬಾಳುಇಂದು ಗೈಯುವ ಕಾಯಕವ ನಾಳೆಗೆ ದೂಡುವುದು ವ್ಯರ್ಥ ಕುಣಿಯೋವಾಗ ಜೊತೆಗಿದ್ದವರು ಕೊನೆತನಕ ಬರಲಾರರುಅವರಿವರನ್ನು ನಂಬಿಕೊಂಡು ಹೆಜ್ಜೆಯ ಇಡುವುದು ವ್ಯರ್ಥ ಕುಂಬಾರ ಕಂಡಿದ್ದು ಸಾಸಿವೆ ಕಾಣಬೇಕಿರುವುದು ಸಾಗರವೇಮರೀಚಿಕೆಯ ಬೆನ್ನತ್ತಿ ಸುಮ್ಮನೆ ಕಾಲ ದೂಡುವುದು ವ್ಯರ್ಥ ಎಮ್ಮಾರ್ಕೆ
-

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ”
ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ “ಒಲವಿನಾಸರೆ” ಬರಡು ಬಿರುಕು ನೆಲಕೆ ,ನೀ ತಂದೆ ಪ್ರೀತಿಯಸ್ನೇಹ ಸಿಂಚನ.ಕತ್ತಲೆಯ ಹಾದಿಯಲಿ ಕೈಹಿಡಿದು,ಬೆಳಗಿಸಿದೆ ಒಲವಿನಶುಭ್ರ ಹಗಲನು. ಸೋತು ಕುಳಿತಾಗ ಸನಿಹ ಬಂದು,ನೀನಾದೆ ಒಲವಿನಾಸರೆ.ನಿನ್ನ ನಗುವಿನ ಮುಗ್ಧ ನೋಟಕೆ,ಕರಗುವುದು ಮನದ ಬೇಸರ. ಮಾತುಗಳೇ ಇಲ್ಲದ ಮೌನದಲ್ಲೂ,ಭಾವನೆಗಳ ಅರಿತ ಜೀವ ನೀನು.ಕೋಟಿ ಜನ್ಮದಪುಣ್ಯದಂತೆ ಸಿಕ್ಕ,ನನ್ನ ಬಾಳಿನ ಬೆಳಕು ನೀನು. ಇದ್ದು ಬಿಡು ಜೊತೆಯಾಗಿ,ಕೊನೆಯವರೆಗೆಇರಲಿ ಈ ಪ್ರೀತಿಯ ಭಾವ ಬಂಧನ.ನಿನ್ನೊಲವಿನ ಆಸರೆಯ ನೆರಳಲ್ಲೇ,ಸಾಗಲಿ ನನ್ನೀ ಜೀವನ. ಉಷಾರಾಣಿ ಗುರುಪ್ರಸಾದ್
-

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು”
ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕೋಗಿಲೆ ಕರಗಿತು” ಕೋಗಿಲೆ ಕರಗಿತುಕಾಡು ಮೌನವಾಗಲಿಲ್ಲ;ಅವಳ ಕಂಠದಿಂದ ಹರಿದರಾಗಗಳುಇನ್ನೂ ಗಾಳಿಯ ಎದೆಯಲಿ ತೇಲುತ್ತಿವೆ. ಸ್ವರವೆಂಬ ಗಂಗೆಯಲ್ಲಿಭಾವದ ದೀಪ ಹಚ್ಚಿದವಳುನೀನು;ನಗುವಿಗೂ ನಾದ ಕೊಟ್ಟೆ,ಅಳುವಿಗೂ ಆಲಾಪನೆಯರೂಪ ಕೊಟ್ಟೆ. ನಿನ್ನ ಕಂಠದ ಜೇನಿನಹನಿಗಳುಕೋಟಿ ಹೃದಯಗಳದಾಹ ನೀಗಿಸಿದವು;ಮುಗ್ಧ ಮಗುವಿನಲಾಲಿಯಾಗಿ,ತಾಯಿಯ ಮಮತೆಯತೊಟ್ಟಿಲಾಗಿ,ಪ್ರೇಮಿಗಳ ಕನಸಿನ ಭಾವವಾಗಿಭಕ್ತರ ಪ್ರಾರ್ಥನೆಯದೀಪವಾಗಿಅಮರಳಾದೆ ನೀನು. ನೀ ಹಾಡಿದಾಗಚಂದ್ರನು ಬೆಳದಿಂಗಳ ಹರಡಿದಮಲ್ಲಿಗೆ ತನ್ನ ಪರಿಮಳ ಸೂಸಿತು;ಗಾಳಿ ನಿಂತು ನಿನ್ನಆಲಾಪನೆಯನ್ನು ಆಲಿಸಿತು;ನದಿಯ ಅಲೆಗಳೂನಿನ್ನ ತಾಳಕ್ಕೆ ತಲೆದೂಗಿದವು. ನಿನ್ನ ರಾಗದ ಅಲೆಗಳಲ್ಲಿವಿರಹವು ಕಣ್ಣೀರಮುತ್ತಾಯಿತು;ಸಂತೋಷವು ನಗುವಿನ ಹೂವಾಯಿತು;ವೇದನೆಯೂ ಸಂಗೀತವಾಗಿ ಅರಳಿತು;ಮೌನವೂ ಮಧುರಗೀತೆಯಾಗಿ ಮೊಳಗಿತುಕಲ್ಲಿನ ಮೇಲೆ ಹೆಸರುಬರೆದವಳಲ್ಲಹೃದಯಗಳ…
-

ಮನ್ಸೂರ್ ಮುಲ್ಕಿ ಅವರ ಕವಿತೆ “ಕಣ್ಣ ನೋಟ”
ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಕಣ್ಣ ನೋಟ” ರಾತ್ರಿ ನೀಲ ಗಗನದಲ್ಲೂ ಬಿಸೋ ಗಾಳಿ ಮಳೆಯಲ್ಲೂಚಂದಿರನು ಹೊಳೆಯುತಾನ.ನಿನ್ನ ಕಣ್ಣ ನೋಟದಾಂಗ ನನ್ನ ಹೃದಯ ಮಾತಿನಾಂಗಮನಸು ಸೇರಿ ಕನಸು ನೀಡುತಾವಾ… ಚುಕ್ಕಿ ಬೆಳಕ ಹೊಳಪಿನಲ್ಲೂ ಕಡಲ ತಟದ ತೀರದಲ್ಲೂಮನುಜ ಪ್ರೀತಿ ಕಾಣುತಾನಾ..ಒಲವ ಕಾಣೋ ಹೃದಯದಲ್ಲಿ ಮುತ್ತಿನಂತ ಮಾತಿನಲ್ಲಿನಗುವು ತಾನೇ ಮೂಡುತಾವ. ಬಳ್ಳಿ ಹೂವ ಕಾಣುವಾಗ ಮುಡಿಗೆ ತಾನೇ ಇರಿಸುವಾಗತನ್ನ ಚೆಲುವ ಬೀರುತಾವ…ಗೆಜ್ಜೆ ಶಬ್ದ ಮಾಡಿಕೊಂಡು ನೀಲ ಜಡೆಯ ಬೀಸಿಕೊಂಡುಬಿಂಕದಲ್ಲಿ ನಡೆಯುತಾವ… ಪಚ್ಚಾ ಪೈರು ಹುಲ್ಲಿನಲ್ಲೂ ಅರಳುತ್ತಿರುವ ಹೂವಿನಂತೆತನ್ನ ಸೊಗಸ…
-

ನಾಗರಾಜ ಬಿ. ನಾಯ್ಕ ಅವರ “ಕಥೆಗೆ ಒಂದು ಚಿತ್ರ……”
ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಕಥೆಗೆ ಒಂದು ಚಿತ್ರ……” ಚಿತ್ರ ಗೆರೆ ಬದುಕುಮೂರು ಒಂದು ಕಥೆಯ ದಾರಿಯಾರೋ ನಡೆದು ಹೋದಂತೆಇನ್ನಾರೋ ಹಿಂಬಾಲಿಸಿದಂತೆಕೆಲವು ಚಿತ್ರಗಳು ಮುಂದೆಓಡಿದಂತೆ ಕಾಲದ ಓಟಕ್ಕೆತೆಗೆವ ತರತರದ ಚಿತ್ರಗಳುಬಣ್ಣದ ಎಳೆಗಳ ಹೊದಿಕೆಕಾಣದ ಮುಖ ಪುಟಅಂದುಕೊಳ್ಳುವ ಸಲಿಗೆದೂರ ನಿಂತ ನಿಲುವುಹಸಿರಿನಿಂದ ಹುಟ್ಟಿದಸಸಿಯೊಂದು ಹಸಿರು ಹರಡಿಹಗೆರೆಗಳ ಚಿತ್ರಮೋಡದ ಮೇಲೊಂದು ಕುಳಿತಹನಿ ಮೋಡದ ಸನಿಹಚಿಟ್ಟೆ ಹೆಜ್ಜೆಯ ಗುರುತುಹಕ್ಕಿ ಗೂಡಿನ ಹಾಡುಮುಳುಗುವ ದಿಗಂತದಿಸಾಗುವ ಪುಟ್ಟ ದೋಣಿಹುಲ್ಲು ಹೊರೆಯ ನಡುವೆಮಗುವಿಗೆ ಕಟ್ಟಿಟ್ಟಅಮ್ಮನ ಹಸಿವೆಯ ರೊಟ್ಟಿಅಪ್ಪನ ಕಿಸೆಯಂಚಿನಲ್ಲಿಕುಳಿತ ಸೊಪ್ಪು ಕಟ್ಟಿನ ಬಾಕಿಯಾರಿಗೂ ಕಾಯದೇಹೊರಡುವ…
-

ವನಜ ಮಹಾಲಿಂಗಯ್ಯ ಅವರ ಕವಿತೆ “ಉದುರಿದ ಹೂವಿನ ಕಥೆ”
ಕಾವ್ಯ ಸಂಗಾತಿ ವನಜ ಮಹಾಲಿಂಗಯ್ಯ “ಉದುರಿದ ಹೂವಿನ ಕಥೆ” ಮರಳಿನ ದೇಶ ರಾಜಸ್ಥಾನದಲ್ಲಿಒಂದು ಚಿಕ್ಕ ಚಿಲುಮೆ ಹೂವು ಅರಳಿತ್ತುಹೆಸರು ಹೇಳುವ ಮೊದಲೇಅಮಾನುಷತೆಯ ಕತ್ತಿ ಅದನ್ನು ಕತ್ತರಿಸಿತು ಅವಳ ಕೈಯಲ್ಲಿ ಬಳೆ ಇರಬೇಕಿತ್ತುಕಾಲಲ್ಲಿ ಗೆಜ್ಜೆ ಸದ್ದು ಇರಬೇಕಿತ್ತುಬದಲಾಗಿ ಮೌನ ಮತ್ತು ಕಣ್ಣೀರು ಮಾತ್ರ ಉಳಿದವು ಯಾರ ಮಗಳೋ, ಯಾರ ಅಕ್ಕನೋಯಾರ ತಂಗಿಯೋ ಅವಳುಕನಸು ಕಾಣುವ ವಯಸ್ಸಲ್ಲಿ ಕತ್ತಲೆಗೆ ತಳ್ಳಲಾಯಿತು ಆಕಾಶವೂ ಇಂದು ಅಳುತ್ತಿದೆಗಾಳಿಯೂ ನಾಚುತ್ತಿದೆಏಕೆಂದರೆ ನಾವಿನ್ನೂ ಮನುಷ್ಯರಾಗಿಲ್ಲ ಆ ಹೂವು ಉದುರಿದ್ದು ವ್ಯರ್ಥವಾಗಬಾರದುಪ್ರತಿಯೊಂದು ಮನೆಯಲ್ಲಿ ಹೆಣ್ಣು ಸುರಕ್ಷಿತವಾಗುವವರೆಗೆನಮ್ಮ ಹೋರಾಟ…
-

ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ”
ಕಾವ್ಯ ಸಂಗಾತಿ ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ” ಸಾವಿನ ದಡದಾಚೆಯೂಬೆಳಕಾಗಿ ಉಳಿಯುವ ಹೆಜ್ಜೆಯೇ ಅಮರತ್ವ,ಕಾಲದ ಮರಳಿನ ಮೇಲೆಅಳಿಯದ ಗುರುತು ಬಿಡುವ ಬದುಕೇ ಅಮರತ್ವ. ಉಸಿರು ನಿಲ್ಲಬಹುದು,ದೇಹ ಮಣ್ಣಿನಲ್ಲಿ ಬೆರೆತು ಹೋಗಬಹುದು,ಆದರೆ ;ಸತ್ಕಾರ್ಯದ ಸುಗಂಧಯುಗಗಳವರೆಗೂ ಹರಡಬಹುದು. ಮರವು ಬಿದ್ದು ಹೋದರೂಅದರ ಬೀಜ ಕಾಡಾಗಿ ಬೆಳೆಯುವಂತೆ,ಮನುಜನ ದೇಹ ಮರೆಯಾದರೂ ;ಅವನ ಚಿಂತನೆಗಳು ಜೀವಂತವಾಗಿರುತ್ತವೆ. ಕವಿಯು ಬರೆದ ಸಾಲುಗಳಲ್ಲಿ,ವೀರನ ರಕ್ತದ ತ್ಯಾಗದಲ್ಲಿ,ತಾಯಿಯ ಮಮತೆಯ ಸ್ಪರ್ಶದಲ್ಲಿ,ಗುರುವಿನ ಜ್ಞಾನದ ಬೆಳಕಿನಲ್ಲಿಅಮರತ್ವ ಮೌನವಾಗಿ ಅರಳುತ್ತದೆ. ಅದು ದೇವರ ವರವಲ್ಲ,ಮಾನವನ ಕರ್ಮದ ಫಲವೂ ಅಲ್ಲ ,ಸ್ವಾರ್ಥದಾಚೆ…
