ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರಕವಿತೆ “ನರಕದ ಬೆಂಕಿ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನರಕದ ಬೆಂಕಿ” ಓ…ಅಹಂಕಾರಿ ಮನುಜನೀನೆಂದೂ ಚಿರಂಜೀವಿಯಲ್ಲ,!    ನಿನ್ನ ಅಧಿಕಾರದ ದರ್ಪ   ನೀನಗೆಂದೂ ಅದು ಶಾಶ್ವತವಲ್ಲ,! ಧರ್ಮದ ಮಧವೇರಿಸಿಅನ್ಯ ಧರ್ಮಗಳ ನೀ ಕೆಣಕದಿರು,!    ರಾಜಕೀಯ ಪ್ರೇರಿತನಾಗಿ   ದ್ವೇಷದ ಜಪವನು ಮಾಡದಿರು,! ಮತಾಂಧರನು ನೀನಾಗದೆಮಾನವ ಕುಲದ ಸುಪುತ್ರನಾಗು,!    ಮರಣದ ಕುಣಿಕೆ ಹಿಡಿದು   ಯಮ ನಿನ್ನ ಬೆನ್ನಟ್ಟುತ್ತಿರುವನು! ಸತ್ತು ಮಣ್ಣಾಗುವ ಮುನ್ನಮಂದಿಯ ಮನಸ್ಸಿಗೆ ಅರಸನಾಗು.!    ಕೆಡುಕಿನ ದಾರಿಗಳ ಹಿಡಿದು   “ನರಕದ ಬೆಂಕಿ”ಗೆ ಆಹುತಿ ಆಗದಿರು.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರಕವಿತೆ “ನರಕದ ಬೆಂಕಿ” Read Post »

ಕಾವ್ಯಯಾನ

ಗೌರಾ ಉಮೇಶ ಹಾಲಭಾವಿ “ಯುದ್ದ,ಯುದ್ದ, ಯುದ್ದ!

ಕಾವ್ಯ ಸಂಗಾತಿ ಗೌರಾ ಹಾಲಭಾವಿ.    ಯುದ್ಧ ಯುದ್ಧ ಯುದ್ಧ! ಯುದ್ಧ ಯುದ್ಧ ಯುದ್ಧ!ಮುಗಿಯಲಾರದ ವಿಲಕ್ಷಣ  ಮನಸ್ಸಿನ  ಉನ್ಮಾದ!ಯಾಕಿಷ್ಟು ಮಮಕಾರ  ಈ ಯುದ್ಧ ಎಂಬ ಮಾರಿಯ ಮೇಲೆ ನಿನಗೆ  ಏ ಮನುಷ್ಯ ಜೀವಿಯೇ?ಯಾರಿಗಾಗಿ?ಏನು ಸಾಧಿಸಿದೆ?ಯಾರಿಗಾಯಿತು ಪ್ರಯೋಜನ?ನಿನಗಾಗಿ , ನಿನ್ನ  ಅಹಂಕಾರಕ್ಕಾಗಿ,ನಿನ್ನ ಕೀರ್ತಿಗಾಗಿ,ನೀನು ಎಲ್ಲರನ್ನು ನಿನ್ನ  ಆಧೀನದಲ್ಲಿ ಇರಿಸುವದಕ್ಕಾಗಿ!ಎಲ್ಲದರ ಮೇಲಿನ ಅಧಿಪತ್ಯಕ್ಕಾಗಿ ,ನಿನ್ನ ಪ್ರತಿಷ್ಠೆಗಾಗಿ , ಹಠಕ್ಕಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ,ಹೊನ್ನಿಗಾಗಿ!ಏನು ಮಾಡಿದೆ ?ಏನು ಮಾಡಿದೆ  ಹಿಂತಿರುಗಿ  ನೋಡೊಮ್ಮೆ!ಯಾವುದು  ನಿನಗೆ  ಸುಖ  ಕೊಟ್ಟಿತು?ಯಾವದು ನಿನ್ನೊಡನೆ  ಬಂದಿತು  ಉಸಿರೊಮ್ಮೆ!ರಾಮಾಯಣದ ರಾಮ  ರಾವಣರ  ಯುದ್ಧ, ಮಹಾಭಾರತದ ಪಾಂಡವ ಕೌರವರ  ಮಹಾಯುದ್ಧದಿಂದ,ಶುರುವಾದ  ಈ ಯುದ್ಧವೆಂಬ ಮಹಾ ಪಿಡುಗು  ,ಇಂದು ಎಲ್ಲರ  ಮನೆಯ  ಬಾಗಿಲಿಗೆ ಬಂದು  ನಂತಿತಲ್ಲ!ಸತ್ತವರೆಷ್ಟೋ,  ನೊಂದವರೆಷ್ಟೋ,ಕಳೆದುಕೊಂಡವರೆಷ್ಟೋ,ಕಳೆದುಹೋದವರೆಷ್ಟೋ,ಅನಾಥರಾದವರೆಷ್ಟೋ?ಯಾರಿಗೆ ಗೊತ್ತು ,ಯಾರಿಟ್ಟಿದ್ದಾರೆ ಲೆಕ್ಕ ?ಗೆದ್ದವರ  ಲೆಕ್ಕ ಇದೆ,ಸೋತವರದ್ದೂ  ಇದೆ ಲೆಕ್ಕ!ನಿಜವಾಗಿ  ಹೋರಾಡಿ  ಜೀವ ಕಳೆದುಕೊಂಡು ,ಏನನ್ನೂ  ಪಡೆಯದವರ  ಲೆಕ್ಕ  ಎಲ್ಲಿದೆ?ಒಂದಲ್ಲ  ಎರಡಲ್ಲ , ಸಾಲು  ಸಾಲು,ಸಾವಿರಾರು.ಎಷ್ಟೆಲ್ಲ  ಯುದ್ಧಗಳು,ಏನೆಲ್ಲ  ಸಾಧಿಸಿವೆ?ಜಗದ ಜನರ ವಿಚಾರ ಬದಲಾಯಿತಾ?ಮತ್ತೆ  ಮತ್ತೆ ಅದೇ ಪುನರಾವರ್ತನೆ.ಯಾಕೆ  ಕೆಡುಕಿನ ಉನ್ಮಾದ  ಮನುಷ್ಯ  ಮನದಲ್ಲಿ?ಎರಡು ಮಹಾಯುದ್ಧದಿಂದ  ಪಾಠ  ಕಲಿತಿಲ್ಲ!ಈಗ ರಷ್ಯಾ ಉಕ್ರೇನ ಯುದ್ಧ!ಮುಗಿಯಲಿಲ್ಲ,ಮುಗಿಯುವ ಲಕ್ಷಣ ಇಲ್ಲ ಇನ್ನೂ!ನಿನ್ನ  ನಾಶ ನನ್ನ  ಗುರಿ!ಎನೀ  ಸಾಧನೆ?ಈ ಪ್ರಶ್ನೆಯ  ಕೊನೆ  ಎಲ್ಲಿ?ಗೊತ್ತಿಲ್ಲ.ಬಹುಶಃ  ಮನುಷ್ಯ  ಇರುವವರೆಗೆ!ಮನುಷ್ಯ ಕುಲ ಅಳಿಯುವವರೆಗೆ !ಬಗೆಹರಿಯದ  ಸಮಸ್ಯೆ!!ಯುದ್ಧ ಯುದ್ಧ ಯುದ್ಧ!ಮುಗಿಯಲಾರದ ವಿಲಕ್ಷಣ ಈ ಮನಸ್ಸಿನ  ಉನ್ಮಾದ! ಗೌರಾ ಹಾಲಭಾವಿ.   

ಗೌರಾ ಉಮೇಶ ಹಾಲಭಾವಿ “ಯುದ್ದ,ಯುದ್ದ, ಯುದ್ದ! Read Post »

ಕಾವ್ಯಯಾನ

ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ”

ಕಾವ್ಯ ಸಂಗಾತಿ ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ” ಇಲ್ಲಿ ಇವರೆಲ್ಲರೂ ಹೊಟ್ಟೆ ತುಂಬಿದವರೇ ಇದ್ದಾರೆ ಸೋನಂ ಹಸಿವಿನ ಬೆಲೆ ತುಸುವಾದರೂ ತಿಳಿಯದವರೇ ಇದ್ದಾರೆ ಸೋನಂ ಉಪವಾಸ ಸತ್ಯಾಗ್ರಹಗಳಿಗೆ ಹಿರೇಮಣಿಗಳು ಹೇಗೆ ಮಣಿದಾರುಕೇವಲ ಕುರ್ಚಿಗಾಗಿ ಹಣಾ ಹಣಿ ನಡೆಸಿದವರೇ ಇದ್ದಾರೆ ಸೋನಂ ಬಾಳಿ ಬೆಳಗಬೇಕಾದ ಮಕ್ಕಳ ಕಳೆದುಕೊಂಡವರು ಅಳುತ್ತಿದ್ದಾರೆಯಾರಿಗಿದೆ ಬಾಧಕ ಕರುಳು ಅರಿಯದವರೇ ಇದ್ದಾರೆ ಸೋನಂ ಇಲ್ಲಿ ಪ್ರಶ್ನೆ ಪತ್ರಿಕೆ ಸೋರುತ್ತದೆ ಅಲ್ಲಿ ಅತ್ಯಾಚಾರ ನಡೆಯುತ್ತದೆ ಅನೈತಿಕತೆಯನೇ ಹೊತ್ತುಕೊಂಡು ಮೆರೆದವರೇ ಇದ್ದಾರೆ ಸೋನಂ ಕ್ಷೀಣಿಸುತ್ತಿರುವ ನಿನ್ನ ಉಸಿರಿಗಾಗಿ ನಾವು ಉಸಿರು ಬಿಗಿ ಹಿಡಿದಿದ್ದೇವೆಜೀವ ಹೋಗಿ ನೆತ್ತರು ಹರಿದರೂ ನಮ್ಮನು ನೋಡದವರೇ ಇದ್ದಾರೆ ಸೋನಂ ದುಡಿದುಣ್ಣುವ ಶ್ರಮಿಕರು ಜೊತೆಗಿದ್ದು ಹಕ್ಕಿಗಾಗಿ ಹೋರಾಡುತ್ತೇವೆ ನ್ಯಾಯ ನೀತಿ ಪ್ರೀತಿ ಎಂದರೆ ಗೊತ್ತಿಲ್ಲದವರೇ ಇದ್ದಾರೆ ಸೋನಂ ಕೆಟ್ಟು ನಾರುತಿರುವ ವ್ಯವಸ್ಥೆಗೆ ರೋಸಿ ಹೋಗಿದ್ದಾಳೆ ಅರುಣಾ ಶೈಕ್ಷಣಿಕ ಬದಲಾವಣೆ ತರಲು ಒಲ್ಲದವರೇ ಇದ್ದಾರೆ ಸೋನಂ ಅರುಣಾ ನರೇಂದ್ರ

ಅರುಣಾ ನರೇಂದ್ರ “ಇಲ್ಲಿ ಹೊಟ್ಟೆ ತುಂಬಿದವರೆ ಇದ್ದಾರೆ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮನೆಯೆಂದರೆ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಮನೆಯೆಂದರೆ” ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲಮನ ಮನ ಬೆಸೆಯುವ ಮಮತೆಯ ಮಹಾಲಯ ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲಭರವಸೆ ಮೂಡಿಸುವ ಮುಕ್ತ ದೇವಾಲಯ ಮನೆಯೆಂದರೆ ಭವ್ಯ ಬಂಗಲೆಯಲ್ಲನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲಸಹೃದಯತೆ ಶಾಂತಿ ಸಮಾಧಾನದ ಸಾಗರ ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲದಯೆ ಕರುಣೆ ಮನುಜಮತದ ವಿಶ್ವವಿದ್ಯಾಲಯ ಡಾ. ಗೀತಾ ದಾನಶೆಟ್ಟಿ ಮನೆಯೆಂದರೆ ಕಲ್ಲು ಇಟ್ಟಿಗೆಯ ಗೂಡಲ್ಲಪ್ರೀತಿ ವಿಶ್ವಾಸ,ನಂಬಿಕೆಯ ನೆಮ್ಮದಿಯ ನೆಲೆ ಮನೆಯೆಂದರೆ ಬಣ್ಣ ಬಣ್ಣದ ಚಿತ್ತಾರದ ಗೋಡೆಗಳಲ್ಲಮನ ಮನ ಬೆಸೆಯುವ ಮಮತೆಯ ಮಹಾಲಯ ಮನೆಯೆಂದರೆ ಶ್ವಾನದ ಎಚ್ಚರಿಕೆ ಫಲಕ ಹಾಕುವುದಲ್ಲಭರವಸೆ ಮೂಡಿಸುವ ಮುಕ್ತ ದೇವಾಲಯ ಮನೆಯೆಂದರೆ ಭವ್ಯ ಬಂಗಲೆಯಲ್ಲನೊಂದವರಿಗೆ ಸಾಂತ್ವಾನವೀಯುವ ನ್ಯಾಯಾಲಯ ಮನೆಯೆಂದರೆ ಆಸ್ತಿ ಅಂತಸ್ತಿನ ಅರಮನೆಯಲ್ಲತತ್ವಾದರ್ಶ ಶರಣ ಸಂಸ್ಕೃತಿಯ ಸಂಗಮ ಮನೆಯೆಂದರೆ ಅಷ್ಟ ದಿಕ್ಪಾಲಕರು ಸುಳಿದಾಡುವುದಲ್ಲಸಹೃದಯತೆ ಶಾಂತಿ ಸಮಾಧಾನದ ಸಾಗರ ಮನೆಯೆಂದರೆ ವಾಸ್ತು ನೋಡಿ ವಾಸ್ತವ ಮರೆಯುವುದಲ್ಲದಯೆ ಕರುಣೆ ಮನುಜಮತದ ವಿಶ್ವವಿದ್ಯಾಲಯ ಡಾ. ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರ ಕವಿತೆ “ಮನೆಯೆಂದರೆ” Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಅವರ ಗಜಲ್‌

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಗಜಲ್‌ ನೋಟವು ಒಲವಾಗಿ ಪ್ರೇಮದ ಮಳೆಯುಹರಿದು ಬರಲಿಮೀಟಲು ಹೃದಯದ ವೀಣೆಯ ತಂತಿಯುಹರುಷ ತರಲಿ ಕಂಗಳ ನಿವೇದನೆ ಮನವ ಕಾಡದೇಹೇಳು ಒಮ್ಮೆಸಂಗಾತಿ ಬಳಿಯಿರೆ ಹೊಸತು ಕಲ್ಪನೆತೇರನು ಏರಲಿ ತನುವ ಸೋಕಿದಾಗ ಅವ್ಯಕ್ತ ಕಂಪನಮಧುರ ಅನುಭೂತಿತನನ ಹಾಡುತಿರೆ ಎದೆಯ ಭಾವವುನಲ್ಲನ ಸೇರಲಿ ಅಡಗಿ ಕುಳಿತಿಹ ಸುಪ್ತ ಮನಸ್ಸುಸಾಗರದ ಅಲೆಯುಮೂಡಿದ ಅನುರಾಗ ಅರಳಿ ಹೂವಂಥನಗುವ ಬೀರಲಿ ಒಪ್ಪಿದ ಇನಿಯನ ಸೊಬಗಿನ     ನುಡಿಗೆರೆಪ್ಪೆಯು ಬಾಗಿದೆಅಪ್ಪಿದೆ ಕರಗಳು ಬಿಗಿದು ಓರಣದಿಮಧುವ ಹೀರಲಿ ಮರೆತು ಜಗವನು  ಕರಗಿ ಹೋಗುವಉತ್ಕಟ ಬಯಕೆಬೆರೆತ ಕನಸಿಗೆ ಮೊಳಕೆ ಚಿಗುರಿಮೇಲಕೆ ಹಾರಲಿ ನಿತ್ಯವೂ ಆರಾಧನೆ ಗುಡಿಯ ಒಳಗೆವಿರಾಜಿಪ ದೇವಗೆಸತ್ಯದ ನಿವೇದನೆ ರಾಧೆಯ ಬಾಳಲಿಶುಭವ ಕೋರಲಿ  ಅನುರಾಧಾ ರಾಜೀವ್

ಅನುರಾಧಾ ರಾಜೀವ್ ಅವರ ಗಜಲ್‌ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ” ಐದು ದಶಕದ ಹಿಂದೆ,ಕಾಲ ಸರಳವಾಗಿತ್ತು,ಬದುಕು ಹಸನಾಗಿತ್ತು;ಮಣ್ಣ ಗೋಡೆಯ ತೊಲೆಯ ಹಳೆ ಮನೆಯೊಳಗೆ,ಬೆಳಕಿಂಡಿಯ ಪ್ರೀತಿ ಬೆಳಕುಬಡ ರೈತರ ಬದುಕು ಮೊಬೈಲ್ ಇರದ ದಿನಗಳಲ್ಲಿ,ಮಾತುಗಳು ಮನಸ್ಸನ್ನು ಮುಟ್ಟುತ್ತಿದ್ದವು;ಪತ್ರದ ಬರುವಿಕೆಗಾಗಿ ಕಾಯುವ ಕಣ್ಣುಗಳು,ಬಾಂಧವ್ಯದ ಆಳ ಅಳೆಯುತ್ತಿದ್ದವು. ಜಾತ್ರೆ ಪಾರಿಜಾತದ ಸದ್ದುಓಣಿ ತುಂಬಾ ಆಟದ ಗದ್ದಲ,ಸಿಡಿಯಲು ಸಿದ್ಧ ಪಟಾಕಿ ಮದ್ದುಹಿರಿಯರ ಬಾಯಲ್ಲಿ ಕಥೆಗಳ ಹಬ್ಬ;ಅಕ್ಕಿ-ಬೇಳೆ ಹಂಚಿ ಉಣ್ಣುವ ಪ್ರೀತಿ,ಕೂಡು ಕುಟುಂಬವೇ ನಮಗೆಒಂದು ದೊಡ್ಡ ನೀತಿ. ಬೀದಿ ದೀಪದ ಕೆಳಗಿನ ಓದು,ಚಿಮಣಿ ಬಡ್ಡಿಯ ಸುತ್ತ ಮಸುಕಾದ ಬೆಳಕು;ಕಷ್ಟ ದುಃಖದ ಮಧ್ಯೆಮಂದಹಾಸದ  ನಗೆ ಇತ್ತು,ಬರಿಗಾಲಲಿ ಶಾಲೆ ಪಾಠನಿತ್ಯ ಕಸರತ್ತು ಇಂದು ಕಾಲ ಬದಲಾಗಿದೆ, ವೇಗ ಹೆಚ್ಚಾಗಿದೆ,ಕೈಯಲ್ಲಿ ಜಗತ್ತಿದೆ, ಆದರೆ ಮನುಜ ಒಂಟಿಯಾಗಿರುವಐದು ದಶಕದ  ಆ ದಿನಗಳು,ನೆನಪಿನ ಪುಟಗಳಲ್ಲಿಅಚ್ಚಳಿಯದೆ ಉಳಿದಿವೆ. ಎಷ್ಟೋ ವರುಷಗಳ ಮೇಲೆಅವಳ ಭೇಟಿಕಣ್ಣಿನಲ್ಲಿ ಮಾತು ಹರಿದವುಮೌನ ಮುರಿದು ಮಾತುಸಂಜೆ ಬಾನಿನ  ಚುಕ್ಕಿ ಮೂಡಿದವುಹುಣ್ಣಿಮೆಯ ಚಂದ್ರ ನಕ್ಕನುಮತ್ತೆ ಗೂಡು ಸೇರಿದೆವು ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಕಾಲ ಬದಲಾಗಿದೆ” Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ನಿನ್ನ ಪ್ರೇಮದ ಸುತ್ತ ಅನುದಿನವೂ ಸುತ್ತುತಿದೆ ಮನಸುನಿನ್ನ ಅನುರಾಗಭರಿತ ಪುಟಗಳನು ಮುತ್ತುತಿದೆ ಮನಸು ನಿನ್ನ ಸಾಂಗತ್ಯವು ನನ್ನ ಕನಸುಗಳಿಗೆ ರೆಕ್ಕೆಯಾಗಿದೆ ಬೇಬಿನನ್ನ ಜೀವತಾಣದ ನೆಲದಲಿ ನಿನ್ನಾಸೆ ಬಿತ್ತುತಿದೆ ಮನಸು ನನ್ನ ಉಸಿರಿನ ಪ್ರತಿತಾಳವೂ ನಿನ್ನ ಹೆಸರು ಗುನುಗುತಿದೆಕಣ್ಣೊಳಗಿನ ಕನಸಲಿ ನಿನ್ನ ರೂಪವೇ ಕೆತ್ತುತಿದೆ ಮನಸು ನನ್ನ ಬದುಕಿಗೆ ವಸಂತ ಮೂಡಿದೆ ನಿನ್ನ ಆಗಮನದಿಂದನಿನ್ನ ನಗುವಿನ ಪ್ರಭೆಯಲಿ ಬಾಳನು ಎತ್ತುತಿದೆ ಮನಸು   ಪರಿಮಳವಾಗಿದೆ ನಿನ್ನ ಸನಿಹವೇ ನನ್ನ ಜೀವಕೆ ಅರಗಿಣಿಮಲ್ಲಿಗೆಯ ಸುಮವನು ಉಸಿರಾಗಿ ಹೊತ್ತುತಿದೆ ಮನಸು ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ

ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!”

ಕಾವ್ಯ ಸಂಗಾತಿ ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!” ತೋರಿಕೆಯ ಜೀವನ ನೀ ಬಿಟ್ಟುಬಿಡು ಮನುಜ,ಮೇಲೊಂದು ಒಳಗೊಂದ ಮಾಡುವುದ ಬಿಡು!! ಅರಿತುಕೊ ನಿನ್ನ., ಕಲಿತುಕೊ ಒಳಿತನ್ನ !! ಬಯಸ ಬೇಡ ನೀ ನನ್ನಿಂದ ಎಂದಿಗೂ,ದುರಾಸೆಯ ನೀ ಬಿಟ್ಟುಬಿಡು!!ಕೊಡುವೆ ನಾ ನಿನ್ನ ರ‍್ಮದ ಫಲ ವ ಕೇಳಿ ಪಡೆಯುವ ಆಸೆ ನೀ ಬಿಟ್ಟುಬಿಡು ಮನುಜ!!ನಿನ್ನಿಂದ ನನಗೆ ಯಾವುದೇ ಆಸೆಯೂ ಇಲ್ಲ,ಕೊಡುತ್ತಿರುವೆ ನಾ ನಿನಗೆ ಕುರಿಯ-ತಲಿ, ಪ್ರಾಣಿಯ-ಬಲಿ ಎಂಬ,ನಾಲಕ್-ಕಾಸಿನ ತೋರಿಕೆಯ ಜೀವನ ನೀ ಬಿಟ್ಟುಬಿಡು ಮನಜ!! ಹಿಂಸೆಯ ಬದಿಗಿಟ್ಟು ದ್ವೇಷವ ನೀ ತೋರದುಬಿಡು,ಪ್ರೇಮದ ದಾರಿಯ ನೀ ಸ್ವೀಕರಿಸು ಮನುಜ !!ಅಸಹಾಯನಿಗೆ ಸಹಾಯ, ಪೀಡಿತನಿಗೆ ಧಾನ,ಸಹಜ ಕರುಣೆಯಲಿ ನೀ ನನ್ನ ಕಾಣುವೆ ಮನುಜ !! ನೀ ಸಹಕರಿಸಿದ, ದೇಹವು ವೊಂದಿಸುತ್ತಿರುವ ಪ್ರತೀ ವೊಂದನೆಯೂ ನನಗೆ ಸ್ವೀಕಾರವಿದೆ. ನಿನ್ನ ನಮನ ಯಾಚಿಸುವ ಆಸೆ ನನಗಿಲ್ಲ,ನೀ ಧ್ಯಾನವೇ ಆಚರಿಸು. ನನಗೆ ನಿನ್ನ ವೊಂದನೆಯೂ ರ‍್ಮವೇ ಸೂಚಿಸಲು ಬಿಡು,ತೋರಿಕೆಯ ಜೀವನ ನೀ ಬಿಟ್ಟುಬಿಡು ಮನುಜ!! ಒಪ್ಪಿಕೋ ಪ್ರೇಮವ ದುಃಖದ ಜೀವನ ನೀಬಿಟ್ಟುಬಿಡು ಮನುಜ ನೀ ಬಿಟ್ಟುಬಿಡು ಮನುಜ!! -ವಿನೋದ ತಾವ್ಡೆಕರ್

ವಿನೋದ ತಾವ್ಡೆಕರ್ “ಗುಡಿ ಯೊಳಗೆ ಇವ-ನಮ್ಮವ ಹೊರಬಂದರೆ ಯಾರಿವ !!” Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ”

ಕಾವ್ಯ ಸಂಗಾತಿ ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ” ಸುರಿದಿದೆ ಸೋನೆಯುಮುತ್ತುಗಳಂದದಿಮುಂಗಾರಿನ ಮಳೆಯುಇಳಿಯುತ ಬಳುಕಿಹಾಲ್ನೊರೆಯಂದದಿಇಳೆಯೊಡಲಿಗೆ  ಧಾರೆಯು… ಬೀಸಿದೆ ಮೆಲ್ಲನೆಸುಳಿಗಾಳಿಯು ಸುತ್ತಲೂತೂಗಿವೆ  ಬೆಳೆಗಳುತಲೆ  ಎತ್ತುತಲಿಹಸಿರಿನ ಶಾಲನುಹೊದೆದಿದೆ  ಕಾನುಬೆಚ್ಚಗೆ ನಿದ್ರೆಯ ಮಾಡುವೊಲು… ಸುಂದರ  ಸಂಜೆಯಜಿಟಿ  ಜಿಟಿ  ಮಳೆಯಲಿಸಾಗುವಾ ಜೊತೆಯಲಿದೂರದ ನಮ್ಮೊಲವಿನ ಮನೆಗೆ… ಹಮೀದಾಬೇಗಂ ದೇಸಾಯಿ

ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ” Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್‌ ಅವರ ಕವಿತೆ “ಮದ್ದಾಗಬಹುದಿತ್ತು”

ಕಾವ್ಯ ಸಂಗಾತಿ ಡಾ.ಭಾರತಿ ಅಶೋಕ್‌ “ಮದ್ದಾಗಬಹುದಿತ್ತು” ಈ ಹೊತ್ತಿಗುನಿನಗು ಹೇಳದಮಾತೊಂದು ಎದೆಯಲ್ಲೇಉಳಿದು ಮುಳ್ಳಾಗಿ ಚುಚ್ಚು ತ್ತಿದೆ ಆಮಾತು ಏನೆಂದು ಕೇಳುವಸಹನೆ ಹೋಗಲಿ ಅಲ್ಲೇ ಉಳಿದು ಚುಚ್ಚಿದಗಾಯಕ್ಕಾದರೂ ಮದ್ದಾಗಬಹುದಿತ್ತು ಅದೆಲ್ಲಾ ಬಿಡುನಾನು ಹೇಳದೇ ಉಳಿದ ಮಾತೊಂದು ನನ್ನಲ್ಲೇ ಉಳಿದುಗಾಯವಾಗಿ ಈಗ ಬದುಕನ್ನೇಬಲಿ ಕೇಳುತ್ತಿದೆಎನ್ನುವ ಸತ್ಯದ ಅರಿವು ನಿನಗಿಲ್ಲ ನನಗೋಸತ್ಯ ಅರುಹಿ ಗಾಯ ವಾಸಿ ಮಾಡಿಕೊಂಡು ಬದುಕನ್ನುಬದುಕಿಸಿಬಿಡುವ ತಹತಹಿಕೆ ಈಗಬದುಕಿನ ಬದಲಾಗಿನೀನೇ ಕೇಳಲಿ, ತಿಳಿಯಲಿ ಅರಿಯಲಿ ಎನ್ನುವ ಅಹಂನ್ನುಬಲಿ ಕೊಡವೆ. ಆ ಮಾತನ್ನು ನಿನ್ನಲ್ಲಿ ಹೇಳಿ ಬದುಕಿನೊಟ್ಟಿಗೆನಾನೂ ಗೆದ್ದುಬಿಡುವೆ ಡಾ.ಭಾರತಿ ಅಶೋಕ್

ಡಾ.ಭಾರತಿ ಅಶೋಕ್‌ ಅವರ ಕವಿತೆ “ಮದ್ದಾಗಬಹುದಿತ್ತು” Read Post »

You cannot copy content of this page

Scroll to Top