ವಾಣಿ ಯಡಹಳ್ಳಿಮಠ ಅವರ ಗಜಲ್
ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ದಫನ್ ಮಾಡುವ ಮುನ್ನ,ಕಫ಼ನ್ ಸರಿಸಿ ನನ್ನನೊಮ್ಮೆ ನೋಡೆಂದು ಅವನಿಗೆ ಹೇಳಿಬಿಡಿನಿಂತ ಉಸಿರೂ, ಅವನ ಹೆಸರ ಉಸುರುವುದನೊಮ್ಮೆ ಕೇಳೆಂದು ಅವನಿಗೆ ಹೇಳಿಬಿಡಿ ನನ್ನವರೆನಿಸಿಕೊಂಡವರ ಹುಸಿ ಮಾತುಗಳು ಮುಗಿಲು ಮುಟ್ಟುತಿರುವವುಎರಡೇ ಪದಗಳಲ್ಲಾದರೂ ಪ್ರೀತಿಯನೊಮ್ಮೆ ಹೇಳೆಂದು ಅವನಿಗೆ ಹೇಳಿಬಿಡಿ ಹಿಂದಿರುಗಿ ಬರಲು, ಹಾದಿಯಿಲ್ಲದ ಊರಿನೆಡೆಗೆ ಸಾಗಿದೆ ಪಯಣಜನಾಜಾ ಹೊತ್ತವರ ಹತ್ತಿರ ಸುಳಿದೊಮ್ಮೆ ಹೋಗೆಂದು ಅವನಿಗೆ ಹೇಳಿಬಿಡಿ ನನ್ನೊಲವನು ದಿಟ್ಟಿಸಿದರೇ, ದೃಷ್ಠಿಯಾದಿತೆಂದು, ಎಂದೂ ನಾ ಕಣ್ಣೆತ್ತಲಿಲ್ಲನಾ ಹಗಲಲಿ ಬದುಕುತಿದ್ದ ಕನಸನೊಮ್ಮೆ ಬಾಳೆಂದು ಅವನಿಗೆ ಹೇಳಿಬಿಡಿ ನಿನ್ನ ನಜರಲಿ , ತನ್ನನು ಕಾಣಲು ತವಕದಿ ಕಾದಳು ಈ ವಾಣಿ ಅನುದಿನ ಒಂದೇ ಕ್ಷಣ ಎದುರು ನಿಂತು, ಹಿಡಿ ಮಣ್ಣನೊಮ್ಮೆ ಹಾಕೆಂದು ಅವನಿಗೆ ಹೇಳಿಬಿಡಿ ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »









