ಕಾವ್ಯಸಂಗಾತಿ ತಾತಪ್ಪ ಕೆ ಉತ್ತಂಗಿ “ಪ್ರೇಮದಮೊಹರು” ಸದಾ ಸಣ್ಣೂರಗಲ್ಲಿಯಾಚಿನಹಸಿರೂರ ಪಥದಲಿಅದೇ ಹೊಳಪಿನ ಅವಳು,ಕಣ್ಣೋಟಕ್ಕೆಸಿಕ್ಕ ಅಪರೂಪದಕೆಂಪು ಸೌಂದರ್ಯದ ಸುಂದರಿ,ಜಗಕ್ಕೆ ನಾಚಿದ ನಿತ್ಯಾಂಬರಿಜಗವನ್ನೇ ನಾಚಿಸಿದ ಕೆಂಪುರಂಗಿನಪ್ರೇಮಸುಂದರಿ. ಅಣಕಿಸುವ,ತವಕಿಸುವ,ಕರುಣಿಸುವ, ಹಿಗ್ಗಿಸುವಕುಗ್ಗಿಸುವ,ಪ್ರೇಮಿಸುವ ಕುಕ್ಕುಕಣ್ಣಿನ ವಾರೇನೋಟದ ಒಲವಿಗೆಸಿಕ್ಕ ಅವನುಸದಾ ಪ್ರೇಮಬಂಧಿ..ಸವಿಮಾತಿನ ಸಖನೇಸಂಬಂಧ ಬೆಸೆಯುವ ಭಾವಸಂಬಂಧಿ..ಅವಳೊರಗಿನ ಅವಳಿಗೆ ಪ್ರೀತಿಯ ಕೊಟ್ಟರೆಪ್ರೇಮದ ಮಳೆ ಸುರಿಸುವಋತುಬಂಧಿ..ಅವಳು.. ಮಳೆ ಮೋಡಗಳುಕಂಗೆಟ್ಟು ದಿಕ್ಕೆಟ್ಟು ಓಡಾಡುವಾಗ,ಗುಡುಗು, ಸಿಡಿಲ್ ಆರ್ಭಟಿಸಿ, ಬೆಳಕಿನ ಮಿಂಚಿನಸಮಯದಲ್ಲಿ, ಕೋಲ್ಮಿಂಚಿನಕೆಂಡಕುಂಡದ ಗುಲಾಬಿಯ ಗುಂಗಿನ ವಿರಾಗಿಣಿಯಾಗಿಸ್ತಬ್ಧ ವಿಹಾರದ ನಡುನಡುವೆ, ದಿವ್ಯವೇದನೆಯ,ನವ್ಯ ನಿವೇದನೆಯೊಂದಿಗೆಕೈ ಬೀಸಿ, ಕೈ ಚಾಚಿಮಧುರ ವರ್ಣವ ರಾಚಿಕರೆಯೋಲೆ ಕಳಿಸುವಆದರದ ಅಂಬರಿಯಿವಳು.ಕೆಂಪುಮೊಗದ ಗಿಳಿನಾಸಿಕದಗರಿಗರಿ ನಗೆಯ,ಫಳಫಳ ಕಣ್ಬೆಳಕಿನಬೀಸುವ ಗಾಳಿಗೆಜೋ ಜೋ ಲಾಲಿಯಾಡುವ ಶುಭ್ರಜ್ಯೋತ್ಸ್ನೆಯಿವಳು.ಅಮರ ಮಧುರದಪ್ರೇಮಗೀತೆಯಾಡುವಸ್ವಪ್ನ ಸುಂದರಿ ಇವಳು.ಸಂಭ್ರಮದ ಎಲ್ಲೆ ಮೀರಿದಾಗಸಂತಸದ ಸರಸತೆಯ ಸೋಬಾನೆಯಾಡುವವೈಶಾಖದ ಪ್ರೇಮದಮೊಹರಿನಇವಳೇ ಸುಗ್ಗಿಯ ಸಗ್ಗದಪ್ರೇಮಾಂಬರಿಯಾದಕೆಂಪು ಸೊಂಪಿನಮುಂಗಾರಿಗೆ ಮುತ್ತಿನಮುದ್ರೆಯನ್ನೊತ್ತಿದ *ಗುಲ್ ಮೊಹರ್* ಇವಳು. ತಾತಪ್ಪ. ಕೆ.ಉತ್ತಂಗಿ