ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಅಶ್ಫಾಕ ಪೀರಜಾದೆ ಅವರ ಕವಿತೆ “ಕವಿ ಹೃದಯ ಹಾಡುತ್ತಿಲ್ಲ !”

ಕಾವ್ಯ ಸಂಗಾತಿ ಅಶ್ಫಾಕ ಪೀರಜಾದೆ “ಕವಿ ಹೃದಯ ಹಾಡುತ್ತಿಲ್ಲ !” ಈ ನಿಶ್ಶಬ್ಧದ ನಿಗೂಢ ಗರ್ಭದಿಂದಕೇಳಿ ಬರಬಹುದೆ ಸಣ್ಣದಾದ ಸದ್ದುಬಿಸಿ ಉಸಿರಿನ ಮಿಡಿತ ತಾಕಬಹುದೆಕಾಣಬಹುದೆ ಅಗೋಚರ ಸತ್ಯಎಲ್ಲ ಅಸ್ಪಷ್ಟ ಮಂಜು ಮುಸುಕು ನಾಲಿಗೆ ಸೀಳಿ ತಗೆದರೂ ಒಂದು ಮಾತು ಇಲ್ಲಮಿದುಳೆಲ್ಲ ತಡಕಾಡಿ ಬರೆದರೂ ಒಂದಕ್ಷರಆತ್ಮದ್ದು ಮೌನ ರೋಧನಮೋಡ ಕಟ್ಟದೆ ಮುಗಿಲಿನಿಂದಮರಭೂಮಿಗೆ ಮಳೆಯ  ಮುನ್ಸೂಚನೆಯೇ !ಒಳಗೊಳಗೆ ಶಾಂತ ಸುನಾಮಿ ಪೆನ್ನು ಪಾರ್ಶ್ವವಾಯು ಪೀಡಿತಮಿದುಳು ಖಾಲಿ ಕಾಗದ ಅಸ್ಖಲಿತ ಭಾವನೆಗಳ ಬಟಾ ಬಯಲುಮೋದಲಿನಂತೆ ಕೌದಿಯೊಳಗೆ ಕನಸು  ಮೊಟ್ಟೆಯಿಡುತ್ತಿಲ್ಲ ಮೊಳಕೆಯೊಡಿತ್ತಿಲ್ಲ ಕಾಳು ಮಡಿಕೆಯೊಳಗೆಪುಸ್ತಕದಲಿ ನವಿಲುಗರಿ ಈಗಮರಿ ಹಾಕುವುದು ಮರೆತಿದೆ ಬಸಿರಾಗುವುದಿಲ್ಲ ಭಾವನೆಗಳುಸ್ಪರ್ಶಕೆ ಮನಸ್ಸು ಸ್ಪಂದಿಸುತ್ತಿಲ್ಲಸಂವೇದನಾ ರಹಿತ ಹೃದಯಒಲವ ಕ್ಷಾಮ ಕಾಡುತಿದೆಖಾಲಿತ! ತಬ್ಬಲಿತನ!! ಯಾಕೋ ಗೊತ್ತಿಲ್ಲ ಇತ್ತೀಚೆಗೆಕತ್ತಲೆ ಕರಗುತ್ತಿಲ್ಲ ಸೂರ್ಯನ ಬೆಳಕಿಗೂಕವಿ ಹೃದಯ ಹಾಡುವುದು ನಿಲ್ಲಿಸಿದೆಸಂಭವಿಸು ಪುನರುತ್ಥಾನ  ಕಾಯುತಿರುವೆ ಮುಗಿಲಿನತ್ತ ಮುಖ ಮಾಡಿ ಅನ್ನದಾತನಂತೆತಮ್ಮವರೆಲ್ಲರನ್ನು ಕಳೆದುಕೊಂಡುಒಂಟಿಯಾಗಿ ಯದ್ಧ ವಿರಾಮಕೆ ಪ್ರಜೆಯಂತೆ.. ಅಶ್ಫಾಕ ಪೀರಜಾದೆ.

ಅಶ್ಫಾಕ ಪೀರಜಾದೆ ಅವರ ಕವಿತೆ “ಕವಿ ಹೃದಯ ಹಾಡುತ್ತಿಲ್ಲ !” Read Post »

ನಿಮ್ಮೊಂದಿಗೆ

ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ

ಪುಸ್ತಕ ಸಂಗಾತಿ. ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಶ್ರೀ ಹರಿಹರ ಶಿವಕುಮಾರ್‌ “ಅನನ್ಯ ಅಲ್ಲಮ” ಅನನ್ಯ ಅಲ್ಲಮ ಉತ್ತಮ ಆಕರ ಗ್ರಂಥ ಲೇಖಕರು  ಶ್ರೀ ಹರಿಹರ ಶಿವಕುಮಾರಪ್ರಕಾಶಕರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರುಬೆಲೆ 180 ರೂಪಾಯಿವರ್ಷ 2026 ನಾಡಿನ ಹಿರಿಯ ಅನುಭಾವಿ ಚಿಂತಕರು ಸಾಹಿತಿಗಳೂ ಆದ ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಾಶಕರ ಮೂಲಕ ಅನನ್ಯ ಅಲ್ಲಮ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳ ಚರ್ಚೆಗೆ ಅವಕಾಶ ಮಾಡಿಕೊಡುವ ಸಂಗ್ರಹಕ್ಕೆ ಯೋಗ್ಯವಾದ ಒಂದು ಸುಂದರ ಆಕರ ಗ್ರಂಥ. ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನವರು.ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವ್ಯಕ್ತಿ.ಅನನ್ಯ ಅಲ್ಲಮ ಎಂಬ ಕೃತಿಯಲ್ಲಿ ಇವರು ಅಲ್ಲಮ ಪ್ರಭುಗಳ 75 ಸರಳ ಸ್ಥಲ ಕಟ್ಟಿನ ವಚನಗಳನ್ನು ಆಯ್ಕೆ ಮಾಡಿದ್ದಾರೆ. ಅಲ್ಲಮರ ವಚನ ವಿಶ್ಲೇಷಣೆ ಚಿಂತನೆ ನಿಜಕ್ಕೂ ಕಬ್ಬಿಣದ ಕಡಲೆ ಇದ್ದ ಹಾಗೆ. ಲೇಖಕರಿಗೂ ಅಲ್ಲಮರ ವಚನ ವಿಶ್ಲೇಷಣೆ ಒಂದು ಕಠಿಣ ಪರಿಶ್ರಮವೆಂದು ತಿಳಿದುಕೊಂಡು ತಮ್ಮದೇ ಆದ ಅನುಭವವನ್ನು ಸಂಕಲನದಲ್ಲಿಪದ ಅರ್ಥ ,ವಚನಾರ್ಥ, ಪದಪ್ರಯೋಗಾರ್ಥ ಎಂಬ ಮೂರು ಭಾಗಗಳಲ್ಲಿ ಮಾಡಿದ್ದು ವಾಚಾರ್ಥ ಗೂಢಾರ್ಥ ಲಕ್ಷಾರ್ಥಗಳ ಕಡೆಗೆ ಗಮನ ಕೊಟ್ಟಿದ್ದಾರೆ. ಅಲ್ಲಮರ ಬೆಡಗಿನ ವಚನಗಳು ಮತ್ತು ಅವುಗಳಲ್ಲಿರುವ ಪದಗಳಿಗೆ ಸಮಾನವಾದ ಅರ್ಥ ಹುಡುಕುವ ಪ್ರಯತ್ನ ಇವರದ್ದಾಗಿದೆ. ನಂತರ ಸಾಂದರ್ಭಿಕವಾಗಿ ಆ ಬೆಡಗಿನ ಪದಗಳ ಅರ್ಥವನ್ನು ಇಂದಿನ ಜಗತ್ತಿಗೆ ಅನುಗುಣವಾಗಿ ಸಮಯೋಚಿತವಾಗಿ ಅರ್ಥೈಸುವ ಇವರ ಶೈಲಿ ತುಂಬಾ ಚೆನ್ನಾಗಿದೆ. ಇವರ ನಿರಂತರ ಪರಿಶ್ರಮ ಹಾಗೂ ಶೃದ್ಧೆ ಅಲ್ಲಮರ ಬೆಡಗಿನ ವಚನಗಳನ್ನು ಸರಳವಾಗಿ ಅರ್ಥೈಸಲು ಒಂದು ಸುಂದರ ಆಕರ ಪುಸ್ತಕ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ಅತ್ಯಂತ ಅಪರೂಪದ ಪ್ರಬುದ್ಧ ಕಾರ್ಯವೆಂದೆನಿಸುತ್ತದೆ.ವಚನಗಳ ಅರ್ಥಗಳ ವಿವರಣೆ ಇನ್ನಷ್ಟು ವಿಸ್ತರಣೆಗೊಂಡಿದ್ದರೆ ಇನ್ನೂ ಹೆಚ್ಚಿನ ಸೊಗಡು ಎದ್ದು ಕಾಣುತಿತ್ತು. ಇದು ಶ್ರೀ ಶಿವಕುಮಾರ ಅವರ ಪ್ರಥಮ ಕೃತಿಯಾಗಿದೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಲೋಕಾರ್ಪಣೆಯಾಗಲಿ ಎಂದು ಹಾರೈಸುತ್ತೇನೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಸಮರಸವು ಮೂಡಲಿ” ಈ ನೆಲದ ಭಾಷೆಯಿದುಬುದ್ಧ ಬಸವರ ವಚನಗಳುಸತ್ಯ ಸಮತೆ ಶಾಂತಿ ಪ್ರೀತಿಮನುಜ ಪಥದ ಮಂತ್ರವು ನಾನು ಹುಟ್ಟಿ ನಾವು ಬೆಳೆದುನಾಡ ಗೋಡೆ ಕಟ್ಟ ಬೇಕುವರ್ಗ ವರ್ಣ ಬೇಧ ಅಳೆದುದೇಶ ಒಂದೇ ಎನ್ನ ಬೇಕು ನೇಯ್ಗೆ ಕೃಷಿ ಗ್ರಾಮ ರಾಜ್ಯಬಾಪು ಕನಸಿನ ಭಾರತಭಗತ ಸಿಂಗರ ತ್ಯಾಗ ನೆಲದಬಾಬಾಸಾಹೇಬರ ಭಾರತ ದ್ವೇಷ ಮತ್ಸರ ಕರಗಿ ಹೋಗಲಿಮಮತೆ ಪ್ರೀತಿ ಅರಳಲಿಕೊಲೆ ಹಿಂಸೆ ಮಾಯವಾಗಿಸಮರಸವು ಮೂಡಲಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ” Read Post »

ನಿಮ್ಮೊಂದಿಗೆ

ಗೊರೂರು ಅನಂತರಾಜು ಅವರ ಕವಿತೆ ” ಕವಿ ಕಾಡಿಗೆ ಹೋದ”

ಕಾವ್ಯ ಸಂಗಾತಿ ಗೊರೂರು ಅನಂತರಾಜು ” ಕವಿ ಕಾಡಿಗೆ ಹೋದ” ಬಾರಯ್ಯ ಕವಿ ಕಾಡಿಗೆ ಈಗ ಬಂದೆಗ್ಯಾಸ್ ಮುಗಿದಿದೆಯೇಇಲ್ಲ ವನದೇವ ಸೌದೆ ಒಲೆಗೆ ಬೆಂಕಿ ಹಾಕಿ ಬಹಳ ದಿನಗಳಾದವುವಿಶ್ವ ಗುರುಗಳು ಯುದ್ಧಕ್ಕೆ ಅಲ್ಪ ವಿರಾಮ ಹಾಕಿದ್ದಾರೆರಾಮನಾಮ ಜಪಿಸುತ್ತಾ ವನವಾಸಕ್ಕೆ ಬಂದೆಮರ ಕಡಿಯಲು ಬಂದೆಯಾ ಮೂರ್ಖಹನುಮಂತನು ಲಂಕೆಗೆ ಬೆಂಕಿ ಇಟ್ಟನುಇವರು ಅಲ್ಲಿ ಬಾಂಬ್ ಬಿಟ್ಟರುಮನೆಯಲ್ಲಿ ಗ್ಯಾಸ್ ಟ್ರಬಲ್  ಮಕ್ಕಳು ಉಪವಾಸಹೆಂಡತಿ ಓಡಿಸಿದ್ದಾಳೆ ಅದಕ್ಕೆ ನಿನಗೆ ವನವಾಸಶ್ರೀಕೃಷ್ಣ ರಾಯಬಾರಿಗೆ ಪ್ರಾರ್ಥಿಸಿಕೊಅವರಿಗೆ ಭಗವದ್ಗೀತೆ ಬೋಧಿಸಿ ಯುದ್ಧ ನಿಲ್ಲಿಸಲಿ. ಗೊರೂರು ಅನಂತರಾಜು

ಗೊರೂರು ಅನಂತರಾಜು ಅವರ ಕವಿತೆ ” ಕವಿ ಕಾಡಿಗೆ ಹೋದ” Read Post »

ನಿಮ್ಮೊಂದಿಗೆ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-16 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆ ಕಟ್ಟೆ ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು              ಜ್ವಾಲೆಯೊಡಲಿನ ಕ್ರೋಧಜ್ವಾಲೆಯದು ಎನಗೆ ಶಾಪವನುಣಿಸಿತು ಜ್ವಾಲೆಯನ್ನು ನಿರಾಸೆಗೊಳಿಸಿತು ಕಲಹಕ್ಕೊಪ್ಪದ ಉನ್ಮುಖನ ಮಾತು. ಉನ್ಮುಖ ಯುದ್ಧೋನ್ಮುಖನಾಗಲಿಲ್ಲ. ಹರಿಭಕ್ತಮುಖದವನಾಗಿ ಶಾಂತಭಾವದಿ ಕುಳಿತ. ಶ್ರೀಕೃಷ್ಣನ ಸಹಾಯವನ್ನು ಪಡೆದು ಬಂದಿರುವ ನನ್ನ ಜೊತೆ ಯುದ್ಧವನ್ನು ಮಾಡುವ ಮನಸ್ಸಿರಲಿಲ್ಲ ಅವನಿಗೆ. ಜ್ವಾಲೆಯ ರೀತಿಯದು ಹಿಂದಣ ತ್ರೇತಾಯುಗದ ಶೂರ್ಪನಖಿಯ ನೆನಪನ್ನು ಮೂಡಿಸಿತು ಅವನಿಗೆ. ತನಗೊಲಿಯದೆ ಮೂಗು ಕೊಯ್ದವರ ಮೇಲಿನ ಸೇಡಿಗೆ ರಾಮ ರಾವಣ ಸಂಘರ್ಷವನ್ನು ತಂದಿತ್ತ ಶೂರ್ಪನಖಿಯಂತೆಯೇ ತನ್ನಕ್ಕನ ಕಲಹಪ್ರಿಯವಾದ ನಡೆಯಿದೆ ಎನಿಸಿತು ಅವನಿಗೆ. ಆ ಮಾತನ್ನೇ ಕಟುವಾಗಿ ಆಡಿ ಅವಳನ್ನು ಬೈದು ಅಲ್ಲಿಂದ ಕಳುಹಿಸಿಕೊಟ್ಟ. ಅಕ್ಕನ ರೋಷದ ನೆಪದಲ್ಲಿ ನನ್ನನ್ನು ಎದುರುಹಾಕಿಕೊಳ್ಳುವ ಮನಮಾಡಿ ಅಪಾಯಕ್ಕೆ ಮನೆಮಾಡಿಕೊಡುವ ಆಸಕ್ತಿಯಿರಲಿಲ್ಲ ಉನ್ಮುಖನಿಗೆ.       ತಮ್ಮನಿಂದಲೂ ತಿರಸ್ಕೃತಳಾದ ಜ್ವಾಲೆ ಪಯಣವನ್ನು ಬೆಳೆಸುತ್ತಾ ಹೋದವಳು ಗಂಗಾತೀರವನ್ನು ಸೇರಿದಳು. ಪಾಪ ಪರಿಹಾರ ಪುಣ್ಯಜಲದಂತೆ ಹರಿಹರಿಯುತ್ತಿದ್ದ ಗಂಗೆಯನ್ನು ಕಂಡಳು. ಅಮರನದಿಯದು ಜ್ವಾಲೆಯಲ್ಲಿ ಅಮರಭಾವವನ್ನು ಬಿತ್ತಬೇಕಿತ್ತು. ಆದರೆ ಮೊಳಕೆಯೊಡೆದದ್ದು ಅಸುರಭಾವ. ಕೆಲವರ ವರ್ತನೆ ಹಾಗೆಯೇ. ದಿವ್ಯವಾದದ್ದನ್ನು ದರ್ಶಿಸಿದಾಗಲೂ ದುಷ್ಟಭಾವವೇ ಅವರಲ್ಲಿ ಚಿಗುರೊಡೆಯುತ್ತದೆ. ಆ ಬಗೆಯಲ್ಲಿ ಅವರ ಮನೋಭೂಮಿಕೆ ಸಿದ್ಧಗೊಂಡಿರುತ್ತದೆ. ಗಂಗೆಯನ್ನು ಬಳಸಿಕೊಂಡು ತನ್ನಂತರಂಗದ ಮಾತ್ಸರ್ಯಕ್ಕೊಂದು ಗಮ್ಯವನ್ನು ಕಾಣಿಸುವ ಕುಯೋಚನೆ ಮೂಡಿತು ಜ್ವಾಲೆಯಲ್ಲಿ.       ದೋಣಿ ನಡೆಸುವವರೊಂದಷ್ಟು ಜನ ಗಂಗಾತಟದಲ್ಲಿಯೇ ಕುಳಿತಿದ್ದರು. ಅವರನ್ನು ನೋಡುತ್ತಾ ಜ್ವಾಲೆ “ಗಂಗಾನದಿಯ ಒಂದು ಬಿಂದೂ ನನ್ನ ದೇಹವನ್ನು ಸೋಂಕದಂತೆ ನನ್ನನ್ನು ಈ ದಡದಿಂದ ಆ ದಡದೆಡೆಗೆ ಒಯ್ಯುವವರು ಯಾರಾದರೂ ಇರುವಿರಾ?” ಎಂದಳು.      ಅಂಬಿಗರಿಗೆ ಅಚ್ಚರಿಯಾಯಿತು. ಹನಿ ಹನಿ ಗಂಗಾಜಲವದು ಪರಮ ಪಾವನ ಪುಣ್ಯ ಪವಿತ್ರ ಎಂದು ನಂಬುವ ಅನೇಕಾನೇಕ ಜನರನ್ನವರು ಕಂಡಿದ್ದರು. ಗಂಗೆಯ ನೀರದು ಮೈಯ್ಯನ್ನು ಸ್ಪರ್ಶಿಸಿದರೆ ಘನಮಲಿನವೆಂಬ ಬಗೆಯಲ್ಲಿ ಮಾತನ್ನು ಆಡಿದವರಿರಲಿಲ್ಲ; ವರ್ತಿಸಿದವರಿರಲಿಲ್ಲ. ಜ್ವಾಲೆಯ ರೀತಿಯದು ಹೊಸದೆನಿಸಿತು ಅವರಿಗೆ. “ಬಂದದ್ದಾವ ಉದ್ದೇಶದಿಂದ? ಗಂಗಾಜಲವನ್ನು ಮುಟ್ಟಬಾರದು ಎಂದೆನಲು ಕಾರಣವೇನು?” ಎಂದು ವಿಸ್ಮಯ ಭಾವದಲ್ಲಿ ಕೇಳಿದರು.      ತನ್ನ ಪಾಡಿಗೆ ಹರಿಯುತಿರುವ ಗಂಗೆಗೆ ಕೌತುಕ ಹುಟ್ಟುವಂತೆ ಆ ಜ್ವಾಲೆ “ಗಂಗೆಗೆ ಒಂದು ದೋಷವಿದೆ. ಅದೇನೆಂದು ನಿಮಗೆ ಹೇಳಲಾರೆ. ಆ ಗಂಗೆಯೇ ನನ್ನೆದುರು ಮೈದೋರಲಿ. ಹೇಳುತ್ತೇನೆ” ಎಂದಳು.     ಅಪವಾದದ ಅಪನುಡಿಯದು ಅಂಜಿಸಿತು ಅಮರನದಿಯನ್ನು. ತನಗಿರುವ ದೋಷ ಅದಾವುದು ಎನ್ನುವುದನ್ನು ತಿಳಿಯುವ ಕುತೂಹಲಿಯಾದಳು ಗಂಗೆ. ತಕ್ಷಣವೇ ಪ್ರತ್ಯಕ್ಷಳಾದಳು. “ಇನ್ನೊಬ್ಬರ ದೋಷಗಳನ್ನೂ, ಪಾಪಗಳನ್ನೂ ದೂರ ಮಾಡುವವಳೆಂದು ವೇದಶಾಸ್ತçಗಳು ಗುರುತಿಸಿವೆ ನನ್ನನ್ನು. ಸೋಂಕಬಾರದು ಎನ್ನನ್ನು ಎಂದು ದೂಷಿಸುತ್ತಿರುವವಳು ನೀನು. ಇದಕ್ಕೆ ಕಾರಣವೇನು?” ಎಂದು ಆಶ್ಚರ್ಯದಿಂದ ಕೇಳಿದಳು ಜ್ವಾಲೆಯಲ್ಲಿ.      ಮೋಡಿಯ ಮಾತುಗಳನ್ನಾಡಿದಳು ಜ್ವಾಲೆ. “ನಾನೇನೂ ನಿನ್ನನ್ನು ಬೈದದ್ದಲ್ಲ. ಲೋಕರೂಢಿಯ ಮಾತನ್ನು ಹೇಳಿದ್ದೇನೆ ಅಷ್ಟೇ. ಮಕ್ಕಳಿಲ್ಲದ ಬಂಜೆಯನ್ನು ದೋಷವಿರುವವಳು ಎಂದು ಗುರುತಿಸುವ ಕ್ರಮವುಂಟು ಈ ಲೋಕದೊಳಗೆ” ಎಂದಳು.      ಗಂಗೆಗೆ ಈ ಮೊದಲಿಗಿಂತಲೂ ಹೆಚ್ಚಿನ ಅಚ್ಚರಿಯಾಯಿತು. ಕೋಪ ಬಂತು. “ಇಚ್ಛಾಮರಣಿಯೆಂದು ಹೆಸರು ಪಡೆದು, ತ್ರೆöÊಲೋಕ ವೀರನೆಂದು ಖ್ಯಾತಿ ಗಳಿಸಿದ ಭೀಷ್ಮ ನನ್ನ ಮಗನಾಗಿರುವಾಗ ನನ್ನನ್ನು ಮಕ್ಕಳಿಲ್ಲದವಳೆಂದು ಹಂಗಿಸುವುದು ಸರಿಯಲ್ಲ” ಎಂದು ಜ್ವಾಲೆಯನ್ನು ಬೈದಳು.      ವಾಸ್ತವವಾಗಿ ಜ್ವಾಲೆಗೆ ಬೇಕಿದ್ದುದೂ ಅದೇ, ಗಂಗೆಯ ಮನವನ್ನು ಕೆರಳಿಸುವುದು. ಭೀಷ್ಮ ಗಂಗಾಸುತನೆನ್ನುವುದು ಜ್ವಾಲೆಗೆ ತಿಳಿಯದ ಸಂಗತಿಯೇನಲ್ಲ. ಎಂಟು ಮಕ್ಕಳನ್ನು ಪಡೆದ ಗಂಗೆ ಕೊನೆಯದಾಗಿ ಭೀಷ್ಮನನ್ನು ಮಾತ್ರ ಉಳಿಸಿಕೊಂಡ ಬಗೆ ಜ್ವಾಲೆಗೆ ಗೊತ್ತಿತ್ತು. ಬಿಂದು ಬಿಂದುಗಳನ್ನು ಒಂದೊಂದಾಗಿ ಕ್ರಮಿಸುತ್ತಾ ಜ್ವಾಲೆ ಸಾಗಿಬಂದದ್ದು ಈ ಘನಸಿಂಧುವಿನೆಡೆಗೆ, ಭೀಷ್ಮ ಮರಣವನ್ನು ತಿಳಿಸುವ ಅಂತಿಮ ಗಳಿಗೆಯ ಕಡೆಗೆ. “ಹೌದು! ನಿನ್ನ ಸುತ ಭೀಷ್ಮ ಎನ್ನುವುದು ಗೊತ್ತಿದೆ. ಅವನು ವೀರ ಎನ್ನುವ ಅರಿವೂ ಇದೆ. ಅವನು ಇನ್ನೂ ಹೆಚ್ಚಿನ ಔನ್ನತ್ಯವನ್ನು ಗಳಿಸುತ್ತಿದ್ದನೋ ಏನೋ! ಆದರೆ ಆ ಅರ್ಜುನ ಕುರುಕ್ಷೇತ್ರ ಕದನದಲ್ಲಿ ನಿನ್ನ ತನುಜನನ್ನು ಕೊಂದುಹಾಕಿದ. ಹೀಗಿರುವಾಗ ನೀನು ಮಕ್ಕಳಿಲ್ಲದವಳು ಎಂದೇ ಕರೆಸಿಕೊಳ್ಳಬೇಕಾಗುತ್ತದೆ” ಎಂಬ ನುಡಿಸಿಡಿಲು ಸಿಡಿಯಿತು ಜ್ವಾಲೆಯೊಳಗಿಂದ.      ಒಣಗಿದ ಮರಕ್ಕೆ ಬಿದ್ದ ಕಿಚ್ಚು ಹಸಿಹಸಿಯಾದ ಗಿಡವನ್ನೂ ಸುಟ್ಟುಹಾಕುವಂತೆ, ಈಗಾಗಲೇ ನನ್ನ ಮೇಲಿನ ಮುನಿಸಿನಿಂದ ಉರಿಯುತ್ತಿದ್ದ ಜ್ವಾಲೆಯ ಅಂತರಂಗದ ಕಿಚ್ಚು ಗಂಗೆಯ ಮನವನ್ನೂ ಸುಟ್ಟಿತು. ಮಗ ಭೀಷ್ಮ ಅಳಿದನೆಂಬ ಸುದ್ದಿಯನ್ನು ತಾಳಿಕೊಳ್ಳುವುದಕ್ಕಾಗಲಿಲ್ಲ ಅವಳಿಗೆ. ಭೀಷ್ಮ ಮರಣಕ್ಕೆ ಕಾರಣನೆನಿಸಿದ ನನ್ನ ಮೇಲೆ ಕ್ರೋಧ ಉಕ್ಕಿಬಂತು. “ನನ್ನ ಮಗನನ್ನು ಯುದ್ಧದಲ್ಲಿ ಕೊಂದ ಆ ಅರ್ಜುನನ ತಲೆಯನ್ನು ಅವನ ಮಗನೇ ಇನ್ನು ಆರು ತಿಂಗಳುಗಳಲ್ಲಿ ಯುದ್ಧದಲ್ಲಿ ಕೊಚ್ಚಿ ಕೆಡಹಲಿ” ಎಂದು ಶಾಪ ಕೊಟ್ಟು, ಮತ್ತೆ ಮೊದಲಿನ ಸ್ಥಿತಿಯನ್ನು ಪಡೆದಳು.      ಜ್ವಾಲೆಯ ಕ್ರೋಧಜ್ವಾಲೆಯಿಂದಾಗಿ ನಾನು ಗಂಗೆಯ ಶಾಪಕ್ಕೆ ತುತ್ತಾದೆ. ಅಲ್ಲಿಗೇ ಜ್ವಾಲೆಯ ದ್ವೇಷವದು ತಣಿಯಲಿಲ್ಲ. ನನ್ನನ್ನು ಕೊಲ್ಲುವ ಹರಿತವಾದ ಬಾಣವಾಗುತ್ತೇನೆ ಎಂದು ಬಯಸಿದವಳು ಅಲ್ಲಿಯೇ ಗಂಗೆಯ ತೀರದಲ್ಲಿ ಅಗ್ನಿಪ್ರವೇಶ ಮಾಡಿದಳು. ಮಣಿಪುರದ ಅರಸನಾಗಿದ್ದ ಬಭ್ರುವಾಹನನ ಬತ್ತಳಿಕೆಯಲ್ಲಿನ ಹರಿತ ಬಾಣವಾದಳು.      ಗಂಗೆ ನನಗಿತ್ತ ಶಾಪವದು ಅಶ್ವಮೇಧ ಯಾಗದ ಪೂರ್ಣತೆಗೆ ಸಂಚಕಾರವನ್ನೊಡ್ಡುವ ಘನಶಾಪವಾಗಿತ್ತು. ಶಾಪ ನಿಜವಾಗುವ ಗಳಿಗೆಯನ್ನು ಅದೆಂತು ಮೀರುವೆನೋ! ನನಗೆ ತಿಳಿದಿರಲಿಲ್ಲ.                                          ಡಾ. ವಿಶ್ವನಾಥ ಎನ್ ನೇರಳಕಟ್ಟೆ         

Read Post »

ನಿಮ್ಮೊಂದಿಗೆ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ ಶಕ್ತಿಯ ಪ್ರತಿರೂಪ ಹೆಣ್ಣು ಮಹಿಳೆಯರು ಕುಟುಂಬದ ಆಧಾರ ಸ್ಥಂಭವಾಗಿದ್ದು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಆದರೆ ಹಿಂದೂ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸುತ್ತಿರುವುದು ದುಃಖಕರ. ಕುಟುಂಬದ ನಿರ್ವಹಣೆಯಿಂದ ಹಿಡಿದು ಬಾಹ್ಯಾಕಾಶದ ವರೆಗೂ ಮಹಿಳೆ ಪುರುಷನಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದರು ಲಿಂಗ ಸಮಾನತೆ ಮತ್ತು ಶಿಕ್ಷಣ ಭದ್ರತೆಯ ವಿಷಯದಲ್ಲಿ ಇಂದಿಗೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. “*ಯತ್ರ ನಾರಿಸ್ತು ಪೂಜಂತೆ ರಮಂತು ತಂತ್ರ ದೇವತಾ*” ಎಂಬ ವೇದವಾಕ್ಯದಂತೆಎಲ್ಲಿ ನಾರಿಯನ್ನು ಪೂಜಿಸುತ್ತಾರೆ ಅಲ್ಲಿ ದೇವರುಗಳು ನೆಲೆಸಿರುತ್ತಾರೆ ಎನ್ನುವಂತೆ ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸುವುದು ಅಷ್ಟೇ ಮುಖ್ಯ. ಹಾಗೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಾನಮಾನವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಮಹಿಳಾ ಸಬಲೀಕರಣವು ಸಮಾನ ಅವಕಾಶಗಳನ್ನುಒದಗಿಸುವ ಮೂಲಕ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಆದರೂ ಕೂಡ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದು ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ವಿಜ್ಞಾನ, ತಂತ್ರಜ್ಞಾನ ,ರಾಜಕೀಯ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಮಹಿಳೆಯರು  ಸಾಧನೆ ಮಾಡುತ್ತಿದ್ದಾರೆ. ಸಮಾಜದ ಮತ್ತೊಂದು ದುಃಖಕರ ಸಂಗತಿ ಎಂದರೆ ಈಗಲೂ ಕೂಡ ಹೆಣ್ಣಿನ ಮೇಲೆ ದೌರ್ಜನ್ಯಗಳು ಕಿರುಕುಳ ಬ್ರೂಣ ಹತ್ಯೆ ಗಳು ದೊಡ್ಡ ಪಿಡುಗುಗಳಾಗಿವೆ. ಮಹಿಳೆಯರ ಸಬಲೀಕರಣ ಎಂದರೆ ಕೇವಲ ಉದ್ಯೋಗವಲ್ಲ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಸುರಕ್ಷಿತ ವಾತಾವರಣ ಮತ್ತು ಪುರುಷರ ಮನೋಭಾವನೆಯಲ್ಲಿ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ. ಹಾಗೂ ಮಹಿಳೆಯರು ಬಲಿಷ್ಠವಾದಾಗ ಮಾತ್ರ ಸಮಾಜವು ಬಲಿಷ್ಠ ವಾಗುತ್ತದೆ. ಎನ್ನುವಂತೆ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಸಮಾನತೆಯತ್ತ ಧನಾತ್ಮಕ ಹೆಜ್ಜೆ ಇಡುತ್ತಿದ್ದು ನಿಜವಾದ ಪ್ರಗತಿಯನ್ನು ಸಾಧಿಸಲು ಕಾರಣವಾಗುತ್ತಿದೆ. ಸ್ವ ಸಹಾಯ ಗುಂಪುಗಳ ಮೂಲಕ ಉದ್ಯೋಗಾವಕಾಶಗಳು ಮತ್ತು ಆಸ್ತಿ ಹಕ್ಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿವೆ. ತಾಳ್ಮೆಯ ಗುಣವೇ ಹೆಣ್ಣಿನ ಗೆಲುವಿಗೆ ಕಾರಣ ಎನ್ನುವಂತೆ ಮಹಿಳೆ ತನ್ನ ತಾಳ್ಮೆಯಿಂದ ಎಲ್ಲರನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾಳೆ. *ಹೆಣ್ಣು ಸಂಸಾರದ ಕಣ್ಣು*  ಎನ್ನುವಂತೆ ಕುಟುಂಬದಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾ ಎಲ್ಲರ ಮನಸ್ಸನ್ನು ಗೆಲ್ಲುವ ಮನೆ ಬೆಳಗುವ ಮಹಾಲಕ್ಷ್ಮಿಯಂತೆ ಎಲ್ಲರನ್ನ ಸಂತೈಸಿ ಮನಸನ್ನ ಗೆಲ್ಲುವ ಪ್ರತಿಭೆ ಇವಳು. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಪ್ರತಿಯೊಂದು ಹಂತದಲ್ಲೂ ತನ್ನದೇ ಆದ ಜವಾಬ್ದಾರಿ ಯೊಂದಿಗೆ ಸಂಸಾರವನ್ನು ನಡೆಸುವಲ್ಲಿ ಯಶಸ್ಸನ್ನು ಕಾಣುವ ನಗೆಯ ಚಿಲುಮೆ . ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಮಹಿಳೆ ತನ್ನ ಅಪ್ರತಿಮ ಸಾಧನೆಯನ್ನು ಮಾಡಿದ್ದಾಳೆ.ಉದಾಹರಣೆ:  ಕಿತ್ತೂರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ ,ಒನಕೆ ಓಬವ್ವ, ರಾಣಿ ಅಬ್ಬಕ್ಕ, ಇನ್ನು ಹಲವಾರು ಮಹಿಳೆಯರು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಆದರೂ ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆ ಒತ್ತಡದ ಬದುಕಿನಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸಿ ಮೆಟ್ಟಿ ನಿಲ್ಲುವ ಧೈರ್ಯವಂತೆ ಹೆಣ್ಣು. ಪ್ರತಿ ವರ್ಷವೂ ಕೂಡ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಹಾಗೂ ಅಂದು ಹಲವಾರು ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುತ್ತಾರೆ.  ವಿಶೇಷವಾಗಿ ಕಾರ್ಮಿಕ ಚಳುವಳಿಗಳ ಭಾಗವಾಗಿ ಈ ಆಚರಣೆ ಪ್ರಾರಂಭವಾಯಿತು. 1975ರಲ್ಲಿ ಯುನೈಟೆಡ್  ನೇಷನ್ ಅಧಿಕೃತವಾಗಿ ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿತು. ಉದ್ದೇಶವೇನೆಂದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ , ಸಮಾನ ವೇತನ, ರಾಜಕೀಯ ಸಾಮಾಜಿಕ  ಪ್ರಾತಿನಿಧ್ಯ ಮತ್ತು ಲಿಂಗ ತಾರತಮ್ಯ ತೊಡೆದು ಹಾಕುವುದು. ಆದರೂ ಹೆಣ್ಣಿನ ಬಗ್ಗೆ ಹೇಳುವುದಾದರೆ ಪದಗಳೇ ಸಾಲದು ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ. ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ Read Post »

ನಿಮ್ಮೊಂದಿಗೆ

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ “ಅರಿವಿನ ಅರಿವೆ ಕೊಳಕಾದೊಡೆ”

ಕಾವ್ಯ ಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಅರಿವಿನ ಅರಿವೆ ಕೊಳಕಾದೊಡೆ” ತಡವಾಗಿಯಾದರೂ ಬೆಳಕು ಹರಿದಿದೆ;ಎಚ್ಚರಗೊಳ್ಳದ ಮಬ್ಬು ಜನಗಳೇಎದ್ದೇಳಿ ಬೇಗ ಎದ್ದೇಳಿ… ಸೂರ್ಯನು ಬಂದು ಬೈದಾನುಚಂದ್ರನು ಕೆರಳಿ ಕೆಂಡವಾದಾನುಇಂದ್ರನು ಶಾಪ ಕೊಟ್ಟಾನು! ಅರಿವಿನ ಅರಿವೆ ಕೊಳಕಾಗಿಸ್ನಾನ ಮಾಡುವುದನ್ನು ಮರೆತರೆಬತ್ತಿ ಹೋದೀತು ಹೊಳೆಸಾಲು,ಒತ್ತುವರಿಯಾಗಿದೆ ಕೆರೆಯ ಬಯಲುಎದ್ದೇಳಿ ಬೇಗ ಎದ್ದೇಳಿ ಚರಂಡಿಯಲ್ಲಿ ಹುಟ್ಟಿ ಬೆಳೆದಸೊಳ್ಳೆಗಳಾಗದಿರಿಹಂದಿಗಳಂತೆ ಹೊರಳಾಡಿ ಗಬ್ಬು ನಾತ ಹೊಡೆಯದಿರಿ ಕಂಬಕ್ಕೆ ಕಟ್ಟಿದ ಹುಲ್ಲು ತಿನ್ನುತಮುಲಾಜಿಗೆ ಬಲಿಯಾಗುವಕುರಿಗಳಾಗದಿರಿಹೊಂಚು ಹಾಕಿ ಸಂಚು ಹೂಡುವನರಿ, ತೋಳಗಳಿಗೆ ಆಹಾರವಾಗದಿರಿ ಬೀಜ ಮೊಳಕೆಯೊಡೆದುಬೆಳೆಯುವುದು ನಿಲ್ಲಿಸಿಲ್ಲಅನಂತಾನಂತ ಅಂಬರದಲ್ಲಿಹಕ್ಕಿಗಳ ಹಾರಾಟಕ್ಕೆ ಅಡ್ಡಿಯಿಲ್ಲಗಾಳ ಹಾಕಿದರೂ, ಬಲೆ ಬೀಸಿದರೂಮೀನುಗಳು ಈಜುವುದನ್ನು ಬಿಟ್ಟಿಲ್ಲ ಪ್ರಕೃತಿ ಬೋಧಿಸುವ ಪಾಠ ಕಲಿತುಸಕಲ ಜೀವಾತ್ಮರಿಗೆ ಲೇಸನ್ನು ಬಯಸಿವಿಶ್ವಮಾನವ ಸಂದೇಶ ಸಾರುವಈಗಲಾದರೂ ಎದ್ದೇಳಿ ಬೇಗ ಎದ್ದೇಳಿಅರಿವಿನ ಅರಿವೆ ಕೊಳಕಾಗದಂತೆನೋಡಿಕೊಳ್ಳಿ….. ಮಹಾಂತೇಶ್.ಬಿ.ನಿಟ್ಟೂರು,       

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ “ಅರಿವಿನ ಅರಿವೆ ಕೊಳಕಾದೊಡೆ” Read Post »

ಇತರೆ, ನಿಮ್ಮೊಂದಿಗೆ

ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ

ಸಂಶೋಧನಾ ಸಂಗಾತಿ ಡಾ.ಯಲ್ಲಮ್ಮ ಕೆ. ಡಾ. ಯಲ್ಲಮ್ಮ ಕೆ ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು: [ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ] ಒಂದಾನೊಂದು ಕಾಲದಲ್ಲಿ.., ಒಂದು ಊರಲ್ಲಿ.., ಬಹಳ ಹಿಂದೆ, ದೂರದ ಒಂದು ಹಳ್ಳಿಯಲ್ಲಿ.., ಹಿಂದೆ ಕಾಲದಲ್ಲಿ ಒಬ್ಬ ರಾಜನಿದ್ದನಂತೆ.., ನಮ್ಮ ಅಜ್ಜ-ಅಜ್ಜಿ ಹೇಳ್ತಿದ್ದ ಕಥೆಯಿದು.., ಪುರಾತನ ಕಾಲದಲ್ಲಿ.., ತ್ರೇತಾಯುಗದಲ್ಲಿ.., ದ್ವಾಪರ ಯುಗದಲ್ಲಿ.., ಈ ಕಲಿಯುಗದ ಆರಂಭದಲ್ಲಿ.., ವೇದ ಪುರಾಣಗಳಲ್ಲಿ ಹೇಳಿದಂತೆ.., ಮಹರ್ಷಿಗಳು ವರ್ಣಿಸಿರುವಂತೆ.., ನಮ್ಮ ಜನಪದ ಅಥವಾ ಪೌರಾಣಿಕ ಕಥೆಗಳು ಆರಂಭಗೊಳ್ಳುವುದೇ ಹೀಗೆ! ಕೇಳುಗಳ [ಶ್ರೋತೃಗಳ] ಗಮನ ಸೆಳೆಯಲು ಕಾಲ ಮತ್ತು ಸ್ಥಳವನ್ನು ಅಸ್ಷಷ್ಟವಾಗಿಟ್ಟು ಕಲ್ಪನೆಗೆ ಅವಕಾಶ ಕೊಡುವಂತೆ; ಪುರಾತನ ಕಾಲದಲ್ಲಿ ಧರ್ಮವೇ ರಾಜ್ಯದ ಆಧಾರವಾಗಿದ್ದ ಯುಗದಲ್ಲಿ, ಒಂದು ಸಮೃದ್ಧ ರಾಜ್ಯವನ್ನು ಆಳುತ್ತಿದ್ದ ಧರ್ಮನಿಷ್ಠ ರಾಜನೊಬ್ಬನಿದ್ದನು.., ಆ ರಾಜನಿಗೆ ಎಲ್ಲವೂ ಇತ್ತು ಆದರೆ.., ಆದರೆ.., ಒಂದು ಚಿಂತೆ ಮಾತ್ರ ಅವನನ್ನು ಬಿಡದೆ ದಹಿಸುತ್ತಿತ್ತು.., ಎನ್ನುತ್ತಿರುವಾಗಲೇ ಇಡೀ ಕಥಾನಕವನ್ನು ನೀವು ಊಹಿಸಿಬಿಡುತ್ತೀರಿ.., ಚಿತ್ರದ ಮೊದಲರ್ಧವನ್ನು ನೋಡುತ್ತಿರುವಾಗಲೇ ನೀವು ಕ್ಲೈಮ್ಯಾಕ್ಸ್ ಅನ್ನು ಹೇಳಿಬಿಡುವಂತೆ.., ಕಥೆಗಳು ಆಗಲ್ಲ ಇಲ್ಲಿನ ಅನಿರೀಕ್ಷಿತ ತಿರುವುಗಳು ಓದುಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿಬಿಡುತ್ತವೆ. *_ಹಿನ್ನಲೆ:_*ಜೈನಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಇದರ ಹುಟ್ಟಿನ ಹಿನ್ನಲೆ ಕಿ.ಪೂ.ಆರನೇ ಶತಮಾನಕ್ಕೆ ಸೇರಿದೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಜೈನ ಪರಂಪರೆಯ ಪ್ರಕಾರ ಈ ಧರ್ಮವು ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿದ್ದು ಇಪ್ಪತ್ನಾಲ್ಕು ತೀರ್ಥಂತಕರರ ಮೂಲಕ ಬೆಳೆದುಬಂದಿದ್ದು, ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಜೈನಧರ್ಮಕ್ಕೆ ಸಂಘಟಿತ ರೂಪುನೀಡಿ ಪ್ರಚಾರ ಮತ್ತು ಪ್ರಸಾರ ಮಾಡಿದನೆಂದು ತಿಳಿಯಲಾಗಿದೆ. ವೈದಿಕ ಕಾಲಘಟ್ಟದಲ್ಲಿ ಯಜ್ಷ-ಯಾಗಗಳ ಅಧಿಕ್ಯ, ಪಶುಬಲಿ, ಬ್ರಾಹ್ಮಣರ ಪ್ರಾಬಲ್ಯ ಹಾಗೂ ವರ್ಣವ್ಯವಸ್ಥೆಯ ಕಾಠಿಣ್ಯತೆ ಸಮಾಜದಲ್ಲಿ ಅಸಮಾಧಾನವನ್ನುಂಟು ಮಾಡಿತ್ತು. ಇವುಗಳಿಗೆ ಪ್ರತಿರೋಧದ ಹಿನ್ನಲೆಯಲ್ಲಿ ಬೌದ್ಧ ಮತ್ತು ಜೈನಧರ್ಮಗಳು ಉದಯವಾದವು ಎನ್ನಬಹುದು.ಜೈನಧರ್ಮವು ಸರಳ ಆಚರಣೆ, ನೀತಿಪಾಠಗಳ ಮೂಲಕ ಜೀವನ ಮತ್ತು ಆತ್ಮಶುದ್ಧಿಗೆ ಮಹತ್ವ ನೀಡಿತು. ಸಾಮಾಜಿಕವಾಗಿ ನಗರೀಕರಣ, ವ್ಯಾಪಾರ ಮತ್ತು ವೈಶ್ಯವರ್ಗದ ವೃದ್ಧಿಯೂ ಜೈನಧರ್ಮದ ಬೆಳವಣಿಗೆಗೆ ಕಾರಣವಾಯಿತು. ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಹಾಗೂ ತ್ರಿರತ್ನಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ಯ್ರ  ಜೈನಧರ್ಮದ ಮೂಲ ತತ್ತ್ವಗಳಾಗಿವೆ. ಬೌದ್ಧ ಮತ್ತು ಜೈನಧರ್ಮಗಳೆರೆಡು ಶ್ರಮಣ ಪರಂಪರೆಯಿಂದ ಉದ್ಭಭವಿಸಿದ್ದು, ತಪಸ್ಸು, ಸಂಯಮ ಮತ್ತು ವೈರಾಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವು. ಜೈನಧರ್ಮಕ್ಕೆ ಮಗಧ ಪ್ರದೇಶದ ರಾಜಾಶ್ರಯ ಮತ್ತು ವ್ಯಾಪಾರಿಗಳ ಬೆಂಬಲದಿಂದ ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಹರಡಿತೆನ್ನಬಹುದು.ಈ ರೀತಿಯಾಗಿ ವೈದಿಕ ಧರ್ಮದ ಜಟಿಲ ಆಚರಣೆಗಳಿಗೆ ವಿರುದ್ಧವಾಗಿ ಮಾನವೀಯತೆ, ಅಹಿಂಸೆ ಮತ್ತು ಆತ್ಮಸಾಧನೆಯನ್ನು ಕೇಂದ್ರವಾಗಿಟ್ಟುಕೊಂಡ ಒಂದು ಧರ್ಮವಾಗಿ ಬೆಳೆದು ಬಂದಿತು.ಕೊಲ್ಲದ ಧರ್ಮಕ್ಕೆ ಜಿನಾಗಮವೇ ತೌರುಮನೆಯಾಗಿದೆ:ಕ್ಷಮೆಯೇ ಧರ್ಮ, ಧರ್ಮಕ್ಕೆ ದಯವೇ ಮೂಲ, ದಯವೇ ಅಹಿಂಸೆ, ಅಹಿಂಸೆಯೇ ಶಾಂತಿ, ಶಾಂತಿಯೇ ಸುಖ, ಸುಖದ ಅನುಭವವೇ ಜ್ಞಾನ, ಜ್ಞಾನಿಯೇ ಆತ್ಮ. ಆದುದರಿಂದ ಆತ್ಮನಿರೀಕ್ಷಣೆಗೆ ಮೊದಲು ಕ್ಷಮಾಗುಣವನ್ನು ಹೊಂದಬೇಕು. ಅಧ್ಯಾತ್ಮರಸಾನುಭವಿಯಾಗಲು ಕ್ಷಮಾಗುಣಧಾರಿಯೇ ಆಗಬೇಕು. ಕ್ಷಮಾ ವೀರಸ್ಯ ಭೂಷಣಂ! *ರತ್ನಾಕರ ಕವಿ ಹೇಳಿರುವಂತೆ* : ಕ್ಷಮೆ ಮಾಳ್ಪಂತೆ ವಿರೋಧಮೇಂ ಕೊಡುವುದೇ ಸಂತೋಷಮಂ? ಜೀವನದಲ್ಲಿ ಸಂತೋಷವನ್ನು ಕಾಣಲು ಕ್ಷಮೆಯನ್ನು ತಾಳಬೇಕು ಎಂಬಿತ್ಯಾದಿ ಜೈನಧರ್ಮದ ಉದಾತ್ತ ತ್ತ್ವ ಧ್ಯೇಯಗಳನ್ನು ಪಾಲಿಸಿದರೆ ಪತಿತ ಪಾವನನಾಗಬಲ್ಲ, ಜೀವ ಜೀವನ್ಮುಕ್ತನಾಗಬಲ್ಲ, ನರ ನಾರಾಯಣನಾಗಬಲ್ಲ, ಬುದ್ಧನು ಸಿದ್ಧನು ಸಿದ್ಧನಾಗಬಲ್ಲ ಎಂಬ ವಿಚಾರಗಳಿಗೆ ಮಾರುಹೋಗಿ ಜನ ತಲೆಬಾಗಿ ಜೈನಧರ್ಮವನ್ನು ಶಿರೋಧಾರಣೆ ಮಾಡಿ ಅನುಸರಿಸಲಾರಂಭಿಸಿದರು.ಕರ್ನಾಟಕದಿ ಶ್ರವಣಬೆಳಗೊಳ, ಪುಲಿಗೆರೆ, ಕೊಪ್ಪಳ, ಬ್ರಹ್ಮಪುರಿ, ಬಳ್ಳಿಗಾವೆ, ತಾಲಗುಂದ, ಬನವಾಸಿ, ಐಹೊಳೆ, ಹುಂಚ, ಕಾರ್ಕಳ, ಮೂಡಬಿದ್ರೆ, ಗೇರುಸೊಪ್ಪೆ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ವಿದ್ಯಾಕೇಂದ್ರಗಳಿದ್ದವು. ಕನ್ನಡದ ಆದಿಗ್ರಂಥ ಕವಿರಾಜಮಾರ್ಗಕಾರ, ಆದಿಕವಿ ಪಂಪ, ಪೊನ್ನ, ರನ್ನ, ಜನ್ನ, ಚಾವುಂಡರಾಯ, ಅಗ್ಗಳ, ಸಾಳ್ವ, ನಯಸೇನ, ನೇಮಿಚಂದ್ರ, ರತ್ನಾಕರ, ಆಂಡಯ್ಯ ಪ್ರಮುಖ ಕವಿಗಳು ಹಾಗೂ ಸಮಂತಭದ್ರರು, ಭಟ್ಟಾಕಲಂಕರು, ಪೂಜ್ಯಪಾದರು, ಸಿಂಹನಂದಿಗಳೇ ಮುಂತಾದ ಪ್ರಮುಖ ಆಚರ‍್ಯರುಗಳು ಬರೆದಿರುವ ಮಹಾಕಾವ್ಯಗಳು, ಪುರಾಣಗಳು, ಸಿದ್ಧಾಂತಗಳು ಅಷ್ಟಿಷ್ಟಲ್ಲ, ಹೀಗೆ ಕನ್ನಡ ಸರಸ್ವತಿಯನ್ನು ಜೈನರು ಅನೇಕ ಗ್ರಂಥಗಳಿಂದ ಅಲಂಕರಿಸಿದ್ದಾರೆ. ಧರ್ಮ ಪ್ರಸಾರದೊಂದಿಗೆ ಸಾಹಿತ್ಯ ಸೇವೆ ಗೈದವರಲ್ಲಿ ಜೈನಮಹಿಳೆಯರು ದಾನಚಿಂತಾಮಣಿಗಳೆನಿಸಿದ್ದಾರೆ. ಸಂಗೀತ, ನೃತ್ಯ ಪ್ರವೀಣರೆನಿಸಿ, ವೀರ ರಮಣಿಗಳೆನಿಸಿ, ಸ್ತ್ರೀ ಸಮುದಾಯಕ್ಕೆ ಆದರ್ಶಪ್ರಾಯರಾದ ಅತ್ತಿಮಬ್ಬೆ, ಮಲ್ಲಿಕಬ್ಬೆ, ಜಕ್ಕೆಯಬ್ಬೆ, ರಾಣೀ ಶಾಂತಲಾದೇವಿ ಮುಂತಾದವರು ಜೈನ ನಾರೀರತ್ನಗಳಾಗಿದ್ದಾರೆ..ಜೈನರೇ ಕನ್ನಡ ಭಾಷೆಯ ಆದಿಕವಿಗಳು, ಎಲ್ಲ ಪ್ರಾಚೀನ ಉತ್ತಮ ಕೃತಿಗಳು ಜೈನಕವಿಗಳದ್ದೆ ಆಗಿವೆ. ಕನ್ನಡ ಭಾಷೆಯ ಸೌಂಧರ‍್ಯವೂ, ಕಾಂತಿಯೂ ಹೆಚ್ಚಲು ಜೈನಕವಿಗಳೇ  ಕಾರಣ. ಪಂಪ, ರನ್ನ, ಪೊನ್ನರು ಕವಿಗಳಲ್ಲಿ ರತ್ನತ್ರಯರೇ ಆಗಿರುವರು. ಹದಿನಾಲ್ಕನೇ ಶತಮಾನದವರಗೆ ಕನ್ನಡ ಭಾಷೆಯ ಸಹಾಯಕ ಗ್ರಂಥಗಳಾದ ಛಂದಸ್ಸು, ಅಲಂಕಾರ, ವ್ಯಾಕರಣ, ಕೋಶ ಮೊದಲಾದ ಗ್ರಂಥಗಳು ಜೈನರಿಂದಲೇ ರಚಿತವಾದವು ಎಂದು ದಿ. ಆರ್. ನರಸಿಂಹಾಚರ‍್ಯರು ತಮ್ಮ ಕರ್ಣಾಟಕ ಕವಿಚರಿತೆಯಲ್ಲಿ ಬರೆದಿರುವರು; ಇದು ಜೈನರು ಕನ್ನಡ ಭಾಷೆಗೆ ನೀಡಿದ ಮಹತ್ತರ ಕೊಡುಗೆಯನ್ನು ಎತ್ತಿಹಿಡಿಯುತ್ತದೆ.ಕನ್ನಡ ಜೈನ ನೋಂಪಿ[ವ್ರತ]ಕಥೆಗಳು:ಜೈನಧರ್ಮದಲ್ಲಿ ಪರಿಪಾಲಿಸಲ್ಪಡುವ ನೋಂಪಿ[ವ್ರತ-ಉಪವಾಸ]ಗಳು ಮತ್ತು ಅವುಗಳಿಂದ ವ್ಯಕ್ತಿಗೆ ದೊರಕುವ ಆತ್ಮಶುದ್ಧಿ. ಸಂಯಮ ಹಾಗೂ ಕರ್ಮಕ್ಷಯದ ಫಲಗಳನ್ನು ವಿವರಿಸುವ ಧಾರ್ಮಿಕ-ನೈತಿಕ ಕಥಾನಕಗಳಾಗಿವೆ. ಈ ಕಥೆಗಳು ಜೈನಧರ್ಮದ ತಾತ್ವಿಕ ಅಂಶಗಳನ್ನು ಸರಳ ಕಥನರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಬಹುದು. ವಿಷಯ, ಪಾತ್ರ ಮತ್ತು ಉದ್ದೆಶಗಳ ಆಧಾರದ ಮೇಲೆ ನೋಂಪಿ ಕಥೆಗಳನ್ನು ಕೆಳಕಂಡ ವಿಧಗಳಲ್ಲಿ ವಿಂಗಡಿಸಬಹುದು:೧. ಪಾತ್ರಾಧಾರಿತ ವಿಂಗಡಣೆ: ಸ್ತ್ರೀ, ಪುರುಷ, ರಾಜ, ಯೋಧ, ವ್ಯಾಪಾರಿ, ಮಕ್ಕಳು ಮುಂತಾದ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡ ಕಥೆಗಳು, ಇವುಗಳಲ್ಲಿ ಗೃಹಸ್ಥ ಜೀವನ ಮತ್ತು ಧರ್ಮಾಚರಣೆ ಪ್ರಮುಖವಾಗಿರುತ್ತದೆ.೨. ವಿಷಯಾಧಾರಿತ ವಿಂಗಡಣೆ: ಪಾಪದಿಂದ ಪಶ್ಚಾತ್ತಾಪಕ್ಕೆ ಹೋಗುವ, ದುಃಖದಿಂದ ಧರ್ಮದತ್ತ ಸಾಗುವ, ವೈರಾಗ್ಯ ಮತ್ತು ತ್ಯಾಗದ ಕಥೆಗಳು ಈ ವಿಭಾಗಕ್ಕೆ ಸೇರುತ್ತವೆ.೩. ಫಲಾಪೇಕ್ಷಾಧಾರಿತ ವಿಂಗಡಣೆ: ಐಹಿಕ ಫಲ[ಸಂತಾನ, ಆರೋಗ್ಯ, ಸಂಪತ್ತು] ಪಡೆಯುವ ಉದ್ದೇಶದ ಮತ್ತು ಆತ್ಮಶುದ್ಧಿ-ಮೋಕ್ಷದಂತಹ ಅಧ್ಯಾತ್ಮಿಕ ಫಲವನ್ನು ಗುರಿಯಾಗಿಟ್ಟುಕೊಂಡ ಕಥೆಗಳು. *೪. ಧರ್ಮತತ್ತ್ವಾಧಾರಿತ* *ವಿಂಗಡಣೆ:* ಅಹಿಂಸೆ, ಅಸ್ತೇಯ, ಬ್ರಹ್ಮರ‍್ಯೆ, ಅಪರಿಗ್ರಹ, ಕ್ಷಮೆ ಮುಂತಾದ ಜೈನತತ್ತ್ವಗಳನ್ನು ಬೋಧಿಸುವ ಕಥೆಗಳು.೫ *. ಸಾಹಿತ್ಯಿಕ ಸ್ವರೂಪದ ಆಧಾರಿತ* ವಿಂಗಡಣೆ: ಸರಳ ಜನಪದ ಶೈಲಿ, ಉಪದೇಶಾತ್ಮಕ, ಪುರಾಣಾಧಾರಿತ ಹಾಗೂ ರೂಪಕಾತ್ಮಕ ನೋಂಪಿಕಥೆಗಳು.೬. *ಗುರಿ ವಾಚಕರ ಆಧಾರಿತ* ವಿಂಗಡಣೆ: ಮಕ್ಕಳಿಗಾಗಿ, ಗೃಹಸ್ಥರಿಗಾಗಿ ಮತ್ತು ಸಾಧು-ಸಾಧ್ವಿಗಳಿಗೆ ಉದ್ದೇಶಿಸಿದ ಕಥೆಗಳು.ಈ ರೀತಿ ಜೈನನೋಂಪಿ ಕಥೆಗಳು ಧಾರ್ಮಿಕ ಆಚರಣೆಗೂ ಜೊತೆಗೆ ನೈತಿಕ ಜೀವನದ ಮಾರ್ಗದರ್ಶನ ನೀಡುವ ಕಾರಣದಿಂದ ವಿವಿಧ ವಿಧಗಳಲ್ಲಿ ವಿಂಗಡಿಸಬಹುದಾದ ಸಮೃದ್ಧ ಸಾಹಿತ್ಯ ಪರಂಪರೆಯಾಗಿದೆ ಎಂದು ಹೇಳಬಹುದು.ಕನ್ನಡ ಜೈನಸಾಹಿತ್ಯದಲ್ಲಿ ನೋಂಪಿಕಥೆಗಳು ತೀರ್ಥಂಕಕರರ ಜೀವನ, ಶ್ರಾವಕ-ಶ್ರಾವಿಕೆಯರ ತಪಸ್ಸು, ರಾಜರು ಮತ್ತು ಸಾಮಾನ್ಯ ಜನರು ನೋಂಪಿ ಪಾಲನೆಯ ಮೂಲಕ ಸತ್ಸಂಸ್ಕಾರಗಳಿಸಿದ ಘಟನೆಗಳನ್ನು ಒಳಗೊಂಡಿರುತ್ತವೆ. ವಿಶೇಷವಾಗಿ ಪರ್ಯುಷಣ [ಜೈನಧರ್ಮದ ಅತ್ಯಂತ ಪವಿತ್ರ ಹಾಗೂ ಮಹತ್ವದ ಧಾರ್ಮಿಕ ಆಚರಣೆಯಾಗಿದ್ದು, ಶ್ವೇತಾಂಬರರಲ್ಲಿ ಎಂಟುದಿನ, ದಿಗಂಬರರಲ್ಲಿ ಹತ್ತು ದಿನಗಳ ಕಾಲ – ಉಪವಾಸ, ಏಕಾಸನ, ನಿಯಮಿತ ಆಹಾರ ಆತ್ಮಪರಿಶೀಲನೆಯೊಂದಿಗೆ ಆತ್ಮಶುದ್ಧಿ, ಪಾಪಕ್ಷಮೆ ಯಾಚನೆ, ಸ್ವಯಂ ಸಂಯಮ ಸಾಧಿಸುವುದಾಗಿದೆ], ವರ್ಷೀತಪ [ಜೈನಧರ್ಮದ ಅತ್ಯಂತ ಕಠಿಣ ತಪಸ್ಸುಗಳಲ್ಲಿ ಒಂದಾಗಿದ್ದು, ಸುಮಾರು ಹದಿಮೂರು ತಿಂಗಳು, ಹದಿಮೂರು ದಿನಗಳ ಕಾಲ – ಒಂದು ದಿನ ಉಪವಾಸ ಅದರ ಮುಂದಿನ ದಿನ ಏಕಾಸನಗೈಯುತ್ತ ಕರ್ಮಕ್ಷಯ, ಇಂದ್ರಿಯ ನಿಗ್ರಹ ಹಾಗೂ ಆತ್ಮೋದ್ಧಾರ ಹೊದುವುದು ಮುಖ್ಯ ಉದ್ದೇಶವಾಗಿದೆ], ಏಕಾಸನ [ದಿನಕ್ಕ ಒಂದೇ ಸಮಯ, ಒಂದೇ ಸ್ಥಳದಿ ಆಸನ ಬದಲಿಸದೆ ಮಿತಆಹಾರ ಸೇವಿಸುವುದರೊಂದಿಗೆ ಮನಸ್ಸಿನ ಓಟಕ್ಕೆ ಅಥವಾ ಆಸೆಗೆ ಕಡಿವಾಣ ಹಾಕುವುದು, ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ], ಉಪವಾಸ[ಆಹಾರ ತ್ಯಾಗ: ಏಕೋಪವಾಸ– ಒಂದುದಿನ, ಅಠ್ಠಮ– ಮೂರುದಿನ, ಮಾಸಾಕ್ಷಣ ಮೂವತ್ತು ದಿನ ಬರೀ ನೀರು ಕುಡಿಯುತ್ತಾ.., ಅದೂ ಇಲ್ಲದೇ ನಡೆಸುವ ವ್ರತಾಚರಣೆಯಾಗಿದ್ದು, ದೇಹಕ್ಕಿಂತ ಆತ್ಮಕ್ಕೆ ಮಹತ್ತು ನೀಡುವುದು, ಕರ್ಮಬಂಧನ ಕಡಿಮೆಮಾಡಿಕೊಳ್ಳುವುದು ಇದರ ಮುಖ್ಯ ಉದ್ದೆಶವಾಗಿದೆ] ಈ  ಮೊದಲಾದ ನೋಂಪಿಗಳ ಕಥನಗಳು ಹೆಚ್ಚಾಗಿ ಕಂಡುಬರುತ್ತವೆ.ವೈದಿಕ – ಜೈನ ಪ್ರತಿರೋಧ:ಬಿಡಲಾರದ ನೋಂಪಿ[ವ್ರತ]ಗಳು– ಅಹಿಂಸಾತತ್ತ್ವಪರಿಪಾಲನೆಯಿಂದಲೇ ಮಾನವರಿಗೆ ಮುಕ್ತಿ:ಸೋಮಶರ್ಮಭಟ್ಟ ವೈದಿಕ ಕರ್ಮಗಳನ್ನು ತಪ್ಪದೆ ಆಚರಿಸುತ್ತಿದ್ದ ನಿಷ್ಠಧಾರ್ಮಿಕ ವ್ಯಕ್ತಿ. ಅವನಿಗೆ ಸದ್ಗುಣಸಂಪನ್ನೆಯಾದ ನಾಗಶ್ರೀ ಎಂಬ ಮಗಳಿದ್ದಳು. ಹೀಗೆ ಒಮ್ಮೆ ಆ ಊರಿಗೆ ಸರ‍್ಯಮಿತ್ರಾಚರ‍್ಯರೆಂಬ ಜೈನಮುನಿಗಳು ಬಂದು ಪ್ರತಿದಿನ ಪ್ರವಚನಗಳನ್ನು ನೀಡಿ ಅನೇಕ ಬಗೆಯ ಧರ್ಮೋಪದೇಶಗಳನ್ನು ನೀಡುತ್ತಿದ್ದರು. ಆ ಪ್ರವಚನಗಳನ್ನು ಕೇಳಿದ ನಾಗಶ್ರೀ ಪ್ರಭಾವಿತಳಾಗಿ ಗುರುಗಳಲ್ಲಿ ತನಗೂ ವ್ರತಗಳನ್ನು ನೀಡುವಂತೆ ಕೇಳಿಕೊಂಡಳು; ಚತುರೆ-ಬುದ್ಧಿವಂತೆಯಾದ ನಾಗಶ್ರೀ ವ್ರತಗಳನ್ನು ಪಾಲಿಸಬಲ್ಲಳು ಎಂದೆಣಿಸಿದ ಗುರುಗಳು– ಅಹಿಂಸೆ, ಸತ್ಯ, ಅಸ್ತೇಯ [ಕಳ್ಳತನ ಮಾಡದಿರುವುದು], ಬ್ರಹ್ಮರ‍್ಯ ಮತ್ತು ಅಪರಿಗ್ರಹ [ದುರಾಸೆಯನ್ನು ಮಾಡದಿರುವುದು] ವ್ರತಗಳನಿತ್ತರು. ಭಕ್ತಿ-ಭಾವದಿಂದ ಸ್ವೀಕರಿಸಿದ ನಾಗಶ್ರೀ ಮನೆಗೆ ಬಂದಳು. ವಿಷಯ ತಿಳಿದ ಸೋಮಶರ್ಮಭಟ್ಟ ಮಗಳೇ, ನಾವು ಬ್ರಾಹ್ಮಣರು, ಜಗತ್ತಿನಲ್ಲಿ ಶ್ರೇಷ್ಠರಾದವರು, ನಾವು ಜೈನರ ವ್ರತಗಳನ್ನು ಪರಿಗ್ರಹಿಸಬಾರದು, ವ್ರತಗಳನ್ನು ಮರಳಿಸುವಂತೆ ತಂದೆಯು ಸೂಚಿಸಲು, ನೀವೂ ನನ್ನ ಜೊತೆಬನ್ನಿ ಎಂದು ಮುನಿಗಳ ಬಳಿಗೆ ಕರೆದೊಯ್ಯುವಾಗ ದಾರಿ ಮಧ್ಯೆ ನಡೆದ ಘಟನಾವಳಿಗಳೂ ಕಥೆಗೆ ಮುಖ್ಯತಿರುವನ್ನು ನೀಡುತ್ತವೆ.ಅವು ಇಂತಿವೆ: ಬಂಧಿತ ಕೊಲೆಪಾತಕ–ಅಹಿಂಸಾ ವ್ರತ, ಬಂಧಿತ ಸುಳ್ಳುಗಾರ-ಜನರನ್ನು ವಂಚಿಸುವವ- ಸತ್ಯವ್ರತ, ಬಂಧಿತ ಕಳ್ಳ– ಅಸ್ತೇಯ ವ್ರತ, ಬಂಧಿತ ಮೋವಾಳಿ ಹೆಂಗಸು ಮತ್ತು ನಾಗಸೂರ ವರ್ತಕನ ಮಗ– ವ್ಯಭಿಚಾರ-ಪರಪುರುಷನ ಸ್ನೇಹ ತಪ್ಪು- ಬ್ರಹ್ಮಚರ‍್ಯೆ ವ್ರತ, ಬಂಧಿತ ದುರಾಸೆಯ ವ್ಯಕ್ತಿ– ಅಪರಿಗ್ರಹ ವ್ರತ, ಕೊನೆಗೆ ತಂದೆಯು ಮಗಳ ಎಲ್ಲ ವ್ರತಗಳನ್ನು ಆಚರಿಸಲು ಒಪ್ಪಿದ. ಮಗಳು ಮುನಿಗಳ ಬಳಿಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದಳು; ಆಗ ಮುನಿಗಳು ಬ್ರಾಹ್ಮಣ ಧರ್ಮವಾದರೇನು? ಸೂಕ್ಷ್ಮವಾಗಿ ಅವಲೋಕಿಸಿದರೆ ಸತ್ಯಧರ್ಮವೇ ಧರ್ಮ! ಅಂತಹ ಧರ್ಮ ಆತ್ಮನಿಷ್ಟವಾದದ್ದು, ಧರ್ಮವನ್ನು ಜಾತಿಯಿಂದ ಪರಿಗಣಿಸಿದಾಗ ವ್ಯಕ್ತಿನಿಷ್ಟವಾಗಿ ರಾಗಾದ್ವೇಷಾದಿಗಳು ಉದ್ಭವಿಸುವುವು, ಈ ಪಂಚಾಣುವ್ರತಗಳು ಯಾವ ಧರ್ಮಕ್ಕೆ ತಾನೇ ವಿರೋಧ? ಜಗತ್ತಿನ ಸಕಲ ಜನರೂ ಅನುಸರಿಸಲು ಯೋಗ್ಯವಾದವುಗಳು; ಜಿನಪೂಜೆಗೆ ಅಡ್ಡಿಮಾಡಿದವರು ತಿರುಕರಾಗಿ ಅನ್ನಅನ್ನ ಎಂದು ಬಾಯಿ ಬಿಡಬೇಕಾಗುವುದು, ಜಿನಧರ್ಮವನ್ನು ದೂಷಿಸುವವರು ಕುಷ್ಠರೋಗಕ್ಕೆ ತುತ್ತಾಗುವರು, ಅನ್ನದಾನಕ್ಕೆ ಅಡ್ಡಿಮಾಡಿದವರು ಹಸಿವಿನಿಂದ ಕಂಗಾಲಾಗುವರು; ಬಡವನ ಸುಖ, ಹೇಡಿಯ ಕೋಪ, ಮುಗಿಲ ನೆಳಲು, ಪ್ರಿಯರ ಮುನಿಸು, ಮಹಾಮೂರ್ಖರ ತಪಸ್ಸು ಇವಾವೂ ಸ್ಥಿರವಲ್ಲ; ಶ್ರೀಶೇಣನು ದಾನಮಾಡಿದ ಮಹಾಪುಣ್ಯದಿಂದಲೇ ಮುಂದೆ ಶಾಂತಿನಾಥ ತೀರ್ಥಂಕರ ನಾಗಲಿಲ್ಲವೇ? ಆಹಾರ, ಅಭಯ, ಔಷಧಿ ಮತ್ತು ಶಾಸ್ತ್ರದಾನಗಳು ಗೃಹಸ್ಥರಿಗೆ ಅನಂತ ಸಿರಿಯ ವ್ಯವಸಾಯದಲ್ಲಿ ಬಿತ್ತಬೇಕಾದ ಗಟ್ಟಿ ಬೀಜಗಳಾಗಿವೆ ಎಂದು ಅನೇಕ ವಿಧದಿಂದ ಬೋಧಿಸಿದರು.ಪೂರ್ವಭವದ ಸ್ಮರಣೆ – ಜನ್ಮಾಂತರಗಳ ಕಥೆ:ಭಗವಾನ್ ಮಹಾವೀರ ತೀರ್ಥಂಕರರ ವಿಹಾರ ಮಗಧ ದೇಶದಲ್ಲಿ ನಡದಿತ್ತು, ರಾಜಗೃಹ ಅದರ ರಾಜಧಾನಿಯಾಗಿದ್ದು, ಶ್ರೇಣುಕನೆಂಬ ಮಹಾರಜ ರಾಜ್ಯಭಾರ ಮಾಡುತ್ತಿದ್ದನು. ಅದೇ ನಗರದಲ್ಲಿ ನಾಗದತ್ತನೆಂಬ ಧನಿಕ ಆತನ ಹೆಂಡತಿ ಭವದತ್ತೆ ದಂಪತಿಗಳಿಬ್ಬರೂ ಧರ್ಮಮಾರ್ಗದಲ್ಲೇ ನಡೆಯುತ್ತಿದ್ದರು. ಆದರೆ ಕಾಲಗರ್ಭದಲ್ಲಿ ಏನ್ ಅಡಗಿದೆಯೋ ಬಲ್ಲವರಾರು? ನಾಗದತ್ತ ಅಕಾಲಿಕ ಮರಣಕ್ಕೆ ತುತ್ತಾದ, ಹೆಂಡತಿಯ ಮೇಲಿನ ವ್ಯಾಮೋಹದಿಂದ ಮೃತ್ಯುವಶನಾದ ನಾಗದತ್ತ ಮರುಜನ್ಮದಿ ಕಪ್ಪೆಯಾಗಿ ಹುಟ್ಟಿದ. ತನ್ನ ಮನೆಯ ಹಿತ್ತಲಿನ ಬಾವಿಯೇ ಆವಾಸಸ್ಥಾನವಾಗಿತ್ತು. ದಿನದಿನವೂ ಸೊರಗುತ್ತಿತ್ತು, ಆ ಬಾವಿಯಿಂದ ಹೊರಬರಲಾರದೆ ತಳಮಳಿಸುತ್ತಿತ್ತು.ಒಂದು ದಿನ ಅಚಾನಕ್ಕಾಗಿ ಬಾವಿಯಿಂದ ನೀರು ಸೇದುವಾಗ ಬಿಂದಿಗೆಯೊಳಕ್ಕೆ ತೂರಿ ಹೊರಕ್ಕೆ ಬಂದುಬಿಟ್ಟಿತು.., ಕುಪ್ಪಳಿಸುತ್ತಾ ಕುಪ್ಪಳಿಸುತ್ತಾ ಮನೆಯೊಳಕ್ಕೆ ಸೇರಿಕೊಂಡಿತು, ಹೆಂಡತಿ ಭವದತ್ತೆಯನ್ನು ಕಂಡಕೂಡಲೇ ಪ್ರೀತಿಯಿಂದ ಆಕೆಯ ಮೇಲೆ ಜಿಗಿಯುತ್ತ ಜಿಗಿಯುತ್ತಾ ಹೋಯಿತು ಹೆದರಿದ ಆಕೆಯ ಮನೆಯಿಂದ

ಣಮೋ ಅರಿಹಂತಾಣಂ- ಕನ್ನಡ ಜೈನ ನೋಂಪಿಕಥೆಗಳು:(ಧಾರ್ಮಿಕ ಆಚರಣೆ ಮತ್ತು ನೈತಿಕಬೋಧೆ-ಸಂಶೋಧನಾತ್ಮಕ ಲೇಖನ) ಡಾ. ಯಲ್ಲಮ್ಮ ಕೆ Read Post »

ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ”

ಕಾವ್ಯಸಂಗಾತಿ ಡಾ ಡೋ ನಾ ವೆಂಕಟೇಶ “ಪ್ರೀತಿ-ಚಿಟ್ಟೆ” ಯಾರೂ ಪ್ರೀತಿಸಲಾಗದಷ್ಟುಪ್ರೀತಿಸಿದೆ ನಿನ್ನಪ್ರೀತಿ ಮೇಲ್ಪಂಕ್ತಿಯಾದೆ ಪ್ರೀತಿಗೆ ನೀಸವಿಗೂಡಾದೆಜೇನಾದೆ! ಗೆಳೆಯ ಗುಂಪುಗಳು ಮುತ್ತಿಡುವ ಮುನ್ನ ನಿನ್ನ  ಚಿನ್ನ ,ನೀ ರಾಣಿ ಜೇನಾದೆಪದ ತಲಗಳಿಂದಗುಯ್ ಗುಡುವ ಗಾನವಾದೆ ಹೃದಯಕ್ಕೆ ಹಾಡಾದೆಹಾರಾಡುವ ಹರಿಣಿಯಾದೆಬಣ್ಣದ ಪಾತರಗಿತ್ತಿಯೂ ನೀನಾದೆ ಕಡೆಗೆ. ಕಂಬಳಿ ಹುಳಗಳಿಂದ ಬಂದಿದ್ದ ಮರೆತೆನೀ ಹುಟ್ಟಿದ ಹಾದಿ ಮರೆತೆ ಮೆರೆದಾಡಿದೆ ಪ್ರೀತಿ ನೀಬಟರ್ ಫ್ಲೈ ಆದೆ ಮುಟ್ಟಿದವರಿಗೆಅಂಟಿಕೊಂಡೆ,ಶಾಖಕ್ಕೆ ಕರಗಿ ಹೋದೆ ನೀ!ಪ್ರೀತಿ ಹೀಗೆನೀ ಅಲ್ಪಾವಧಿಯ ಚಿಟ್ಟೆಯಾದೆಸ್ಪರ್ಶಿದರೆ ಬಣ್ಣದಿಂದ          ಧರಾಶಾಯಿಯಾದೆ ಪ್ರೀತಿನೀ ಹೀಗೂ ಹಾಗೂ  ಮರೆತೆಅಮರಳಾದೆ! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ” Read Post »

You cannot copy content of this page

Scroll to Top