Category: ಕಾವ್ಯಯಾನ
-

ಮೂಗಪ್ಪ ಗಾಳೇರ ಅವರ ಕವಿತೆ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?”
ಕಾವ್ಯ ಸಂಗಾತಿ ಮೂಗಪ್ಪ ಗಾಳೇರ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?” ಬಿದ್ದ ವೈರಿಗಳನ್ನಷ್ಟೇ ಅಲ್ಲಬದ್ಧ ವೈರಿಗಳಿಗೂ ಬೆಚ್ಚಿ ಬೀಳಿಸಿದ್ದ ಬುದ್ಧಮಾಡಿದ್ದು ರಕ್ತ ಹರಿಸುವ ಯುದ್ಧವನಲ್ಲಪ್ರೀತಿ ತುಂಬಿ ಸ್ನೇಹ ಬೆಳೆಸುವ ಧರ್ಮದ ನಡಿಗೆ ಬುದ್ಧ ನಡೆದ ಹಾದಿ ಉದ್ದಗಲಕ್ಕೂ ಜನಸಸಾಗರವೋ ಜನಸಾಗರನಿಮ್ಮ ಯುದ್ಧದ ಪಿರಿಂಗಿಗಳುಆಕಾಶದೆತ್ತರಕ್ಕೆ ಚಿಮ್ಮುತ್ತ ಬೆಂಕಿಯ ಕೆಂಡವನ್ನು ಉಗುಳುತಿದ್ದರೆಬುಧ್ದನ ಉಪದೇಶಗಳುಆ ಬೆಂಕಿಯ ಕೆಂಡದಲ್ಲಿ ಶಾಂತಿಯ ತೋಟವನ್ನು ಸೃಷ್ಟಿಸುತ್ತಿವೆ ಯುದ್ಧ ಗೆದ್ದಿತು ಎನ್ನುವುದಕ್ಕೆನಿಮ್ಮ ಪಿರಿಂಗಿಯ ಮದ್ದು ಗುಂಡುಗಳು ಹರಿಸಿದ ರಕ್ತದ ಚರಿತ್ರೆಗೆಸಡ್ಡು ಹೊಡೆದು ನಿಂತಿದ್ದುಮುಗಿಲೆತ್ತರಕ್ಕೂ ಚಿಮ್ಮಿ ಶಾಂತಿ ಮಳೆ…
-

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಮಣ್ಣಿಗೆ ಭೇದವಿಲ್ಲ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಮಣ್ಣಿಗೆ ಭೇದವಿಲ್ಲ” ಊರ ಬಿಟ್ಟು ದೂರಾಚೆ ಹಾಳು ಸುಡುಗಾಡಂತೆಅದ್ಯಾಕೋ ಯಾರಿಗೂ ಇಷ್ಟವಲ್ಲದ ಜಾಗವಂತೆಇಲ್ಲ್ಯಾರಿಗೂ ಯಾವುದೇ ಭೇದವಿಲ್ಲವಂತೆಹಾಸಿ ಹೊದ್ದಿಕೊಳ್ಳಲಿರುವುದೊಂದೆ ಮಣ್ಣಿನ ಮುದ್ದೆಯಂತೆ ಮನುಷ್ಯನ ಎಲ್ಲದಕ್ಕೂ ಪೂರ್ಣವಿರಾಮ ಇಲ್ಲಿಇದ್ದಾಗ ನಾನೇ ಎನ್ನುವ ಭರದಲ್ಲಿಬೀದಿಯು ನಮ್ಮದಲ್ಲ ಎನ್ನುತ ಉಗಿಯುವನಲ್ಲಿನಾನು ನನ್ನದೆನ್ನುವ ಸ್ವಾರ್ಥದ ವ್ಯಾಮೋಹದಲ್ಲಿ. ನಶ್ವರ ಕಾಯವ ಕಾಯಕಕ್ಕಾಗಿ ಮೀಸಲಿಡುಪರೋಪಕಾರಾರ್ಥಂ ಇದಂ ಶರೀರಂ ಮರೆಯದಿರುಸಮಾಜದ ಉಪಯೋಗಕ್ಕಾಗಿ ಜೀವಿಸಿ ನೋಡುಕಾಯಕದಲ್ಲೇ ಕೈಲಾಸವ ಕಾಣುತಿರು. ಪ್ರತಿಫಲ ಬಯಸದೆ ಸೇವೆಯ ಮಾಡುತಿರುಕಂಗಳ ಕೊಡದಿದ್ದರೂ ಅನ್ಯರ ಕಣ್ಗಳ ಕೀಳದಿರುನಡೆಸಲಾಗದಿದ್ದರೂ ಬೆಳಕಿನ ಮಾರ್ಗ…
-

ಎಮ್ಮಾರ್ಕೆ ಅವರ ಗಜಲ್
ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಎದೆಗಡಲನು ಮಥಿಸಿ ಪಡೆದಿಹ ಅಮೃತವದು ಪ್ರೀತಿಭಾವದಲೆಯು ದಡವ ಸೇರಿದ ಸಂಗಮವದು ಪ್ರೀತಿ ತೋರಿಕೆಗೆ ತಳೆದ ಹೂ ಹೇರಿಕೆಗೆ ಹಬ್ಬಿದ ಬಳ್ಳಿಯಲ್ಲನೆಲ ಮುಗಿಲುಗಳ ನೆಚ್ಚಿ ಬಿರಿದ ಕುಸುಮವದು ಪ್ರೀತಿ ಅಹಮಿಕೆಯ ಅರಿವಿಲ್ಲ ಸಂಶಯಗಳ ಸುಳಿವೆನಿತಿಲ್ಲಗುಡಿಸಲನೇ ಗುಡಿಯ ಮಾಡಿದ ಪವಾಡವದು ಪ್ರೀತಿ ಹೆಚ್ಚು ಕಡಿಮೆ ಎಂಬ ಗಡಿಗಳಿಲ್ಲ ಗಡಿಬಿಡಿಯೂ ಇಲ್ಲಆಡಂಬರಕಾತುಕೊಳ್ಳದ ಸುಗ್ಗಿ ಸಂಭ್ರಮವದು ಪ್ರೀತಿ ಈ ಒಲವ ಜನನಕೆ ಮಹೂರ್ತ ಘಳಿಗೆಗಳು ಬೇಕಿಲ್ಲಬೆಸೆದ ಮನಗಳಂಗಳದ ನಿತ್ಯದ ಉತ್ಸವವದು ಪ್ರೀತಿ ಎಮ್ಮಾರ್ಕೆ
-

ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು
ಅನುವಾದ ಸಂಗಾತಿ “ಜಲಭಾಷೆ” ತೆಲುಗು ಮೂಲ:ಡಾ. ದೇವರಾಜು ಮಹಾರಾಜು ಕನ್ನಡಾನುವಾದ ರಂಗನಾಥ ರಾಮಚಂದ್ರರಾವು ಕವನ ಒಂದು ಪ್ರತ್ಯೇಕ ಪರಿಭಾಷೆಅದು ಎಲ್ಲಾ ಭಾಷೆಗಳಿಗೂ ಬಗ್ಗುತ್ತದೆಎಲ್ಲಾ ಭಾಷೆಗಳನ್ನು ಬಗ್ಗಿಸಿಕೊಳ್ಳುತ್ತದೆತಲೆ ಬಗ್ಗಿಸಿದಂತೆ ಬಗ್ಗಿಸಿ, ಎಲ್ಲಾ ಪ್ರಕಾರಗಳನ್ನುತನ್ನ ರೆಕ್ಕೆಗಳ ಕೆಳಗೆ ಎಳೆದುಕೊಳ್ಳುತ್ತದೆಕಾಲದೊಂದಿಗೆ ಸಾಗುತ್ತಾಒಂದೊಂದು ಸಲ ಕಾಲವನ್ನೂ ದಾಟಿಹೋಗುತ್ತದೆಕವನ ಒಂದು ಜಲ ಭಾಷೆಅದು ಯಾವ ಪಾತ್ರೆಯಲ್ಲಾದರೂ ತುಂಬುತ್ತದೆ –ಒದಗುತ್ತದೆ ಕವನ ಒಂದು IDEOGRAMಅದು ಛಂದಸ್ಸಿನಲ್ಲಿ ಬದುಕುವುದೇಮಾತ್ರಾ ಛಂದಸ್ಸಿನಲ್ಲಿ ಬದುಕುವುದೇವಚನದಲ್ಲಿ ಬದುಕುತ್ತದೆ ಎಂಬ ಚರ್ಚೆಎಷ್ಟು ಅರ್ಥರಹಿತವೆಂದರೆ …ಜೀವವು ಯಾವ ರೀತಿಯ ಜೀವಿಯಾಗಿ ನಿಲ್ಲುತ್ತದೆಪ್ರಾಣಿಗಳು ಹುಟ್ಟುತ್ತವೆ, ಸಾಯುತ್ತವೆ…
-

ಸುಮನಾ ರಮಾನಂದ ಅವರ ಕವಿತೆ “ಮಲ್ಲಿಗೆಯ ಸವಿನುಡಿ”
ಕಾವ್ಯ ಸಂಗಾತಿ ಸುಮನಾ ರಮಾನಂದ “ಮಲ್ಲಿಗೆಯ ಸವಿನುಡಿ” ಮಾನಿನಿಯ ಆರೈಕೆಯಲರಳುವದುಂಡುಮಲ್ಲೆ ಹೂಗಳು ನಾವು..ಚಿಗುರ ಹಸಿರೆಲೆಯ ನಡುವಲಿರಾಣಿಯಂತೆ ಮೆರೆಯುವೆವು..!! ನಾಚಿಹ ನವವಧುವರರ ಕರದಲಿಕಟ್ಟಿದ ಮಾಲೆಯಾಗಿ ನಗುವೆವು..ಪೂಜಾವೇಳೆಯಲಿ ದೈವದಪಾದಾರವಿಂದದಿ ಧನ್ಯರಾಗಿಹೆವು!! ಮುಂಜಾವಲಿ ಹೂಮಾಲೆಯಾಗಿದೇವರ ಕೊರಳಲಿ ನಲಿವೆವು..ಹೆಂಗಳೆಯರ ಮುಡಿಯಲಲಂಕರಿಸಿ..ಮುಸಂಜೆಯಲಿ ನಲುಗುವೆವು!! ನಾವಿರುವ ಹೂಬನದ ಸುತ್ತಹರಡುತಲಿದೆ ನಮ್ಮ ಕಂಪು..ನಮ್ಮನು ಜಡೆಯಲಿರಿಸಿದ ನಲ್ಲನಕಂಡು ನಲ್ಲೆಯ ಕೆನ್ನೆ ಕೆಂಪು!! ಸುಮನಾ ರಮಾನಂದ,ಕೊಯ್ಮತ್ತೂರು
-

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಅಜ್ಞಾನಿ ಕೈಯಲ್ಲಿ ವಿಜ್ಞಾನ “
ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ” ಅಜ್ಞಾನಿ ಕೈಯಲ್ಲಿ ವಿಜ್ಞಾನ “ ತಾಂತ್ರಿಕ ಯುಗದಲ್ಲಿಮನುಜ ಯಾಂತ್ರಿಕನಾಗಿಯಂತ್ರ ಮಾನವ ಸೃಷ್ಟಿಸಿಕುತಂತ್ರ ಜ್ಞಾನ ಬೆಳೆಸುತ್ತಿದ್ದಾನೆ ತಾತ್ವಿಕ ತಳದಿ ತಳ್ಳಿ ಹಾಕಿಮಾನವೀಯ ಮೌಲ್ಯಗಳ ಮರೆತುಸಂಚು ಮಾಡಿ ಹೊಂಚು ಹಾಕಿವಿಕೃತಿ ಮೆರೆಯುತ್ತಿದ್ದಾನೆ ವೈಚಾರಿಕತೆ ಇಲ್ಲದ ವಿಜ್ಞಾನಿಅಜ್ಞಾನದ ಅಂಧಕಾರದಲಿಅಪಾಯಕಾರಿ ಅನ್ವಸ್ತ್ರಗಳಿಂದನಾಗರಿಕತೆ ನಾಶಗೊಳಿಸುತ್ತಿದ್ದಾನೆ ಭಾವನೆಗಳನ್ನು ಬರುಡಾಗಿಸಿಅಧರ್ಮದ ಅಡ್ಡ ದಾರಿಯಲ್ಲಿದುರಾಸೆಯ ದಾಸನಾಗಿಧರ್ಮದ್ರೋಹಿಯಾಗುತ್ತಿದ್ದಾನೆ ವಿಜ್ಞಾನ ಅಜ್ಞಾನಕ್ಕೆ ಕಾರಣವಾಗಿಮಾನವತೆ ಮೌನವಾಗಿದೆಹೇಡಿಗಳ ಹಗೆತನದಿಂದಅಶಾಂತಿಯ ಸಮರ ಸಾರುತ್ತಿದೆ ವಿಜ್ಞಾನಿಗಳು ಸುಜ್ಞಾನಿಗಳಾಗಿವಿನಾಶ ತಡೆವ ವಿವೇಕಿಗಳಾಗಬೇಕಿದೆಸ್ವಾರ್ಥ ಬಿಟ್ಟು,ಪ್ರೇಮ ಕೊಟ್ಟುಸಾಮರಸ್ಯದ ಜಗವ ಬೆಳಗಬೇಕಿದೆ ಡಾ.…
-

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ”
ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಹೃದಯ ಒಡೆದಾಗ” ಹೃದಯ ಒಡೆದಾಗ ಪ್ರತಿಯೊಂದು ನೋವು ಒಲವಿನ ಕಥೆಗಳಾಗಿ ಮೂಡಿ ಬರುತ್ತವೆ;ಬಿಸಿ ಕಣ್ಣೀರಿನ ಹನಿಹನಿಯಲ್ಲು ಕುದಿಮೌನದ ಮಾತುಗಳೆ ಹರಿದು ನಿಲ್ಲುತ್ತವೆ! ಈ ಅಶಾಂತಿ, ಈ ಕಾತರ, ಈ ಅಸಹಾಯತೆಯ ನೆರಳಲ್ಲಿ ನೀನಿರುವೆ ನನ್ನೊಲವೆ;ಪ್ರೇಮದ ಪ್ರತಿಯೊಂದು ಸಾಕ್ಷಿ ಜೀವಂತ ಬೆದರು ಬೊಂಬೆಯಾಗಿ ಕುಣಿಯುತ್ತವೆ ಜೀವವೆ! ಪ್ರೇಮ ಮೌನ ಹೊದ್ದ ತುಟಿಗಳ ಮೇಲೆ ನಿಂತಿರುವ ಅಪೂರ್ಣ ಕನಸುಗಳ ದಾರಿಯದು;ಪ್ರೇಮಿಯ ಹೃದಯದ ಪ್ರತಿ ಬಡಿತವು ಮಳೆಯಿರದ ನದಿಯ ಹರಿವಿನಂತೆ ಸಾಗುವುದು! ಹೃದಯದ ಪುಸ್ತಕದ ಪ್ರತಿಯೊಂದು ನೆನಪಿನ…
-

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ”
ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ತಂತಿ ಹರಿದ ವೀಣೆ” ತಂತಿ ಹರಿದ ವೀಣೆ ನಾನು,ಮೌನದೊಳಗೇ ನಾದ ನಾನು;ಮುರಿದ ಕನಸ ದಾರಿ ನಾನು,ನಡೆಯುತಿರುವ ಜೀವ ನಾನು. ಕತ್ತಲ ರಾತ್ರಿ ಜೊತೆಯಾದರೂ,ನಕ್ಷತ್ರದಂತೆ ಬೆಳಕು ನಾನು;ಕಣ್ಣೀರ ಹನಿಯ ಮಣ್ಣಿನೊಳಗೆ,ಮೊಳೆಯುತಿರುವ ಬೀಜ ನಾನು. ಗಾಳಿ ತಾಕಿದ ಕ್ಷಣದಲ್ಲೇ,ಮೌನವೇ ಮಧುರ ರಾಗ;ನೋವು ತಾಕಿದ ಹೃದಯದಲ್ಲೇ,ಹುಟ್ಟುತ್ತದೆ ಹೊಸ ನಾದ. ಮುರಿದ ತಂತಿ ಎಂದರೇನು,ನಾದ ಮಡಿಯುವುದಿಲ್ಲ;ಮುರಿದ ಮನಸು ಎಂದರೇನು,ಆಸೆ ಸಾಯುವುದಿಲ್ಲ. ಒಂದು ಹೂವಿನಿಂದ ವಸಂತವಿಲ್ಲ,ಒಂದು ನೆರಳಿಂದ ದಾರಿಯಿಲ್ಲ;ನೂರ ಕನಸು ಸೇರಿದಾಗಲೇ,ಜೀವನಕ್ಕೆ ಸೋಲಿಲ್ಲ. ಮಣ್ಣು ಕಲಿಸಿದ…
-

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್
ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ನೋವಿನಲೂ ಸಹನೆಯ ವಹಿಸು ದಾಂಪತ್ಯಬಂಧವು ಮುರಿಯದಂತೆಜೀವನವ ಎದುರಿಸು ಕಷ್ಟ ಕಾರ್ಪಣ್ಯದಮಳೆಯು ಸುರಿಯದಂತೆ ಕವಿದಿಹ ಮೋಡಗಳು ಚದುರಿ ಓಡಲುಬಾನು ತಿಳಿಯಾಗದೇವಿವಾಹದ ಅರ್ಥವು ಪರಿಪಕ್ವವಾಗಿ ಬೆಸೆಯಲಿದೂರಕೆ ಸರಿಯದಂತೆ ಸವಿಯಲು ಬದುಕಿನ ಸಾರವ ಒಲುಮೆಉಕ್ಕಿ ಬರುವುದುಕೀವು ತುಂಬಿದ ಮನದ ಕೊಳೆಯನಿವಾರಿಸು ಉರಿಯದಂತೆ ಭಾವನೆಯ ಸಾಗರದಿ ಬೋರ್ಗರೆವ ಝರಿಯ ಹತ್ತಿಕ್ಕುವ ಪ್ರಯತ್ನಜೀವನ್ಮುಖಿ ಮೌಲ್ಯದ ಬಗೆಗೆ ವಿವೇಚನೆವಾಸ್ತವ ಹರಿಯದಂತೆ ಅವಿನಾಭಾವ ಸಂಬಂಧ ಕಾಪಿಟ್ಟು ಕಾಯುವಜವಾಬ್ದಾರಿ ರಾಧೆಗೆಭವಿಷ್ಯದ ಚಿಂತನೆ ಮೂಡಲು ಮುನ್ನೆಚ್ಚರಿಕೆಸಂಘರ್ಷ ಬಿರಿಯದಂತೆ ಅನುರಾಧಾ ರಾಜೀವ್ ಸುರತ್ಕಲ್
-

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ “ಯುದ್ಧಕ್ಕೆ ಗೆದ್ದಲು ಹಿಡಿಯಲಿ”
ಕಾವ್ಯ ಸಂಗಾತಿ ನಾಗೊಂಡಹಳ್ಳಿ ಸುನಿಲ್ “ಯುದ್ಧಕ್ಕೆ ಗೆದ್ದಲು ಹಿಡಿಯಲಿ” ಯುದ್ಧಕ್ಕೆ ಗೆದ್ದಲು ಹಿಡಿಯಲಿ ಸೋಲು ಗೆಲುವುಗಳಿಗೆಅಧಿಕಾರದ ಗದ್ದುಗೆಯ ಗದ್ದಲಗಳಿಗೆಗೆದ್ದಲು ಹಿಡಿಯಲಿಬುದ್ಧನನ್ನು ಮರೆತ ಈ ಯುದ್ಧಗಳಿಗೆಪಾಪ ಪ್ರಜ್ಞೆ ಕಾಡುತಿರಲಿ ಚಿಗುರುವ ಎಲೆಗಳ ಮೇಲೆರಕ್ತದ ಹನಿ ತೊಟ್ಟಿಕ್ಕುತ್ತಿದೆತೊಟ್ಟಿಲ ಕಂದಮ್ಮಗಳಿಗೂಸಾವಿನ ಬಾಗಿಲು ತಟ್ಟುತ್ತಿದೆ ನರಳಾಡುವ ಜೀವಗಳ ಮೇಲೆವಿಜಯ ಪತಾಕೆ ನಗುತ್ತಿರುವಾಗಗೆದ್ದವರ ಸಂಭ್ರಮದ ಕಣ್ಣುಗಳಲ್ಲಿಸೋತು ಸತ್ತವರ ಶಾಪಗಳೇ ಕಾಣುತ್ತಿವೆ ರೆಕ್ಕೆಯಿಲ್ಲದ ಹಕ್ಕಿಗಳುಕರುಗಳಿಲ್ಲದ ಗೋವುಗಳುರೆಂಬೆಗಳಿಲ್ಲದ ಮರಗಳುಇದೀಗ ಅಲ್ಲಿ ಎಲ್ಲವೂಬೋಳು ಬೋಳಾಗಿ ಕಾಣಿಸಿಕೊಳ್ಳುತ್ತಿವೆಹಸಿಗಾಯದ ನೋವಿನ ಊರಲ್ಲಿಬೆಂಕಿಯ ಮಳೆ ಸುರಿಯುತ್ತಿದೆ ಬಂದೂಕು ಬಾಂಬುಗಳ ಹೃದಯಗಳಿಗೆಪ್ರೇಮದ ಕಾಯಿಲೆ ಅಂಟಲಿಆತ್ಮವಿಲ್ಲದ…
