Category: ಕಾವ್ಯಯಾನ

  • ಪ್ರೊ.ರಾಜಕುಮಾರ ಬಿ ಟಿ. ಅವರ  ಕವಿತೆ “ಮಾನವೀಯತೆ ಹರಿಕಾರರು”

    ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು”

    ಕಾವ್ಯ ಸಂಗಾತಿ ಪ್ರೊ.ರಾಜಕುಮಾರ ಬಿ ಟಿ. “ಮಾನವೀಯತೆ ಹರಿಕಾರರು” ಅವಿಭಕ್ತ ಕುಟುಂಬದಲಿ ಜನಿಸಿಅಸ್ಪೃಶ್ಯತಾ ಅಂಧಕಾರವನು ಅಳಿಸಿಜಾತೀಯತೆ ಹೊಡೆದೊಡಿಸಲುಜಾತ್ಯತೀತ ಭಾವ ಮೂಡಿಸಲು ಮೂಡಿಹರು ದಲಿತ ಸೂರ್ಯ’ರು -೧- ಅಸ್ಪೃಶ್ಯತೆಯ ಕಹಿಯನು ಉಂಡುಅವಮಾನದಿಕುಲುಮೆಯಲಿ ಬೆಂದುಬದುಕಿನ ಬವಣೆಗಳಲಿ ನೊಂದುಅಸಹಾಯಕತೆಯ ಕಣ್ಣಿರಲಿ ಮಿಂದುದೀನ-ದುರ್ಬಲರ ಧ್ವನಿಯಾಗಿಹರು  -೨- ಸಮಾನತೆಯ ಲೇಖನಿ ಹಿಡಿದುಸಮ ಸಮಾಜಕೆ ಸಂವಿಧಾನ’ವ ಬರೆದುಸರ್ವರಲೂ ಸಮಭಾವ ತಂದು  ಸಾಮಾಜಿಕ ನ್ಯಾಯವೆಂದು ಸಾರಿಹರು ಮಾನವತಾವಾದಿಆಗಿಹರು  -೩- ಅಕ್ಷರಗಳನು ಆಯುಧವಾಗಿರಿಸಿಅಂಧಶ್ರದ್ಧೆಗಳನು ಬೇಧಿಸಿಲೇಖನಿಯ ಮಸಿಕೋಟಿ-ಕೋಟಿ ಜನಗಳಿಗೆ ಬಿಸಿಎಂದಬ್ಬರಿಸಿ ಘರ್ಜಿಸಿದ ಭೀಮ’ರಿವರು -೪- ಅನಿಷ್ಟಗಳ ನಡುವಿಂದ ಸಿಡಿದುಅಜ್ಞಾನವ ದೈರ್ಯದಿ…

  • ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

    ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

    ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ   ಸುಮ್ಮನಿದ್ದುಬಿಡುಹೊರಟು ಬಿಡುಬುದ್ಧನಂತೆ ಎದ್ದು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು ಕೊಡವಿಕೊಂಡು ಬಿಡು  ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು  ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರು ಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುಇರಬಹುದು ನೂರೆಂಟು ಮಂದಿಬಿಟ್ಟು ಬಿಡು ಅವರಿವರ ಮಾತುಗಳಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೆ ಕರುಗುವರಿಲ್ಲಕರಗಲೆಂದು ಕಾಯುತ್ತ ಬೇಡಿಕೊಳ್ಳಬೇಡಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ…

  • ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ “ನಾನು ಅಪೂರ್ಣಳಲ್ಲ”

    ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ “ನಾನು ಅಪೂರ್ಣಳಲ್ಲ”

    ಕಾವ್ಯಸಂಗಾತಿ ಶಾಲಿನಿ ರುದ್ರಮುನಿ ಹುಬ್ಬಳ್ಳಿ “ನಾನು ಅಪೂರ್ಣಳಲ್ಲ” pic:gemini ನಾನು ಪರಿಪೂರ್ಣ ತಾಯಿ ಅಲ್ಲಈ ಒಪ್ಪಿಗೆನನ್ನ ಸೋಲಿನ ದನಿಯಂತು ಅಲ್ಲ!, ಬದುಕಿನ ಸತ್ಯದ ನಿಸ್ಸಂಶಯ ಮೌನದಿನವೆಲ್ಲಾ ಹರಿದಾಡುವಕ್ಷಣಗಳ ನಡುವೆ,ನನ್ನ ಉಸಿರು ಕೂಡಾ ಕೆಲಸದಲಯಗತಿಯಲ್ಲೆ ಸಾಗುತ್ತದೆ,ಕೈಗಳಲ್ಲಿ ಮನೆಯ ಒಪ್ಪ ಓರಣ,ಮನಸ್ಸಿನಲ್ಲಿ ನಿನ್ನ ನಾಳೆಗಳು!, ಕಣ್ಣುಗಳಲ್ಲಿ ಅನೇಕ ಪ್ರಶ್ನೆಗಳ ನೆರಳು,ಕೆಲವೊಮ್ಮೆಧ್ವನಿ ಎತ್ತರವಾಗುತ್ತದೆ,ಅದು ಕೋಪದ ಭಾಷೆಯಲ್ಲ,ದಣಿವಿನ ಅನುವಾದ, ಸಹನೆಯ ಹೂವಲ್ಲುಮುಳ್ಳಿನ ಕೊನೆ,ಆದರೂ, ಅದರ ಬೇರುಪ್ರೀತಿಯಲ್ಲೇ ನಾಟಿದೆ, ನನ್ನೊಳಗೆಒಂದು ನಿರಂತರ ಸಂಭಾಷಣೆ,“ಸಾಕ ನಾನು ?”“ಸಾಕ್ಷಮಳಾ ನಾನು?”ಈ ಪ್ರಶ್ನೆಗಳೇನನ್ನ ತಾಯಿತನದ ಪ್ರತಿದಿನದ ಪರೀಕ್ಷೆ.ಕೆಲ ಕ್ಷಣಗಳಲ್ಲಿನಾನು…

  • ಎ.ಹೇಮಗಂಗಾ ಅವರ ತನಗಗಳು

    ಎ.ಹೇಮಗಂಗಾ ಅವರ ತನಗಗಳು

    ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಕೆಂಡದಂತೆ ಕಾದಿದೆಪಲ್ಲಂಗವಿಂದು ನಲ್ಲಕಾರಣ ಈ ವಿರಹಗ್ರೀಷ್ಮ ಋತುವು ಅಲ್ಲ ಕದಪು ಕೆಂಪಾಗಿದೆಬಿಸಿ ಉಸಿರು ತಾಗಿನಲ್ಲ ಬಳಿ ಬರಲುತೋಳಲಿ ಬಳಸಲು ನಿನ್ನ ಅನುಪಸ್ಥಿತಿನಿತ್ಯವೂ ಕಾಡುತಿದೆಅತಿಯಾದ ಪ್ರೀತಿಯೇನನ್ನನ್ನು ಕೊಲ್ಲುತಿದೆ ಒಮ್ಮೊಮ್ಮೆ ಬಿಸಿಗಾಳಿಮಗದೊಮ್ಮೆ ತಂಗಾಳಿಹವೆ ಬಲು ಚಂಚಲಬಂಡೆ ಮಾತ್ರ ಅಚಲ ಮೈ ಶಾಖ ಹೆಚ್ಚಿಸಿದೆವೈಶಾಖದ ಬಿಸಿಲುಒಣಗಿ ಉದುರಿದೆಮರಗಳ ಟಿಸಿಲು ಊಟದಲಿ ಕೊಂಚವೂತಿಳಿಯುತ್ತಿಲ್ಲ ಸ್ವಾದಬಿಸಿಲ ತಾಪದಿಂದಮೊಗದ ತುಂಬ ಸ್ವೇದ ಬದುಕೀಗ ನರಕಹೆಚ್ಚಿದೆ ತಾಪಮಾನಕಾದ ಕಾವಲಿ ಭೂಮಿಕಾಣದಾದ ವರುಣ ತಡೆಯಬಲ್ಲೆ ನಾನುಬೇಸಿಗೆಯ ಈ ಧಗೆಸಹಿಸಲಾರೆ ಎಂದೂನಲ್ಲನಾದರೆ ಹಗೆ ಕೆರೆ…

  • ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ “ಮೌನದ ಆಲಾಪನೆ”

    ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ “ಮೌನದ ಆಲಾಪನೆ”

    ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ “ಮೌನದ ಆಲಾಪನೆ” ಒಲವು ಬಾಡಿತೇಕೆ ಹೇಳು ಮನವೇಬತ್ತಿ ಹೋದವೇ ಭಾವಗಳುನಲಿವ ಹೃದಯದ ಬಡಿತ ನಿಂತಿತೇಸೋತು ಸೊರಗಿದೆ  ಬಂಧಗಳು ಕಣ್ಣು ಕಣ್ಣಲಿ ಬೆಸೆದು ನೋಟವುಹೊಸತು ಲೋಕವ ಕಟ್ಟಿದೆಮಣ್ಣು ಮಾಡಿದೆ ಎದೆಯ ಕನಸನುಪ್ರೇಮದರಮನೆ ಕುಸಿದಿದೆ ಮಾತು ಬಾರದ ಮೂಕ ಹಕ್ಕಿಯತೆರದಿ ಜೀವನವಾಗಿದೆತಂತಿ ಹರಿದ ಜೀವ ನಾದದಲಿಮೌನದ ಆಲಾಪನೆ ಕೇಳಿದೆ ಬಾಳ ಪಯಣದಿ ಆಸರೆ ಇಲ್ಲದೆಬಾಡಿ ಹೋಗಿದೆ ಬಯಕೆಯುಓಡಿ ಬರುವೆಯಾ ಒಮ್ಮೆಯಾದರೂಕೊನೆಗೆ ನೋಡುವಾಸೆಯು ಅನುರಾಧಾ ರಾಜೀವ್ ಸುರತ್ಕಲ್

  • ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಅಪ್ಪನ ಶವ ನಕ್ಕಿತಲ್ಲ.!”

    ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಅಪ್ಪನ ಶವ ನಕ್ಕಿತಲ್ಲ.!”

    ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಅಪ್ಪನ ಶವ ನಕ್ಕಿತಲ್ಲ.!” ಅಪ್ಪನಿಗೆ ತನ್ನ ಮಕ್ಕಳು ಎಂದಿಗೂಭಾರ ಅನಿಸಲೆ ಇಲ್ಲ.ಅದ್ಯಾಕೋ ಅಪ್ಪ ಮಕ್ಕಳಿಗೆಭಾರವಾಗಿ ಬಿಟ್ಟ………… ಆರು ಹೆತ್ತರೂ ತನ್ನ ಮಕ್ಕಳಿಗೆ ಏನುಕೊರತೆಯಾಗದಂತೆ ಸಾಕಿದನಲ್ಲಅದ್ಯಾಕೋ ಅಪ್ಪನ ಸಾಕೋಕೆಮಕ್ಕಳಿಗೆ ಹಣದ ಕೊರತೆ ಆಯಿತಲ್ಲ………. ಎರಡೆರಡು ತಿಂಗಳಿಗೊಮ್ಮೆ ಒಬ್ಬೊಬ್ಬರುಜೋಪಾನ ಮಾಡುವರಲ್ಲಆಸ್ತಿಯ ಹಂಚಿಕೊಂಡಂತೆ ಅಪ್ಪನನ್ನೂಸಹ ಹಂಚಿಕೊಂಡು ಬಿಟ್ಚರಲ್ಲ………….. ಅಪ್ಪನ ಮಾನಸಿಕ ಸ್ಥಿತಿಯ ಪರಿವೆಅವರಿಗೆ ಆಗಲೆ ಇಲ್ಲಆದರೂ ಅಪ್ಪ ಎಲ್ಲ ಒಳಗೊಳಗೆನುಂಗಿದನಲ್ಲ…………… ಹೆಂಡತಿ ಇದ್ದಾಗ ನೋಡು ನನ್ನಮಕ್ಕಳನ್ನ ಅಂತಿದ್ದ ಬೀಗತಿದ್ದಅವಳಿಲ್ಲದಾಗ ಆತನೆ ಕುಗ್ಗಿದ್ದಹಾಸಿಗೆ ಹಿಡಿದ ದಿನದಿಂದಲೆ…

  • ವಾಣಿ ಯಡಹಳ್ಳಿಮಠ ಅವರ ಗಜಲ್

    ವಾಣಿ ಯಡಹಳ್ಳಿಮಠ ಅವರ ಗಜಲ್

    ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಮನದ ಮಗು ಹಠ ಮಾಡುವ ಮುನ್ನ ಬಂದುಬಿಡುನೊಂದು ಬಿಕ್ಕಿ ಅಳುವ ಮುನ್ನ ಬಂದುಬಿಡು ಇರಲಿ ಮೈಲುಗಟ್ಟಲೇ ಅಂತರ  ಇಬ್ಬರ ನಡುವೆ ನೆನಪು ನರಳುತ ಮಾಸುವ ಮುನ್ನ ಬಂದುಬಿಡು  ನನಗೂ ಇದೆ ಹಗಲು ದುಡಿಯುವ ಜವಾಬ್ದಾರಿಇರುಳ ಕನಸು ಸಾಯುವ ಮುನ್ನ ಬಂದುಬಿಡು ಜೊತೆ ಬಾಳುವ ಅವಕಾಶವೇ ಇಲ್ಲ ನಮಗೆಪ್ರೀತಿಯ ಎದೆಬಡಿತ ನಿಲ್ಲುವ ಮುನ್ನ ಬಂದುಬಿಡು ವಾಣಿಯ ಈ ಜನ್ಮವೆನೋ ಕಳೆಯುವುದು ವಿರಹದಿಮರುಜನ್ಮದಿ ಮತ್ಯಾರೋ ಕೈ ಹಿಡಿವ ಮುನ್ನ ಬಂದುಬಿಡು ವಾಣಿ ಯಡಹಳ್ಳಿಮಠ

  • ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

    ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

    ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ  ಬುದ್ಧನಂತೆ ಸುಮ್ಮನಿದ್ದುಬಿಡುಹೊರಟು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು  ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು  ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾ ನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರುಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುನೂರೆಂಟು ಮಂದಿ ಇರಬಹುದುಬಿಟ್ಟು ಬಿಡು ಮಂದಿಯ ಸಹವಾಸಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೂ ಕರುಗುವರಿಲ್ಲಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ ನೀನು ಆಸರೆಯಾಗಬೇಕುಕಾಲ ನಿಲ್ಲುವುದಿಲ್ಲನೀನು ನಿಂತರೆ…

  • ಡಾ ಡೋ ನಾ ವೆಂಕಟೇಶ ಕವಿತೆ “ಖುಷಿಯ ಆಸ್ತಿ”

    ಡಾ ಡೋ ನಾ ವೆಂಕಟೇಶ ಕವಿತೆ “ಖುಷಿಯ ಆಸ್ತಿ”

    ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಖುಷಿಯ ಆಸ್ತಿ” ಖುಷಿ ಮರೀಚಿಕೆಯಲ್ಲಮನಸು ಮರುಳುಗಾಡಲ್ಲ ಪುಟ್ಟಪುಟ್ಟ ಆಸೆಗಳುದೊಡ್ಡ ದೊಡ್ಡ ನಿರಾಸೆಗಳುಮಜಲುಗಳುಎಲ್ಲಾ ಗೋಜಲುಗಳ ಕುಸ್ತಿ ಈ ದಿನ ರವಿ ಪೂರ್ವದಲ್ಲಿರುವುದಕ್ಕೆ ಖುಷಿಯಾಗಿರು,ಈ ದಿನವೂ ಸಾಗರದಲ್ಲಿಉಬ್ಬರವಿಳಿತ ಕಂಡು ನಿಬ್ಬೆರಗಾಗು. ಇರುವ ಭಕ್ತಿ ಮೆರೆಸಲೂ ಖುಶಿಇಲ್ಲದಿರುವ ಆಸ್ತಿ ಮರೆಯಲೂ ಖುಶಿ ಖುಶಿ ಇರುವಷ್ಟಕ್ಕೆ ತೃಪ್ತಿಇಲ್ಲದಾಗಿದ್ದಷ್ಟಕ್ಕೆ ಖುಷಿಹುಟ್ಟಿದ್ದಕ್ಕೆ, ಇರುವಷ್ಟನ್ನೇ ಅನುಭವಿಸಿದ್ದಕ್ಕೆ,ಖುಷಿಯಾಗಿರು ಸದಾ. ಮುಷ್ಟಿಯಲ್ಲಿ, ಮನಸಲ್ಲಿಉಳಿದಷ್ಟಕ್ಕೆ ತೃಪ್ತಿಕನಸಲ್ಲಿ ಕಂಡದ್ದಕ್ಕೂ ತೃಪ್ತಿನನಸಲ್ಲಿಹೊಂದಿದ್ದಕ್ಕೂ ತೃಪ್ತಿ ತೃಪ್ತಿಯೇ ಖುಷಿಯ ಆಸ್ತಿ  ಡಾ ಡೋ ನಾ ವೆಂಕಟೇಶ

  • ಡಾ.ರೇಖಾ ಉದಯ್‌ ಅವರ ಗಜಲ್

    ಡಾ.ರೇಖಾ ಉದಯ್‌ ಅವರ ಗಜಲ್

    ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ನಿನ್ನೊಳಗಿನ ಸೆಳೆತಕ್ಕೆ ಸೋತಿದ್ದೇನೆ ಕವಿತೆನನ್ನೊಳಗಿನ ಭಾವನೆಗಳ ಹೇಳಿದ್ದೇನೆ ಕವಿತೆ ಸೋತು ಗೆದ್ದು ನನ್ನೊಳಗೆ ನೀನಾಗಿದ್ದೀಯಲ್ಲೇನಿನ್ನಿಂದ ನವೀರಾದ ಭಾವ ತಾಳಿದ್ದೇನೆ ಕವಿತೆ ದುಗುಡ  ದುಮ್ಮಾನಗಳ ಸರಸಿ ಆವರಿಸಿದ್ದಿಯಲ್ಲೇನೀನಿಲ್ಲದ ನಾನು ಶೂನ್ಯಳೆಂದು ಕೇಳಿದ್ದೇನೆ ಕವಿತೆ ಮುದುಡಿದ ಮನಸ್ಸಿಗೆ ಹೊಸ ಸಂಚಲನ ಮೂಡಿಸಿದೆನನ್ನಲ್ಲಿ ತಿಳಿಯದೆ ನೀ ಅವಿತದ್ದು ನೋಡಿದ್ದೇನೆ ಕವಿತೆ ಒಣಗಿದ ಮರದಲ್ಲಿ ಹೊಸ ಚಿಗುರ ಕಂಡಂತಾಗಿದೆರೇಖೂಳ ಮೇಲಿರುವ ಆ ಒಲವಿಗೆ ನಕ್ಕಿದ್ದೇನೆ ಕವಿತೆ ಡಾ.ರೇಖಾ ಉದಯ್

You cannot copy content of this page