ಲಕ್ಷ್ಮೀದೇವಿ ಪತ್ತಾರ,ಹೊಸ ವರ್ಷದ ಆಗಮನ
ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ, ಹೊಸ ವರ್ಷದ ಆಗಮನ ಬಲಗಾಲಿಟ್ಟು ಒಳಗೆ ಬಾಮದುಮಗಳಂತೆ ನವ ವರುಷಸೆಡಗರ ಸಂಭ್ರಮದಿ ನಿನಗೆ ಸ್ವಾಗತನಿನ್ನನಾಗಮನದಿಂದ ನಮಗಾಗುವುದು ಬಲು ಹರುಷ ಶುಭ ಶಕುನದ ರೂಪವಾಗಿ ಬರುತ್ತಿದೆಈ ಹೊಸ ವರುಷಎಲ್ಲೆಲ್ಲೂ ಇರುವ ರಾಮನುಅಯೋಧ್ಯೆಪುರದಲಿ ನೆಲೆಸುವನುಎಂತಹ ಅಪೂರ್ವ ರಸನಿಮಿಷ ! ನವಯುಗದ ಕಾಲ ಗುಣದಿಂದಎಲ್ಲೆಲ್ಲೂ ಶಾಂತಿ ಸೌಹಾರ್ದತೆ ನೆಲೆಸಲಿಸಮೃದ್ಧಿ ಮನೆ ಮಾಡಲಿಭಾರತಮಾತೆಗೆ ಮತ್ತಷ್ಟು ಬಲ ಬರಲಿಭಾರತೀಯರು ಎಲ್ಲೆಡೆ ಮೆರೆಯಲಿ ಹುಟ್ಟುವ ಪ್ರತಿ ಹೊಸ ವಿಷಯವಸ್ತುನಿರೀಕ್ಷೆ,ಆಕರ್ಷಣೆಯ ತುತ್ತುಆಕರ್ಷಣೆ , ನಿರೀಕ್ಷೆಯ ಕನಸುಉತ್ಸಾಹ ,ಉಲ್ಲಾಸ ಬದುಕಿನ ಸ್ವತ್ತು ಮುದ್ದು ಕಂದನಂತೆ ಅಂಬೆಗಾಲಿಟ್ಟುಬರುತ್ತಿರುವ ಹೊಸ ವರುಷವೆನಿನ್ನಿಂದ ಎಲ್ಲರ ಮನೆಮನಗಳುಆನಂದ ,ಸಂಭ್ರಮ ,ಸಮೃದ್ಧಿಯ ಗೂಡಾಗಲಿ. ಲಕ್ಷ್ಮೀದೇವಿ ಪತ್ತಾರ
ಲಕ್ಷ್ಮೀದೇವಿ ಪತ್ತಾರ,ಹೊಸ ವರ್ಷದ ಆಗಮನ Read Post »









