ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಮಲಾರುಣ ಪಡ್ಡoಬೈಲ್ ಕವಿತೆ-ಮುಕ್ಕಾಗದಿರಲಿ

ಮುತ್ತುಗದೆಲೆಯ ಒಂದೊಂದೇ ಜೋಡಿಸುತಿಹಳು
ನವ ವರುಷದ
ನೂರಾರು ಕನಸು ಗುರಿಗಳ
ರಾಶಿ ಹಾಕಲು

ತೂತು ಬಿದ್ದ ಎಲೆಗೆ
ನಾಜೂಕಿನಿಂದ ತೇಪೆ ಹಾಕುತಿಹಳು
ಒಲುಮೆಯ ಮಾತು
ಸೋರಿ ಹೋಗಬಾರದೆಂದು

ಉರುಳಿದ ವರುಷದ ಹೃದಯ ಗವಿಯಲ್ಲಿದ್ದ
ಮುಕ್ಕಾದ ಎಲೆಗಳ ಕಿರಣಕ್ಕೊಡ್ಡಿಹಳು
ಸವರಿ ಸವರಿ ಒದರಿ ಒದರಿ
ವ್ಯರ್ಥವಾಗದ್ದನ್ನು ಆರಿಸುತಿಹಳು
ನವ ವರುಷಕೆ ಕಾಪಿಡಲು

ಮುಕ್ಕಾದೆಲೆಗಳ
ದುಃಖ ದುಮ್ಮಾನದೊಂದಿಗೆ
ಬೆಂಕಿಗಾಹುತಿ ಮಾಡಿ
ಶಾಂತವಾದ ಮನದಿ ನಿಟ್ಟುಸಿರಿಟ್ಟಳು

ಪಣತೊಟ್ಟಳು ಸುತ್ತಲು ಮಾರ್ದನಿಸಿತು
ತನ್ನ ಕನಸಿನ ಮುತ್ತುಗದೆಲೆ ಮುಕ್ಕಾಗದಂತೆ
ತಿಳಿವಿನ ಬೆಳಕಲ್ಲಿ ಸಂಚರಿಸುತ್ತಿಹಳು
ನವನವೀನ ಗುರಿಯೊಂದಿಗೆ
ವರುಷದ ಹರುಷದೊಂದಿಗೆ…

ವಿಮಲಾರುಣ ಪಡ್ಡoಬೈಲ್

ವಿಮಲಾರುಣ ಪಡ್ಡoಬೈಲ್ ಕವಿತೆ-ಮುಕ್ಕಾಗದಿರಲಿ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕಕವಿತೆ-ಅನಾಗತ

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಅನಾಗತ ಅನಾಗತ ದಿನಗಳ ಕುಣಿತತಲೆಯಲ್ಲಿ ನೂರು ಭಾವ ಭವಿತಮಾತು ಕೃತಿ ನಗು ಅಳುಎಲ್ಲವೂ ಸುತ್ತಿದ ಮಿಳಿತಒಂದಿಷ್ಟು ಅನುಭವ ಅನುಭಾವಸೇರಿದರೆ ನಾಲ್ಕು ದಿನಕೆ ಉಳಿಕೆಕಳೆದದ್ದು ಹೆಚ್ಚು ಪಡೆದದ್ದು ಕಡಿಮೆಎಲ್ಲಾ ಮುಗಿದರೆ ನಾಳೆ ಚಿಂತೆಅರ್ಥ ಅನರ್ಥಗಳ ಪ್ರಶ್ನೆ ಉತ್ತರಕೊನೆಗೊಮ್ಮೆ ನಮ್ಮದೇ ಸಾಂತ್ವನಬರಲಿರುವ ದಿನಗಳ ಕುತೂಹಲಏಕೆ ಹೇಗೆ ಎಂದರೂ ನಿರ್ದಿಷ್ಟವಿಲ್ಲಬದುಕೆಂದರೆ ಎಲ್ಲವೂ ಸುಪ್ತಅಂತರಂಗದಿ ಕುಳಿತು ನಗುವ ಭಾವಸರಿಸುಮಾರು ಮಾತು ಜೀವಂತಇರಲು ಇರದಿರಲು ಜೀವದ ಧಾವಂತಸ್ಪಷ್ಟ ಹೆಜ್ಜೆಗೆ ಅದರದೇ ಉತ್ತರಕಾಯುವುದು ಬದುಕಿನ ಕಾತರದಿನ ಕ್ಷಣಗಳ ಉಲ್ಲಸಿತ ಮನಬರಲಿ ಬರವಿಲ್ಲದ ಸಂತಸದ ದಿನ ನಾಗರಾಜ ಬಿ.ನಾಯ್ಕ

ನಾಗರಾಜ ಬಿ.ನಾಯ್ಕಕವಿತೆ-ಅನಾಗತ Read Post »

You cannot copy content of this page

Scroll to Top