ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ”
ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಬಚ್ಚಿಟ್ಟುಕೋ” ಎದೆಯೊಳಗೆ ನನ್ನ ಬಚ್ಚಿಟ್ಟುಕೊ,ಉಸಿರ ಪಿಸುಮಾತ ಹಾಗೆ,ಕಣ್ಣಿನಲಿ ನನ್ನ ಕಾಯ್ದಿರಿಸಿಕೊ, ರೆಪ್ಪೆಗಳ ಕಾವಲ ಹಾಗೆ ನನ್ನೆಲ್ಲ ನೋವುಗಳ ಮರೆಸಿಬಿಡು, ನಿನ್ನೊಂದು ಕಿರುನಗೆಯಲಿ,ಮತ್ತೆ ಹುಟ್ಟಿ ಬರುವೆ ನಾನು, ಮುಂಜಾವಿನ ಹೊಸ ಕಿರಣದ ಹಾಗೆ ಹೃದಯದ ಈ ಬಡಿತದಲಿ ಕೇಳಿಸಲಿ ಬರೀ ನಿನ್ನದೇ ಹೆಸರುಜೊತೆಯಾಗಿ ನಡೆದು ಬರುವೆ ನಾನು, ನಿನ್ನ ನೆರಳಿನ ಹಾಗೆ ಜಗದ ಈ ಜಂಜಾಟದಲಿ ನಾ ಕಳೆದು ಹೋದರೂ ಚಿಂತೆಯಿಲ್ಲಮರಳಿ ಸೇರುವೆ ನಿನ್ನ ಮಡಿಲನು, ಸಂಜೆಯ ಹಕ್ಕಿಯ ಹಾಗೆ ಬರೆಯುವೆ ನಿನ್ನ ಪ್ರೀತಿಯ ಹೆಸರ ಪುಟ ಪುಟದ ಸಾಲಿನಲಿಅಳಿಯದಂತೆ ಉಳಿದುಬಿಡು ನೀನು, ಕವಿತೆಯ ಮೌನದ ಹಾಗೆ … ಡಾ ವಿಜಯಲಕ್ಷ್ಮಿ ಪುಟ್ಟಿ
ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ” Read Post »









