ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ”
ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಅನುಬಂಧ” ಕಾಣದ ದಾರಿಯಲ್ಲಿಬೆಸೆದ ನಂಟು,ಹೆಸರಿಲ್ಲದರೂ ಹೃದಯಕ್ಕೆಪರಿಚಿತವಾದ ಬಂಧ…ಕಾಲದ ಹೊಳೆ ಹರಿದರೂಕಳೆಯದ ಗುರುತು, ಗಂಟುಅದು ಅನುಬಂಧ.ಮೌನದಲ್ಲೂ ಮಾತಾಡುವಸಂಬಂಧ, ಬಂಧ..ಕಣ್ಣಂಚಿನ ನೀರನ್ನೂಓದುತ್ತದೆ ಒರೆಸುತ್ತದೆ.ಹೃದಯ ಮುರಿದುನೊಂದ ಕ್ಷಣದಲ್ಲಿಅದೃಶ್ಯವಾಗಿ ಕೈಹಿಡಿದುಕೊಳ್ಳುತ್ತದೆ.ಮಣ್ಣಿನ ವಾಸನೆಯಂತೆಸಹಜ,ಬೆಳಗಿನ ಬೆಳಕಿನಂತೆಮೃದುವು.ನಗುವಿನಲ್ಲೂ, ನೋವಿನಲ್ಲೂಉಸಿರಾಡುವ ನಂಟು.ತಾಯಿ–ಮಗುವಿನಹಸಿರು ಪ್ರೀತಿಯಂತೆಸ್ನೇಹಿತರ ನಿಷ್ಕಪಟ ನಗು,ಗುರುವಿನ ಮಾರ್ಗದರ್ಶನ,ಅಸ್ಪಷ್ಟ ಮೌನಅನುಬಂಧದ ಬೇರೆ ಬೇರೆರೂಪಗಳು ಒಂದೇಕಾಲ ದೂರಸಿದರೂ,ಸ್ಮೃತಿ ಪಟದಲ್ಲಿ ಹತ್ತಿರ.ದೇಹಗಳು ದೂರವಾದರೂ,ಮನಗಳು ಒಡಲಿನಂತೆಬಿರುಗಾಳಿಯಲ್ಲಿ ಮರವನ್ನೆತ್ತಿದಬೇರುಗಳಂತೆ, ಗಟ್ಟಿಎತ್ತುವ ಶಕ್ತಿಯೇ ಅನುಬಂಧ.ಜಗತ್ತು ಕೈಬಿಟ್ಟ ಸಂದರ್ಭದಲ್ಲಿಉಳಿಸುವ ನಂಬಿಕೆ.ಅನುಬಂಧವೆಂದರೆಸಂಬಂಧವಲ್ಲ,ಬದುಕಿಗೆ ಅರ್ಥನೀಡುವ ಭಾವನೆ.ನಮ್ಮನ್ನು ನಾವುಗುರುತಿಸುವ ಕನ್ನಡಿ,ಜೀವನದ ದೀರ್ಘಪಯಣದಲ್ಲಿ ಜೊತೆಯಾದ ನೆರಳು.ಅರಿಯದಿದ್ದರೂ,ಮೌಲ್ಯ ಗೊತ್ತಾಗುವುದು.ಅದಕ್ಕಾಗಿಯೇ ಅನುಬಂಧ…ಹೃದಯದೊಳಗೆ ಮೌನವಾಗಿ ,ಹೂ ಬಿಡುವ ಅಮೂಲ್ಯ ವರ. ಡಾ ತಾರಾ ಬಿ ಎನ್ ಧಾರವಾಡ.
ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ” Read Post »









