ಇಂದಿರಾ ಮೋಟೆಬೆನ್ನೂರ ಕವಿತೆ, “ಪ್ರೀತಿಸಿದ ತಪ್ಪಿಗೆ..”
ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಪ್ರೀತಿಸಿದ ತಪ್ಪಿಗೆ..” ಇಂದು ಈ ಮುಸ್ಸಂಜೆಯಲಿ….ಯಾರೋ ಎಲ್ಲೋಪ್ರೀತಿಸುವ ಹೃದಯಕೆನೋವುಣಿಸಿರಬೇಕು…ಅಕಾಲದಲ್ಲಿ ಆಕಾಶ್ಆರ್ಭಟಿಸಿ ಭೋರ್ಗರೆದುಹೀಗೆ ಸುರಿಯಬೇಕಾದರೆ…ಸದ್ದಿಲ್ಲದೇ ಒಡೆದಎದೆ ತುಣುಕುಗಳುಮುಗಿಲಲಿ ಶೋಕಗೀತೆನುಡಿಸುತಿವೆ…. ಯಾರೋ ಎಲ್ಲೋಹೂವಂತ ಮನಸನುಮಾತಿನ ಮುಳ್ಳುಗಳಿಂದಚುಚ್ಚಿ ನೋಯಿಸಿರಬೇಕು…ಹೆಪ್ಪುಗಟ್ಟಿದ ದುಃಖಕಪ್ಪು ಮೋಡದ ಒಡಲಬಗೆದು ಭೋರೆಂದುಭುವಿಯ ಅಪ್ಪುತಿದೆ… ಯಾರೋ ಎಲ್ಲೋಸ್ನೇಹ ತುಂಬಿದ ಕಂಗಳಿಗೆಅಪಮಾನ ಆಪಾದನೆಪಟ್ಟಿ ಕಟ್ಟಿರಬೇಕು….ಗರಬಡೆದ ಮುಗಿಲೂ ದುಃಖಿಸಿಬಿಕ್ಕಿಸಳುತ ಮುತ್ತುಮಳೆಸುತ್ತ ಸುರಿಸುತಿದೆ ನೋಡು.. ತಪ್ಪು ಮಾಡದ ಜೀವಬಿಟ್ಟ ಬಿಸಿಯುಸಿರ ಕಾವಿಗೆಸುಟ್ಟು ಸುಡುವ ಸೂರ್ಯನೇ ನಲುಗಿ ಮರೆಯಾಗಿ ಹೋದ….ಹೂಹೃದಯ ಒಡೆದು ಚೂರಾಗಿದೆಬಿರುಮಾತಿನ ಬಾಣಗಳಿಗೆ…ಪ್ರೀತಿಸಿದ ತಪ್ಪಿಗೆ….. ಇಂದಿರಾ ಮೋಟೆಬೆನ್ನೂರ
ಇಂದಿರಾ ಮೋಟೆಬೆನ್ನೂರ ಕವಿತೆ, “ಪ್ರೀತಿಸಿದ ತಪ್ಪಿಗೆ..” Read Post »









