“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ
ಕಾವ್ಯ ಸಂಗಾತಿ “ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ ನೆರಳು ಕೊಡದ ಅಪ್ಪನೆಂಬಆಲದ ಮರನೆರಳು ಕೊಡದಿದ್ದರೂಬೇಸಿಗೆಯ ಬರಡಾಗಿ ಮಧ್ಯೆ ನಿಂತಿರುವಆಲದ ಮರದಂತೆನಮ್ಮ ಅಪ್ಪಬಿಸಿಲಿಗೆ ಸುಟ್ಟು ಬಿಸಿನಲಿ ಬೆಂದುಮಳೆಯಿಲ್ಲದೆ ಒಣಗಿಬೇರುಗಳಲ್ಲಿ ನೋವು ಕಟ್ಟಿಕೊಂಡುನಿಂತವನು.ನಮಗೆ ನೆರಳು ಬೇಕಿತ್ತು,ಅವನಿಗೆ ಮಾತ್ರಆಕಾಶದಷ್ಟು ಹೊಣೆ.ಮಾತಾಡಲಿಲ್ಲ,ಅಳಲಿಲ್ಲ,ತನ್ನ ಹಸಿವನ್ನುರಾತ್ರಿಯ ಕತ್ತಲಲ್ಲಿ ಮುಚ್ಚಿಟ್ಟುಕೊಂಡುಬೆಳಗಿನ ಬೆಳಕಿಗೆನಮ್ಮ ಕನಸುಗಳನ್ನು ಎತ್ತಿಕೊಟ್ಟವನು.ಎಲೆಗಳಿಲ್ಲದ ಕೊಂಬೆಗಳ ಮೇಲೆನಮ್ಮ ನಾಳೆಗಳನ್ನೇ ಕಟ್ಟಿಕೊಂಡುಬಿರುಗಾಳಿಗೂ ಎದುರಾಗಿಅಚಲವಾಗಿ ನಿಂತವನು.ನೆರಳು ಸಿಗದಿದ್ದಕ್ಕೆನಾವು ಅವನನ್ನು ತಪ್ಪು ತಿಳಿದೆವು,ಆದರೆನೆಲದೊಳಗೆ ಅವನುನಮಗಾಗಿ ಹರಿಸಿದ್ದಅದೆಷ್ಟು ಮೌನವಾದ ಶ್ರಮ!ನೀರಿಲ್ಲದ ಆಲದ ಮರದಂತೆಅವನ ಪ್ರೀತಿಗೂಹೆಸರು ಇರಲಿಲ್ಲ,ಬಣ್ಣವೂ ಇರಲಿಲ್ಲ,ಆದರೆಅದು ಜೀವ ಉಳಿಸುವ ಬೇರು.ಇಂದು ನಾವುಎತ್ತರಕ್ಕೆ ಬೆಳೆದಾಗಹಿಂದೆ ನೋಡಿದರೆನೆರಳು ಕಾಣುವುದಿಲ್ಲ,ಆದರೆನೆಲದೊಳಗೆ ಕೈ ಹಾಕಿದರೆಅಪ್ಪನ ತ್ಯಾಗಇನ್ನೂ ತೇವವಾಗಿಯೇ ಇದೆ.ನೆರಳು ಕೊಡದ ಅಪ್ಪನೆಂಬ ಆಲದ ಮರ—ಬೀಳದೆ ನಿಂತುಬೇರೂರಿನಮ್ಮ ಬದುಕನ್ನೇತುಂಬಿಸಿಕೊಂಡವನು. ಡಾ ತಾರಾ ಬಿ ಎನ್ ಧಾರವಾಡ
“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ Read Post »









