ಕಾವ್ಯ ಸಂಗಾತಿ ಶ್ರೀನಿವಾಸ ಕೆ.ಎಂ ಎರಡು ಕವಿತೆಗಳು ಕವಿತೆ-೧ ಕುರುಡು ನಂಬಿಕೆನಿನ್ನಲ್ಲಿ ಮನೆ ಮಾಡಿಸಂಶಯ ಹುತ್ತಗಟ್ಟಿಸುರುಳಿ ಸುತ್ತಿ ಸುಳಿದಾಡಿದೆನಿನ್ನ ಸುತ್ತ.. ಹುಸಿ ಮಾತಿಗೆ ಕಿವಿಗೊಟ್ಟುಆಲಿಸುವ ರಿಸೀವರ್‌ಗಳಮಾತಿಗೆ ಮರಳಾಗುವಮಾಯ ಬಜಾರಿನ ಜಗತ್ತು, ಅಜ್ಜಿಗೆ ಅರಿವೆ ಚಿಂತೆಯಾದರೆಮೊಮ್ಮಗಳಿಗೆ ಮತ್ತೇನೋಚಿಂತೆ, ಮೈಕ್ ಇಲ್ಲದಸ್ಪೀಕರ್ ಗಳು ಕಿವಿಡೆಬ್ಬಿಸಿವೆ ಜಗವ ಕೇಳುವಂತೆ, ಇದ್ದ ಮೂರು ಜನರ ನಡುವೆಮಳ್ಳ ಬೆಕ್ಕಿನಂತೆ ನೋಡಿದ ಕಣ್ಣು,ಹಿತ್ತಾಳೆ ಕಿವಿಯಂತೆ ಆಲಿಸಿದ ಕಿವಿ,ಬೊಗಳೆ ಮಾತಿನ ಮನೆಯ ಕಟ್ಟಿದಬಾಯಿಯಲ್ಲವೇ? ನಿದ್ದೆಯಿಂದೆದ್ದ ಮನಸ್ಸಿಗೆ ತಿಳಿದಿದೆಕುರುಡು ನಂಬಿಕೆಯ ಬಟ್ಟೆ ಕಿತ್ತೆಸೆದುಸಂಶಯದ ಹುತ್ತವ ಕೆಡವಿನಂಬಿಕೆಯ ಮನೆಯಕಟ್ಟಬೇಕೆಂದು. ಕವಿತೆ-೨ ಅನುದಿನದಿ ಕುದಿವ ಮನದ ಬೇಗೆನಭದೆತ್ತರಕೆ ಚಿಮ್ಮುವ ಜ್ವಾಲಾಮುಖಿ, ಆಕ್ರೋಶದಿ ತುಡಿಯುವ ಮೂಕಮನಸ್ಸುಸಾಸಿವೆಯಷ್ಟು ಸಮಾಧಾನವಿಲ್ಲ, ಇಹಪರಗಳಾಚೆಗೂ ನಿಲುಕದ ಮಾಯೆತನ್ನೊಳಗೆ ಮನೆಯ ಮಾಡಿಗುಂಗಿ ಹುಳುವಿನಂತೆ ಕೊರೆದುಕಾಡಿ ಪೀಡಿಸುತಿದೆ, ತನ್ನೊಳಗೆ ಹುದುಗಿರುವ ಮಾಯೆಯಬಲೆಯ ಕಳಚಲು,ಅಟ್ಟ-ಬೆಟ್ಟಗಳ ದಾಟಿ,ಕಾಡು-ಕಣಿವೆಯ ಸುತ್ತಿ,ಬಟ್ಟ ಬಯಲನು ಇಳಿದುಮುನ್ನಡೆಯಬೇಕು, ಜಗದ ಕತ್ತಲ ಕಳೆಯಲುಅರಿವೆಂಬ ಹಣತೆಯಹೊತ್ತಿಸಲೇ ಬೇಕು. ಶ್ರೀನಿವಾಸ ಕೆ.ಎಂಕನ್ನಡ ಸಹಾಯಕ ಪ್ರಾಧ್ಯಾಪಕರುವೇದಾಂತ ಪದವಿ ಕಾಲೇಜು,ಬೆಂಗಳೂರು.