ಸುಮತಿ ನಿರಂಜನ ಅವರ ಕವಿತೆ “ದೂರದ ಪಯಣ”
ಕಾವ್ಯ ಸಂಗಾತಿ ಸುಮತಿ ನಿರಂಜನ “ದೂರದ ಪಯಣ” ಬಂದಿಹೆವು ಬಹುದೂರ ಗೆಳತೀನೋಡೊಮ್ಮೆ ಹಿಂದೆ…ಇದೆ ಹಾದಿಯಲಿ ಹಾದು ಹೋದವರು…ಜೀತದೆತ್ತುಗಳೂ ನಮ್ಮವಂತೆಯೆಘಣ ಘಣ ಗಂಟೆಯ ಮಾಲೆಘಮ ಘಮ ಮಲ್ಲಿಗೆ ಕೊರಳಲೆಅರಿಶಿನ ಕುಂಕುಮ ನೊಸಲಲಿಕೊಂಬಿಗೆ ಗೊಂಡೆಯ ಚೆಂಡು… ಒಳಗೆ…ಉಸಿರೊತ್ತುವ ವಜ್ರದ ನತ್ತುಕೊರಳೆಳೆವ ಮುತ್ತಿನ ಹಾರಕೈ ತುಂಬ ಬಳೆಭಾರಮಣ ಭಾರ ಒಡ್ಯಾಣಗುಟ್ಟು ಬಿಟ್ಟು ಕೊಡುವುದಣ್ಣಬೆಳ್ಳಿ ಬಿಗಿ ಕಾಲಂದುಗೆಕಳ್ಳ ಕಾಕರ ಭಯಮಾನನಷ್ಟದ ಭಯಸೊಲ್ಲೆತ್ತಿದರೆ ಗೋಣುಮುರಿವರೆನ್ನುವ ಭಯಪಟ್ಟೆಸೀರೆಯನುಟ್ಟು ಮುದುರಿಕುಳಿತವರು ಮೂಲೆಯಲಿಸೆರಗೊಳಗೆ ಸದ್ದಾಗದಂತ್ತವರುತಮ್ಮ ಸಾರ್ಥದ ಗಮ್ಯವೆತ್ತ ?ಉಸಿರೆತ್ತಿ ಕೇಳಲಾರದೆಹೊದ್ದ ಮುಸುಕಿನೊಳಗೆಕಾಲಕ್ಕೆ ಸಂದುಹೋದವರು ಇಂದು –ನಮಗಿಲ್ಲ ಒಡವೆ ಹೆಣ ಭಾರಬಿಚ್ಚು ನಗುವೆ ನಮ್ಮ ಕಂಠೀಹಾರಧೈರ್ಯ ಸ್ಥೈರ್ಯವೆ ಷೋಡಶ ಸಿಂಗಾರಕಾವ ದೇವರದು ವಿದ್ಯೆಬುದ್ಧಿಯ ಸಾರಹರಿದು ಬಂದೆವು ಗೆಳತೀಆ ಕಪ್ಪು ಭೀತಿಯ ಪರದೆಹೀರೋಣವೀ ಸ್ವಚ್ಛಂದ ಗಾಳಿಹೂಡೋಣ ನಮ್ಮ ಎತ್ತುಗಳ ನಾವೆಕಟ್ಟೋಣ ನಮ್ಮ ಇಹಪರಾರ್ಥವ ನಾವೆಸವೆಸೋಣ ಏರುಪೇರಿನ ದಾರಿಸೇರೋಣ ನಮ್ಮ ಗಂತವ್ಯ ನಾವೇ ಸುಮತಿ ನಿರಂಜನ
ಸುಮತಿ ನಿರಂಜನ ಅವರ ಕವಿತೆ “ದೂರದ ಪಯಣ” Read Post »









