ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಮನಾ ರಮಾನಂದ ಅವರ ಕವಿತೆ “ಮಲ್ಲಿಗೆಯ ಸವಿನುಡಿ”

ಕಾವ್ಯ ಸಂಗಾತಿ ಸುಮನಾ ರಮಾನಂದ “ಮಲ್ಲಿಗೆಯ ಸವಿನುಡಿ” ಮಾನಿನಿಯ ಆರೈಕೆಯಲರಳುವದುಂಡುಮಲ್ಲೆ ಹೂಗಳು ನಾವು..ಚಿಗುರ ಹಸಿರೆಲೆಯ ನಡುವಲಿರಾಣಿಯಂತೆ ಮೆರೆಯುವೆವು..!! ನಾಚಿಹ ನವವಧುವರರ ಕರದಲಿಕಟ್ಟಿದ ಮಾಲೆಯಾಗಿ ನಗುವೆವು..ಪೂಜಾವೇಳೆಯಲಿ ದೈವದಪಾದಾರವಿಂದದಿ ಧನ್ಯರಾಗಿಹೆವು!! ಮುಂಜಾವಲಿ ಹೂಮಾಲೆಯಾಗಿದೇವರ ಕೊರಳಲಿ ನಲಿವೆವು..ಹೆಂಗಳೆಯರ ಮುಡಿಯಲಲಂಕರಿಸಿ..ಮುಸಂಜೆಯಲಿ ನಲುಗುವೆವು!! ನಾವಿರುವ ಹೂಬನದ ಸುತ್ತಹರಡುತಲಿದೆ ನಮ್ಮ ಕಂಪು..ನಮ್ಮನು ಜಡೆಯಲಿರಿಸಿದ ನಲ್ಲನಕಂಡು ನಲ್ಲೆಯ ಕೆನ್ನೆ ಕೆಂಪು!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ ಅವರ ಕವಿತೆ “ಮಲ್ಲಿಗೆಯ ಸವಿನುಡಿ” Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಅಜ್ಞಾನಿ ಕೈಯಲ್ಲಿ ವಿಜ್ಞಾನ “

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ” ಅಜ್ಞಾನಿ ಕೈಯಲ್ಲಿ ವಿಜ್ಞಾನ “ ತಾಂತ್ರಿಕ ಯುಗದಲ್ಲಿಮನುಜ ಯಾಂತ್ರಿಕನಾಗಿಯಂತ್ರ ಮಾನವ ಸೃಷ್ಟಿಸಿಕುತಂತ್ರ ಜ್ಞಾನ ಬೆಳೆಸುತ್ತಿದ್ದಾನೆ ತಾತ್ವಿಕ ತಳದಿ ತಳ್ಳಿ ಹಾಕಿಮಾನವೀಯ ಮೌಲ್ಯಗಳ ಮರೆತುಸಂಚು ಮಾಡಿ ಹೊಂಚು ಹಾಕಿವಿಕೃತಿ ಮೆರೆಯುತ್ತಿದ್ದಾನೆ ವೈಚಾರಿಕತೆ ಇಲ್ಲದ ವಿಜ್ಞಾನಿಅಜ್ಞಾನದ ಅಂಧಕಾರದಲಿಅಪಾಯಕಾರಿ ಅನ್ವಸ್ತ್ರಗಳಿಂದನಾಗರಿಕತೆ ನಾಶಗೊಳಿಸುತ್ತಿದ್ದಾನೆ ಭಾವನೆಗಳನ್ನು ಬರುಡಾಗಿಸಿಅಧರ್ಮದ ಅಡ್ಡ ದಾರಿಯಲ್ಲಿದುರಾಸೆಯ ದಾಸನಾಗಿಧರ್ಮದ್ರೋಹಿಯಾಗುತ್ತಿದ್ದಾನೆ ವಿಜ್ಞಾನ ಅಜ್ಞಾನಕ್ಕೆ ಕಾರಣವಾಗಿಮಾನವತೆ ಮೌನವಾಗಿದೆಹೇಡಿಗಳ ಹಗೆತನದಿಂದಅಶಾಂತಿಯ ಸಮರ ಸಾರುತ್ತಿದೆ ವಿಜ್ಞಾನಿಗಳು ಸುಜ್ಞಾನಿಗಳಾಗಿವಿನಾಶ ತಡೆವ ವಿವೇಕಿಗಳಾಗಬೇಕಿದೆಸ್ವಾರ್ಥ ಬಿಟ್ಟು,ಪ್ರೇಮ ಕೊಟ್ಟುಸಾಮರಸ್ಯದ ಜಗವ ಬೆಳಗಬೇಕಿದೆ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಅಜ್ಞಾನಿ ಕೈಯಲ್ಲಿ ವಿಜ್ಞಾನ “ Read Post »

ಕಾವ್ಯಯಾನ, ನಿಮ್ಮೊಂದಿಗೆ

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಹೃದಯ ಒಡೆದಾಗ” ಹೃದಯ ಒಡೆದಾಗ ಪ್ರತಿಯೊಂದು ನೋವು ಒಲವಿನ ಕಥೆಗಳಾಗಿ ಮೂಡಿ ಬರುತ್ತವೆ;ಬಿಸಿ ಕಣ್ಣೀರಿನ ಹನಿಹನಿಯಲ್ಲು ಕುದಿಮೌನದ ಮಾತುಗಳೆ ಹರಿದು ನಿಲ್ಲುತ್ತವೆ! ಈ ಅಶಾಂತಿ, ಈ ಕಾತರ, ಈ ಅಸಹಾಯತೆಯ ನೆರಳಲ್ಲಿ ನೀನಿರುವೆ ನನ್ನೊಲವೆ;ಪ್ರೇಮದ ಪ್ರತಿಯೊಂದು ಸಾಕ್ಷಿ ಜೀವಂತ ಬೆದರು ಬೊಂಬೆಯಾಗಿ ಕುಣಿಯುತ್ತವೆ ಜೀವವೆ! ಪ್ರೇಮ ಮೌನ ಹೊದ್ದ ತುಟಿಗಳ ಮೇಲೆ ನಿಂತಿರುವ ಅಪೂರ್ಣ ಕನಸುಗಳ ದಾರಿಯದು;ಪ್ರೇಮಿಯ ಹೃದಯದ ಪ್ರತಿ ಬಡಿತವು ಮಳೆಯಿರದ ನದಿಯ ಹರಿವಿನಂತೆ ಸಾಗುವುದು! ಹೃದಯದ ಪುಸ್ತಕದ ಪ್ರತಿಯೊಂದು ನೆನಪಿನ ಪುಟಗಳ ನವಿರಾಗಿ ತಿರುಗಿಸುವುದು!ಪ್ರೀತಿ ಏಕಾಂಗಿಯಾಗಿ ಖಾಲಿ ಪ್ರತಿಧ್ವನಿಯಲ್ಲಿ ದುಃಸ್ವಪ್ನಗಳ ಕಂಡಂತೆ ಊಳಿಡುವುದು! ಭಗ್ನ ಪ್ರೇಮಿಯಷ್ಟೇ ಏಕಾಂತದ ನಿಶ್ಶಬ್ದದಲ್ಲಿ ತನ್ನೊಂದಿಗೇ ಮಾತಾಡುವುದು!ಭ್ರಮೆಯ ಮಾತುಗಳ ಪ್ರತಿ ಪದದಲ್ಲೂ ನಿನ್ನದೇ ನೆನಪು ಮಧುರವಾಗಿ ತುಳುಕುವುದು! ನಿನ್ನ ನೆನಪು ಹುಟ್ಟು ಮಚ್ಚೆಯಂತೆ ಬರಡು ಹೃದಯವನ್ನು ಸುದೀರ್ಘವಾಗಿ ಆಳುವುದು!ಕಣ್ಣೀರೇ ಒಲವಿನ ಭಾಷೆಯಾಗಿ ಪ್ರೇಮದ ಸಿಹಿಕಹಿಯ ಮುಚ್ಚುಮರೆಯಿಲ್ಲದೆ ಹಾಡುವುದು! ಪ್ರೀತಿಸಿದ ಹೃದಯ ವಿಚಿತ್ರ ಯಾತನೆಯ ಘಮಲು ಅದರ ಸ್ವಭಾವವೇ ಅರ್ಥವಾಗದು;ವಿರಹದ ಗಾಯದ ಉರಿಯನ್ನೆಲ್ಲ ನಿನ್ನ ಪ್ರೀತಿಯ ಗುರುತಿನ ಸ್ಮಾರಕವಾಗಿ ಸ್ಮರಿಸುವುದು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ತಂತಿ ಹರಿದ ವೀಣೆ” ತಂತಿ ಹರಿದ ವೀಣೆ ನಾನು,ಮೌನದೊಳಗೇ ನಾದ ನಾನು;ಮುರಿದ ಕನಸ ದಾರಿ ನಾನು,ನಡೆಯುತಿರುವ ಜೀವ ನಾನು. ಕತ್ತಲ ರಾತ್ರಿ ಜೊತೆಯಾದರೂ,ನಕ್ಷತ್ರದಂತೆ ಬೆಳಕು ನಾನು;ಕಣ್ಣೀರ ಹನಿಯ ಮಣ್ಣಿನೊಳಗೆ,ಮೊಳೆಯುತಿರುವ ಬೀಜ ನಾನು. ಗಾಳಿ ತಾಕಿದ ಕ್ಷಣದಲ್ಲೇ,ಮೌನವೇ ಮಧುರ ರಾಗ;ನೋವು ತಾಕಿದ ಹೃದಯದಲ್ಲೇ,ಹುಟ್ಟುತ್ತದೆ ಹೊಸ ನಾದ. ಮುರಿದ ತಂತಿ ಎಂದರೇನು,ನಾದ ಮಡಿಯುವುದಿಲ್ಲ;ಮುರಿದ ಮನಸು ಎಂದರೇನು,ಆಸೆ ಸಾಯುವುದಿಲ್ಲ. ಒಂದು ಹೂವಿನಿಂದ ವಸಂತವಿಲ್ಲ,ಒಂದು ನೆರಳಿಂದ ದಾರಿಯಿಲ್ಲ;ನೂರ ಕನಸು ಸೇರಿದಾಗಲೇ,ಜೀವನಕ್ಕೆ ಸೋಲಿಲ್ಲ. ಮಣ್ಣು ಕಲಿಸಿದ ಸಹನೆ ನಾನು,ಆಕಾಶ ಕೊಟ್ಟ ಕನಸು ನಾನು;ಹೊಳೆ ಹೇಳಿದ ಹರಿವು ನಾನು,ಗಾಳಿಯ ಮಧುರ ಸ್ಪರ್ಶ ನಾನು. ಹಳೆಯ ನೋವು ದೂರವಾದರೂ,ನೆನಪು ಆಗಿ ಉಳಿಯುತ್ತದೆ;ಹೊಸ ಬೆಳಕು ಬಂದಾಗಲೇ,ಬದುಕು ಮತ್ತೆ ನಗುತ್ತದೆ. ನೀ ನಡೆದ ದಾರಿ ನೆರಳಾದರೂ,ನನ್ನ ದಾರಿ ಬೆಳಕು ಆಗಲಿ;ತಂತಿ ಹರಿದ ವೀಣೆ ಆದರೂ,ನನ್ನ ನಾದ ಉಳಿದು ಹೋಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ” Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ನೋವಿನಲೂ ಸಹನೆಯ ವಹಿಸು ದಾಂಪತ್ಯಬಂಧವು ಮುರಿಯದಂತೆಜೀವನವ ಎದುರಿಸು ಕಷ್ಟ ಕಾರ್ಪಣ್ಯದಮಳೆಯು ಸುರಿಯದಂತೆ ಕವಿದಿಹ ಮೋಡಗಳು ಚದುರಿ ಓಡಲುಬಾನು ತಿಳಿಯಾಗದೇವಿವಾಹದ ಅರ್ಥವು ಪರಿಪಕ್ವವಾಗಿ ಬೆಸೆಯಲಿದೂರಕೆ ಸರಿಯದಂತೆ ಸವಿಯಲು ಬದುಕಿನ ಸಾರವ ಒಲುಮೆಉಕ್ಕಿ ಬರುವುದುಕೀವು ತುಂಬಿದ ಮನದ ಕೊಳೆಯನಿವಾರಿಸು ಉರಿಯದಂತೆ ಭಾವನೆಯ ಸಾಗರದಿ ಬೋರ್ಗರೆವ ಝರಿಯ  ಹತ್ತಿಕ್ಕುವ ಪ್ರಯತ್ನಜೀವನ್ಮುಖಿ ಮೌಲ್ಯದ ಬಗೆಗೆ ವಿವೇಚನೆವಾಸ್ತವ ಹರಿಯದಂತೆ ಅವಿನಾಭಾವ ಸಂಬಂಧ ಕಾಪಿಟ್ಟು ಕಾಯುವಜವಾಬ್ದಾರಿ ರಾಧೆಗೆಭವಿಷ್ಯದ ಚಿಂತನೆ ಮೂಡಲು ಮುನ್ನೆಚ್ಚರಿಕೆಸಂಘರ್ಷ ಬಿರಿಯದಂತೆ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ “ಯುದ್ಧಕ್ಕೆ ಗೆದ್ದಲು ಹಿಡಿಯಲಿ”

ಕಾವ್ಯ ಸಂಗಾತಿ ನಾಗೊಂಡಹಳ್ಳಿ ಸುನಿಲ್ “ಯುದ್ಧಕ್ಕೆ ಗೆದ್ದಲು ಹಿಡಿಯಲಿ” ಯುದ್ಧಕ್ಕೆ ಗೆದ್ದಲು ಹಿಡಿಯಲಿ ಸೋಲು ಗೆಲುವುಗಳಿಗೆಅಧಿಕಾರದ ಗದ್ದುಗೆಯ ಗದ್ದಲಗಳಿಗೆಗೆದ್ದಲು ಹಿಡಿಯಲಿಬುದ್ಧನನ್ನು ಮರೆತ ಈ ಯುದ್ಧಗಳಿಗೆಪಾಪ ಪ್ರಜ್ಞೆ ಕಾಡುತಿರಲಿ ಚಿಗುರುವ ಎಲೆಗಳ ಮೇಲೆರಕ್ತದ ಹನಿ ತೊಟ್ಟಿಕ್ಕುತ್ತಿದೆತೊಟ್ಟಿಲ ಕಂದಮ್ಮಗಳಿಗೂಸಾವಿನ ಬಾಗಿಲು ತಟ್ಟುತ್ತಿದೆ ನರಳಾಡುವ ಜೀವಗಳ ಮೇಲೆವಿಜಯ ಪತಾಕೆ ನಗುತ್ತಿರುವಾಗಗೆದ್ದವರ ಸಂಭ್ರಮದ ಕಣ್ಣುಗಳಲ್ಲಿಸೋತು ಸತ್ತವರ ಶಾಪಗಳೇ ಕಾಣುತ್ತಿವೆ ರೆಕ್ಕೆಯಿಲ್ಲದ ಹಕ್ಕಿಗಳುಕರುಗಳಿಲ್ಲದ ಗೋವುಗಳುರೆಂಬೆಗಳಿಲ್ಲದ ಮರಗಳುಇದೀಗ ಅಲ್ಲಿ ಎಲ್ಲವೂಬೋಳು ಬೋಳಾಗಿ ಕಾಣಿಸಿಕೊಳ್ಳುತ್ತಿವೆಹಸಿಗಾಯದ ನೋವಿನ ಊರಲ್ಲಿಬೆಂಕಿಯ ಮಳೆ ಸುರಿಯುತ್ತಿದೆ ಬಂದೂಕು ಬಾಂಬುಗಳ ಹೃದಯಗಳಿಗೆಪ್ರೇಮದ ಕಾಯಿಲೆ ಅಂಟಲಿಆತ್ಮವಿಲ್ಲದ ರಕ್ಕಸರಿಗೆರಕ್ತದ ದಾಹ ಕೊನೆಗೊಳ್ಳಲಿ        

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ “ಯುದ್ಧಕ್ಕೆ ಗೆದ್ದಲು ಹಿಡಿಯಲಿ” Read Post »

ಕಾವ್ಯಯಾನ

“ನೀನೊಂದು ಮುತ್ತು” ಕಲ್ಪನಾ ಎಸ್‌ ಪಾಟೀಲ ಕವಿತೆ

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ನೀನೊಂದು ಮುತ್ತು” ಮುತ್ತಿನಂತೆ ಮಿನುಗುವ ನಗು ನಿನ್ನದು ಗೆಳೆಯಮನದಾಳದಿ ಮೂಡಿದ ಸೌಂದರ್ಯ ನೀ ಗೆಳೆಯ ಸಾಗರದ ಗರ್ಭದಿ ಹುಟ್ಟಿದ ಅಮೂಲ್ಯ ರತ್ನ ನೀನುನನ್ನ ಹೃದಯದೊಳಗಿನ ಪ್ರೀತಿಯಂತೆ ಶುದ್ಧ ನೀನು ಕನಸಿನ ಕಿರಣದಲ್ಲಿ ಹೊಳೆಯುವ ಮುತ್ತಿನ ಹೊಳೆನಿನ್ನ ಕಂಗಳಲ್ಲಿ ಕಾಣುವ ಪ್ರೀತಿಯ ಮುತ್ತಿನ ಮಳೆ ನಿಶ್ಶಬ್ದದ ಮಾತುಗಳಲ್ಲಿ ಮೂಡುವ ಸೊಗಸಿದುಮುತ್ತಿನ ಲೆಕ್ಕ ಬಾಕಿ ಇಟ್ಟಿಹುದೇನು ನಿನ್ನ ಮನಸದು ಜೀವನ ಸಾಗರದಿ ನೀನೇ ನನ್ನ ಮೊದಲ ಮುತ್ತುನಿನ್ನ ಜೊತೆಗಿದ್ದರದೆ ಕಾವ್ಯಧರೆಗೆ ಸತ್ಯ ಸುಖವು ಕಲ್ಪನಾ ಎಸ್ ಪಾಟೀಲ

“ನೀನೊಂದು ಮುತ್ತು” ಕಲ್ಪನಾ ಎಸ್‌ ಪಾಟೀಲ ಕವಿತೆ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು”ಯುದ್ದ ನಿರ್ನಾಮ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಯುದ್ದ ನಿರ್ನಾಮ” ಮಾನ ಉಳಿಸಿ ದ್ವೇಷಅಳಿಸಲು ಕಾಲವಿನ್ನು ಬೇಕೇನು?ಪ್ರಾಣ ಹುಡುಕಿ ಕೊಂದವರಿಗೆಅಣ್ವಸ್ತ್ರದ ಬಳಕೆಯ ಅಗತ್ಯವೇನು? ನೊಂದ ಆ ಜೀವಗಳು ಶಾಂತಿಬಯಸಿ ಪ್ರತಿಭಟಿಸಿದ್ದು ತಪ್ಪೇನು?ಕೊಂದ ಪಾಪವು, ನೊಂದ ಹೆತ್ತವರಮನಸ್ಸಿನಾಳದ ಘಾಸಿಯನು ಅಳಿಸಿತ್ತೇ? ಹೊಗೆ, ಶಬ್ದ, ಬೆಂಕಿ, ಸೈರನ್‌ದ್ರೋನ್ ಕ್ಷಿಪಣಿಗಳ ನರ್ತನ ನಿಲ್ಲಿಸಿ,ಹಗೆ ಹಳೆಯ ಬಿಟ್ಟು ನಗೆಯ ಸೂಸಿರಿ,ಕೈಯ ಕುಲುಕಿ, ಶಾಂತಿಯ ಮರು ಸ್ಥಾಪಿಸಿ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು”ಯುದ್ದ ನಿರ್ನಾಮ” Read Post »

ಕಾವ್ಯಯಾನ

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ “ಜಮಾ-ಖರ್ಚು”

ಕಾವ್ಯ ಸಂಗಾತಿ ಕೆ.ಬಿ.ವೀರಲಿಂಗನಗೌಡ್ರ ಅವರ “ಜಮಾ-ಖರ್ಚು” ಅವರುನನ್ನನ್ನು ಕಳೆದುಕೊಂಡರುಕಳೆದುಕೊಳ್ಳುವ ನಡಾವಳಿಯನ್ನುಹಿಂದಿನ ರಾತ್ರಿಯೇ ಬರೆದುಕೊಂಡಿದ್ದರುಬೆಳಗು ನನ್ನ ಪಾಲಿಗಷ್ಟೇ ಕಾರ್ಗತ್ತಲಾಗಿತ್ತು ಅವರುನಾಯಿಯಂತೆಬಾಲ ಅಲ್ಲಾಡಿಸಿಕೊಂಡುಬಾಗಿಲಿಗೆ ಬಂದು ನಿಂತೇ ನಿಲ್ತಾನೆನಾವು ಕಳೆದರೂ ಅವ ಕೂಡ್ತಾನೆಂದು ನಡಾವಳಿ ದಿನವೇ ಲೆಕ್ಕಾಚಾರವಾಗಿತ್ತಂತೆ ಅವರುಆಲಯದಿಂದ ದಬ್ಬಿದರುಬಯಲಲಿ ಅಣ್ಣ ಅಕ್ಕ ತಬ್ಬಿದರುತಬ್ಬಲಿತನ ನನಗಂತೂ ಕಾಡಲಿಲ್ಲಕಾಡು ಕಡಲು ಹಾಡು ಸಂತೈಸಿದವು ಅವರುಕಳೆದುಕೊಳ್ಳದಿದ್ದರೆಕೂಡಿಕೊಳ್ಳುವ ಪ್ರೀತಿಯನ್ನುಅಕ್ಷರಶಃ ನಾನು ಅನುಭವಿಸುತ್ತಿರಲಿಲ್ಲಬುದ್ಧ ಬಸವರು ಅರ್ಥವೂ ಆಗತಿರಲಿಲ್ಲ ಇಷ್ಟೇಅವರುಬುದ್ಧಿವಂತರುನನ್ನನ್ನು ಕಳೆದುಕೊಳ್ಳಲುತುಂಬಾ ಬುದ್ಧಿ ಖರ್ಚು ಮಾಡಿದ್ದಾರೆದೇವರು ಅವರಿಗೆ ಅಷ್ಟೂ ಜಮೆ ಮಾಡಲಿನನ್ನಂತಹವರನ್ನು ಮತ್ತೆ ಮತ್ತೆ ಕಳೆದುಕೊಳ್ಳಲಿ. ಕೆ.ಬಿ.ವೀರಲಿಂಗನಗೌಡ್ರ.

ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ “ಜಮಾ-ಖರ್ಚು” Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ ಕವಿತೆ “ಪ್ರೀತಿಸದಿರು..ಜಾತಿಯನೇ ಪ್ರೀತಿಸು”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ “ಪ್ರೀತಿಸದಿರು..ಜಾತಿಯನೇ ಪ್ರೀತಿಸು” ಅನಿವಾರ್ಯ ಇದ್ದರೆಅತ್ತು ಬಿಡುಮನದ ಭಾವಗಳಅದೆಷ್ಟು ಹೊತ್ತು‌ಹಿಡಿದಿಡುವಿ ಇಲ್ಲಿ ಒಲವೆಂಬುದುಅಳುವ ಕಲಿಸುವಪಾಠಶಾಲೆಒಲವಿನಲಿ‌ ಇದ್ದವರನುಎಲ್ಲರೂಕೊನೆಗೆ ಹೆತ್ತವರೂಅಳಿಸುವವರೇ ಅದಾವ ಕಾಲದ ದುರ್ದೈವವೋದೇವರುಗಳ   ಶಾಪವೋಇಲ್ಲಿನ ದೇವರುಗಳೂನೂರೊ ,ಹತ್ತೋ‌, ಕನಿಷ್ಠಇಬ್ಬಿಬ್ಬರನ್ನಾದರೂಮದುವೆಯಾಗುವದನ್ನುಒಪ್ಪಿವೆ ಮನದಲಿ ಒಲಿದವರನ್ನುಮೆಚ್ಚುವದು ಎದೆಯಲಿಟ್ಟುಪ್ರೀತಿಸುವದನುತಿರಸ್ಕರಿಸಿವೆ ಒಲಿದ ಕಾರಣಕ್ಕಾಗಿಹೆತ್ತ ಮಕ್ಕಳನ್ನೇನೇಣಿಗೆ ಹಾಕುವವರುಮರ್ಯಾದಾ ಹತ್ಯೆಯಹೆಸರಲ್ಲಿ ಕೊಲ್ಲುವವರೂಇದ್ದಾರೆಜೀವ ಕೊಟ್ಟಾದರೂಜಾತಿ ಉಳಿಸುತ್ತಾರೆಜೀವ ಇಲ್ಲವಾಗಿಸುತ್ತಾರೆ ಈ ದೇಶ ಮನುಷ್ಯಮನುಷ್ಯರನ್ನುಪ್ರೀತಿಸುವ, ಒಲಿಯುವಕಲೆಯ ಕಲಿಸಲೇ ಇಲ್ಲ ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ ಕವಿತೆ “ಪ್ರೀತಿಸದಿರು..ಜಾತಿಯನೇ ಪ್ರೀತಿಸು” Read Post »

You cannot copy content of this page

Scroll to Top