Category: ಕಾವ್ಯಯಾನ

  •  ಮಧು ವಸ್ತ್ರದ ಅವರ ಗಜಲ್               

     ಮಧು ವಸ್ತ್ರದ ಅವರ ಗಜಲ್               

    ಕಾವ್ಯ ಸಂಗಾತಿ  ಮಧು ವಸ್ತ್ರದ ಗಜಲ್                ವೈಶಾಖದ ಶಾಖದಿ ಬಳಲಿ ತಪಿತಳಾಗಿಹ ಮಹಾಇಳೆಗೆ ತಂಪನು ನೀಡಲು ಬಾ ಮುಂಗಾರು ಮಳೆಯೇವಿಶಾಖದ ಹಿಂಗಾರು ಬರುವವರೆಗೂ ಮೆರೆವ ಭುವಿಯ ಚೆಲುವ ನೋಡಲು ಬಾ ಮುಂಗಾರು ಮಳೆಯೇ ಅಂಜೂರ,ಖರ್ಜೂರದ ಮರಗಳು ಚಿಗುರನೊಡೆಯದೆ ನಿನ್ನ ಆಗಮನದ ನಿರೀಕ್ಷೆಯಲಿ ಕುಳಿತಿಹವುಬಂಜರು ಭಾವದಿ ನೊಂದಿಹ ‌ಹೊಲಗದ್ದೆಗೆ ಅಮೃತ ಸಿಂಚನ ಮಾಡಲು ಬಾ ಮುಂಗಾರು ಮಳೆಯೇ ಬತ್ತಿ ತಳ ಕಾಣುತಿರುವ ಕೆರೆ ಬಾವಿಗಳಲ್ಲಿ ಮತ್ತೆ ಹೊಸ ಚೈತನ್ಯಜಲವ…

  • ವಾಣಿ ಯಡಹಳ್ಳಿಮಠ ಅವರ ಗಜಲ್

    ವಾಣಿ ಯಡಹಳ್ಳಿಮಠ ಅವರ ಗಜಲ್

    ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ಅರುಣಾ ಮೇಡಂ ಅವರ ಗಜಲ್ ನಿಂದ ಪ್ರೇರಿತ ) ಅಂತರವಿದ್ದರೂ ಅಂತರಂಗ ಸೇರುವ ನಿನ್ನ ಕಲೆಗೆ ಏನೆನ್ನಲಿಇರುಳಾದರೆ ಕಣ್ಣ ಸೇರಿ ಕನಸಾಗುವ ಪರಿಗೆ ಏನೆನ್ನಲಿ ನಾ ನೋಡಿದರೇ, ನಾನೇ ಕಾಣಿಸಬೇಕಲ್ಲವೇ ಸಾಕಿದರ್ಪಣದಿ ನೀ, ನನ್ನ ಪ್ರತಿಬಿಂಬವಾಗುವ ಪ್ರೀತಿಗೆ ಏನೆನ್ನಲಿ ಮೌನವೂ,ಪದಗಳಾಗಿ ಮನ ಸೇರಲು ಹಪಹಪಿಸುವವೇನನ್ನ ಏಕಾಂತಕೆ,ನೀ ದನಿಯಾಗುವ ನಡೆಗೆ ಏನೆನ್ನಲಿ ಪ್ರತಿ ನೋವಿಗೂ ಹಕೀಮನಲ್ಲಿ ಔಷಧಿಯಿರುವುದಿಲ್ಲ ನಿಜನೀ ಕಾಣದ ಗಾಯಗಳನೂ ಮಾಯಿಸುವ ಮೋಡಿಗೆ ಏನೆನ್ನಲಿ ಬಿಸಿಲಿಗೆ ವಾಣಿ ನಿಂತರೇ,ನೀ ಬೆವರುವೆಯಾ…

  • “ನಮಗ ಮಳೆ ಯಾಕ ಬೇಕು” ಡಾ.ಶಿವಕುಮಾರ್ ಮಾಲಿಪಾಟೀಲ

    “ನಮಗ ಮಳೆ ಯಾಕ ಬೇಕು” ಡಾ.ಶಿವಕುಮಾರ್ ಮಾಲಿಪಾಟೀಲ

    ಕಾವ್ಯ ಸಂಗಾತಿ ಡಾ.ಶಿವಕುಮಾರ್ ಮಾಲಿಪಾಟೀಲ “ನಮಗ ಮಳೆ ಯಾಕ ಬೇಕು” *ಫಲವತ್ತಾದ ಭೂಮಿ ರಿಯಲ್ ಎಸ್ಟೇಟ್ ಮಾಡಿವಿ**ಹೊಲ ಗದ್ದೆ ಮುಚ್ಚಿ ಬಂಗಲೆ ,ಬಾರ್ ಕಟ್ಟಿವಿ**ಕೆರೆ,ಬಾವಿ ಮುಚ್ಚಿ ಮೆಟ್ರೋಮಾಲ್ ಕಟ್ಟಿವಿ**ಇನ್ವೆಸ್ಟ್ ಕರ್ನಾಟಕ ಹೆಸರಲ್ಲಿ ಬಂಡವಾಳ ಶಾಹಿಗಳಿಗೆ  ಸಾವಿರಾರು ಎಕರೆ ಭೂಮಿ ಕೊಟ್ಟಿವಿ ಹಿಂಗಿದ್ದಾಗ**ನಮಗ ಮಳೆ ಯಾಕೆ ಬೇಕು?*  *ವಿಂಡ್ ಪ್ಯಾನ್ , ಸೋಲಾರ್*,*ರಿಯಲ್ ಎಸ್ಟೇಟ್ , ರೇಸಾಲ್ಟ್ ಫ್ಯಾಕ್ಟರಿಗಳ ಹೆಸರಲಿ ಹೊಲ ಬರಡು ಮಾಡಿವಿ**ಅಭಿವೃದ್ಧಿ ಹೆಸರಲ್ಲಿ ಸಿಕ್ಕ ಸಿಕ್ಕಂಗ ಗಿಡ ಮರಗಳ ಕಡದಿವಿ**ಹಿಂಗಿದ್ದಾಗ  ನಮಗ ಮಳೆ ಯಾಕೆ ಬೇಕು?*…

  • ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು”

    ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು”

    ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ನಮ್ಮ ಬದುಕೆಂಬ ಬಾನು” ಅಪ್ಪಾ ಹಗಲಿನ ಸೂರ್ಯನಂತೆ ,ಸಲಿಗೆ , ಸಾಮೀಪ್ಯ ಇರದ ,ಹತ್ತಿರ ಹೋಗಲು ಒಂದು ರೀತಿಯ ಭೀತಿ ,ಮಾತಿನಲ್ಲಿ ಬಿಗಿಯಾದ ಗತ್ತು , ಗಾಂಭೀರ್ಯ.ಒಮ್ಮೆ ತಣ್ಣಗಿನ ಮುಖ ಛಾಯೆ ,ಮರು ಘಳಿಗೆ ಕೆಂಡಾಮಂಡಲ ,ಆದರೂ ಅವನಿಲ್ಲದೆ ಬಾನು ಇಲ್ಲಬದುಕು ಇಲ್ಲ……. ಅವ್ವಾ ರಾತ್ರಿಯ ಚಂದಿರನಂತೆ ,ಸದಾ ಸುಸೂವ ಚಂದ್ರಿಕೆಯ ತಂಪು ,ಮಂದವಾಗಿ ಬೆಳಗುವಳು ನಿರಂತರ .ಎಂದೂ ಕುಪಿತಳಾಗದ ಹಸನ್ಮುಖಿ ,ಮಕ್ಕಳನು ಮುದ್ದಿಸಿ , ಬಾಚಿ ತಬ್ಬುವಳು ,ಅಪ್ಪಾ ಇದ್ದಾಗ…

  • ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು”

    ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು”

    ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ಪ್ರೀತಿಯ ಬಾಹುಗಳು!ನದಿಗಳು” ತಮ್ಮ ಹರಿವಿನ ದಾರಿಯಲ್ಲಿ ಸಿಕ್ಕಪ್ರತಿಯೊಂದರ ದಾಹವನ್ನೂ ತಣಿಸುತ್ತಾಪ್ರತಿ ತೀರವನ್ನೂ ಸ್ಪರ್ಶಿಸುತ್ತಾಮುಂದೆ ಸಾಗುವವು ನದಿಗಳು!ತಮ್ಮ ನೀರ ತುಳಿದು ಆಡಿದವರಕುಡಿದು ಉಗಿದವರತೆಗೆದುಕೊಂಡು ಬಳಸಿಕೊಂಡವರ ಲೆಕ್ಕವಿಡುವುದಿಲ್ಲ! ನಾವು ನದಿಗಳ ಆಳವನ್ನು ಅರಿಯದೆಅವುಗಳ ಉದಾರತೆಯನ್ನೇ ಉದಾಸೀನ ಮಾಡಿಮಮತೆಯನ್ನೇ ಮೈಲಿಗೆ ಮಾಡಿದುರುಪಯೋಗಪಡಿಸಿಕೊಳ್ಳುತ್ತೇವೆ! ಒಂದು ಕಾಲದಲ್ಲಿಚೀರುತ್ತಾ ಹಾಡುತ್ತ ಹಾರುತ್ತ ಹರಿಯುತ್ತಿದ್ದ ನದಿಒಳಗೊಳಗೇ ಕುಸಿಯುತ್ತಾ ಕುದಿಯುತ್ತಾ ಕರಗುತ್ತಾಮೌನವಾಗಿಬಿಡುತ್ತದೆ! ಅತ್ಯಂತ ದಯೆಯುಳ್ಳ ಹೃದಯಗಳಿಗುದಣಿವು ಆಗುತ್ತದೆ!ಅದು ಅಸಹಾಯಕತೆ ಕೋಪದನಿರ್ಬಲತೆ ನಿರಾಸೆಯ ದಣಿವಲ್ಲ!ಯಾರನ್ನೂ ದ್ವೇಷಿಸದ ದಣಿವು!ಯಾರನ್ನು ಬೇಸರಿಸದ ದಣಿವು!ಯಾರನ್ನು ಹಚ್ಚಿಕೊಳ್ಳದ ದಣಿವು!ಯಾರನ್ನು ಅಪ್ಪಿಕೊಳ್ಳದ…

  • ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ”

    ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ”

    ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಏಕೈಕ ಜೀವ, ನನ್ನಪ್ಪ” Background ನಲ್ಲಿ ಅಳುವನಮ್ಮ ಮುಂದೆ ನಗುತ ಇರುವಏಕೈಕ ಜೀವ ಅದೇ ಅಪ್ಪ… ಆತನ ಬೆವರ ಹನಿ ಕಾಣ್ತದಆದ್ರ ಆತನ ಕಣ್ಣೀರ ಹನಿಯಾರಿಗೂ ಕಾಣದು… ತನ್ನವರ ಮೊಗದ ಮೇಲಿನನಗುವ ಕಂಡು ನಗುತಲಿರುವತನ್ನ ನೋವನೆಂದು ತೋರಿಸದವ… ಉಸಿರು ಕೊಟ್ಟ ಜೀವಕೆ ಹೆಸರುಕೊಟ್ಟ ಹೃದಯ ಅವನ ಹೆಸರೆಹೆಮ್ಮೆಯದು ಮಕ್ಕಳಿಗೆ… ಈ ಒಂದಿನ ಸಾಕೇನು ಮಾಡಲುಅಪ್ಪನ ಗುಣಗಾನ ಈ ಕಾಲ ಸಾಲದುಪಡೆಯಬೇಕು ಮರುಜನ್ಮಾನ… ಈ ಅಕ್ಷರಗಳಿಗೆ ಹೋಲಿಸಲಾಗದವನಮ್ಮ ಭಾವಕ್ಕೂ ನಿಲುಕದವಆಗಸದಗಲ ವಿಶಾಲ…

  • ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ ಅವರ ಕವಿತೆ “ನನ್ನೊಲವೇ….”

    ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ ಅವರ ಕವಿತೆ “ನನ್ನೊಲವೇ….”

    ಕಾವ್ಯ ಸಂಗಾತಿ ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ “ನನ್ನೊಲವೇ….” ನಿನ್ನ ಪ್ರೀತಿಯ ಹಂಸವೇ ನಾನುನಿನ್ನ ಮುಗುಳ್ನಗೆಯ ಬೆಳಕೇ ಚೆಂದನಮ್ಮ ಒಡನಾಟದ ಒಲವೇ ಅಂದ// ಎದೆಯ ಗೂಡಿನ ಉಸಿರೇ ನೀನುನಿನ್ನ ನೆರಳಲಿ ಬೆರೆತಿರುವೆ  ನಾನುಕಣ್ಣ ಸನ್ನೆಯ ಸವಿಯೇ ಹೊಸತುನಿನ್ನೋಲವ ಸುಖವೇ ಅಮೃತವು// ನನ್ನ ಬಾಳಿಗೆ ನೀನೇ ಬೆಳಕುನಿನ್ನ ಪ್ರೀತಿಯೇ ನನಗೆ ಬೆರಗುಕಾಲ ಕಳೆಯಲಿ ನಿನ್ನೊಡನೆ ನಡೆಯುತಜೀವ ಸಾಗಲಿ ನಿನ್ನನ್ನೇ ನಂಬುತ// ನೂರು ವಸಂತ ನಗುತಾ ಬಾಳುನನ್ನ ಪ್ರೀತಿಯ ಮುದ್ದಿನ ಜೇನುಹುಟ್ಟು ಹಬ್ಬದ ಶುಭಾಶಯಗಳುಕಣ್ಣಲ್ಲೇ ಮಾತನಾಡುವ ಜಾಣನಿಗೆ // ರುತಿ (ರುದ್ರಮ್ಮ…

  • ಸವಿತ ಅವರ ಕವಿತೆ “ಮೊಬೈಲೆಂಬ ಮಾರಿ”

    ಸವಿತ ಅವರ ಕವಿತೆ “ಮೊಬೈಲೆಂಬ ಮಾರಿ”

    ಕಾವ್ಯ ಸಂಗಾತಿ ಸವಿತ “ಮೊಬೈಲೆಂಬ ಮಾರಿ” ಹಗುರವಾಗಲೆಂದು ಹೆಗಲೇರಿದ ಭಾರವನ್ನೆಲ್ಲ ನಾವಿಂದುಎ.ಆಯ್. ಬೆನ್ನ ಮೇಲೆ ಏರಿಸಿದ್ದೇವೆ . ಸಿಗಲಾರದ ಸುಖವನ್ನು ಆಧುನಿಕತೆಯ ಸೋಗಿನಲ್ಲಿ ನಾವು ನಮ್ಮಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆ. ಸೆಣಸಾಡಿ ,ಗ್ರಹಣ ಹಿಡಿದ ಮನಸ್ಸನ್ನುಶೋಚನೀಯ ಸ್ಥಿತಿಯಲ್ಲಿ ಅದುಮಿಟ್ಟಿದ್ದೇವೆ. ದಿನದ ಕ್ಷಣ -ಕ್ಷಣಗಳನ್ನುಕಣ್ಣು ಕೆಂಪಾಗುವಂತೆ ಮೊಬೈಲ್ ಬಳಕೆಯಲ್ಲಿ ಬಳಸುತ್ತಿದ್ದೇವೆ. ದಣಿದಾಗಲೂ ಕಣ್ಣುಗಳಿಗೆ ಸಾಂತ್ವನ ಹೇಳದೆ ಇನ್ನೂಇನ್ನೂ ದುಡಿಸುತಿದ್ದೇವೆ. ಹೊಸ ವಿಷಯ, ಹೊಸ ಆಲೋಚನೆಗಳನ್ನು ಹೊಸ ಆಯಾಮದೊಳಗೆ ಪಡೆಯಲು ಸಂತೋಷವೇ!! ಆದರೆ….ಹಿಂದಿನ ಸಂಸ್ಕಾರ ಪರಂಪರೆಗಳನ್ನು ಸದ್ದಿಲ್ಲದೆ ಮಂಗಮಾಯ ಮಾಡುತ್ತಿದ್ದೇವೆ. ತಾಂತ್ರಿಕತೆ ಬೇಕು…

  • ಅನ್ನಪೂರ್ಣ ಸು ಸಕ್ರೋಜಿ ಕವಿತೆ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…”

    ಅನ್ನಪೂರ್ಣ ಸು ಸಕ್ರೋಜಿ ಕವಿತೆ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…”

    ಕಾವ್ಯ ಸಂಗಾತಿ ಅನ್ನಪೂರ್ಣ ಸು ಸಕ್ರೋಜಿ “ನನ್ನ ಅಪ್ಪ… ಮಕ್ಕಳ ಅಪ್ಪ… ಮೊಮ್ಮಕ್ಕಳ ಅಪ್ಪ…”   *ಒಂದೇ ಪ್ರೀತಿಯ ಪಯಣದ* *ಮೂರು ಸುಂದರ ಅಧ್ಯಾಯಗಳು* ನನ್ನ ಅಪ್ಪ,ನನ್ನ ಮಕ್ಕಳ ಅಪ್ಪ,ನನ್ನ ಮೊಮ್ಮಕ್ಕಳ ಅಪ್ಪ. ಸಂಸ್ಕಾರವಂತ ನನ್ನಪ್ಪ ಮೂಲ ಬೇರುಸದ್ಗುಣವಂತ ನನ್ನ ಮಕ್ಕಳ ಅಪ್ಪ ಗುರುಬುದ್ಧಿವಂತರು ಮೊಮ್ಮಕ್ಕಳ ಅಪ್ಪಂದಿರುಸೌಭಾಗ್ಯವಂತೆ ನಾ ಕಂಡ ಪುರುಷರು|| ಅಪ್ಪ ಸುಂದರ ಭವಿಷ್ಯಬೀಜ ಬಿತ್ತಿದರುಪತಿಯು ಕನಸುಗಳಿಗೆ ರೆಕ್ಕೆ ಕಟ್ಟಿದರುಮಗ ಅಳಿಯಂದಿರು ಸಾಕಾರಿಸಿದರುಪುಣ್ಯವಂತೆ  ನಾ ಕಂಡ ಪುರುಷರು|| ನನ್ನಪ್ಪ ನೀತಿ ತ್ಯಾಗದ ಮಹಾಸಾಗರ,ಮಕ್ಕಳ ಅಪ್ಪ ಸತ್ಯ ಪ್ರೀತಿಯ ಆಗರಮೊಮ್ಮಕ್ಕಳ…

  • ಹಮೀದ್‌ ಹಸನ್‌ ಮಾಡೂರು ಕವಿತೆ “ನಮ್ಮಪ್ಪ”

    ಹಮೀದ್‌ ಹಸನ್‌ ಮಾಡೂರು ಕವಿತೆ “ನಮ್ಮಪ್ಪ”

    ಕಾವ್ಯ ಸಂಗಾತಿ ಹಮೀದ್‌ ಹಸನ್‌ ಮಾಡೂರು “ನಮ್ಮಪ್ಪ” ಬೆಳಿಗ್ಗೆ ಎದ್ದು—–ಮನೆ ಬಿಟ್ಟು ಓಡುವನಿಜ ಯಜಮಾನನೇ ನಮ್ಮಪ್ಪ,!! ದುಡಿದು ನಿತ್ಯವೂ….ದನಿದು ಮನೆಗೆ ಬರುವನಿಜ ಮನೆದೊಡೆಯ ನಮ್ಮಪ್ಪ,!! ಶ್ರಮದ ಬೆವರ ಸುರಿಸಿ….ಕಷ್ಟ ಪರಿಶ್ರಮ ನಿತ್ಯ ಸಹಿಸಿದನಿಜ ಕರ್ಮಯೋಗಿಯೆ ನಮ್ಮಪ್ಪ,!! ಕುಟುಂಬ ಸಂಸಾರ…ಹೆಗಲಿಗೇರಿಸಿ ಹೊರಲಾರದಹೊಣೆ ಹೊತ್ತ ಸಾಧು ನಮ್ಮಪ್ಪ,!! ತನಗಾಗಿ ಸೂನ್ಯ….ತನ್ನವರಿಗಾಗಿ ತಾನು ಧನ್ಯನೆಂದತ್ಯಾಗಮಯಿ ಆ ಮಾಣಿಕ್ಯ ನಮ್ಮಪ್ಪ,!! ವೃದ್ಧಾಪ್ಯದಲಿ ಎಂದೂ…ಮರೆಯದಿರೋಣ ಆ ಹೆತ್ತವರ“ಮುತ್ತು ಮಾಣಿಕ್ಯ” ಸಮ ಅಪ್ಪಂದಿರ.!! ಹಮೀದ್ ಹಸನ್ ಮಾಡೂರು

You cannot copy content of this page