ಡಾ.ಮೀನಾಕ್ಷಿ ಪಾಟೀಲ್ ಅವರ ಕವಿತೆ “ಬಳಲುತಿದೆ ಭೂಮಿ”
ಕಾವ್ಯ ಸಂಗಾತಿ ಡಾ.ಮೀನಾಕ್ಷಿ ಪಾಟೀಲ್ “ಬಳಲುತಿದೆ ಭೂಮಿ” ಕಂಗೆಟ್ಟ ಭೂಮಿಗೆತಂಪೆರೆಯಬೇಕಾಗಿದೆಕೋಟಿ ಕೋಟಿ ಜನಬದುಕಬೇಕಾಗಿದೆಭೂಮಿ ಸುಡು ಸುಡು ಕೆಂಡವಾದರೆತಾಯಿಯ ಹಾಲೆ ನಂಜಾದಂತೆಇರುವುದು ಒಂದೇ ಭೂಮಿಬೇರಿಲ್ಲ ಕಾಣಿರೋ ಸತ್ಯವಚಂದ್ರನ ಮೇಲೆ ಇಳಿದಾಯಿತು.ಬರಿ ಬರಡೋ ಬರಡುಮಂಗಳ ಗುರು ಶನಿಗಳನ್ನೆಲ್ಲ ಸುತ್ತಿ ಆಯಿತುಎಲ್ಲೆಲ್ಲೂ ಜೀವದ ಸುಳಿವಿಲ್ಲಯಂತ್ರದೂತರುಸಕಲ ಗ್ರಹಗಳ ಸಂದೇಶವಿತ್ತರುಭೂಮಿಯಂತಹ ಸ್ವರ್ಗ ಮತ್ತೊಂದಿಲ್ಲಜೀವರಾಶಿ ತುಂಬಿ ತುಳುಕುವಧರೆಯನ್ನೀಗ ಕಾಪಿಟ್ಟುಕೊಳ್ಳಬೇಕುಜೀವದ ಉಸಿರಿಗೆಜೀವ ಜಲ ಸಿಂಚನವಾಗಬೇಕುಓ ಮನುಜ ಅತಿರೇಕದ ಬುದ್ಧಿ ಬೇಡಅತಿ ಆಧುನಿಕತೆಯ ಬೆನ್ನ ಹಿಂದೆ ಓಡಬೇಡಎಲ್ಲಿಯಾದರೂ ಯಾವಾಗಲಾದರೂಎಡವಿ ಬಿದ್ದೆನೆಂಬ ಎಚ್ಚರವಿರಲಿಕಾಡು ಬೆಳೆಸಬೇಕಿದೆಶಕ್ತಿಮೂಲಗಳ ದುರ್ಬಳಕೆ ನಿಲ್ಲಿಸಬೇಕಿದೆಭೂಮಿಗೆ ಭಾರವಾಗುವ ಪದಾರ್ಥಗಳನ್ನ ತ್ಯಜಿಸಬೇಕಿದೆ ವಿಜ್ಞಾನ ತಂತ್ರಜ್ಞಾನದ ಹೆಸರಿನಲ್ಲಿಭಯಾನಕ ಭವಿಷ್ಯವನ್ನುಕಟ್ಟ ಹೊರಟಿದ್ದೇವೆತಂತ್ರಜ್ಞಾನ ಮಂಡಿಯೂರಿದೆಅಣುಯುದ್ಧ ಬರಗಾಲ ದುಃಖ ದಾರಿದ್ರ್ಯಜನರ ಕಣ್ಣಲ್ಲಿ ಕಣ್ಣೀರಲ್ಲ ನೆತ್ತರುಜೀವಸಮತೋಲನವಿರಲಿಪ್ರಗತಿ ಇರಲಿಮಾರಕವಾಗದಂತಿರಲಿಮಾರ್ಗ ಬದಲಿಸೋಣವಿಚಾರಗಳು ಬದಲಾದಂತೆಜಗದ ಜೀವ ಸಂಕುಲಉಳಿಯಬೇಕುಭೂಮಿ ತಾಯಿಯ ಒಡಲುತಣ್ಣಗಾಗಬೇಕು ಡಾ.ಮೀನಾಕ್ಷಿ ಪಾಟೀಲ್
ಡಾ.ಮೀನಾಕ್ಷಿ ಪಾಟೀಲ್ ಅವರ ಕವಿತೆ “ಬಳಲುತಿದೆ ಭೂಮಿ” Read Post »









