ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ನ್ಯಾಯದ ಕೂಗು”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನ್ಯಾಯದ ಕೂಗು“ ಬಡಿಯೋಣ ನ್ಯಾಯದ ಕದಮೌನದ ಗೋಡೆ ಕುಸಿಯುವ ತನಕಮುಖವಾಡ ಧರಿಸಿದ ದ್ವಂದ್ವ ನೀತಿಗಳನಿಜಮುಖ ಬೆಳಕಿಗೆ ಬರುವ ತನಕ,! ಎಚ್ಚೆದ್ದು ಕೊಳ್ಳೋಣ….ನಿದ್ರಿಸಿದ ಮನಸ್ಸುಗಳನ್ನೆಬ್ಬಿಸಿಕಪಟದ ನೆರಳಲ್ಲಿ ಬೆಳೆದಶಾಂತಿ ಕದಿಯುವ ನೆರಳನ್ನು ಓಡಿಸಿ,! ಹೋರಾಡೋಣ….ಸುಳ್ಳಿನ ಬೀಜ ಬಿತ್ತುವ ಕಣಿವೆಗಳಲ್ಲಿದ್ವೇಷದ ಬೆಳೆ ಬೆಳೆಸುವನೀಚ ಶಕ್ತಿಗಳ ವಿರುದ್ಧ ಸಟೆದು ನಿಂತು,! ಧ್ವನಿಯಾಗೋಣ….ನಿಶ್ಯಬ್ದದ ಕಣ್ಣೀರು ಕೇಳುವ ಧ್ವನಿನ್ಯಾಯ ನೀತಿಯ ಹಾದಿಯಲಿ ನಡೆಯುವಶೋಷಿತ ಜನರ ನಂಬಿಕೆಯ ಪರವಿದ್ದು,! ಚಿಂತಿಸಿ ಬಾಳೋಣ…ಸತ್ಯದ ದೀಪ ಹಚ್ಚಿ ಹೆಜ್ಜೆ ಹಾಕಿಮೋಸದ ಜಾಲ ಹರಡುವ ಕೈಗಳನ್ನುಜ್ಞಾನದ ಬೆಳಕಿನಲ್ಲಿ ಕರಗಿಸಿ‌ ಬಿಡಲು.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ನ್ಯಾಯದ ಕೂಗು” Read Post »

ಕಾವ್ಯಯಾನ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಅವಳ ಮಡಿಲಲಿ ಮಲಗಿ ನೋವುಗಳ ಮರೆಯುವ ಹಂಬಲಅವಳ ಕಂಗಳಲಿ ನಕ್ಷತ್ರವಾಗಿ  ಹೊಳೆಯುವ ಹಂಬಲ ಮನದಲಿ ಅಡಗಿವೆ  ಹೇಳಲಾಗದ ನೂರು ಮಾತುಗಳುಅವಳ ಭಾವನೆಗಳಿಗೆ ರಾಗವಾಗಿ ಬೆರೆಯುವ ಹಂಬಲ ತಿಳಿ ಕೊಳಕೆ ಕಲ್ಲೆಸೆಯುವ ಜನಗಳೇ ಬಹಳ ಜಗದಲಿಅವಳ ಎದೆ ಕಡಲ ಅಲೆಗಳ ತಳಮಳ ಅರಿಯುವ ಹಂಬಲ  ಮದಿರೆ ತುಂಬಿದ  ಬಣ್ಣದ ಹೂಜಿಗಳು ಕರೆಯುತಿವೆ ಇಂದುಅವಳ  ಒಲವ ಕೈಯ ಅಮೃತ ತುತ್ತು ಪಡೆಯುವ ಹಂಬಲ ಮುಖವಾಡ ಧಾರಿಗಳ ಮಧ್ಯೆ  ಬಾಳು ಸಾಗಿದೆ ನೋಡುಅವಳ ಬದುಕಲಿ ಶಾಂತ ಪ್ರಭೆಯಾಗಿ ಉಳಿಯುವ ಹಂಬಲ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ಕೂಡಿಟ್ಟ ದುಃಖವ ಹೊರ ಹಾಕಿದ್ದೇನೆ ನೀ ಕಂಡ ಕ್ಷಣದಲ್ಲಿಹಿಡಿದಿಟ್ಟ ನೋವಿನಿಂದ ಅತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕು ಶೂನ್ಯತೆಯ ಭಾವ ಮರೆಸಿ ಹೊಸತನ ಮೂಡಿಸಿದೆ ಈಗನೀ ಬಿಟ್ಟ ಸವಿ ನೆನಪುಗಳಿಂದ ನಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಎಷ್ಟೋ ಮಾತುಗಳು ಹೇಳದೆ ಮೌನದಲ್ಲಿ ಮರೆಯಾಗಿವೆನೋಡಬಾರದೆಂದಾಗಲೇ ಸಿಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಆಗಸದ ನಕ್ಷತ್ರಕ್ಕೂ ಒಮ್ಮೊಮ್ಮೆ ಕರಿಛಾಯೆ ಬಿಳಬಹುದು ಉಸಿರು ಬಿಗಿ ಹಿಡಿದು ಬದುಕಿ ಸತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕಿನ ರಂಗಮಂದಿರದಲ್ಲಿ ಅವನೇ ಖಳನಾಯಕನಂತಾಗಿಹರೇಖೂ ಬಾಳ ನೌಕೆಯಲಿ ಗೆದ್ದು ಸೋತಿದ್ದೇನೆ ನೀ ಕಂಡ ಕ್ಷಣದಲ್ಲಿ ಡಾ.ರೇಖಾಉದಯ್

ಡಾ.ರೇಖಾ ಉದಯ್‌ ಅವರ ಗಜಲ್ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ ಕವಿತೆ “ಪ್ರೀತಿಯ ಸಾಲು”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಪ್ರೀತಿಯ ಸಾಲು” ಪ್ರತಿ ಸಾಲು ನಿನ್ನಲ್ಲಿ ಪ್ರೀತಿಯನೆ ಬೇಡುತಾಹಾಡುವೆ ಕೇಳು ನನ್ನದೇ ಹಾಡುಮನದಲ್ಲಿ ಇರಿಸಿದ ನೋವಿನ ಸಾಲುಹೇಳದೆ ನಿನಗೆ ಹಾಡಿದೆ ಕೇಳು ಅಂದೊಮ್ಮೆ ಬರೆದಿಹ ಪ್ರೇಮದ ಪತ್ರಓದದ ನೀನು ಆ ಪ್ರೀತಿಯ ಸಾಲುಬರೆದಂತ ಬರಹವು ನಗುತಲಿದೆ ಇಂದಿಗೂಹೇಳುವುದು ಹೇಗೆ ಓದದೆ ನೀನು ನೀ ಬಿರೋ ನಗುವಿನಲ್ಲಿ ಅದೇನಿಹುದೊ ಮಾಯೆಯೋಮಾತೆಂದೂ ಆಡದ ಆ ನಿನ್ನ ಛಾಯೆಯೋಆಸೆಗಳು ಮುಗಿಲೇರಿ ಸೇರಿದೆ ಮೋಡದಲ್ಲಿಆ ನಿನ್ನ ಛಾಯೆಯೂ ಮೂಡಿದೆ ಬಾನಿನಲ್ಲಿ ಕೊಡಲೇನು ನನಗೆ ಏನಿಹುದು ನಿನ್ನಲ್ಲಿಪ್ರೀತಿಯೊಂದೆ ಸಾಕು ಬದುಕಿನಲ್ಲಿಇರಲೇನು ನಾನು ನಿನ್ನವನಾಗಿಆ ನಿನ್ನ ಬಾಳಿನ ಜೀವವಾಗಿ ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ ಅವರ ಕವಿತೆ “ಪ್ರೀತಿಯ ಸಾಲು” Read Post »

ಕಾವ್ಯಯಾನ

ಪುಸ್ತಕದಿನದ ಅಂಗವಾಗಿ ಕವಿತೆ “ಅತ್ಮೀಯ ಸ್ನೇಹಿತೆ” ಅನ್ನಪೂರ್ಣ ಸಕ್ರೋಜಿ ಪುಣೆ

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ಅತ್ಮೀಯ ಸ್ನೇಹಿತೆ” ಹೊತ್ತು ಹೊತ್ತಿಗೆ ಸಲಹೆ ಕೊಡುವನನ್ನ ಆತ್ಮ ಸ್ನೇಹಿತೆ ನೀನುನಿನ್ನ ಅಂತರಂಗವರಿತಾಗ ಕೊಡುವನನ್ನ ಮುತ್ತಿಗೆ ಕಾಯುವೆ ನೀ// ಒಂಟಿತನದ ಜಾತ್ರೆಯಲಿ ಕೂಡಸಂಭ್ರಮಿಸುವಂತೆ ಮಾಡುವೆದಿನನಿತ್ಯ ನಿನ್ನ ಜೊತೆ ಮಾತಾಡಿಮಾತಿನಮಲ್ಲಿ ಮಾಡಿರುವೆ// ರಣ ಬಿಸಿಲಿನಲ್ಲಿ ನಾ ಬೆಂದಾಗಹೃದಯಕ್ಕೆ ತಂಪನೀಯುವೆಮಲ್ಲಿಗೆಯ ಪರಿಮಳ ಬೀರುತಕವಿಯ ಎದೆ ಅರಳಿಸುವೆ// ಶರಣರ ಸಂತರ ಜ್ಞಾನಿಗಳೆಲ್ಲರಸಾಹಿತ್ಯ ಪರಿಚಯಿಸುವೆತಂತ್ರಜ್ಞಾನ ವಿಜ್ಞಾನ ಸುಜ್ಞಾನಗಳಅರಿವು ಮೂಡಿಸುವೆ// ಭಗವದ್ಗೀತೆ ಭಾಗವತ ಇತಿಹಾಸವೇದಾಂತ ಉಪನಿಷತ್ತುಅಡುಗೆಅರಮನೆ ಸಂಗೀತ ಶಾಸ್ತ್ರಓದುವಾಗಿನ ಗಮ್ಮತ್ತು// ನಿನ್ನಲ್ಲಿಯ ಸಮಭಾವ ನನಗೆತುಂಬಾ ಇಷ್ಟ ಗೆಳತಿವರ್ಣ ವರ್ಗ ಲಿಂಗ ಜಾತಿ ಭೇದಇಲ್ಲದ ಎಲ್ಲರ ಗೆಳತಿ // ಕಥೆಯಾಗಿ ಕಾದಂಬರಿಯಾಗಿಮನವನಾಳುತಿರುವೆಅತೀ ಸಾಮಾನ್ಯ ಅನೂಳನ್ನುಕವಯಿತ್ರಿ ಮಾಡಿರುವೆ// ಬದುಕಿನ ಪಾಠ ನಿತ್ಯ ಕಲಿಸುವಪುಟ್ಟ ಜ್ಞಾನ ಹೊತ್ತಿಗೆ ನೀಸಾಧಕರಿಗೆ ಸಾಧನೆಯಾಗುತಲಿಪ್ರಖರ ಜ್ಞಾನ ದೀವಿಗೆ ನೀ// ಅನ್ನಪೂರ್ಣ ಸಕ್ರೋಜಿ ಪುಣೆ

ಪುಸ್ತಕದಿನದ ಅಂಗವಾಗಿ ಕವಿತೆ “ಅತ್ಮೀಯ ಸ್ನೇಹಿತೆ” ಅನ್ನಪೂರ್ಣ ಸಕ್ರೋಜಿ ಪುಣೆ Read Post »

ಕಾವ್ಯಯಾನ

ಡೋ ನಾ ವೆಂಕಟೇಶ ಅವರ ಕವಿತೆ “ಚೆಹರೆಯಿಲ್ಲದವರು”

ಕಾವ್ಯ ಸಂಗಾತಿ ಡೋ ನಾ ವೆಂಕಟೇಶ “ಚೆಹರೆಯಿಲ್ಲದವರು” pic:gemini ಮುಖವಾಡ ಹೊತ್ತವರು ಆಟ ಕಟ್ಟುವವರು ನಿಯಮಿತರುಮುಖವಾಡ ಇಲ್ಲದೇ ಮುಖವಾಡ ಹಾಕುವವರು ಅನಿಯಮಿತರು ಒಳಗೊಂದು ಬಣ್ಣವಿಲ್ಲದ ಬಣ್ಣಹೊರಗೆ ಹನ್ನೊಂದು ಸುಣ್ಣಬಣ್ಣ ಏನೆಂದು ಕುಣಿಯಲೀಈ ತಾಳಕ್ಕೆ  ಈ ಮೇಳಕ್ಕೆ ಬಂದಾಗ ಇರಲಿಲ್ಲ ಬಣ್ಣಹೋಗುವಾಗ ಬರೆ ನಿರ್ಬಣ್ಣ ಬಂದು ಹೋಗುವ ಮಧ್ಯೆಬರೆ ಮುಖವಾಡ ಗಳುಚೆಹರೆಯೇ ಇಲ್ಲದವರು! ಡೋ ನಾ ವೆಂಕಟೇಶ

ಡೋ ನಾ ವೆಂಕಟೇಶ ಅವರ ಕವಿತೆ “ಚೆಹರೆಯಿಲ್ಲದವರು” Read Post »

ಕಾವ್ಯಯಾನ

ಮಧು ‌ವಸ್ತ್ರದ “ನನ್ನತವರೂರು”

ಕಾವ್ಯ ಸಂಗಾತಿ ಮಧು ‌ವಸ್ತ್ರದ “ನನ್ನತವರೂರು” ನನ್ನ ತವರೂರು ದಿವ್ಯ ಭವ್ಯ ಇತಿಹಾಸದ ಸುಂದರ ಚಿತ್ರದುರ್ಗಕೋಟೆ, ಕಣಿವೆ‌, ಕೊತ್ತಳಗಳಿಂದ ಆವೃತಭುವಿಯ ಮೇಲಿನ ಸ್ವರ್ಗ.. ಕಲ್ಲುಬಂಡೆಗಳ‌, ಗಂಡುಗಲಿಗಳು ಆಳಿದವೀರರ ನಾಡುಬಯಲುಸೀಮೆಯ‌ ಬಿಸಿಲಿನಲೂ ತಂಪುನೀಡುವ ಬೀಡು.. ವೀರ ಮದಕರಿನಾಯಕರಾಳಿದ ಬಲಿಷ್ಠಉಕ್ಕಿನ ಕೋಟೆರಣಚಂಡಿ ಒನಕೆಓಬವ್ವ ರಕ್ಷಿಸಿದಳು ಆಡಿ ವೈರಿಗಳ ಬೇಟೆ ಮನ ಸೆಳೆವುದು ಇಲ್ಲಿನ ಆಡುಮಲ್ಲೇಶ್ವರ, ಚಂದ್ರವಳ್ಳಿಯ ತೋಟಅಪ್ರತಿಮವೆನಿಸುವುದು ಜೋಗಿಮಟ್ಟಿಯ ಮೇಲಿನ ರಮ್ಯನೋಟ.. ಮತ್ತೇರಿಸುವದು ಬೆಟ್ಟದ ಮೇಲಿನ ಕೆಂಡ ಸಂಪಿಗೆಯ ಕಂಪುಅದ್ಭುತವದು ಕಲ್ಲಿನ ತಣ್ಣೀರದೋಣಿಯಸಿಹಿನೀರ ತಂಪು.. ಉರುಮೆ, ತಮಟೆ, ಡೊಳ್ಳು, ಸೋಮ, ಮರಗಾಲಿನ ಕುಣಿತಬೇರೆಲ್ಲೂ ಕಾಣಸಿಗದು ಇಂತಹ ಅದ್ಭುತ ಜಾನಪದ ತುಡಿತ.. ಸಾಹಿತಿ ವೆಂಕಣ್ಣಯ್ಯ,ಕೃಷ್ಣಶರ್ಮ ತರಾಸು ಅವರಿಗೆ ಸರಿಸಾಟಿಯುಂಟೇಮನಗೆದ್ದ ಜನನಾಯಕ ನಿಜಲಿಂಗಪ್ಪನವರಅರಿಯದವರುಂಟೇ.. ವಿಷ್ಣು, ಅಂಬಿಯರಂಥ ನಟರತ್ನರನು ಚಿತ್ರರಂಗಕೆ ನೀಡಿದ ಹೆಮ್ಮೆದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲರಿಗೆ ಮರುಜನ್ಮವನಿತ್ತ ಹಿರಿಮೆ.. ಶಬ್ದಮಾಂತ್ರಿಕ ಬಿ ಎಲ್ ವೇಣು ದುರ್ಗದ ಕಥೆಯನಾಗಿಸಿಹರು ಜೀವಂತವೀರಭೂಮಿಯ ಗಂಧ ಪಸರಿಸಿಹ ಅವರಅದ್ಭುತ ಶೈಲಿ ಸದಾ ಜ್ವಲಂತ ಜೋಳದ ಮುದ್ದೆ ಸೊಪ್ಪಿನ ಸಾರು ಹಪ್ಪಳ ಉಪ್ಪಿನಕಾಯಿ ಊಟಪಂಚತಾರಾ ಹೋಟೆಲಿನಲೆಲ್ಲೂ ಸಿಗದಿಂಥಾ ಆತ್ಮೀಯ ಕೂಟ.. ನನ್ನ ತವರೂರು ದಿವ್ಯ ಭವ್ಯ ಇತಿಹಾಸದಸುಂದರ ಚಿತ್ರದುರ್ಗಕೋಟೆ, ಕಣಿವೆ‌, ಕೊತ್ತಳಗಳಿಂದ ಆವೃತಭುವಿಯ ಮೇಲಿನ ಸ್ವರ್ಗ.. ಮಧು ‌ವಸ್ತ್ರದ್     

ಮಧು ‌ವಸ್ತ್ರದ “ನನ್ನತವರೂರು” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯಸಂಗಾತಿ ಎಮ್ಮಾರ್ಕೆ ಅವರ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಶ್ರೀದೇವಿ. ಮ.ಗುಮ್ಮಗೋಳ ಅವರ ಕವಿತೆ “ಹಬ್ಬೆ ಜಲಪಾತ”

ಕಾವ್ಯ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಹಬ್ಬೆ ಜಲಪಾತ” ಹಬ್ಬೆ ನಿನ್ನ ನೋಡಿ ದಿಬ್ಬೆರಗಾದೆಎತ್ತರದಿಂದ ದುಮ್ಮುಕ್ಕುವ ನಿನ್ನ ಜಲದಾರೆ|ಹಾಲನೊರೆಯ ಪರದೆಯ ಪರಿಯುಸೊರೆ ಗೊಂಡಿಹುದು ಮನಸಾರೆ|| ಒರಟು ಕಲ್ಲು ಬಂಡೆ ಮೇಲೆ ಸ್ಪುರಿಸುವಮೃದು ಅಮೃತದ ಹಾಲಹೊಳೆ ಸಂತೆ|ಗಡಸು ದೇಹದೋಳಗೆ ಗುಪ್ತವಾಗಿ ಹರಿಯುವಪ್ರೀತಿ, ಪ್ರೇಮ ಕರುಣೆಯ ಕಹಳೆ‌ ಅಂತೆ|| ನಿನ್ನ ಆಳದೊಳಗೆ ನಾನಿಳಿದುನನ್ನ ಅಂತರಾಳದ ನೋವನ್ನು ಮರತೆ|ನಿನ್ನ ಬೋರ್ಗರೆಯುವ ಶಬ್ಧದೊಳಗೆಸಂಸಾರದ ಜಂಜಡದ ಬೆಂಬಿಡದಕರ್ಕಸವನ್ನು ಕ್ಷಣಕಾಲ ತೊರದೆ|| ದೃಡವಾದ ಕಲ್ಲುಬಂಡೆಯನ್ನು ಕೂಡಾಪಾಚಿಗಟ್ಟಿಸಿ ಜಾರಿ ಎಡವಿ ಬಿಳಿಸುವದುಕಲಿಸುವದು ಪಾಠ ಮನದೊಳಗೆ|ರಾಚಿಸುವ ರಾಡಿ ಕೆಡುಸುವದುಬೀಳಿಸುವದು ನಿನ್ನ ಬದುಕಿನ ಏಳಿಗೆ|| ಉನ್ಮಾದದ ಅಲೆಗಳನ್ನು ತಡೆಯಲುಹೆಬ್ಬಂಡೆಗಳನ್ನು ಹೊತ್ತು ನಿಂತಹಿಳು ಧಾತ್ರಿ|ಬಿಳಿ ಸೀರೆ ಉಟ್ಟ ನಿತ್ಯ ನೃತ್ಯವನ್ನುಕಣ್ಣತುಂಬಿಕೊಳ್ಳಲು ಮುತ್ತಿಹುದು ಜನಜಾತ್ರಿ||ಶ್ರೀದೇವಿ. ಮ.ಗುಮ್ಮಗೋಳ

ಶ್ರೀದೇವಿ. ಮ.ಗುಮ್ಮಗೋಳ ಅವರ ಕವಿತೆ “ಹಬ್ಬೆ ಜಲಪಾತ” Read Post »

ಕಾವ್ಯಯಾನ

“ಲೋಕಾತೀತ” ಕವಿತೆ ತೆಲುಗು ಮೂಲ : ಪನ್ಯಾಲ ಜಗನ್ನಾಥ ದಾಸ್ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್

ಅನುವಾದ ಸಂಗಾತಿ “ಲೋಕಾತೀತ” ತೆಲುಗು ಮೂಲ : ಪನ್ಯಾಲ ಜಗನ್ನಾಥ ದಾಸ್ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್ ಎಲ್ಲಿಗೆ ಹೋಗಿ ಬಂದೆ? ಲೋಕಾತೀತಆಕಾಶದಾಚೆಯ ಅನಂತ ಲೋಕಕ್ಕೆ.ಏನಿವೆ ಅಲ್ಲಿ?ರಕ್ತವರ್ಣದ ನಕ್ಷತ್ರಗಳ ಝಗಮಗಿಸುವ ಹೊಳಪು.ಆ ಹೊಳಪಿನಲಿ ಏನಿವೆ?ಮರೆಯಲಾಗದ ನೆನಪುಗಳ ಅಳಿಯದ ಕಲೆಗಳು.ಯಾರಿರುತ್ತಾರೆ ಅಲ್ಲಿ?ದೈವಕೃಪೆ! ಮನುಷ್ಯರಂತೂ ಖಂಡಿತಾ ಇಲ್ಲ.ಅಲ್ಲಿಗೆ ಹೋಗಿ ಏನು ಮಾಡಿದೆ?ಕಾಲದ ಕಣ್ಣುಮುಚ್ಚಿಸಿ ಟಣಕ್ಕೆ ಹೂಡಿ ಬಂದೆ.ಅದು ಸರಿ, ಈಗೇನು ಮಾಡಬೇಕೆಂದಿರುವೆ?ಮರಣವನ್ನೇ ಕೊಲ್ಲಬೇಕೆಂದಿರುವೆ.

“ಲೋಕಾತೀತ” ಕವಿತೆ ತೆಲುಗು ಮೂಲ : ಪನ್ಯಾಲ ಜಗನ್ನಾಥ ದಾಸ್ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್ Read Post »

You cannot copy content of this page

Scroll to Top