ವೈ.ಎಂ.ಯಾಕೊಳ್ಳಿ ಅವರ ಕವಿತೆ “ಪ್ರೀತಿಸದಿರು..ಜಾತಿಯನೇ ಪ್ರೀತಿಸು”
ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ “ಪ್ರೀತಿಸದಿರು..ಜಾತಿಯನೇ ಪ್ರೀತಿಸು” ಅನಿವಾರ್ಯ ಇದ್ದರೆಅತ್ತು ಬಿಡುಮನದ ಭಾವಗಳಅದೆಷ್ಟು ಹೊತ್ತುಹಿಡಿದಿಡುವಿ ಇಲ್ಲಿ ಒಲವೆಂಬುದುಅಳುವ ಕಲಿಸುವಪಾಠಶಾಲೆಒಲವಿನಲಿ ಇದ್ದವರನುಎಲ್ಲರೂಕೊನೆಗೆ ಹೆತ್ತವರೂಅಳಿಸುವವರೇ ಅದಾವ ಕಾಲದ ದುರ್ದೈವವೋದೇವರುಗಳ ಶಾಪವೋಇಲ್ಲಿನ ದೇವರುಗಳೂನೂರೊ ,ಹತ್ತೋ, ಕನಿಷ್ಠಇಬ್ಬಿಬ್ಬರನ್ನಾದರೂಮದುವೆಯಾಗುವದನ್ನುಒಪ್ಪಿವೆ ಮನದಲಿ ಒಲಿದವರನ್ನುಮೆಚ್ಚುವದು ಎದೆಯಲಿಟ್ಟುಪ್ರೀತಿಸುವದನುತಿರಸ್ಕರಿಸಿವೆ ಒಲಿದ ಕಾರಣಕ್ಕಾಗಿಹೆತ್ತ ಮಕ್ಕಳನ್ನೇನೇಣಿಗೆ ಹಾಕುವವರುಮರ್ಯಾದಾ ಹತ್ಯೆಯಹೆಸರಲ್ಲಿ ಕೊಲ್ಲುವವರೂಇದ್ದಾರೆಜೀವ ಕೊಟ್ಟಾದರೂಜಾತಿ ಉಳಿಸುತ್ತಾರೆಜೀವ ಇಲ್ಲವಾಗಿಸುತ್ತಾರೆ ಈ ದೇಶ ಮನುಷ್ಯಮನುಷ್ಯರನ್ನುಪ್ರೀತಿಸುವ, ಒಲಿಯುವಕಲೆಯ ಕಲಿಸಲೇ ಇಲ್ಲ ವೈ.ಎಂ.ಯಾಕೊಳ್ಳಿ
ವೈ.ಎಂ.ಯಾಕೊಳ್ಳಿ ಅವರ ಕವಿತೆ “ಪ್ರೀತಿಸದಿರು..ಜಾತಿಯನೇ ಪ್ರೀತಿಸು” Read Post »









