ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಅಪ್ಪ ತಾತ್ಯಾ ದಾದಾ ಡ್ಯಾಡ ಹೆಸರುಗಳಿಂದ ಕೂಡಿದ ತ೦ದೆ ಸ್ಟಾಭಿಮಾನಿ ಹಾಗೂ ನಿಸ್ವಾರ್ಥ ಪರೋಪಕಾರಿ ಜೀವಿಯೆ೦ದರೆ ತಪ್ಪಗಲಾರದು. ಹಗಲು ರಾತ್ರಿಯೆನ್ನದೇ ತನ್ನ ಕುಟುಂಬ ಗೋಸ್ಕರ ದುಡಿಯುತ್ತಾನೆ.ಬೇನೆ ಬಾಸರಿಕೆ ಇದ್ದರೂ ಕೂಡ ತನ್ನ ಮಕ್ಕಳು ಉಪವಾಸವನವಾಸ ಇರಬಾರದು ತಾನು ಉಪವಾಸ ಇದ್ದರೂ ಕೂಡ ಹೆ೦ಡತಿ ಮಕ್ಕಳಿಗೆ ಪ್ರತಿ ನಿತ್ಯ ಅವಶ್ಯಕತೆ ಪೂರೈಕೆ ಮಾಡುತ್ತಾನೆ. ತಾನು ಹರಿದ ಬಟ್ಟೆ ತೊಟ್ಟಿದ್ದರೂ ತನ್ನ ಮಕ್ಕಳು ಹೊಸ ಹೊಸ ಬಟ್ಟೆ ತೊಡಬೇಕು ತನ್ನ ಹತ್ತಿರ ಸಾದಾ ಪೋನ ಇದ್ದರೂ ಮಕ್ಕಳ ಹತ್ತಿರ IPOne ಇರಬೇಕು ತಾನು ಹಳಸಿದ ಅನ್ನ ತಿ೦ದರೂ ತನ್ನ ಮಕ್ಕಳು ಒಳ್ಳೆಯ ಆಹಾರ ತಿನ್ನಬೇಕು. ಪ್ರತಿಯೊಂದು ಕಾರಣಕ್ಕೂ ಒ೦ದೊಂದು ಕಣ್ಣೀರು ಕಥೆ ಇದೆ.ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವೆ? ತಂದೆ ಹಿಮಾಲಯ ಪರ್ವತ ಇದ್ದ೦ತೆ ಇಡೀ ಕುಟುಂಬವನ್ನು ಕಾಪಾಡುವನು ಅವನೇ ಹೊಲದಲ್ಲಿ ಕಾರ್ಮಿಕರಿಂದ ಹಿಡಿದು ನಾನಾ ತರಹದ ಉದ್ಯೋಗ ಪತಿಗಳು ಸರ್ಕಾರಿ ನೌಕರರು ಹಿಡಿದು ಉನ್ನತ ಸ್ಥಾನಮಾನದಲ್ಲಿ ಅಧಿಕಾರಿಗಳು ಇಡೀ ಕುಟುಂಬದ ಜವಾಬ್ದಾರಿ ಹೊರುವ ತಂದೆ ಆಗಿರುತ್ತಾರೆ. ತ೦ದೆಯಾದವನು ಜೀವನ ಪಾತ್ರವನ್ನು ನಿರ್ವಹಣೆ ಮಾಡುತ್ತಾ ಇರುತ್ತಾನೆ. ಶಾಲೆ ಅಥವಾ ಪದವಿ ಶಿಕ್ಷಣಗೆ ಕಳಿಸಿ ಬರುವ ವೆಚ್ಚ ನಷ್ಟ ಬರಿಸುತ್ತಾ ಮಕ್ಕಳು ಶಿಕ್ಷಣ ಮುಗಿಸಿದ ಬಳಿಕ ಸ್ವಂತ ಸ್ವಾಲಂಬನೆ ಸಾಧಿಸುತ್ತಾರೆ. ಮಕ್ಕಳು ಸಹ ತಂದೆ ತಾಯಿಯ ಕಷ್ಟಕ್ಕೆ ಆಗುವುದು ಇಲ್ಲ ಚಿಕಿತ್ಸೆಗೆ ದಿನ ನಿತ್ಯ ದಿನಸಿಗೆ ಹಣ ಕೊಡುವುದೇ ಇಲ್ಲ. ಮಕ್ಕಳ ಕಷ್ಟಕ್ಕೆ ನೆರವು ನೀಡುವ ಅಪ್ಪ ಅದೇ ಮಕ್ಕಳು ಅಪ್ಪನಿಗೆ ಸಹಾಯ ಮಾಡುವುದು ಇಲ್ಲ.ನಯಾ ಪೈಸೆ ಕೊಡುವುದು ಇಲ್ಲ ಅಪ್ಪಂದಿರು ಜೀವನ ಪರ್ಯಾಂತ ಮಕ್ಕಳ ಗೋಸ್ಕರ ಜೀವ ಹಾಗೂ ಜೀವನವನ್ನು ತ್ಯಾಗ ಮಾಡುತ್ತಾರೆ. ಆದರೆ ಮಕ್ಕಳು ತಂದೆಯ ಕಣ್ಣೀರು ಒರಿಸುವುದು ಇಲ್ಲವೇ ಇಲ್ಲ ಇಂತಹ ಮಕ್ಕಳು ಜಾಲಿ ಮರಕ್ಕೆ ಸಮ. ಅಪ್ಪ ಯೆಂದರೆ ಹಠವಾದಿ ಸ್ವಾಭಿಮಾನಿ ಹೊರಗಿನ ಕಡೆ. ಸಾಲ ಮಾಡದೇ ಅಭಿಮಾನದಿಂದ ಜೀವನ ಮಾಡುವ ಅಪ್ಪನಿಂದ ಕಲಿಯಬೇಕಾಗಿದೆ. ಸಿಟ್ಟು ಏಕೆ? ಬರುತ್ತೆ ಗೊತ್ತೆ? ತನ್ನ ಮೇಲೆ ಶೋಷಣೆ ಅನ್ಯಾಯ ಮೋಸ ದಬ್ಬಾಳಿಕೆ ನಡೆದಾಗ ಹೋರಾಟ ಮಾಡುತ್ತಾನೆ. ಮಕ್ಕಳು ಸಹ ಚನ್ನಾಗಿ ನೋಡಿಕೊಳ್ಳಬೇಕು. ಕಣ್ಣಿನ ರಪ್ಪೆಯ0ತೆ ಕಾಪಾಡಬೇಕುಅಪ್ಪ ಎಂಬವಸ್ತು ಕಳೆದು ಹೋದರೆ ಮತ್ತೆ ಸಿಗುವುದೇಇಲ್ಲ. ಇಂದಿನ ದಿನಮಾನದಲ್ಲಿ ತಂದೆ ತಾಯಿಯನ್ನುಮನೆಯಿಂದ ಹೊರಗೆ ಹಾಕುವಕೆಟ್ಟ ಚಾಳಿ ಹೆಚ್ಚಾಗುವುದು ವಿಷಾದನೀಯ ಹಾಗೂ ಖಂಡನೀಯ ಇಡೀ ಮಾನವಕುಲ ತಲೆ ತೆಗಿಸುವ೦ತಅನೇಕ ಘಟನೆಗಳು ದೇಶದ ಅನೇಕ ಭಾಗದಲ್ಲಿ ನಡೆದಿವೆ ನಡೆಯುತ್ತಿವೆ. ನೋಡಿದಾಗ ಸಮಾಜ ಯತ್ತ ಸಾಗಿದೆ ಒಮ್ಮೆ ಎಲ್ಲರೂ ಆಲೋಚನೆ ಮಾಡಬೇಕಾಗಿದೆ. ಇದು ಹೆಚ್ಚಾಗಿ ವಿದ್ಯಾವಂತರಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಕಣ್ಣಾರೆ ನೋಡುತ್ತಿದ್ದೇವೆ. ಹಣ ಆಸ್ತಿ ಹೆಂ ಡರು ಮಕ್ಕಳು ಅಷ್ಟೆ ತಂದೆ ತಾಯಿ ಸಂಬಂಧಿಕರು ಬೇಡವೇ ಬೇಡ…
ದಾರಿಗೆದಾರಿಯಾಗಿ ಕತ್ತಲಿನಿಂದ ಬೆಳಕು ತೋರಿಸಿದನಿವೃತ ಶಿಕ್ಷಕರಾದ ಮಲ್ಲಪ್ಪಾ ಬಿರಾದಾರ ಪಾಟೀಲಯವರಿಗೆ ಈ ಪುಟ್ಟ ಕವನ ಅರ್ಪಣೆ.
ನನ್ನಪ್ಪ…
ಗಾಳಿ ಬಿರುಗಾಳಿಯಲ್ಲಿ ಮಿ೦ಚು ಸಿಡಿಲಿನಂತೆ ಬೆರೆತು ಹೋದ ನನ್ನಪ್ಪ.
ಹೆಜ್ಜೆ ಹೆಜ್ಜೆಯಲ್ಲಿ ಕಣ ಕಣದಲ್ಲಿ ಬೆರೆತು ಹೋದ ನನ್ನಪ್ಪ..
ನಾಡಿನಾಡಿಯಲ್ಲಿ ಹೃದಯ ಹೃದಯದಲ್ಲಿ ಬೆರೆತು ಹೋದ ನನ್ನಪ್ಪ..
ಜೀವ ಜೀವದಲ್ಲಿ ಮನ ಮನದಲ್ಲಿ ಬೆರೆತು ಹೋದ ನನ್ನಪ್ಪ…
ದುಡಿಮೆಯಲ್ಲಿ ತ್ಯಾಗದ ಜೊತೆ ಬೆರೆತು ಹೋದ ನನ್ನಪ್ಪ..
ಉಸಿರು ಉಸಿರಲ್ಲಿ ನೋವು ಸಂತೋಷದಲ್ಲಿ ಬೆರೆತು ಹೋದ ನನ್ನಪ್ಪ..
ಆಕಾಶದಲ್ಲಿ ಕಾಣುವ ನಕ್ಷತ್ರದಂತೆ ಹುಣ್ಣಿಮೆಯ ಚಂದ್ರನಂತೆ ಬೆರೆತು ಹೋದ ನನ್ನಪ್ಪ..
ಅಕ್ಷರಗಳು ನೂರಾರು ಸಾಲುಗಳು ಸಾವಿರಾರು ಸಾಲಿನಲ್ಲಿ ಬೆರೆತು ಹೋದ ನನ್ನಪ್ಪ…
ತ್ಯಾಗದಲ್ಲಿ ಕರ್ಣನಂತೆ ಕಾಯಕದಲ್ಲಿ ಬೆರೆತು ಹೋದ ನನ್ನಪ್ಪ..
ಭೂ ತಾಯಿಯ ಮಡಿಲಲ್ಲಿ ಮಣ್ಣಾದನನ್ನಪ್ಪ
ಇ೦ಥ ಸ್ವಾರ್ಥ ಜೀವನ ಹೆಚ್ಚಾಗಿರುವುದು ಅಪ್ಪನ ಅಸ್ತಿ ಬೇಕು ಆದರೆ ತಂದೆ ತಾಯಿ ಬೇಡ ಇಂಥೆಂಥ ಮಕ್ಕಳು ಇದ್ದಾವೆ ನೋಡಿ. ಕಳೆದ 20 ವರುಷಗಳ ಹಿಂದಿನ ಅವಲೋಕನ ನೋಡಿದಾಗ ತಂದೆಗೆ ಒಳ್ಳೆಯ ಸ್ಥಾನಮಾನ ನೀಡಿದ್ದರು. ಅವಿಭಕ್ತ ಕುಟುಂಬಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದರು. ಹಿರಿಯರು ಕಿರಿಯರು ಭೇದ ಭಾವ ಇರುತ್ತಿರಲಿಲ್ಲ ಮದುವೆ ಮುಂಜಿ ಕಾರ್ಯಕ್ರಮ ಹಿರಿಯರ ಮುಂದಾಳುತನದಲ್ಲಿ ಮಾಡುತ್ತಿದ್ದರು. ಹೀಗೆ ಹಿಂದಿನ ಹಾಗೂ ಇಂದಿನ ಇತಿಹಾಸ ನೋಡಿದರೆ ಅಜಜಾಂತರ.ಮಠಾಧಿಪತಿಗಳು ತಿದ್ದುವ ಕಾಯ೯ ಮಾಡಬೇಕಾಗಿದೆ…


About The Author

Leave a Reply

You cannot copy content of this page

Scroll to Top