ಕಾವ್ಯ ಸಂಗಾತಿ
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ
“ಕನಸುಗಳಿರಬೇಕು”


ಕನಸುಗಳಿರಬೇಕು ಸುತ್ತಲೂ
ಕವಿದ ಕತ್ತಲು ಕಳೆವ
ಬೆಳಗುವ ದೀಪದಂತೆ
ಕನಸುಗಳಿರಬೇಕು ಕಣ್ಣಲ್ಲಿ
ತುಂತುರು ಮಳೆ ಕಾಮನಬಿಲ್ಲ
ಕಾತುರದಿಂದ ನೋಡುವಂತೆ
ಕನಸುಗಳಿರಬೇಕು ಹೆಜ್ಜೆಜ್ಜೆಗೂ
ಸಾಧನೆ ಗರಿಗೆದರಿ
ಸುರಿಮಳೆಯಲ್ಲಿ ಸಂಭ್ರಮಿಸುವಂತೆ
ಕನಸುಗಳಿರಬೇಕು ಮನದಲ್ಲಿ
ಸೋಲಿನಲ್ಲೂ ಸ್ಥೈರ್ಯದಿ
ಭರವಸೆ ಪುಟ್ಟಿದೇಳುವಂತೆ
ಕನಸುಗಳಿರಬೇಕು ನೋಂದಾಗ
ಸವಾಲುಗಳನ್ನು ಸ್ವೀಕರಿಸಿ
ಬದುಕಿನ ದಿಕ್ಕು ಬದಲಿಸುವ
ದಿಕ್ಸೂಚಿಯಂತೆ
ಕನಸುಗಳಿರಬೇಕು ಬದುಕಿಗೆ
ಸದಾ ಉತ್ಸಾಹದ ಬುಗ್ಗೆಯಾಗಿ
ಎಂದಿಗೂ ಬತ್ತದ ವರತೆಯಂತೆ
ಕನಸುಗಳಿರಬೇಕು ನನಸಾಗಿಸಲು
ಬರಡು ಭೂವಿಯಲ್ಲಿ
ಹಸಿರು ಹರಡಿ
ನೆಮ್ಮದಿ ನೀಡುವ ತಂಗಾಳಿಯಂತೆ
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ




ಕನಸುಗಳಿರಬೇಕು ಅದ್ಭುತವಾದ ಕವನ ಮೇಡಂ.