ಶಿ ಕಾ ಬಡಿಗೇರ ಹನಿಗವನಗಳು

ಇತಿಹಾಸ

ನನ್ನ ಬೆನ್ನಿಗೆ ಇರಿದ ಚೂರಿಗಳ
ಗುರುತು ಇನ್ನೂ ಉಳಿದುಕೊಂಡಿವೆ
ಮತ್ತೆ ಇರಿಯುವವರ ಬಗ್ಗೆ ಎಚ್ಚರವಾಗಿರಲೆಂದು…

ಹಸಿವು

ಗರಿಷ್ಟ ಮಟ್ಟದ ಬಿಸಿಲೂ
ಮಂಜು ಗಡ್ಡೆಯಾಗಿ ಹನಿಯುತ್ತದೆ
ನನ್ನ ಹಸಿವಿನ ಬಿಸಿಗೆ.

ಹರಕೆ

ನನ್ನ ಕತ್ತು ಕೊಯ್ದವರ
ಕೊಡಲಿ ಮತ್ತಷ್ಟೂ ಹರಿತವಾಗಲಿ
ಅವರ ಬಾಳಿಗೆ ಅಡೆತಡೆಯಾಗುವ ಮುಳ್ಳು ಕಂಟಿಗಳ ಕತ್ತರಿಸಲು.


One thought on “ಶಿ ಕಾ ಬಡಿಗೇರ ಹನಿಗವನಗಳು

Leave a Reply

Back To Top