
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಹೈಜಂಪನ ಇಲಿಗಳು

ಬಹುಶಃ ಹೀಗೆ ಕುಪ್ಪಳಿಸುವ ಬೆಕ್ಕು – ಇಲಿಗಳನ್ನು ಕಂಡೇ ವಚನಕಾರ ಜೇಡರ ದಾಸಿಮಯ್ಯನಿಗೆ ಹುಸಿ ಭಕ್ತರನ್ನು ಕುರಿತು ಬರೆಯುವುದಕ್ಕೆ ಸ್ಪೂರ್ತಿ ಬಂದಿರಬೇಕು.
ಹಾಗೆಯೇ ಬೆಕ್ಕು ಇಲ್ಲದ ಮನೆಯಲ್ಲಿ ಇಲಿ ಲಾಗ ಹಾಕುವುದನ್ನು ಕಂಡು ಹಿರಿಯರು , ಅನುಭವಿಕರು ತಮ್ಮ ಮಾತಿನ ಮಧ್ಯ ನಾಣ್ಣುಡಿಯಾಗಿ ಇಂತಹ ಇಲಿ-ಬೆಕ್ಕುಗಳನ್ನು ಬಳಸಿಕೊಂಡಿರಬಹುದು.
ಹಾಗಾದರೆ ಇಲ್ಲಿ ಹೈಜಂಪ್ ಮಾಡುವ ಇಲಿಗಳ ಕುರಿತು ಬರೆಯಲು ಇರುವ ವಿಶೇಷವಾದರೂ ಏನು ?
ಮರಭೂಮಿಯಲ್ಲಿ ಕಂಡು ಬರುವ , ಕಾಂಗರೂ ರೂಪವನ್ನು ಹೋಲುವ “ ಜರ್ಭೋವಾಸ್ “ ಜಾತಿಯ ಇಲಿಗಳು ಕಾಂಗರೂ ಇಲಿಗಳಂತೆಯೇ ಹಿಂಗಾಲುಗಳ ಸಹಾಯದಿಂದ ಅವು ಕುಪ್ಪಳಿಸಿ ಭಾರಿ ಎತ್ತರಕ್ಕೂ ಉದ್ದಕ್ಕೂ ಜಿಗಿಯಬಲ್ಲವು.
ಇದಕ್ಕೆ ಸಹಾಯಕವಾಗಿ ಅವುಗಳ ಮುಂಗಾಲುಗಳು ಕಿರಿದಾಗಿಯೂ , ಸಣ್ಣವಾಗಿಯೂ ….ಇವೆ.
ಉದ್ದನೆಯ ಬಾಲವು ಸಹ ಜಿಗಿತದ ಸಮಯದಲ್ಲಿ ದೇಹ ಸಮತೋಲನವನ್ನು ಕಾಪಾಡುತ್ತದೆ.
ಮರಭೂಮಿ ಪ್ರದೇಶಗಳಲ್ಲಿ , ಯಾರು ಇಲ್ಲದಾಗ ರಾತ್ರಿ ಹೊತ್ತು ಮಾತ್ರ ಹೀಗೆ ಜಿಗಿದಾಟ ನಡೆಸುವ ಇವು ಮೀಟರುಗಳ ಎತ್ತರಕ್ಕೆ ಹಾರಾಡುತ್ತವೆ.

ಶಿವಾನಂದ ಕಲ್ಯಾಣಿ