ಡಾ. ಲೀಲಾ ಗುರುರಾಜ್ ಅವರ ಕವಿತೆ “ನೀ ಇರಲು ಜೊತೆಯಲ್ಲಿ”

ನೀ ಇರಲು ಜೊತೆಯಲ್ಲಿ
ಸಂತೋಷವು ಉಕ್ಕುವುದಲ್ಲಿ
ಅಲೆಗಳ ತೆರದಿ ಹರಿಯುವುದಲ್ಲಿ
ಚಿಟ್ಟೆಯಂತೆ ಹಾರುವುದಲ್ಲಿ

ಭೂಮಿ ಆಕಾಶವು ಒಂದಾದಂತೆ
ಓಡುವ ನದಿ ಸಾಗರ ಸೇರಿದಂತೆ
ಚುಕ್ಕಿ ಚಂದ್ರಮರು ಮಿಂಚಿ ಮಿನುಗಿದಂತೆ
ವರ್ಷಧಾರೆ ಭೂರಮೆಗೆ ಸುರಿದಂತೆ

ಪದಗಳಲ್ಲಿ ಹೇಳಲಾಗದು
ಒಳ ಮನಸ್ಸಿನ ತುಡಿತವದು
ಭಾವನೆ ಹೊಮ್ಮಿದಂತಿಹುದು
ಮುಖದಿ ನಗುವ ಕಳೆ ಚಿಮ್ಮವುದು

ನಿನ್ನಿಂದಲೇ ಬಾಳ ಬೆಳದಿಂಗಳು
ಪೂರ್ಣಚಂದ್ರ ನಂತ ತಿಂಗಳು
ಹೊಳೆಯುವುದು ನನ್ನ ಕಂಗಳು
ಕತ್ತಲಲ್ಲಿ ಹೊಳೆದಂತೆ ಮಿಂಚುಳು


Leave a Reply

Back To Top