ಕಾವ್ಯ ಸಂಗಾತಿ
ಗೀತಾ ಆರ್
ಗುಬ್ಬಚ್ಚಿ ಗೂಡು


ಮುಂಜಾನೆ ಚಿಲಿ ಪಿಲಿ ಗಾನಗಳಿಲ್ಲ
ಮನೆ ಸೂರುಗಳಲ್ಲಿ ಗೂಡುಗಳಿಲ್ಲ
ಒಣ ಹಾಕಿದ ಅಕ್ಕಿನುಚ್ಚು ಚೆಲ್ಲುವರಿಲ್ಲ
ಚೆಲ್ಲಿದ ಕಾಳುಗಳನ್ನು ಹೆಕ್ಕಿ ತಿನ್ನುವರಿಲ್ಲ
ಪುಟ್ಟ ಕಂದಮ್ಮಗಳ ಪ್ರೀತಿಯ ಗುಬ್ಬಕ್ಕ
ಅಚ್ಚು ಮೆಚ್ಚಿನ ನಮ್ಮೇಲ್ಲಾ ಗುಬ್ಬಚ್ಚಿಯೇ
ಹಾರಿ ಹೋಗಿ ಬಿಟ್ಟೆಯಾ ಊರು ಬಿಟ್ಟು
ಮತ್ತೋಮ್ಮೆ ಮರಳಿ ನೀ ಗೂಡು ಕಟ್ಟು
ಮನೆ ಸೂರುಗಳಲ್ಲಿ ನಿನ್ನ ಗೂಡುಗಳನ್ನಾ
ಇಂಪಾಗಿ ಹಾಡು ಚಿಲಿ ಪಿಲಿ ಗಾನಗಳನ್ನಾ
ಪುಟ್ಟ ಕಂದಮ್ಮಗಳ ನಕ್ಕು ನಗೀಸುತಾ
ನೀನು ಕುಣಿದು ಕುಣಿದು ನಲಿಯುತಾ
ಒಂದೊಮ್ಮೆ ಬಂದುಬಿಡು ಗುಬ್ಬಚ್ಚಿಯೇ
ನೀ ಇಲ್ಲದ ಮನೆ ಅಂಗಳ ಕಳೆಯಿಲ್ಲವೇ
————————
ಗೀತಾ ಆರ್.