ಕವಿತನದ ಮೌಲ್ಯ

ನಾನು, ನಾನು, ಸ್ತನದ್ವಯ.
ಮತ್ತೊಂದು, ಕತ್ತಲೆಯ ಕೋಶ.
ಮಹಿಳೆಯರ ಕವಿಗೋಷ್ಟಿಯಲಿ,
ಕವಿಯತ್ರಿಯೊಬ್ಬರ ಉದ್ಘೋಷ.

“ನಾನು”, ಎಂಬುದು ಬೌತಿಕ
ಕಾಯದ ಅಂಗಗಳಲ್ಲೈ.
ನಾನು ಎಂಬುದು, ಅಂತರಾತ್ಮ.
ಅದಿಲ್ಲದಿರೆ ಯಾವುದೂ ಇಲ್ಲೈ.

ಕಾವ್ಯ, ರಸಭರಿತ ವಾಗಿದ್ದರೆ,
ಪದ್ಯ , ಹಾಡುವ ತೆರದಿ ಇದ್ದರೆ ,
ಭಾವ, ತಲಸ್ಪರ್ಶಿಯಾಗಿದ್ದರೆ,
ಕವಿಗೆ, ಕವಿತ್ವಕ್ಕೆ ಮೌಲ್ಯವಿದೆ.


Leave a Reply

Back To Top