ಕಾವ್ಯ ಸಂಗಾತಿ
ಲೀಲಾ ಗುರುರಾಜ್
ವಿಶ್ವ ಪುಸ್ತಕ ದಿನ

ವಿಶ್ವ ಪುಸ್ತಕ ದಿನವನ್ನು
ಸದ್ ಬಳಕೆ ಮಾಡೋಣವೇನು
ಹಳೆಯ ದೂಳಿಡಿದ ಬುಕ್ಕನ್ನು
ಕೊಡವಿ ಶುಚಿಗೊಳಿಸೋಣ ಇನ್ನು
ಬರೀ ಕೊಳೆ ತೆಗೆದರಾಯಿತೇ
ಅದರಲ್ಲಿರುವ ಸಾರಾಂಶ ಸಿಕ್ಕಿತೆ
ಅದು ಮಸ್ತಕಕ್ಕೆ ಇಳಿಯಿತೇ
ವಿಮರ್ಶೆ ಮಾಡು ತಿಳಿಯಿತೇ
ದೇಶ ಸುತ್ತಿದರೆ ಸಾಮಾನ್ಯ ಜ್ಞಾನವು
ಕೋಶ ಓದಿದರೆ ಪುಸ್ತಕದ ಜ್ಞಾನವು
ಸಿಗುವಂತಹ ಅವಕಾಶ ಸತ್ಯದ ಅಂಶವು
ವೇದ ಸುಳ್ಳಾದರೂ ಗಾದೆ ಸುಳ್ಳಲ್ಲವು
ತಲೆ ಬಾಗಿ ಪುಸ್ತಕ ವನ್ನು ಓದಿದರಂದೇ
ಎಲ್ಲರ ಮುಂದೆ ತಲೆ ಎತ್ತುವ ಹಾಗೆ ಮಾಡುತ್ತದೆ
ಈ ನಿಜವು ಎಲ್ಲರಿಗೂ ತಿಳಿದೇ ಇದೆ
ಎಂಬುವ ಅಂಶವು ಮುಚ್ಚಿಟ್ಟರೆ ಸತ್ಯ ಹೊರಬಾರದೆ
ಲೀಲಾ ಗುರುರಾಜ್
