ಶಾರು ಅವರ ಹೊಸ ಗಜಲ್

ಒಲವಿನ ಗೀತೆಯ ಚೆಲುವು
ಯುಗದ ಆದಿಯಲಿ ದೊರೆ
ಮರೆಯದ ಹಾಡಿನ ರಾಗವು
ಯುಗದ ಆದಿಯಲಿ ದೊರೆ

ಶುಕಪಿಕಗಳೊಂದಾದ ತಂಪಿನಲಿ
ನವ ಕಂಪಿನ ಹಸಿರ ಉಸಿರು
ತೆನೆತೂಗಿವೆ ಬೆಸೆದ ಮಾತವು
ಯುಗದ ಆದಿಯಲಿ ದೊರೆ

ಜೇನಿನ ಝೇಂಕಾರ ಹೂವಿನ
ಸಿಂಗಾರ ನವಪಲ್ಲವ ಜಗದಲಿದೆ
ಬಿಸಿಲ ಬಾನಿಗೆ ಮರುಳು ಗೀತವು
ಯುಗದ ಆದಿಯಲಿ ದೊರೆ

ಬೆಸೆದ ಬೆರಳು ಬೀಗಿ ಎದೆಯ
ರಂಗು ರಂಗೋಲಿ ಬಿಡಿಸಿವೆ
ಬಿಂಕದಿ ಕುಣಿವ ನವಿಲ ಮನವು
ಯುಗದ ಆದಿಯಲಿ ದೊರೆ

ಬದುಕುದ್ದ ನೆನಪಿನದೆ ನಗೆತೇರು
ಶಾರು‌ ಪದದನಿಯ ಪುಟದಲಿ
ರಸಪೂರ್ಣ ಬಾಳ ಗಾಥವು
ಯುಗದ ಆದಿಯಲಿ ದೊರೆ


8 thoughts on “ಶಾರು ಅವರ ಹೊಸ ಗಜಲ್

    1. ‘ಯುಗದ ಆದಿಯಲಿ ದೊರೆ ‘ ಅರ್ಥಪೂರ್ಣ.
      ಅಭಿನಂದನೆಗಳು ಶಾಲೂ

  1. ಸೊಗಸಾದ ಗಜಲ್ ಮೇಡಂ…..
    – ಹೊನ್ನಪ್ಪ ಕರೆಕನ್ನ ಮ್ಮನವರ

Leave a Reply

Back To Top