ಕಾವ್ಯ ಸಂಗಾತಿ
ಗೀತಾ ಆರ್
ವಸಂತಕಾಲ


ಮುಂಜಾನೆ ಸೂರ್ಯ ನಗುತ್ತಿದ್ದ
ಮುಗಿಲಮೋರೆಗೆ ಬಣ್ಣಬಳಿದಿದ್ದ
ಚಿನ್ನದ ಕಿರಣ ಬಾನಲ್ಲಿ ತುಂಬಿದ್ದ
ಮುಗಿಲಿನಲೆಲ್ಲ ನೆತ್ತರು ಹರಿಸಿದ್ದ
ನದಿ ಹರಿಯುತ್ತಿದೆ ಜುಳುಜುಳು
ಗಾನದಿ ಇಂಪಾಗಿ ಸಂಗೀತದಂತೆ
ವಸಂತ ಮಾಸದಲ್ಲಿ ಹಾಡುತ್ತಲಿದೆ
ಕೋಗಿಲೆ ಇಂಪಾಗಿ ಮಮಾರದಲ್ಲಿ
ನವಿಲೊಂದು ಕುಣಿದಿದೆ ಗರಿಕೆದರಿ
ಚಂದದಲಿ ನಲಿಯುತಾ ಬಣ್ಣದಲಿ
ಕರುವೊಂದು ಅಮ್ಮಳನ್ನು ಕೂಗಿದೆ
ಅಂಬಾ ಅಂಬಾ ಎಂಬ ನಾದದಲೀ
ರೈತರೆಲ್ಲಾರ ಸವಾರಿ ಸಾಗುತ್ತಾಲಿದೆ
ಗದ್ದೆ ಬಯಲಿಗೆ ಎತ್ತಿನಗಾಡಿಯಲ್ಲಿ
ಎತ್ತುಗಳೆಲ್ಲಾ ನಡೆದಿವೆ ರಭಸದಲೀ
ಗಂಟೆಗಳಾ ತೂಗುತ್ತಾ ಹರುಷದಲಿ
ನೋಡಿ ಮನವು ಸಂತೋಷದಲಿ
ಅಲ್ಲಿಯೇ ಕುಳಿತೆನೆ ಉಲ್ಲಾಸದಲಿ
ಗೀತಾ ಆರ್.
Nice