ಕಾವ್ಯ ಸಂಗಾತಿ
ಸಿದ್ದರಾಮ ಹೊನ್ಕಲ್
ಗಜಲ್

ಪ್ರಪಂಚ ತಿಂಗಳು ಮುಂಚೆ ಬಹು ಸುಂದರವಾಗಿತ್ತು
ಕುಣಿಯುತಿತ್ತು;ಆನಂದದಿ ತಾನೇ ನಲಿಯುತ್ತಲಿತ್ತು
ಈ ಸುಂದರತೆ ಸ್ವರ್ಗದಲ್ಲೂ ಇಲ್ಲವೆಂಬ ಭಾವವಿತ್ತು
ಕನಸೊ ನನಸೋ ಎಂಬ ಆನಂದದಲಿ ಮುಳುಗಿತ್ತು
ಅಧಿಕಾರ ಮದದಿ ಕುರುಡು ಕಾಂಚಾಣ ಕುಣಿಯುತಲಿತ್ತು
ಸಿಕ್ಕ ಅಸಹಾಯಕರನ್ನೆಲ್ಲ ಮದದಿ ತುಳಿಯುತಲಿತ್ತು
ನಾನು ನಾನೆಂಬ ಅಟ್ಟಹಾಸದಿ ಮೆರೆಯುತಲಿತ್ತು,
ಎದುರಾದವರಿಗೆ ಸೊಕ್ಕಿನಿಂದ ಹಣಿಯುತಲಿತ್ತು
ಆಸ್ತಿ ಪಾಸ್ತಿ ಅಂತಸ್ತಿನ ಅಹಂಕಾರದಿ ಕುರುಡಾಗಿತ್ತು
ದುರಹಂಕಾರದಿ ಸಿಕ್ಕವರ ಮೇಲೆ ನೆಗೆಯುತಲಿತ್ತು
ಹಗಲು ರಾತ್ರಿ ಮಾದಕ ಬೆಳಕಲಿ ಮೆರೆಯುತಲಿತ್ತು
ಮಾನಿನಿ ಮಧುವಿನ ನಿಷೆಯಲಿ ತೇಲಾಡುತ್ತಿತ್ತು
ಭಯಾನಕ ಸಾವಿನ ಭಯವೆಂಬುದೇ ಮರೆಯಾಗಿತ್ತು
ಹುಟ್ಟು ಸಾವು ಬೆನ್ನಿಗಿರುವ ಸತ್ಯ ನೆನಪಾರಿತ್ತು
ಇದು ಎಂದಿಗೆ ಮುಗಿದಿತೆಂಬ ಚಿಂತೆ ಕಾಡುವದಿವತ್ತು
ಆ ಸುಂದರ ದಿನಗಳಿಗಾಗಿ ಜಗತ್ತು ಕಾಯುತ್ತಲಿತ್ತು
ನಿರಾಕಾರ’ಸಾಕು ಮುಗಿಸು ಇನ್ನೂ ಪರೀಕ್ಷೆ ಈಹೊತ್ತು
ನಶ್ವರತೆ-ಮನುಷ್ಯತ್ವ ನೆನಪಿಸುವದಕೆ ಸ್ವಲ್ಪಬೇಕಿತ್ತು
—–
ಸಿದ್ಧರಾಮ ಹೊನ್ಕಲ್,
ಕೊರೋನಾ ಕಾಲದ ಗಜಲ್.