ದ್ವನಿ ಸಂಗಾತಿ
ಗಾಯತ್ರಿ ಸುಂಕದ್
“ವಿಶ್ವ ಧ್ವನಿ ದಿನ”

ಹಲೋ
ಪ್ರತಿ ವರ್ಷ ಏಪ್ರಿಲ್ 16ನೇ ತಾರೀಖು ವಿಶ್ವ ಧ್ವನಿ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಭಾಷೆ ಹೇಗೆ ಅವಶ್ಯಕ ಹಾಗೆ ಉತ್ತಮ ಧ್ವನಿಯು ಅವಶ್ಯಕ.ಒಬ್ಬ ಒಳ್ಳೆಯ ನಿರೂಪಕರಾಗಲು ಒಳ್ಳೆಯ ಜ್ಞಾನ ಹೇಗೆ ಅವಶ್ಯಕವೋ ಹಾಗೆ ಮಧುರವಾದ ಧ್ವನಿಯು ಕೂಡ ಅವಶ್ಯಕ.ಎಷ್ಟೋ ಜನ ಆಡಿಷನ್ ನಲ್ಲಿ ಫೇಲಾಗುವುದು ಈ ಕಾರಣ ದಿಂದಲೇ. ಉತ್ತಮ, ಸ್ಪಷ್ಟ ವಾದ ಧ್ವನಿ ಕೇಳುಗರನ್ನು ಹಿಡಿದಿಟ್ಟು ಬಿಡುತ್ತದೆ.
ಧ್ವನಿಗಳಲ್ಲಿ ಹಲವು ಪ್ರಕಾರವುಂಟು. ಕೀರಲು ಧ್ವನಿ, ಸಣ್ಣ ಧ್ವನಿ, ಜೋರು ಧ್ವನಿ ಮುಂತಾದ ಪ್ರಕಾರಗಳನ್ನು ಕಾಣುತ್ತೇವೆ.
ಹೇಗೆ ಆಕರ್ಷಕ ವ್ಯಕ್ತಿತ್ವಕ್ಕೆ ಸ್ಪಷ್ಟ ಧ್ವನಿ ಹೇಗೆ ಅವಶ್ಯಕವೊ ಹಾಗೆ ಧ್ವನಿಯನ್ನು ಯಾವಾಗ ಎತ್ತರಿಸಿ ಮಾತನಾಡಬೇಕು ಅನ್ನುವುದು ತಿಳಿದಿರಬೇಕು ಮತ್ತು ಯಾಗ ಮುಂದೆ ಧ್ವನಿಯನ್ನು ಎತ್ತರಿಸಿ ಮಾತನಾಡಬೇಕು ಅನ್ನುವುದು ತಿಳಿದಿರಬೇಕು. ಜ್ಞಾನ ವೃದ್ಧರ ಮುಂದೆ, ಮಕ್ಕಳ ಮುಂದೆ, ಅಸಹಾಯಕರ ಮುಂದೆ ಯಾವ ಧ್ವನಿಯಲ್ಲಿ ಮಾತನಾಡಬೇಕು ಎಂಬುದು ಗೊತ್ತಿದ್ದರೆ ಅದನ್ನು matured mind ಎಂದು ಹೇಳಬಹುದು.
ನಮ್ಮ ಧ್ವನಿ ಎಷ್ಟೋ ಸಾರಿ ನಮ್ಮ ಮನಸ್ಸಿನ ಕನ್ನಡಿ ಆಗಿರುತ್ತದೆ.ಉತ್ತಮ ದ್ವನಿ ನಮ್ಮ ಉತ್ತಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
ದೇವರು ಕೊಟ್ಟ ಈ ದ್ವನಿ ಎಂಬ ಕಾಣಿಕೆಯನ್ನು ಸದುಪಯೋಗ ಪಡಿಸಿಕೊಂಡು ಬದುಕೋಣ.
ಗಾಯತ್ರಿ ಸುಂಕದ್

Simply Superb its So valuable,emotional information. Thank you So much for Sharing with me.
Prof.Praveen.been.v.Kulkarni. ಬಿದಿಗಚಂದ್ರ.