ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಚೆಲುವು

ಚಂದ್ರ ಚೆಲುವನ್ನು
ನಕ್ಷತ್ರ ಮಿನುಗನ್ನು
ಇವಳಿಂದ ಪಡೆದವು ಎಂದು
ಆಕಾಶ, ವಾಣಿ ನುಡಿಯಿತು!
ಹಸಿರುಟ್ಟರೆ ನಾನು
ಅವಳಿಗಿಂತ ಕಡಿಮೆ ಏನು?
ಮೂಲ ಚೆಲುವು ನನ್ನದು!
ಭೂಮಿಯ ತಕರಾರು
ತನ್ನ ಬಣ್ಣಗಳ ವೈಭವ
ಅವಳ ಕೆನ್ನೆಗೆ ಉಂಟೆ?
ಮೂಗು ಮುರಿಯಿತು!
ಕಾಮನ ಬಿಲ್ಲು
ಮೇಘ ಮೆಲು ದನಿಯಲ್ಲಿ
ಕೇಳಿತು ಆಕೆಯ ಮುಂಗುರುಳು
ಚದುರಿ ಚಲಿಸುವ ನನ್ನ
ಹಿಂಜಿಗೆ ಸಮವೆ?
ಎಲ್ಲ ಪ್ರಶ್ನೆಗಳಿಗೆ
ಉತ್ತರ ನೀಡಲು ಸರಕು
ಸಾಕ್ಷಿಗಳು ಇದ್ದವು ನಿನ್ನ ಚಲುವಿನಲ್ಲಿ
ಮತ್ಸರಕ್ಕೆ ಮದ್ದುಂಟೆ? ಅದಕ್ಕೆ ಮೌನವಾದೆ!
———–
ಶಾಂತಲಿಂಗ ಪಾಟೀಲ

ಧನ್ಯವಾದಗಳು ಪ್ರಕಟಣೆಯ ಕೃಪೆ ಮಾಡಿದ್ದಕ್ಕೆ
ತುಂಬಾ ಚೆನ್ನಾಗಿದೆ ಕವಿತೆ
ಸೃಷ್ಟಿ ಸೌಂದರ್ಯಕ್ಕೂ ಮಿಗಿಲಾದ ಸೌಂದರ್ಯ, ಸ್ತ್ರೀ ಯಲ್ಲಿ ಕಂಡು ಕವಿ ಆಕೆಯಿಂದ ಚಂದ್ರ ತಾರೆ ಎರವಲು ಪಡೆದು ಪ್ರಕಾಶಿಸುತ್ತಿವೆ ಎಂಬಂತೆ ಕಲ್ಪಿಸಲಾಗಿದೆ
ವ್ಹಾ ಗ್ರೇಟ್
ಪ್ರೇಮ ಭರಿತ ದೃಷ್ಟಿಯಿಂದ ನೋಡಿದಲ್ಲಿ ಜಗತ್ತಿನ ಚರಾಚರ ವಸ್ತುಗಳು ಸುಂದರವಾಗಿ ಗೋಚರಿಸುತ್ತವೆ. ಸತ್ಯಂ ಶಿವಂ ಸುಂದರಂ ಎನ್ನುವಂತೆ ಸೌಂದರ್ಯ ಸತ್ಯದ ಪ್ರಕಟಿತ ರೂಪ. ಸ್ತ್ರೀಯ ಕೋಮಲತೆ,ಶೀತಲತೆ, ವಯ್ಯಾರದ ಹೊಳಪು , ಆಪ್ತತೆ, ಮಮತೆ, ವಾತ್ಸಲ್ಯ,ಕರುಣೆ ಭೌತ ವಸ್ತುಗಳಲ್ಲಿ ಕಾಣಸಿಗದು. ದೂರದ ಚಂದಿರ ಸನಿಹದಿಂದ ನೋಡಿದರೆ ತಗ್ಗು ದಿಣ್ಣೆ ಕಣಿವೆ ಕೊರಕಲು ಮುರುಕಲು ಕಾಣುತ್ತದೆ.