ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ತರಹಿಗಜಲ್

ತರಹಿ ಗಝಲ್
(ಸಾನಿ ಮಿಸ್ರ ಶಶಿಕಾಂತೆ ಮೇಡಂ ಅವರದ್ದು ,
ಈಗ ನಾ ನಿನಗೆ ಪರಕೀಯಳಾದೆನೆಂದು ಅನಿಸುತಿದೆ ನನಗೆ )
ಈಗ ನಾ ನಿನಗೆ ಪರಕೀಯಳಾದೆನೆಂದು ಅನಿಸಿತಿದೆ ನನಗೆ
ನಿನ್ನ ಸ್ಮೃತಿಯಲ್ಲಿಯೂ ನಾ ಉಳಿದಿಲ್ಲವೆಂದು ಅನಿಸಿತಿದೆ ನನಗೆ
ಜಗವ ಮರೆತರೂ ನಿನ್ನ ಮೊಗವನೆಂದೂ ಮರೆಯುತ್ತಿರಲಿಲ್ಲ
ನನ್ನ ಬಿಕ್ಕಳಿಕೆಗಳಿಗೂ ನೀನಿಂದು ನಿಲುಕುತ್ತಿಲ್ಲವೆಂದು ಅನಿಸಿತಿದೆ ನನಗೆ
ಹಗಲು ಹುಟ್ಟುವ ಮುನ್ನವೇ ನಿನ್ನ ನೆನಹು ಹುಟ್ಟುತಿತ್ತು ಮನದೊಳಗೆ
ಇರುಳು ಅಸ್ತಂಗತವಾಗುತಿದ್ದರೂ ನೀ ನನ್ನರಿವಿಗೆ ಸೋಕುತ್ತಿಲ್ಲವೆಂದು ಅನಿಸುತಿದೆ ನನಗೆ
ನಿನ್ನೆದೆಯೊಳಗೆ ಮುಖ ಹುದುಗಿಸಿ ಅಳುವುದೇ ನನ್ನೋವಿಗೆ ಮದ್ದಾಗಿರುತಿತ್ತು
ಇನ್ನು ಮರಣದವರೆಗೂ ಆ ಮುಲಾಮು ಎನಗಿಲ್ಲವೆಂದು ಅನಿಸುತಿದೆ ನನಗೆ
ಉಸಿರಿಲ್ಲದ ತನುವಿನೊಳಗೆ ವಾಣಿಯು ವಾಸಿಸುತಿರುವಂತಾಗಿದೆ ಇನಿಯ
ನಿನ್ನ ಜೊತೆ ಸಾಗುವ ದೈವವೇಕೆ ನನ್ನದಾಗಲಿಲ್ಲವೆಂದು ಅನಿಸುತಿದೆ ನನಗೆ
——————–
ವಾಣಿ ಯಡಹಳ್ಳಿಮಠ

ಇಂತಹ ವಿರಹ ವೇದನೆ ಕೊಟ್ಟ ಸಂಗತಿಯ ಅರಿವು…
Thank you