ಕಾವ್ಯ ಸಂಗಾತಿ
ರಾಜು ನಾಯ್ಕ
ಟಂಕಾಗಳು

ಬದುಕು ಸದಾ
ಭವಿಷ್ಯದ ಕೌತುಕ
ಭೂತ-ಕಾಲದ
ವಿಸ್ಮಯ,ವರ್ತಮಾನ
ಪರಿಶ್ರಮ ಹೋರಾಟ
ಬರಹಗಳು
ಬದುಕನ್ನು ತಿದ್ದುವ
ಅಕ್ಷರ ರೂಪ
ಭಾವಪೂರ್ಣ ಬರಹ
ಮನದ ಪ್ರತಿಬಿಂಬ
ನನ್ನ ಬರಹ
ಭಾವ ಕೊಳದೊಳಗೆ
ನನ್ನ ಲೇಖನಿ
ಮಿಂದು ದಡ ಸೇರುವ
ನಿಸ್ವಾರ್ಥ ಕಸರತ್ತು
ಜೀವ ರಸದ
ಮಧು ಬಟ್ಟಲೊಳಗೆ
ನನ್ನ ಲೇಖನಿ
ಈಜಿ ಸವಿ ಗಂಧವ
ಪಸರಿಸೆ ಧನ್ಯತೆ
ಜ್ಞಾನ ಸುಜ್ಞಾನ
ನಿಧಿಯ ಭಂಡಾರಕ್ಕೆ
ನನ್ನ ಲೇಖನಿ
ಕೀಲಿ ಕೈಯಾದರೆ
ಬೀಜಾಕ್ಷರ ದರೋಡೆ
ಶುಕ್ಲ ಪೂರ್ಣಿಮೆ
ಬೆಳದಿಂಗಳ ನಗು
ನನ್ನ ಲೇಖನಿ
ಅಮವಾಸ್ಯೆಗು ದೀಪ
ಸೌರಭ ಪ್ರತಿಬಿಂಬ
ರಾಜು ನಾಯ್ಕ

ಸುಂದರ ಟಂಕಾಗಳು ಸರ್
“ಭಾವಕೊಳದೊಳಗೆ ಮಿಂದು ದಡಸೇರುವ ನಿಸ್ವಾರ್ಥ ಕಸರತ್ತು ” ಇದು ನಿಮ್ಮ ಸಾಹಿತ್ಯ ಜಗತ್ತಿನ ಪ್ರತಿಬಿಂಬ.