ಕಾವ್ಯ ಸಂಗಾತಿ
ಗೀತಾ ಆರ್
ಮಸುಕು

ನೆನಪೊಂದು ಮಸುಕಾಗಿದೆ
ನನ್ನ ಬಿಟ್ಟು ದೂರ ಹೋಗಿ
ದೂರವಿದ್ದರೂ ಕಾಡುತ್ತಿದೆ
ಬೇಡವೆಂದರೂ ಮರೆಯಲ್ಲಿ
ಮರೆತರೂ ಮರೆಯಲಾಗದೆ
ಮನನೊಂದು ತಪಿಸುತ್ತಿದೆ
ಹೃದಯದಿ ನೋವೊಂದು
ಮೌನದಿ ರೋದೀಸುತ್ತಿದೆ
ಪಯಣದಲಿ ಜೊತೆ ಇರದೆ
ಬದುಕೆಲ್ಲಾ ಬರೀದಾಗೀದೆ
ನೆನಪೊಂದು ಮಸುಕಾಗದೇ
ಉಳಿದಿದೆ ಜೀವಂತ ನೆನಪಾಗಿ
—————.——————————————————————
ಗೀತಾ ಆರ್.

ತುಂಬಾ ಚೆನ್ನಾಗಿದೆ ಹಾಗೂ ಅರ್ಥಗರ್ಬಿತವಾಗಿದೆ. ಶುಭವಾಗಲಿ
ಮುಂದುವರಿಯಲಿ
Set of words are wonderful
Great Geeth
We admire your writing skills ♥️