ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-ʼಮಹಾಮನೆಯ ಮಹಾಮಗಳುʼ

ಮಹಾಮನೆಯ ಮಗಳು
ಉರಿಯು೦ಡ ಕರ್ಪುರ
ಕದಳಿಯ ಕತ್ತಲೆಯ
ಬೆಳಗುವ ಮಹಾಬೆಳಗು
ಅಕ್ಕರೆಯ ಅಕ್ಕ
ಮಹಾದೇವಿಯಕ್ಕ

ತೊರೆದು ಕೌಶಿಕನರಮನೆ
ಹೊರಟಳು ಕಲ್ಯಾಣಕೆ
ತುಂಡು ಕಂಬಳಿ ಹೊತ್ತು
ತವರು ಮೋಹವ ಬಿಟ್ಟು
ತರು ಗುಲ್ಮ ಲತೆ ಹೂವು
ಪಶು ಪಕ್ಷಿ ದುಂಬಿಯ ಸ್ನೇಹ ತೊಟ್ಟು

ಮಗಳೆ೦ದು ಕರೆದೊಯ್ದ
ಅನುಭವದ ಮಂಟಪಕೆ
ಅಣ್ಣ ಬಸವಣ್ಣ ಶರಣರ ದಂಡು
ಅಲ್ಲಮರ ಪ್ರಶ್ನೆಗೆ ಕೊಟ್ಟಳು ಉತ್ತರ ಅಪರೂಪದ ಅನುಭಾವ
ಚೆಲುವಿನ ಚಿತ್ಕಳೆ ಜ್ಞಾನದ ಜ್ಯೋತಿ

ಉಡತಡಿಯ ಉಡುಗೊರೆ
ಕಲ್ಯಾಣದ ಐಸಿರಿ
ಶ್ರೀಶೈಲಕೆ ನಡೆ ನಿಂತಳು
ಗುರು ಲಿಂಗವಿಡಿದು
ಚೆನ್ನಮಲ್ಲಿಕಾರ್ಜುನರ ನೆರಳು
ಮಹಾಮನೆಯ ಮಹಾಮಗಳು


11 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-ʼಮಹಾಮನೆಯ ಮಹಾಮಗಳುʼ

  1. ಅಕ್ಕನಿಗೆ ಅಕ್ಕರದ ಅಕ್ಷರದಿಂದ ಬರೆದ ನುಡಿಗಳು ಅಮೋಘ

  2. ವಿಶಿಷ್ಟ ಶೀರ್ಷಿಕೆಯಿಂದ ಮೂಡಿ ಬಂದ ಅಕ್ಕನ
    ಕವನ… ಪರಿಪೂರ್ಣವಾದ ಜೀವನ ಚರಿತ್ರೆಯ ಸುಂದರವಾದ ಸಾಲುಗಳಿಂದ ಹೊರಹೊಮ್ಮಿದೆ ಸರ್

    ಸುಧಾ ಪಾಟೀಲ
    ಬೆಳಗಾವಿ

  3. “ಮಹಾಮನೆಯ ಮಹಾಮಗಳು ”
    ಶೀರ್ಷಿಕೆಯಲ್ಲೇ ಕವನದ ಸಾರಾoಶವೆಲ್ಲವೂ ಅಡಗಿ ಅಕ್ಕನ ಬಗೆಗೆ ಬರೆದ ಕವನದ ವಿಶಿಷ್ಟತೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದೆ

  4. ಅಕ್ಕನ ಇಡೀ ಜೀವನದ ಹಂತಗಳನ್ನು ಕವನದಲ್ಲಿ ಹಿಡಿದಿದ್ದೀರಿ ತುಂಬಾ ಚೆನ್ನಾಗಿದೆ ಕವನ.ಸರ್

  5. ಅಕ್ಕನ ಇಡಿ ಜೀವನ ನಿಮ್ಮ ಕವನದಲ್ಲಿ ಅಡಗಿದೆ ಸರ್

  6. ಉಡುತಡಿಯಲ್ಲಿ ಸಂಜಾತೆಯಾಗಿ, ನಿಸರ್ಗದ ಮಗಳಾಗಿ, ಅನುಭವ ಮಂಟಪದ ಅರಿವಾಗಿ, ಮಹಾಮನೆ ಬೆಳಕಾಗಿ, ಚೆನ್ನಮಲ್ಲಿಕಾರ್ಜುನನಲ್ಲಿ ಒಂದಾಗಿ ಜಗನ್ಮಾತೆಯಾದ ಪರಿಯನ್ನು ಕವನದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.

Leave a Reply

Back To Top