ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ಗಜಲ್


ಕತ್ತಿಯ ಅಲಗಿಗೆ ಒಲವ ಸಿಲುಕಿಸಿ ಪ್ರತಿಫಲ ಬೇಡಿದೆಯಾ
ಸತ್ತಿಹ ಭಾವಗಳ ಕೆದಕಿ ಕರೆಯುತ ನೆಪಕಾಗಿ ಕೂಡಿದೆಯಾ
ಹೊತ್ತಿಹ ಅನಲಕೆ ತೈಲವ ಸುರಿಸುತ ಸುಖಿಸುವ ಕುಮತಿಯೆ
ಗತ್ತಿನ ಅನುರಾಗ ತೋರಿಸಿ ಕರುಣೆಗೆ ಕಂದಕ ತೋಡಿದೆಯಾ
ಕತ್ತಲು ಕೋಣೆಯಲಿ ಕೊಳೆವ ಕನಸಿಗೆ ಬೆಳಕೊಂದು ಬೇಕಾಗಿದೆ
ಬೆತ್ತಲೆ ಮನಸಿಗೆ ಬಣ್ಣವ ಲೇಪಿಸಿ ಅಂದವ ನೋಡಿದೆಯಾ
ಮುತ್ತಿದ ರಾಗಗಳು ಸೊರಗಿ ಅಪಶೃತಿ ಮಿಡಿದಿರೆ ಜಡವೆಲ್ಲ
ತೊತ್ತಿನ ಚಲನೆಗೆ ದಾರಿಯ ತೋರುತ ಕೂಪಕೆ ದೂಡಿದೆಯಾ
ನೆತ್ತರು ಬಸಿದವರು ನೆತ್ತಿಯ ನೇವರಿಸಿ ಹರಸಿಹರು ಶಕುಳನು
ಕತ್ತೆತ್ತಿ ನಡೆಯಲು ತೋರಿಕೆ ಪ್ರೀತಿಯ ಶರವನು ಹೂಡಿದೆಯಾ
——————-
ಶಕುಂತಲಾ ಎಫ್ ಕೋಣನವರ